ಮಾರುತಿ ಬ್ರೇಝ- ಎರ್ಟಿಗಾಕ್ಕೆ ಎದುರಾಳಿ: ಬಿಡುಗಡೆ ಆಯ್ತು 7.99 ಲಕ್ಷದ ಸಿಟ್ರಾನ್ ಬಸಾಲ್ಟ್, ಮಾರುಕಟ್ಟೆಯಲ್ಲಿ ಕಠಿಣ ಪೈಪೋಟಿ ಪಕ್ಕಾ
ಸಿಟ್ರಾನ್ ಬಸಾಲ್ಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೇವಲ7.99 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿದೆ.ನಿಜ ಹೇಳಬೇಕೆಂದರೆ,ಬಸಾಲ್ಟ್ ಇಷ್ಟು ಕಡಿಮೆ ಬೆಲೆಗೆ ಬಿಡುಗಡೆಯಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ (ಬರಹ:ವಿನಯ್ ಭಟ್)
ಭಾರತೀಯ ಮಾರುಕಟ್ಟೆಯಲ್ಲಿ ನೂತನ ಕಾರುಗಳ ಬಿಡುಗಡೆ ಕಾರ್ಯಕ್ರಮ ಒಂದೊಂದಾಗಿ ಶುರುವಾಗಿದೆ. ಇತ್ತೀಚೆಗಷ್ಟೆ ಆಕರ್ಷಕವಾದ ಟಾಟಾ ಕರ್ವ್ ಅನಾವರಣಗೊಂಡಿತ್ತು. ಇದೀಗ ಪ್ರಸಿದ್ಧ ಸಿಟ್ರನ್ ಕಂಪನಿ ಬಸಾಲ್ಟ್ ಕಾರನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಲೆಜೆಂಡರಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಇದರ ಬೆಲೆಯನ್ನು ಬಹಿರಂಗಪಡಿಸಿದ್ದಾರೆ. ಸಿಟ್ರಾನ್ ಬಸಾಲ್ಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 7.99 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ನಿಜ ಹೇಳಬೇಕೆಂದರೆ, ಬಸಾಲ್ಟ್ ಇಷ್ಟು ಕಡಿಮೆ ಬೆಲೆಗೆ ಬಿಡುಗಡೆಯಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ಕಾರು ಇದೀಗ ಮಾರುತಿ ಸುಜುಕಿಯ ಬ್ರೆಝಾ ಮತ್ತು ಎರ್ಟಿಗಾದಂತಹ ಎಸ್‌ಯುವಿ-ಎಂಪಿವಿಗಿಂತ ಅಗ್ಗವಾಗಿದ್ದು, ಕಠಿಣ ಪೈಪೋಟಿ ನೀಡಲಿದೆ.
ಬೆಲೆ ಘೋಷಣೆಯ ಜೊತೆಗೆ, ಸಿಟ್ರಾನ್ ಬಸಾಲ್ಟ್‌ನ ಬುಕಿಂಗ್‌ಗಳು ದೇಶಾದ್ಯಂತ ಲಾ ಮೈಸನ್ ಸಿಟ್ರೊಯೆನ್ ಶೋರೂಮ್‌ಗಳಲ್ಲಿ ಪ್ರಾರಂಭವಾಗಿವೆ. ನೀವು 11,001 ರೂಪಾಯಿಗಳ ಟೋಕನ್ ಮೊತ್ತದೊಂದಿಗೆ ಈ ಎಸ್‌ಯುವಿ ಕೂಪೆಯನ್ನು ಬುಕ್ ಮಾಡಬಹುದು. ವಿತರಣೆಯು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ. ಈ ಕಾರಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ ರೂ. 7.99 ಲಕ್ಷ ಪರಿಚಯಾತ್ಮಕವಾಗಿದೆ. ಅಂದರೆ ಅಕ್ಟೋಬರ್ 31ರೊಳಗೆ ಡೆಲಿವರಿ ತೆಗೆದುಕೊಳ್ಳುವ ಗ್ರಾಹಕರಿಗೆ ಮಾತ್ರ ಈ ಬೆಲೆ ಲಭ್ಯವಿರುತ್ತದೆ.
ಈ ಎಸ್‌ಯುವಿ ಕೂಪ್ ಅನ್ನು ಗಾರ್ನೆಟ್ ರೆಡ್, ಕಾಸ್ಮೊ ಬ್ಲೂ, ಪೋಲಾರ್ ವೈಟ್, ಪ್ಲಾಟಿನಂ ಗ್ರೇ ಮತ್ತು ಸ್ಟೀಲ್ ಗ್ರೇಯಂತಹ 5 ಸಿಂಗಲ್ ಟೋನ್ ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಬಸಾಲ್ಟ್ ಅನ್ನು ಡ್ಯುಯಲ್ ಟೋನ್ ಕಲರ್ ಆಯ್ಕೆಗಳಾದ ಪವರ್ ವೈಟ್ ಮತ್ತು ಗಾರ್ನೆಟ್ ರೆಡ್ ಜೊತೆಗೆ ಬ್ಲ್ಯಾಕ್ ಡ್ಯುಯಲ್ ಟೋನ್ ರೂಫ್‌ನಲ್ಲಿ ಸಹ ನೀಡಲಾಗುತ್ತದೆ. ವಿಶೇಷ ಎಂದರೆ ಸಿಟ್ರಾನ್ ಭಾರತದ ಗ್ರಾಹಕರಿಗೆ ಬಸಾಲ್ಟ್ ಅನ್ನು 70 ಕ್ಕೂ ಹೆಚ್ಚು ಬಿಡಿಭಾಗಗಳೊಂದಿಗೆ ಕಸ್ಟಮೈಸ್ ಮಾಡಲು ಅವಕಾಶವನ್ನು ನೀಡುತ್ತಿದೆ.
ಏರೋಡೈನಾಮಿಕ್ ಕೂಪ್ ಪ್ರೇರಿತ ಈ ಎಸ್‌ಯುವಿಯು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಅರ್ಬನ್ ಡೈಮಂಡ್ ಕಟ್ ಅಲಾಯ್, ವೈ ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು, ಕ್ಲಾಮ್‌ಶೆಲ್ ವಿನ್ಯಾಸಗೊಳಿಸಿದ ಬಾನೆಟ್, 10.25 ಇಂಚಿನ ಇನ್-ವೆಹಿಕಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಪೋರ್ಟ್ ಹೊಂದಿದೆ. 7-ಇಂಚಿನ IntelliSmart ಡ್ರೈವರ್ ಮಾಹಿತಿ ಸೌಲಭ್, 3 USB ಪೋರ್ಟ್‌ಗಳು, 15W ಸ್ಮಾರ್ಟ್ ವೈರ್‌ಲೆಸ್ ಚಾರ್ಜರ್, MyCitroën ಅಪ್ಲಿಕೇಶನ್ ಬೆಂಬಲದೊಂದಿಗೆ 40 ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 2651 mm ವೀಲ್‌ಬೇಸ್, ಆಟೋ ಕ್ಲೈಮೇಟ್ ಕಂಟ್ರೋಲ್, 6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಸ್ಟ್ಯಾಂಡರ್ಡ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ.
ಸಿಟ್ರಾನ್ ಬಸಾಲ್ಟ್ ಸುಧಾರಿತ 1.2 ಲೀಟರ್ ಜನರೇಷನ್ 3 ಪ್ಯೂರ್‌ಟೆಕ್ 110 ಟರ್ಬೊ ಮತ್ತು ಪ್ಯೂರ್‌ಟೆಕ್ 82 ನೈಸರ್ಗಿಕ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 110 PS ವರೆಗೆ ಶಕ್ತಿಯನ್ನು ಮತ್ತು 205 ನ್ಯೂಟನ್ ಮೀಟರ್‌ಗಳ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಆಯ್ಕೆಗಳೊಂದಿಗೆ 5MT, 6MT ಮತ್ತು 6AT ಗೇರ್ ಬಾಕ್ಸ್ ಆಯ್ಕೆಗಳು ಲಭ್ಯವಿವೆ. ಇದು 19.5 kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.
ವಿಭಾಗ