EV Battery Price: ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ ದರ ಎಷ್ಟಿರುತ್ತದೆ? ಓಲಾ, ಚೇತಕ್, ಟಿವಿಎಸ್, ಅಥೆರ್ ಬ್ಯಾಟರಿ ಬದಲಿಸೋದು ದುಬಾರಿ
EV Battery Price: ಓಲಾ, ಬಜಾಜ್ ಚೇತಕ್, ಟಿವಿಎಸ್ ಐಕ್ಯೂಬ್, ಅಥೆರ್ ಮುಂತಾದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿಗಳ ಅಂದಾಜು ದರ ಇಲ್ಲಿ ನೀಡಲಾಗಿದೆ. ನಿಮ್ಮ ಸ್ಕೂಟರ್‌ನ ಬ್ಯಾಟರಿಗೆ ವಾರೆಂಟಿ, ಗ್ಯಾರಂಟಿ ಇಲ್ಲದ ಸಂದರ್ಭದಲ್ಲಿ ಬ್ಯಾಟರಿ ಬದಲಾಯಿಸಬೇಕೆಂದರೆ ದುಬಾರಿ ಮೊತ್ತ ನೀಡಲು ರೆಡಿ ಇರಬೇಕು.

EV Battery Price: ದುಬಾರಿ ಪೆಟ್ರೋಲ್ ದರದ ಕಾಲದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸಲು ಎಲ್ಲರೂ ಗಮನ ನೀಡುತ್ತಾರೆ. ಪೆಟ್ರೋಲ್ ಸ್ಕೂಟರ್ ಬದಲು ಸಾಕಷ್ಟು ಜನರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುತ್ತಾರೆ. ಸ್ಕೂಟರ್‌ಗಳ ಬ್ಯಾಟರಿ ತಂತ್ರಜ್ಞಾನ ಈಗ ಮೊದಲಿಗಿಂತ ಉತ್ತಮವಾಗಿದೆ. ಬ್ಯಾಟರಿಗಳಿಗೆ ಒಂದಿಷ್ಟು ವರ್ಷ ಗ್ಯಾರಂಟಿ, ವಾರಂಟಿಯೂ ಇರುತ್ತದೆ. ಇದರಿಂದ ಕೆಲವು ವರ್ಷಗಳ ಕಾಲ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರು ನಿರಾಳವಾಗಿರಬಹುದು. ಎಲ್ಲಾದರೂ ಬ್ಯಾಟರಿಗಳಿಗೆ ವಾರೆಂಟಿ, ಗ್ಯಾರಂಟಿ ಇಲ್ಲದ ಸ್ಕೂಟರ್ ಖರೀದಿಸಿದರೆ, ಎಲ್ಲಾದರೂ ಬ್ಯಾಟರಿ ಹಾಳಾಗಿಬಿಟ್ಟರೆ ಕಿಸೆಗೆ ದೊಡ್ಡ ಹೊಡೆತ ಖಾತ್ರಿ. ಇದೇ ಕಾರಣಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಸಮಯದಲ್ಲಿ ಬ್ಯಾಟರಿ ಮೇಲೆ ನೀಡುವ ಗ್ಯಾರಂಟಿ ಕಡೆಗೆ ಹೆಚ್ಚಿನ ಗಮನ ನೀಡಬೇಕು.
ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ ದರ ಎಷ್ಟಿರುತ್ತದೆ?
ಎಲೆಕ್ಟ್ರಿಕ್ ಸ್ಕೂಟರ್ ಹೊಂದಿರುವವರಲ್ಲಿ ಕೆಲವರಿಗೆ ಅದೃಷ್ಟ ಕೈಕೊಡುವುದುಂಟು. ಕೆಲವರ ಸ್ಕೂಟರ್‌ಗೆ ಏನೂ ಸಮಸ್ಯೆ ಆಗುವುದಿಲ್ಲ. ಇನ್ನು ಕೆಲವರು ಸ್ಕೂಟರ್ ಖರೀದಿಸಿದ ಕೆಲವೇ ದಿನಗಳಲ್ಲಿ ಏನಾದರೂ ಪ್ರಾಬ್ಲಂ ಎದುರಿಸುತ್ತಾರೆ. ಅದು ಸಾಫ್ಟ್‌ವೇರ್ ಪ್ರಾಬ್ಲಂ ಆಗಿರಬಹುದು ಅಥವಾ ಇತರ ಪ್ರಾಬ್ಲಂ ಆಗಿರಬಹುದು. ಎಲ್ಲಾದರೂ ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ ಬದಲಾಯಿಸುವಂತಹ ಪರಿಸ್ಥಿತಿ ಬಂದರೆ ಏನಾಗಬಹುದು? ಬ್ಯಾಟರಿ ದರ ಎಷ್ಟಿರಬಹುದು? ಎಂದು ತಿಳಿಯೋಣ.
ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಸಾಮಾನ್ಯವಾಗಿ ಲೀಥಿಯಂ ಐಯಾನ್ ಬ್ಯಾಟರಿಗಳು ಇರುತ್ತವೆ. ಇವು ದಿನ ಕಳೆದಂತೆ ತಮ್ಮ ಕಾರ್ಯಕ್ಷಮತೆ ಕಳೆದುಕೊಳ್ಳುತ್ತವೆ. ಕೆಲವೊಂದು ನಿರ್ದಿಷ್ಟ ಸೆಲ್‌ಗಳನ್ನು ರಿಪೇರಿ ಮಾಡಬೇಕಾಗಬಹುದು. ಕೆಲವೊಂದು ಸಂದರ್ಭದಲ್ಲಿ ಸಂಪೂರ್ಣವಾಗಿ ಬ್ಯಾಟರಿಯನ್ನೇ ಬದಲಾಯಿಸಬೇಕಾಗಬಹುದು. elctrik ಎಂಬ ವೆಬ್‌ಸೈಟ್ ನೀಡಿದ ಮಾಹಿತಿ ಪ್ರಕಾರ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ ದರ ಈ ಮುಂದಿನಂತೆ ಇರುತ್ತದೆ.
ಓಲಾ ಎಲೆಕ್ಟ್ರಿಕ್ ಬ್ಯಾಟರಿ ದರ
ಓಲಾ ಎಸ್1 ಪ್ರೊ: 87,000 ರಿಂದ 90,000 ರೂ
ಓಲಾ ಎಸ್1 ಏರ್: 70,000 ರೂ
ಓಲಾ ಎಸ್1 ಎಕ್ಸ್ (4 ಕಿ.ವ್ಯಾ): 80,000 ರಿಂದ 85,000 ರೂ
ಓಲಾ ಎಸ್1 ಎಕ್ಸ್ (3 ಕಿ.ವ್ಯಾ): 70,000 ರೂ
ಓಲಾ ಎಸ್1 ಎಕ್ಸ್ (2 ಕಿ.ವ್ಯಾ): 55,000 ರೂ
ಓಲಾ ಎಸ್1 ಎಕ್ಸ್+: ಸುಮಾರು 70,000 ರೂ
ಬಜಾಜ್ ಚೇತಕ್ ಬ್ಯಾಟರಿ ದರ
ಬಜಾಜ್ ಚೇತಕ್ 2901 ಮತ್ತು ಚೇತಕ್ 3201 ಬ್ಯಾಟರಿ ದರ 60,000 ರಿಂದ 80,000 ರೂಪಾಯಿವರೆಗೆ ಇರಬಹುದು.
ಅಥೆರ್ ಬ್ಯಾಟರಿ ದರ
ಅಥರ್ 450X (2.9kWh): 65,000 ರಿಂದ 70,000 ರೂ
ಅಥರ್ 450X (3.7kWh): 80,000 ರೂ
ಅಥರ್ 450S: 60,000 ರೂ
ಅಥರ್ ರಿಜ್ಟಾ: 65,000 ರಿಂದ 80,000 ರೂ
ಅಥೆರ್ ಕಂಪನಿಯು ಬ್ಯಾಟರಿಗೆ ಐದು ವರ್ಷಗಳ ವಾರೆಂಟಿ ನೀಡುತ್ತದೆ. ಎಂಟು ವರ್ಷದವರೆಗೆ ವಿಸ್ತರಣೆ ಮಾಡಬಹುದು.
ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ದರ
ಟಿವಿಎಸ್ ಐಕ್ಯೂಬ್ (3.04 ಕಿ.ವ್ಯಾ):60,000 ರಿಂದ 70,000 ರೂ
ಟಿವಿಎಸ್ ಐಕ್ಯೂಬ್ ಎಸ್‌ಟಿ (5.1 ಕಿ.ವ್ಯಾ): 90,000 (ಅಂದಾಜು) ರೂ.
ಗಮನಿಸಿ: ಇದು ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಿಂದ ಅಂದಾಜು ದರ ಮಾಹಿತಿ ನೀಡುವ ಉದ್ದೇಶದಿಂದ ಪ್ರಕಟಿಸಿದ ಮಾಹಿತಿ. ನಿರ್ದಿಷ್ಟವಾಗಿ ಬ್ಯಾಟರಿ ದರ ಎಷ್ಟು ಎಂದು ಗ್ರಾಹಕರು ಆಯಾ ಸ್ಕೂಟರ್ ಕಂಪನಿಯಿಂದ ಮಾಹಿತಿ ಪಡೆಯಬಹುದು.
