Electric Scooter comparison: ಹೋಂಡಾ ಆಕ್ಟಿವಾ ಇ, ಟಿವಿಎಸ್ ಐಕ್ಯೂಬ್, ಬಜಾಜ್ ಚೇತನ್: ಈ ಮೂರು ಸ್ಕೂಟರ್‌ಗಳಲ್ಲಿ ಯಾವುದು ಉತ್ತಮ?
Honda Activa e vs TVS iQube vs Bajaj Chetak: ಇದು ಎಲೆಕ್ಟ್ರಿಕ್ ಸ್ಕೂಟರ್‌ಗಳ ಕಾಲ. ಹೋಂಡಾ ಆಕ್ಟಿವಾ ಇವಿಯು ಮುಂದಿನ ವರ್ಷ ಭಾರತದ ರಸ್ತೆಗೆ ಇಳಿಯಲಿದೆ. ಹೋಂಡಾ ಆಕ್ಟಿವಾ ಇ, ಟಿವಿಎಸ್ ಐಕ್ಯೂಬ್, ಬಜಾಜ್ ಚೇತನ್ ಮೂರು ಸ್ಕೂಟರ್‌ಗಳಲ್ಲಿ ಯಾವುದನ್ನು ಖರೀದಿಸಬಹುದು ಎಂದು ಯೋಚಿಸುತ್ತಿದ್ದೀರಾ? ಈ ಹೋಲಿಕೆ ಗಮನಿಸಿ.
Electric Scooter comparison: ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನುಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಆಕ್ಟಿವಾ ಇ ಹೆಸರಿನ ಈ ಸ್ಕೂಟರ್ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಹೋಂಡಾ ಆಕ್ಟಿವಾ ಇ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಸ್ಕೂಟರ್ ಮುಂದಿನ ವರ್ಷದ ಮಧ್ಯಭಾಗದಲ್ಲಿ ಮಾರಾಟವಾಗಲಿದೆ. ಇದು ಎಲೆಕ್ಟ್ರಿಕ್ ಸ್ಕೂಟರ್ ಮಾರುಕ್ಟೆಯಲ್ಲಿ ಟಿವಿಎಸ್ ಐಕ್ಯೂಬ್ ಮತ್ತು ಬಜಾಜ್ ಚೇತಕ್ ಸೇರಿದಂತೆ ಹಲವು ಸ್ಕೂಟರ್‌ಗಳ ಜತೆ ಸ್ಪರ್ಧಿಸಲಿದೆ.
ಹೋಂಡಾ ಆಕ್ಟಿವಾ ಇ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಜತೆಗೆ ಬೇಸಿಕ್ ಅಂಡರ್ಬೋನ್ ಫ್ರೇಮ್ ಹೊಂದಿದೆ. ಇದು ಎರಡು ಆವೃತ್ತಿಗಳಲ್ಲಿ ಲಭ್ಯ. ಸ್ಟ್ಯಾಂಡರ್ಡ್ ಆವೃತ್ತಿಯು 118 ಕೆಜಿ ತೂಕ ಹೊಂದಿರಲಿದೆ. ಮತ್ತೊಂದು ಆವೃತ್ತಿ ಹೋಂಡಾ ರೋಡ್‌ಸಿಂಕ್ ಡ್ಯುಯೊ 119 ಕೆಜಿ ಹೊಂದಿರಲಿದೆ. ಈ ಸ್ಕೂಟರ್‌ಗಳು 171 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಭಾರತದ ರಸ್ತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. 60 ಎಂಎಂ ಮುಂಭಾಗದ ಡಿಸ್ಕ್ ಮತ್ತು 130 ಎಂಎಂ ಹಿಂಭಾಗದ ಡ್ರಮ್ ಬ್ರೇಕಿಂಗ್ ವ್ಯವಸ್ಥೆ ಹೊಂದಿದೆ. 12 ಇಂಚಿನ ಅಲಾಯ್ ವೀಲ್‌ಗಳು ಇವೆ.
ಆಕ್ಟಿವಾ ಇ ಸ್ಕೂಟರ್ ಸಿಂಕ್ರೋಸ್ ಮೋಟಾರ್ ಹೊಂದಿರುತ್ತದೆ. ಇದು 8 bhp ಮತ್ತು 22 Nm ಟಾರ್ಕ್‌ಪವರ್ ನೀಡುತ್ತದೆ. 0 ರಿಂದ 60 km/h ವೇಗವನ್ನು 7.3 ಸೆಕೆಂಡುಗಳಲ್ಲಿ ಪಡೆಯತ್ತದೆ. ಗಂಟೆಗೆ ಗರಿಷ್ಠ 80 ಕಿ.ಮೀ.ವೇಗದಲ್ಲಿ ಈ ಸ್ಕೂಟರ್ ಚಾಲನೆ ಮಾಡಬಹುದು. ಈ ಸ್ಕೂಟರ್ ಎಕಾನ್, ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ.
ಆಕ್ಟಿವಾದ ಬ್ಯಾಟರಿ ಹೇಗೆ ಬದಲಾಯಿಸುವುದು ಎನ್ನುವುದನ್ನು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ
ಹೋಂಡಾ ಆಕ್ಟಿವಾ ಇ ವರ್ಸಸ್ ಟಿವಿಎಸ್ ಐಕ್ಯೂಬ್
ಟಿವಿಎಸ್ ಐಕ್ಯೂಬ್ ಇತ್ತೀಚೆಗೆ ಮೂರು ಹೊಸ ಆವೃತ್ತಿಗಳನ್ನು ಪರಿಚಯಿಸಿತ್ತು. 94,999 ಎಕ್ಸ್ ಶೋರೂಂ ಬೆಲೆಯ ಹೊಸ ಐಕ್ಯೂಬ್ ಸ್ಕೂಟರ್ 2.2 kWh ಬ್ಯಾಟರಿ ಪ್ಯಾಕ್ ಹೊಂದಿದೆ. iQube ST ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬಂದಿದೆ. ಅಂದರೆ, 3.4 kWh ಮತ್ತು 5.1 kWh ಬ್ಯಾಟರಿ ಪ್ಯಾಕ್‌ಗಳು ಇವೆ.
ಟಿವಿಎಸ್ ಐಕ್ಯೂಬ್ ಎಸ್‌ಟಿಯ 3.4 kWh ಆವೃತ್ತಿಯು 100 ಕಿಮೀ ರೇಂಜ್ ನೀಡುತ್ತದೆ. ಎರಡು ಗಂಟೆ ಮತ್ತು 50 ನಿಮಿಷಗಳಲ್ಲಿ ಶೇಕಡ 0-80 ಚಾರ್ಜ್ ಆಗುತ್ತದೆ. 5.1 kWh ರೂಪಾಂತರವು ತನ್ನ ವಿಭಾಗದಲ್ಲಿ ಅತಿದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ 150 ಕಿಮೀ ಪ್ರಯಾಣಿಸಬಹುದು. 5.1 kWh ಬ್ಯಾಟರಿಯನ್ನು ಶೇಕಡ 0-80 ಚಾರ್ಜ್ ಮಾಡಲು ನಾಲ್ಕು ಗಂಟೆ 18 ನಿಮಿಷ ಬೇಕಾಗುತ್ತದೆ.
5.1 kWh ಹೊಂದಿರುವ ಟಿವಿಎಸ್ ಐಕ್ಯೂಬ್‌ಎಸ್‌ಟಿಯು ಒಂದೇ ಚಾರ್ಜ್‌ನಲ್ಲಿ 150 ಕಿಮೀ ರೇಂಜ್ ನೀಡುತ್ತದೆ. ಹೋಂಡಾ ಆಕ್ಟಿವಾ e ಗೆ ಹೋಲಿಸಬಹುದಾದ 3.4 kWh ಆೃತ್ತಿಯು 100 ಕಿಮೀ ರೇಂಜ್ ಹೊಂದಿದೆ. ಹೋಂಡಾ ಸ್ಕೂಟರ್‌ಗೆ ಹೋಲಿಸಿದರೆ ರೇಂಜ್ 2 ಕಿಮೀ ಕಡಿಮೆಯಾಗಿದೆ.
ಹೋಂಡಾ ಆಕ್ಟಿವಾ ಇ ವರ್ಸಸ್ ಬಜಾಜ್ ಚೇತಕ್ 3202
ಚೇತಕ್ 3202 4.2 ಕಿಲೋವ್ಯಾಟ್ ಪಿಡಬ್ಲ್ಯುಎಸ್ ಮೋಟಾರ್ ಹೊಂದಿದೆ. ಇದು 5.36 bhp ಮತ್ತು 16 Nm ಟಾರ್ಕ್ ನೀಡುತ್ತದೆ. 3.2 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇದು ಇಕೋ ಮೋಡ್‌ನಲ್ಲಿ 137 ಕಿಮೀ ವರೆಗೆ ಸಾಗಲು ಅನುವು ಮಾಡಿಕೊಡುತ್ತದೆ. ಸ್ಟ್ಯಾಂಡರ್ಡ್ ಆವೃತ್ತಿ ಸ್ಕೂಟರ್‌ನ ಗರಿಷ್ಠ ವೇಗವು 63 ಕಿಮೀ ಆಗಿದ್ದರೆ, ಟೆಕ್‌ಪ್ಯಾಕ್ ಗಂಟೆಗೆ 73 ಕಿಮೀ ವೇಗವನ್ನು ಪಡೆಯುತ್ತದೆ. ಬ್ಯಾಟರಿ 3 ಗಂಟೆ 35 ನಿಮಿಷಗಳಲ್ಲಿ ಶೇಕಡ 0-80 ಚಾರ್ಜ್ ಆಗುತ್ತದೆ.
ಚೇತಕ್ ಹೋಂಡಾ ಆಕ್ಟಿವಾ ಇಗಿಂತ ದೊಡ್ಡ ಬ್ಯಾಟರಿ ಹೊಂದಿದೆ. ಇದರಿಂದ ಚೇತಕ್‌ನಲ್ಲಿ ಹೆಚ್ಚು ದೂರ ಸಾಗಬಹುದು. ಆದರೆ, ಆಕ್ಟಿವ ಎಲೆಕ್ಟ್ರಿಕ್ ಸ್ಕೂಟರ್ 8 bhp ನೀಡುತ್ತದೆ. ಚೇತಕ್ ಕೇವಲ 5.6 bhp ನೀಡುತ್ತದೆ.