ವಾಹನ ಪೂಜೆಗೆ ಕಾರು ಬೈಕ್‌ ಅಲಂಕಾರ ಹೀಗಿರಲಿ; ಆಯುಧ ಪೂಜೆಯಂದು ಸಾರಿಗೆ ಸಂಗಾತಿಗೆ ಸೇವಂತಿಗೆ, ಕನಕಾಂಬರ, ಚೆಂಡು ಹೂವು, ಗುಲಾಬಿ ಹೂವಿನ ಶೃಂಗಾರ
ಕನ್ನಡ ಸುದ್ದಿ  /  ಜೀವನಶೈಲಿ  /  ವಾಹನ ಪೂಜೆಗೆ ಕಾರು ಬೈಕ್‌ ಅಲಂಕಾರ ಹೀಗಿರಲಿ; ಆಯುಧ ಪೂಜೆಯಂದು ಸಾರಿಗೆ ಸಂಗಾತಿಗೆ ಸೇವಂತಿಗೆ, ಕನಕಾಂಬರ, ಚೆಂಡು ಹೂವು, ಗುಲಾಬಿ ಹೂವಿನ ಶೃಂಗಾರ

ವಾಹನ ಪೂಜೆಗೆ ಕಾರು ಬೈಕ್‌ ಅಲಂಕಾರ ಹೀಗಿರಲಿ; ಆಯುಧ ಪೂಜೆಯಂದು ಸಾರಿಗೆ ಸಂಗಾತಿಗೆ ಸೇವಂತಿಗೆ, ಕನಕಾಂಬರ, ಚೆಂಡು ಹೂವು, ಗುಲಾಬಿ ಹೂವಿನ ಶೃಂಗಾರ

Ayudha Pooja Karnataka: ಆಯುಧ ಪೂಜೆಯಂದು ವಾಹನ ಪೂಜೆಗೆ ಕಾರು ಬೈಕು ಜೀಪು ಲಾರಿ ಬಸ್‌ ಪಿಕಪ್‌ ರಿಕ್ಷಾ ಸೇರಿದಂತೆ ವಿವಿಧ ವಾಹನಗಳನ್ನು ಅಂದವಾಗಿ ಶೃಂಗರಿಸುವುದು ಅಗತ್ಯವಾಗಿದೆ. ಅಕ್ಟೋಬರ್‌ 11ರಂದು ಆಯುಧ ಪೂಜೆ ನಡೆಯಲಿದ್ದು, ಬದುಕಿನ ಅವಿಭಾಜ್ಯ ಅಂಗವಾಗಿರುವ ನಿಮ್ಮ ವಾಹನವನ್ನು ಪ್ರೀತಿಯಿಂದ ಅಲಂಕರಿಸಿ.

ಆಯುಧ ಪೂಜೆಗೆ ವಾಹನಗಳ ಅಲಂಕಾರ ಹೀಗಿರಲಿ
ಆಯುಧ ಪೂಜೆಗೆ ವಾಹನಗಳ ಅಲಂಕಾರ ಹೀಗಿರಲಿ (twitter facebook photos)

ನವರಾತ್ರಿಯ 9ನೇ ದಿನ ಆಯುಧ ಪೂಜೆ ನಡೆಯುತ್ತದೆ. ಈ ಸಮಯದಲ್ಲಿ ಎಲ್ಲೆಡೆ ವಾಹನ ಪೂಜೆ ನಡೆಯಲಿದೆ. ಕೆಲವರು ಆರ್ಚಕರ ಮೂಲಕ ವಾಹನಗಳಿಗೆ ಪೂಜೆ ಮಾಡಿಸಿಕೊಂಡರೆ, ಇನ್ನು ಕೆಲವರು ತಾವೇ ಪೂಜೆ ಮಾಡುತ್ತಾರೆ. ಕೆಲವರ ಬದುಕಿಗೆ ವಾಹನಗಳು ಅವಿಭಾಜ್ಯ ಅಂಶಗಳಾಗಿರುತ್ತದೆ. ಉದಾಹರಣೆಗೆ ಆಟೋ ಚಾಲಕರಿಗೆ ಆಟೋ ರಿಕ್ಷಾವು ಅನ್ನ ಕೊಡುವ ದೇವರಾಗಿದೆ. ಇದೇ ರೀತಿ ಟ್ಯಾಕ್ಸಿ, ಬಸ್‌, ಲಾರಿ, ಪಿಕಪ್‌ ಸೇರಿದಂತೆ ವಿವಿಧ ವಾಹನಗಳು ಬಹುತೇಕರ ಉದ್ಯೋಗದ ಮೂಲವಾಗಿದೆ. ಇದೇ ರೀತಿ ಸಾಕಷ್ಟು ಜನರು ವೈಯಕ್ತಿಕ ಪ್ರಯಾಣದ ಉದ್ದೇಶದಿಂದ ಖಾಸಗಿ ವಾಹನಗಳನ್ನು ಹೊಂದಿರುತ್ತಾರೆ. ಪ್ರತಿದಿನ ಆಫೀಸ್‌ಗೆ, ಬಿಸ್ನೆಸ್‌ ಸ್ಥಳಕ್ಕೆ ಕಾರು ಅಥವಾ ಬೈಕ್‌ನಲ್ಲಿ ಸಾಗುತಾರೆ. ಇಂತಹ ಸಾರಿಗೆ ಸಂಗಾತಿಯನ್ನು ಆಯುಧ ಪೂಜೆಯ ಸಮಯದಲ್ಲಿ ಸುಂದರವಾಗಿ ಅಲಂಕರಿಸಲು ಬಯಸುತ್ತಾರೆ. ವಾಹನ ಪೂಜೆಗೆ ಮುನ್ನ ವಾಹನವನ್ನು ತೊಳೆಯಬೇಕು. ನಾಲ್ಕು ಚಕ್ರದ ವಾಹನಗಳಾದರೆ ಕಾರಿನ ಹೊರಗೆ ಮಾತ್ರವಲ್ಲದೆ ಕಾರಿನ ಒಳಗೂ ನೀಟಾಗಿ ವಾಷ್‌ ಮಾಡಬೇಕು. ಈ ಲೇಖನದಲ್ಲಿ ವಾಹನವನ್ನು ಆಯುಧ ಪೂಜೆಯಂದು ಹೇಗೆ ಶೃಂಗಾರ ಮಾಡಬಹುದು ಎಂದು ತಿಳಿಯೋಣ ಬನ್ನಿ.

ದ್ವಿಚಕ್ರವಾಹನಕ್ಕೆ ಅಲಂಕಾರ ಹೇಗೆ?

ಬೈಕ್‌ಗಳಿಗೆ ಕಾರು ಜೀಪುಗಳಂತೆ ಬಾಳೆಗಿಡ ಇತ್ಯಾದಿಗಳಿಂದ ಅಲಂಕಾರ ಮಾಡುವುದು ಕಷ್ಟ. ಸೈಕಲ್‌, ಬೈಕ್‌, ಸ್ಕೂಟರ್‌ಗಳಿಗೆ ಅಲಂಕಾರ ಮಾಡಲು ಮಾರುಕಟ್ಟೆಯಲ್ಲಿ ಹೂವಿನ ಮಾಲೆಗಳು ದೊರಕುತ್ತವೆ. ಇದೇ ರೀತಿ ಗುಲಾಬಿ, ಸೇವಂತಿಗೆ, ಸುಗಂದರಾಜ, ಚೆಂಡುಹೂವು ಮುಂತಾದ ಹೂವುಗಳನ್ನು ಅಂಟಿಸಬಹುದು. ಮುಂಭಾಗದಲ್ಲಿ ಒಂದು ಹೂವಿನ ಮಾಲೆ ಹಾಕಿದರೂ ಸಾಕಾಗುತ್ತದೆ. ಬರೀ ಹೂವಿನ ಅಲಂಕಾರ ಸಾಕಾಗದು ಎನ್ನುವವರು ರೇಡಿಯಂ ಸ್ಟ್ರಿಪ್ಸ್‌ಗಳನ್ನೂ ಅಂಟಿಸಬಹುದು. ಇಲ್‌ಇಡಿ ಬಲ್ಬ್‌ಗಳ ಮೂಲಕವೂ ಬೈಕ್‌, ಸ್ಕೂಟರನ್ನು ಜಗಮಗಿಸಬಹುದು. ಕಲರ್‌ ಪೇಪರ್‌ಗಳು, ಬಲೂನ್‌ ಮೂಲಕವೂ ದ್ವಿಚಕ್ರವಾಹನಗಳನ್ನು ಅಲಂಕಾರ ಮಾಡಬಹುದು. ಮಕ್ಕಳ ಸೈಕಲ್‌ಗಳಿಗೂ ಇದೇ ರೀತಿ ಹೂವಿನ ಮಾಲೆಗಳನ್ನು ಹಾಕಬಹುದು.

ನಾಲ್ಕು ಚಕ್ರದ ವಾಹನಗಳ ಅಲಂಕಾರ

ಆಯುಧ ಪೂಜೆಯಂದು ಆಟೋ ರಿಕ್ಷಾ, ಜೀಪು, ಪಿಕಪ್‌, ಟ್ಯಾಕ್ಸಿ ಕಾರುಗಳು, ಲಾರಿ, ಬಸ್ಸುಗಳನ್ನು ಪ್ರೀತಿಯಿಂದ ಅಲಂಕಾರ ಮಾಡಲಾಗುತ್ತದೆ. ದೊಡ್ಡ ವಾಹನಗಳಿಗೆ ಬಾಳೆಗಿಡಗಳನ್ನೂ ಜೋಡಿಸಲಾಗುತ್ತದೆ. ಇದರೊಂದಿಗೆ ಸೇವಂತಿಗೆ ಮಾಲೆಗಳ ಮೂಲಕವೂ ಅಲಂಕಾರ ಮಾಡಬಹುದು. ಆದರೆ, ಸಣ್ಣಕಾರು, ಎಸ್‌ಯುವಿ, ಎಂಪಿವಿ ಮುಂತಾದ ಕಾರುಗಳಿಗೆ ಬಾಳೆಗಿಡದ ಭಾರ ಬೇಡ, ಹೂವಿನ ಅಲಂಕಾರ ಸಾಕು. ಕಾರುಗಳಿಗೆ ಸೇವಂತಿಗೆ,ಕನಕಾಂಬರ,ಚೆಂಡು ಹೂವು, ಗುಲಾಬಿ ಹೂವಿನ ಶೃಂಗಾರ ಮಾಡಿ, ದೇವರ ನಾಮ ಲೇಪಿಸಬೇಕು. ಕಾರಿನ ಬಣ್ಣಕ್ಕೆ ತಕ್ಕಂತೆ ಹೂವಿನ ಬಣ್ಣಗಳನ್ನು ಆಯ್ಕೆ ಮಾಡಿಕೊಂಡರೆ ಇನ್ನೂ ಚಂದ ಕಾಣಿಸುತ್ತದೆ.

ವಾಹನ ಅಲಂಕಾರದ ಸಂದರ್ಭದಲ್ಲಿ ಈ ಅಂಶಗಳನ್ನು ಗಮನಿಸಿ

  • ಕಾರು ಬೈಕ್‌ಗಳನ್ನು ಅಲಂಕರಿಸುವಾಗ ವಾಹನಕ್ಕೆ ಏನೂ ಹಾನಿಯಾಗದಂತೆ ಎಚ್ಚರವಹಿಸಿ. ವಾಹನದ ಪೇಂಟ್‌ಗಳಿಗೆ ಹಾನಿಯಾಗದೆ ಇರಲಿ. ಸ್ಟ್ರಿಕರ್‌ಗಳು, ಸ್ಟ್ರಿಪ್‌ಗಳನ್ನು ಅಂಟಿಸುವಾಗ ವಿಶೇಷ ಎಚ್ಚರಿಕೆವಹಿಸಿ.
  • ತುಸು ಬಾಡಿದ ಬಳಿಕ ಹೂವುಗಳನ್ನು ವಾಹನದಿಂದ ತೆಗೆಯುವುದು ಉತ್ತಮ. ಹೂವಿನ ಹಾರಗಳು ಹ್ಯಾಂಡಲ್‌ ನಡುವೆ ಸಿಕ್ಕಿಹಾಕಿಕೊಳ್ಳದಂತೆ ಇರಲಿ. ಸಂಚರಿಸುವ ಸಮಯದಲ್ಲಿ ಸುರಕ್ಷತೆಗೆ ಅಪಾಯ ತರುವಂತೆ ಇರಲಿ.
  • ಹೂವಿನ ದರ ತುಂಬಾ ದುಬಾರಿಯಾಗಿದ್ದರೆ ಹೂವಿಗಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಒಂದು ಸುಂದರವಾದ ಹೂವಿನ ಮಾಲೆಯ ಮೂಲಕ ವಾಹನ ಅಲಂಕರಿಸಬಹುದು.

ಇದನ್ನೂ ಓದಿ: ಮನೆಯಲ್ಲೇ ಆಯುಧ ಪೂಜೆ, ವಾಹನ ಪೂಜೆ ಮಾಡುವುದು ಹೇಗೆ? ಇಲ್ಲಿದೆ ಪೂಜಾ ವಿಧಾನ