ಎಲೆಕ್ಟ್ರಿಕ್‌ ಕಾರು ಪ್ರಿಯರಿಗೆ ಸಿಹಿಸುದ್ದಿ: ಕಡಿಮೆ ದರದ ಕಿಯಾ ಕ್ಯಾರೆನ್ಸ್ ಇವಿ ಪರಿಚಯಿಸಲಿದೆಯಂತೆ ಕಿಯಾ ಇಂಡಿಯಾ
ಕನ್ನಡ ಸುದ್ದಿ  /  ಜೀವನಶೈಲಿ  /  ಎಲೆಕ್ಟ್ರಿಕ್‌ ಕಾರು ಪ್ರಿಯರಿಗೆ ಸಿಹಿಸುದ್ದಿ: ಕಡಿಮೆ ದರದ ಕಿಯಾ ಕ್ಯಾರೆನ್ಸ್ ಇವಿ ಪರಿಚಯಿಸಲಿದೆಯಂತೆ ಕಿಯಾ ಇಂಡಿಯಾ

ಎಲೆಕ್ಟ್ರಿಕ್‌ ಕಾರು ಪ್ರಿಯರಿಗೆ ಸಿಹಿಸುದ್ದಿ: ಕಡಿಮೆ ದರದ ಕಿಯಾ ಕ್ಯಾರೆನ್ಸ್ ಇವಿ ಪರಿಚಯಿಸಲಿದೆಯಂತೆ ಕಿಯಾ ಇಂಡಿಯಾ

ಕಿಯಾವು ಭಾರತದಲ್ಲಿ ಕಿಯಾ ಕ್ಯಾರೆನ್ಸ್‌ ಇವಿಯನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಕಂಪನಿಯು ಇವಿ6 ಮತ್ತು ಇವಿ9ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಆದರೆ, ಈ ಕಾರುಗಳ ದರ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವಂತೆ ಇಲ್ಲ. ಇವುಗಳ ದರ 65 ಲಕ್ಷದಿಂದ1.30 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಕಿಯಾ ಕ್ಯಾರೆನ್ಸ್‌ ಇವಿ ದರ 16 ಲಕ್ಷ ರೂ ಆಸುಪಾಸಿನಲ್ಲಿ ಇರಲಿದೆಯಂತೆ.

ಕಿಯಾ ಕ್ಯಾರೆನ್ಸ್ ಇವಿ ವೈಶಿಷ್ಟ್ಯಗಳೇನು; ಸಂಭಾವ್ಯ ಬಿಡುಗಡೆ ದಿನಾಂಕ, ಬೆಲೆ  ಹಾಗೂ ಇತರ ವಿವರ (ಸಾಂದರ್ಭಿಕ ಚಿತ್ರ)
ಕಿಯಾ ಕ್ಯಾರೆನ್ಸ್ ಇವಿ ವೈಶಿಷ್ಟ್ಯಗಳೇನು; ಸಂಭಾವ್ಯ ಬಿಡುಗಡೆ ದಿನಾಂಕ, ಬೆಲೆ ಹಾಗೂ ಇತರ ವಿವರ (ಸಾಂದರ್ಭಿಕ ಚಿತ್ರ)

ಕೊರಿಯಾದ ಕಾರು ತಯಾರಿಕಾ ಕಂಪನಿ ಕಿಯಾವು ಭಾರತದಲ್ಲಿ ಕಿಯಾ ಕ್ಯಾರೆನ್ಸ್‌ ಇವಿಯನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಕಿಯಾ ಇಂಡಿಯಾವು ಇವಿ6 ಮತ್ತು ಇವಿ9ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಆದರೆ, ಈ ಕಾರುಗಳ ದರ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವಂತೆ ಇಲ್ಲ. ಇವುಗಳ ದರ 65 ಲಕ್ಷ ರೂಪಾಯಿಯಿಂದ 1.30 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಇದೀಗ ಕಂಪನಿಯು ಕಿಯಾ ಕ್ಯಾರೆನ್ಸ್‌ ಇವಿ ಮೂಲಕ ಕಡಿಮೆ ದರದ ಎಲೆಕ್ಟ್ರಿಕ್‌ ಕಾರು ಪರಿಚಯಿಸಲಿದೆಯಂತೆ. ಇದರ ದರ 16 ಲಕ್ಷ ಆಸುಪಾಸಿನಲ್ಲಿ ಇರಲಿದೆ ಎಂದು ವರದಿಗಳು ತಿಳಿಸಿವೆ.

ಕಿಯಾ ಕ್ಯಾರೆನ್ಸ್ ಇವಿ (Kia Carens EV), ಕಿಯಾ ಕಂಪನಿಯ ಮೊದಲ ಸಮೂಹ ಮಾರುಕಟ್ಟೆ ಇಲೆಕ್ಟಿಕ್‌ ವಾಹನವಾಗಿದೆ. ಈ ಕಾರು ಬಿಡುಗಡೆ ಬಗ್ಗೆ ಭಾರಿ ನಿರೀಕ್ಷೆ ಇದ್ದು, 2025ರ ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಕಾರು ಕಂಪನಿಯ ಹೊಸ ಕ್ಲಾವಿಸ್‌ ಕಾರಿನಂತೆಯೇ ವಿನ್ಯಾಸ ಹೊಂದಿರುವ ಸಾಧ್ಯತೆಯಿದೆ. ಆದರೆ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗೆ ಬೇಕಾದಂತೆ ಅಗತ್ಯ ಮಾರ್ಪಾಡುಗಳು ಕಾರಿನಲ್ಲಿ ಇರಲಿದೆ. ಕಾರು ಭಾರತದಲ್ಲಿ ಇನ್ನಷ್ಟೇ ಬಿಡುಗಡೆಯಾಗಬೇಕಿರುವುದರಿಂದ ಕಾರಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಹೀಗಾಗಿ ವಿವಿಧ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕ್ಯಾರೆನ್ಸ್ ಇವಿಯು ಭಾರತದಲ್ಲಿ ಕಿಯಾ ಇಂಡಿಯಾದ ಮೊದಲ ಕೈಗೆಟುಕುವ ಎಲೆಕ್ಟ್ರಿಕ್ ವಾಹನ ಎಂದು ಹೇಳಲಾಗಿದೆ. ಕಿಯಾ ಇಂಡಿಯಾ EV6 ಮತ್ತು EV9 ಗಳನ್ನು ಹೊಂದಿದ್ದು, ಎರಡೂ ಐಷಾರಾಮಿ ಕಾರುಗಳು ಮಾರುಕಟ್ಟೆಯಲ್ಲಿವೆ. ಮುಂದೆ ಕ್ಯಾರೆನ್ಸ್ ಇವಿ ಲಾಂಚ್‌ ಆಗಲಿದ್ದು, ದೊಡ್ಡ ಸಂಖ್ಯೆಯಲ್ಲಿ ಮಧ್ಯಮ ವರ್ಗದವರು ಕೂಡಾ ಖರೀದಿಸುವ ನಿರೀಕ್ಷೆ ಇದೆ.

ಹೊಸ ಕ್ಯಾರೆನ್ಸ್ ಇವಿ ಎಕ್ಸ್-ಶೋರೂಂ ಬೆಲೆ ಸುಮಾರು 16 ಲಕ್ಷ ರೂ.ಗಳಿಂದ ಆರಂಭವಾಗಲಿದೆ ಎಂಬ ನಿರೀಕ್ಷೆ ಇದೆ. ಇದು ಪೂರ್ತಿ ಚಾರ್ಜ್‌ನಲ್ಲಿ 400ರಿಂದ 500 ಕಿಮೀ ವ್ಯಾಪ್ತಿಯವರೆಗೆ ಓಡುವ ಸಾಧ್ಯತೆಯಿದೆ. ವೇಗದ ಚಾರ್ಜಿಂಗ್, ಡ್ಯುಯಲ್ ಡಿಜಿಟಲ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಸೇರಿದಂತೆ ಸ್ಟ್ಯಾಂಡರ್ಸ್‌ ಕ್ಯಾರೆನ್ಸ್‌ನಲ್ಲಿರುವ ಹಲವು ವೈಶಿಷ್ಟ್ಯಗಳು ಈ ಕಾರಿನಲ್ಲಿಯೂ ಇರುವ ನಿರೀಕ್ಷೆಯಿದೆ.

ಪ್ರಮುಖ ವೈಶಿಷ್ಟ್ಯಗಳು

  • ಬೆಲೆ: ಸುಮಾರು 16 ಲಕ್ಷ ರೂ. (ಎಕ್ಸ್-ಶೋರೂಂ)
  • ರೇಂಜ್: 400-500 ಕಿಮೀ
  • ಚಾರ್ಜಿಂಗ್: ಡಿಸಿ ಫಾಸ್ಟ್ ಚಾರ್ಜಿಂಗ್ ಮತ್ತು V2L ಬೆಂಬಲಿಸುವ ಸಾಧ್ಯತೆ

ಒಟ್ಟು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಮುಂಭಾಗ/ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿರುವ ನಿರೀಕ್ಷೆಯಿದೆ. ಇದೇ ವೇಳೆ ಕೆಲವು ADAS ವೈಶಿಷ್ಟ್ಯಗಳೊಂದಿಗೆ ಬರುವ ಸಾಧ್ಯತೆ ಇದೆ. ಕ್ಯಾರೆನ್ಸ್ ಇವಿ ಕಾರು ಸ್ಟ್ಯಾಂಡರ್ಡ್ ಕ್ಯಾರೆನ್ಸ್‌ಗೆ ಹೋಲುವ ಸಿಲೂಯೆಟ್ ಅನ್ನು ಹೊಂದಿರುವ ನಿರೀಕ್ಷೆ ಇದೆ. EV ಆವೃತ್ತಿಯು ಹುಂಡೈ ಕ್ರೆಟಾ ಇವಿ ಕಾರಿನಂತೆಯೇ ಪವರ್‌ಟ್ರೇನ್ ಹೊಂದುವ ನಿರೀಕ್ಷೆ ಇದೆ.

ಎಷ್ಟು ಸೀಟ್‌ಗಳು ಇರಲಿದೆ?

ಕಿಯಾ ಕ್ಯಾರೆನ್ಸ್ ಇವಿ ಸಾಮಾನ್ಯ ಕ್ಯಾರೆನ್ಸ್‌ನಂತೆಯೇ 6 ಮತ್ತು 7 ಆಸನಗಳ ಆಸನ ಸಾಮರ್ಥ್ಯವನ್ನು ಹೊಂದಿರುವ ನಿರೀಕ್ಷೆಯಿದೆ. ಕ್ಯಾರೆನ್ಸ್ ಇವಿ ಮೂರು ಸಾಲುಗಳ ಎಂಯುವಿ ಆಗಿದ್ದು, ಕ್ಯಾಪ್ಟನ್ ಸೀಟುಗಳೊಂದಿಗೆ ಆರು ಆಸನಗಳು ಮತ್ತು ಮಧ್ಯದ ಸಾಲಿನಲ್ಲಿ ಬೆಂಚ್ ಸೀಟ್‌ನೊಂದಿಗೆ ಏಳು ಆಸನಗಳಿರುವ ಸಾಧ್ಯತೆ ಇದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.