Electric car: ಈ ಪುಟ್ಟ ಎಲೆಕ್ಟ್ರಿಕ್ ಜೀರುಂಡೆ ಕಾರಿಗೆ ಮುಂಭಾಗದಲ್ಲಿಯೇ ಡೋರ್, ರೇಂಜ್ ಕೂಡ ಸೂಪರ್! ಖರೀದಿಸುವಿರಾ?
Electric car for City Drive: ಮುಂಭಾಗದಲ್ಲಿ ಬಾಗಿಲು ಇರುವ ಕಾರನ್ನು ಎಂದಾದರೂ ನೋಡಿದ್ದೀರಾ? ಇಲ್ನೋಡಿ ಮೈಕ್ರೊಲಿನೊ ಎಂಬ ಪುಟ್ಟ ಎಲೆಕ್ಟ್ರಿಕ್ ಕಾರು ಇಲ್ಲಿದೆ. ಇದರಲ್ಲಿ ಅನೇಕ ಕ್ರೇಜಿ ಫೀಚರ್‌ಗಳೂ ಇವೆ. ಇದರ ರೇಂಜ್ ಕೂಡ ಸೂಪರ್.
ಈಗ ಎಲ್ಲೆಡೆ ಎಲೆಕ್ಟ್ರಿಕ್ ಕಾರುಗಳದ್ದೇ ಕಾರುಬಾರು. ಎಲ್ಲರೂ ಪೆಟ್ರೋಲ್-ಡೀಸೆಲ್ ವಾಹನಗಳನ್ನು ಬಿಟ್ಟು ಇ-ವಾಹನಗಳನ್ನು ಖರೀದಿಸಲು ಬಯಸುತ್ತಿದ್ದಾರೆ. ಇದೇ ಸಮಯದಲ್ಲಿ ಹಲವು ಬಗೆಯ ಕಾರುಗಳೂ ಆಗಮಿಸುತ್ತಿವೆ. ಕೆಲವೊಂದು ಕಾರುಗಳು ವಿನೂತನವಾಗಿವೆ. ಅವುಗಳಲ್ಲಿ ಮೈಕ್ರೊಲಿನೊ ಕಾರು ಕೂಡ ಒಂದಾಗಿದೆ. ಈ ಕಾರಿನ ಚಿತ್ರ ನೋಡಿದಾಗಲೇ ನಿಮಗೆ ಇದು ಡಿಫರೆಂಟ್ ಆಗಿರುವುದು ಗಮನಕ್ಕೆ ಬಂದಿರಬಹುದು. ಈ ಕಾರಿನ ಫೀಚರ್‌ಗಳು, ರೇಂಜ್ ಮತ್ತು ಇತರೆ ವಿವರ ಇಲ್ಲಿ ನೀಡಲಾಗಿದೆ.
ನಗರ ಚಾಲನೆಗೆ ಸೂಕ್ತವಾದ ಎಲೆಕ್ಟ್ರಿಕ್ ಕಾರು
ಸ್ವಿಸ್ ಕಂಪನಿ ಮೈಕ್ರೋ ಮೊಬಿಲಿಟಿ ಸಿಸ್ಟಮ್ಸ್ ವಿನ್ಯಾಸಗೊಳಿಸಿದ ಈ ಮೈಕ್ರೊಲಿನೊ ಎಲೆಕ್ಟ್ರಿಕ್ ಕಾರು 12.4 ಕಿಲೋವ್ಯಾಟ್‌ನ ಮೋಟಾರ್ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿ.ಮೀ. ಈ ಇವಿ 0 ರಿಂದ 50 ಕಿಮಿ ಆಕ್ಸಿಲರೇಷನ್ ಪಡೆಯಲು ಕೇವಲ 5 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಎಲೆಕ್ಟ್ರಿಕ್ ಕಾರ್ 5.5 ಕಿಲೋವ್ಯಾಟ್, 10.5 ಕಿಲೋವ್ಯಾಟ್ ಮತ್ತು 15 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ. ಇವೆಲ್ಲವೂ ಲಿಥಿಯಂ ಐಯಾನ್ ಬ್ಯಾಟರಿಗಳು. ಒಂದು ಬಾರಿ ಚಾರ್ಜ್ ಮಾಡಿದರೆ ಕ್ರಮವಾಗಿ 93 ಕಿಮೀ, 177 ಕಿಮೀ ಮತ್ತು 228 ಕಿಮೀ ರೇಂಜ್ ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.
5.5 ಕಿ.ವ್ಯಾಟ್ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 2 ಗಂಟೆಗಳು ಬೇಕು. ಉಳಿದ ಎರಡು ಬ್ಯಾಟರಿಗಳನ್ನು 4 ಗಂಟೆ ಮತ್ತು 5.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.
ಮೈಕ್ರೊಲಿನೊ ವಿನ್ಯಾಸ
ಈ ಮೈಕ್ರೊಲಿನೊ ಎಲೆಕ್ಟ್ರಿಕ್ ಕಾರು ಸಂಪೂರ್ಣ ರೆಟ್ರೋ ಥೀಮ್ ವಿನ್ಯಾಸವನ್ನು ಹೊಂದಿದೆ. ಈ ವಿನ್ಯಾಸದ ಪ್ರಮುಖ ಅಂಶವೆಂದರೆ ಮುಂಭಾಗದಲ್ಲಿ ಬಾಗಿಲು ತೆರೆಯುವುದು. ಮುಂಭಾಗದಲ್ಲಿ ವಿನೂತನ ಲೈಟ್ ಬಾರ್‌ಗಳನ್ನು ಹೊಂದಿದೆ. ಎರಡು ಎಲ್‌ಇಡಿ ಹೆಡ್‌ಲೈಟ್, ಟೇಲ್‌ಲೈಟ್‌ಗಳಿವೆ. ಆಕರ್ಷಕ ಅಲಾಯ್ ವೀಲ್‌ಗಳು ಇವೆ. ಸಾಫ್ಟ್ ಕ್ಲೋಸ್ ಫ್ರಂಟ್ ಡೋರ್ ಮೆಕ್ಯಾನಿಸಂ, 4 ವೀಲ್ ಇಂಡಿಪೆಂಡೆಂಟ್ ಸಸ್ಪೆನ್ಷನ್ ಸಿಸ್ಟಮ್, ವೆಗನ್ ಲೆದರ್ ಟ್ರಿಮ್ಡ್ ಸ್ಟೀರಿಂಗ್ ವೀಲ್, ಇಂಟಿಗ್ರೇಟೆಡ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್, 3 ಲೆವೆಲ್ ಎಲೆಕ್ಟ್ರಿಕ್ ಹೀಟಿಂಗ್ ಸೆಟಪ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಹೀಟೆಡ್ ಫ್ರಂಟ್ ಮತ್ತು ರಿಯರ್ ವಿಂಡ್‌ಸ್ಕ್ರೀನ್ ಮುಂತಾದ ಫೀಚರ್‌ಗಳನ್ನು ಹೊಂದಿದೆ. ಇದರಲ್ಲಿ ಟಚ್ ಸ್ಕ್ರೀನ್ ಸೆಂಟ್ರಲ್ ಡಿಸ್‌ಪ್ಲೇಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಕೂಡ ಇದೆ.
ಈ ಪುಟ್ಟ ಎಲೆಕ್ಟ್ರಿಕ್ ಕಾರಿನ ಕರ್ಬ್ ತೂಕ 496 ಕೆಜಿ. ಇದರ ಉದ್ದ 2519 ಮಿಮೀ, ಅಗಲ 1473 ಮಿಮೀ ಮತ್ತು ಎತ್ತರ 1501 ಮಿಮೀ. ಇದೆ. ನಗರ ಚಾಲನೆಗೆ ಇದು ತುಂಬಾ ಉಪಯುಕ್ತವಾಗಿದೆ. ಪಾರ್ಕಿಂಗ್ ಸಮಸ್ಯೆಗೂ ಪರಿಹಾರದಂತೆ ಕಾಣಿಸುತ್ತದೆ.
ಮೈಕ್ರೊಲಿನೊ ಎಲೆಕ್ಟ್ರಿಕ್ ಕಾರು ಮೂರು ಆವೃತ್ತಿಗಳಲ್ಲಿ ಲಭ್ಯವಿದೆ. ಮೈಕ್ರೊಲಿನೊ ಅರ್ಬನ್, ಮೈಕ್ರೊಲಿನೊ ಡೊಲ್ಸ್, ಮೈಕ್ರೊಲಿನೊ ಕಾಂಪಿಟಿಜಿಯೋನ್ ಎಂಬ ವರ್ಷನ್‌ಗಳಲ್ಲಿ ಮಾರಾಟವಾಗುತ್ತಿವೆ.
ಭಾರತದಲ್ಲಿ ಮೈಕ್ರೊಲಿನೊ ಎಲೆಕ್ಟ್ರಿಕ್ ಕಾರು ಲಭ್ಯವಿದೆಯೇ?
ಈ ಮೈಕ್ರೊಲಿನೊ ಎಲೆಕ್ಟ್ರಿಕ್ ಕಾರನ್ನು ಅನೇಕ ಯುರೋಪಿಯನ್ ದೇಶಗಳನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗಿದೆ. ಇದರ ಆರಂಭಿಕ ಬೆಲೆ ಸುಮಾರು 18,000 ಪೌಂಡ್‌ಗಳು. ಕಾರು ಪುಟ್ಟದ್ದಾಗಿದ್ದರೂ ದರ ಹೆಚ್ಚು. ಯುರೋಪ್ ರಾಷ್ಟ್ರಗಳಲ್ಲಿ ಯಶಸ್ವಿಯಾದರೆ ಏಷ್ಯಾಕ್ಕೂ ಈ ಮಾದರಿ ಪ್ರವೇಶಿಸುವ ಸಾಧ್ಯತೆ ಇದೆ. ಇದು ಭಾರತದಲ್ಲಿ ಬಿಡುಗಡೆಯಾಗುತ್ತದೆಯೇ? ಎಂಬುದರ ಬಗ್ಗೆ ಸದ್ಯ ಮಾಹಿತಿ ಇಲ್ಲ.
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope