ಹೊಸ ಹೀರೋ ಡೆಸ್ಟಿನಿ 125; ನಗರ ಸಂಚಾರಕ್ಕೆ ಹೊಂದುವ ಸ್ಕೂಟರ್‌ನಲ್ಲಿ ಹಲವು ವೈಶಿಷ್ಟ್ಯ, ಬೆಲೆ-ಮೈಲೇಜ್‌ ವಿವರ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಸ ಹೀರೋ ಡೆಸ್ಟಿನಿ 125; ನಗರ ಸಂಚಾರಕ್ಕೆ ಹೊಂದುವ ಸ್ಕೂಟರ್‌ನಲ್ಲಿ ಹಲವು ವೈಶಿಷ್ಟ್ಯ, ಬೆಲೆ-ಮೈಲೇಜ್‌ ವಿವರ ಹೀಗಿದೆ

ಹೊಸ ಹೀರೋ ಡೆಸ್ಟಿನಿ 125; ನಗರ ಸಂಚಾರಕ್ಕೆ ಹೊಂದುವ ಸ್ಕೂಟರ್‌ನಲ್ಲಿ ಹಲವು ವೈಶಿಷ್ಟ್ಯ, ಬೆಲೆ-ಮೈಲೇಜ್‌ ವಿವರ ಹೀಗಿದೆ

ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‌ನಲ್ಲಿ 125ಸಿಸಿ ಇಂಜಿನ್‌ ಇದೆ. ಉತ್ತಮ ಮೈಲೇಜ್ ಕೂಡಾ ನೀಡುತ್ತದೆ. ಸ್ಕೂಟರ್‌ ಅನ್ನು ಆಧುನಿಕ ಸವಾರರ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗಿದೆ ಎಂದು ಕಂಪನಿ ಹೇಳಿದೆ.

ಹೀರೋ ಡೆಸ್ಟಿನಿ 125: ನಗರ ಸಂಚಾರಕ್ಕೆ ಹೊಂದುವ ಸ್ಕೂಟರ್‌ನ ಬೆಲೆ-ಮೈಲೇಜ್‌ ವಿವರ ಹೀಗಿದೆ
ಹೀರೋ ಡೆಸ್ಟಿನಿ 125: ನಗರ ಸಂಚಾರಕ್ಕೆ ಹೊಂದುವ ಸ್ಕೂಟರ್‌ನ ಬೆಲೆ-ಮೈಲೇಜ್‌ ವಿವರ ಹೀಗಿದೆ

ಬೆಂಗಳೂರು: ಹೀರೋ ಮೋಟೋಕಾರ್ಪ್ ಕಂಪನಿಯು ಹೊಸ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆ ಮಾಡಿದೆ. 125 ಸಿಸಿ ಸ್ಕೂಟರ್ ಇದಾಗಿದ್ದು, ನಗರ ಸಂಚಾರಕ್ಕೆ ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ನ್ಯೂ ಡೆಸ್ಟಿನಿ 125 ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸವಾರರಿಗಾಗಿ ಇದರಲ್ಲಿ ಹಲವಾರು ಅನುಕೂಲಗಳನ್ನು ನೀಡಲಾಗಿದೆ. ದೈನಂದಿನ ನಗರ ಸಂಚಾರಕ್ಕೆ ಅನುಕೂಲವಾಗುವಂತೆ ಸ್ಕೂಟರ್ ಸವಾರರ ನಿರೀಕ್ಷೆಗಳನ್ನು ಮೀರಿಸುವಂತಿದೆ.

ರೈಡರ್‌ಗಳ ಸುರಕ್ಷತೆಗಾಗಿ ಪ್ರಕಾಶಿತ ಸ್ಟಾರ್ಟ್ ಸ್ವಿಚ್ ಅನ್ನು ಇದು ಹೊಂದಿದೆ. ಆಟೋ-ಕ್ಯಾನ್ಸಲ್ ವಿಂಕರ್‌ಗಳಂತಹ ವೈಶಿಷ್ಟ್ಯಗಳಿವೆ. ಕಾಲಿಡಲು ಅಗತ್ಯವಿರುವಷ್ಟು ಸ್ಥಳ ಮತ್ತು ವಿಶಾಲವಾದ ಫ್ಲೋರ್‌ಬೋರ್ಡ್‌ಗಳನ್ನು ಹೊಂದಿದೆ. ಡೆಸ್ಟಿನಿ 125 ಸ್ಕೂಟರ್‌ನಲ್ಲಿ ಉದ್ದವಾದ ಸೀಟುಗಳಿದ್ದು ಸವಾರರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ.

ಸ್ಮಾರ್ಟ್, ಸುಗಮ ಮತ್ತು ಮಿತವ್ಯಯದಲ್ಲಿ ಓಡಾಡಲು ವಿನ್ಯಾಸಗೊಳಿಸಲಾದ ಈ ಸ್ಕೂಟರ್‌ನಲ್ಲಿ ಹೊಸ ಡಿಜಿಟಲ್ ಸ್ಪೀಡೋಮೀಟರ್, 190ಮಿಮೀ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಅಗಲವಾದ ಚಕ್ರವನ್ನು ಹೊಂದಿದೆ. ದಕ್ಷತೆ ಹೆಚ್ಚಿಸಲು ನವೀನ i3S (ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್) ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಸೀಟ್ ಬ್ಯಾಕ್‌ರೆಸ್ಟ್ ಸೌಕರ್ಯವು ಅತ್ಯುತ್ತಮ ಸವಾರಿಯ ಅನುಭವ ನೀಡುತ್ತದೆ.

ಹೊಸ ಸ್ಕೂಟರ್‌ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಹೀರೋ ಮೋಟೋಕಾರ್ಪ್‌ನ ಭಾರತ ವ್ಯವಹಾರ ಘಟಕದ ಮುಖ್ಯ ವ್ಯವಹಾರ ಅಧಿಕಾರಿ ರಂಜಿವ್‌ಜಿತ್ ಸಿಂಗ್, “ಆಧುನಿಕ ಯುಗದ ಸವಾರರಿಗಾಗಿ ವಿನ್ಯಾಸಗೊಳಿಸಲಾಗಿರುವ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ಪರಿಚಯಿಸಲು ನಮಗೆ ರೋಮಾಂಚನವಾಗುತ್ತಿದೆ. ಈ ನವೀನ 125 ಸಿಸಿ ಸ್ಕೂಟರ್, ಉದ್ಯಮದ ಮಾನದಂಡಗಳನ್ನು ಮರುವ್ಯಾಖ್ಯಾನಿಸುತ್ತದೆ. 59 ಕಿಮೀ/ಲೀಟರ್‌ ಮೈಲೇಜ್ ಜೊತೆಗೆ ಕುಟುಂಬ ಸ್ನೇಹಿ ಸ್ಕೂಟರ್ ನಾವೀನ್ಯತೆ, ಮೌಲ್ಯ ಮತ್ತು ಸಾಟಿಯಿಲ್ಲದ ಸವಾರಿ ಅನುಭವ ನೀಡುವಲ್ಲಿ ಕಂಪನಿಗೆ ಇರುವ ಬದ್ಧತೆಯನ್ನು ತೋರಿಸುತ್ತದೆ.

ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‌ನಲ್ಲಿ 125ಸಿಸಿ ಇಂಜಿನ್‌ ಇದೆ. i3S ತಂತ್ರಜ್ಞಾನ ಮತ್ತು ಒನ್-ವೇ ಕ್ಲಚ್‌ನೊಂದಿಗೆ ಉತ್ತಮ ಮೈಲೇಜ್ ಕೂಡಾ ನೀಡುತ್ತದೆ. ಒಟ್ಟಾರೆಯಾಗಿ ಈ ಸ್ಕೂಟರ್ ಕ್ರಿಯಾತ್ಮಕತೆ ಮತ್ತು ತಂತ್ರಜ್ಞಾನಗಳ ಪರಿಪೂರ್ಣ ಮಿಶ್ರಣವಾಗಿದ್ದು, ಆಧುನಿಕ ಸವಾರರ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗಿದೆ ಎಂದು ಕಂಪನಿ ಹೇಳಿದೆ.

ವಿಶೇಷ ಲಕ್ಷಣಗಳು

  • ಕಾಲಿಡಲು ಯಥೇಚ್ಛ ಸ್ಥಳಾವಕಾಶ
  • ಫ್ರಂಟ್ ಗ್ಲೌವ್ ಬಾಕ್ಸ್
  • ಬೂಟ್ ಲ್ಯಾಂಪ್
  • ಕ್ರೋಮ್ ಆಕ್ಸೆಂಟ್ಸ್
  • ಬ್ಲೂಟೂತ್ ಕನೆಕ್ಟಿವಿಟಿ ಸಹಿತ ಡಿಜಿಟಲ್ ಸ್ಪೀಡೋಮೀಟರ್
  • ಪ್ರಕಾಶಮಾನವಾದ ಸ್ಟಾರ್ಟ್ ಸ್ವಿಚ್
  • ಕ್ರೋಮ್ ಆಕ್ಸೆಂಟ್ಸ್
  • ಆಟೋ-ಕ್ಯಾನ್ಸಲ್ ವಿಂಕರ್ಸ್

ಲಗೇಜ್ ಬಾಕ್ಸ್‌ನಲ್ಲಿ ಬೂಟ್ ಲ್ಯಾಂಪ್ ಇದ್ದು, ಮಂದ-ಬೆಳಕಿದ್ದಾಗ ವಸ್ತುಗಳನ್ನು ಇಟ್ಟು ತೆಗೆಯಲು ಅನುಕೂಲಕರವಾಗುತ್ತದೆ. ಆಧುನಿಕತೆಯ ಸ್ಪರ್ಶಕ್ಕಾಗಿ ಸ್ಕೂಟರ್ ತಾನಾಗೇ ಆಫ್ ಆಗುವ ವಿಂಕರ್‌ಗಳನ್ನು ಹೊಂದಿದೆ. ಇದರಿಂದ ಒಂದು ತಿರುವಿನ ನಂತರ ಇಂಡಿಕೇಟರ್‌ಗಳು ತಾನಾಗಿಯೇ ಆಫ್ ಆಗುತ್ತವೆ.

ಬ್ಲೂಟೂತ್ ಸಂಪರ್ಕವಿರುವ ಸುಧಾರಿತ ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇಸಿಒ ಸೂಚಕ, ನೈಜ ಸಮಯದ ಮೈಲೇಜ್ ಪ್ರದರ್ಶನ, ಇಂಧನ ಇನ್ನೂ ಎಷ್ಟು ದೂರಕ್ಕೆ ಸಾಲುತ್ತದೆ ಎಂಬ ಸೂಚನೆ ಸೇರಿದಂತೆ ಹಲವಾರು ಸ್ಮಾರ್ಟ್‌ಫೋನ್ ಸಂಪರ್ಕದ ವೈಶಿಷ್ಟ್ಯಗಳನ್ನು ಹೊಂದಿದೆ. ಮಿಸ್ಡ್ ಕಾಲ್‌ಗಳು, ಮೆಸೇಜ್‌ಗಳು ಮತ್ತು ಮೊಬೈಲ್‌ಗೆ ಬರುವ ಕರೆಗಳ ನೋಟಿಫಿಕೇಶನ್‌ ಸಿಗುತ್ತದೆ. ಮೊಬೈಲ್ ಚಾರ್ಜಿಂಗ್ ಪೋರ್ಟ್, ಪ್ರಕಾಶಮಾನವಾದ ಸ್ಟಾರ್ಟ್ ಸ್ವಿಚ್ ಇದರಲ್ಲಿದೆ.

ಸುಧಾರಿತ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿದ್ದು, ಕಡುಕತ್ತಲೆಯಲ್ಲೂ ಉತ್ತಮ ಗೋಚರತೆಯನ್ನು ಖಚಿತಪಡಿಸುತ್ತವೆ. ರಾತ್ರಿ ಪ್ರಯಾಣದ ಸಮಯದಲ್ಲಿ ಸುರಕ್ಷತೆ ಹೆಚ್ಚಿಸುತ್ತವೆ. 190ಎಂಎಂ ಮುಂಭಾಗದ ಡಿಸ್ಕ್ ಬ್ರೇಕ್ ಇದೆ. ವಿಶೇಷವಾಗಿ ಇದರ 12/12 ಚಕ್ರ ಗಾತ್ರವು ಸ್ಥಿರತೆ ಮತ್ತು ಸವಾರರಿಗೆ ಉತ್ತಮ ನಿಯಂತ್ರಣವನ್ನು ನೀಡುತ್ತದೆ.

ಬೆಲೆ ಮತ್ತು ಮೈಲೇಜ್

ಹೊಸ ಹೀರೋ ಡೆಸ್ಟಿನಿ 125‌ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ಡೆಸ್ಟಿನಿ 125 VX ಎಕ್ಸ್‌ ಶೋರೂಮ್‌ ಬೆಲೆ 80,450 ರೂಪಾಯಿ. ಇದೇ ವೇಳೆ ಡೆಸ್ಟಿನಿ 125 ZX 89,300 ರೂ., ಹಾಗೂ ಡೆಸ್ಟಿನಿ 125 ZX+ ಬೆಲೆ 90,300 ರೂ. ಆಗಿದೆ. ಒಂದು ಲೀಟರ್‌ಗೆ 59 ಕಿಮೀ ಮೈಲೇಜ್‌ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ವಿಭಿನ್ನ ಬಣ್ಣಗಳಲ್ಲಿ ಲಭ್ಯ

ಹೊಸ ಡೆಸ್ಟಿನಿ 125 ಸ್ಕೂಟರ್ ಐದು ವಿಶೇಷ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. VX ಕ್ಯಾಸ್ಟ್ ಡ್ರಮ್ ಎಟರ್ನಲ್ ವೈಟ್, ರೀಗಲ್ ಬ್ಲ್ಯಾಕ್ ಮತ್ತು ಗ್ರೂವಿ ರೆಡ್‌ನಲ್ಲಿ ಲಭ್ಯವಿದೆ. ಕಾಸ್ಟ್ ಡಿಸ್ಕ್ ZX ಸ್ಕೂಟರ್‌ ಕಾಸ್ಮಿಕ್ ಬ್ಲೂ ಮತ್ತು ಮಿಸ್ಟಿಕ್ ಮೆಜೆಂಟಾದಲ್ಲಿ ಲಭ್ಯವಿದೆ. ಇದೇ ವೇಳೆ ಕ್ಯಾಸ್ಟ್ ಡಿಸ್ಕ್ ZX+ ಎಟರ್ನಲ್ ವೈಟ್ ಮತ್ತು ರೀಗಲ್ ಬ್ಲ್ಯಾಕ್‌ ಬಣ್ಣದ ಆಯ್ಕೆಯಲ್ಲಿ‌ ಲಭ್ಯವಿದೆ.

Whats_app_banner