Ather Rizta Electric Scooter: ಏಪ್ರಿಲ್ 6ಕ್ಕೆ ಮಾರುಕಟ್ಟೆಗೆ ಬರಲಿದೆ ಎಥರ್ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್
ಕನ್ನಡ ಸುದ್ದಿ  /  ಜೀವನಶೈಲಿ  /  Ather Rizta Electric Scooter: ಏಪ್ರಿಲ್ 6ಕ್ಕೆ ಮಾರುಕಟ್ಟೆಗೆ ಬರಲಿದೆ ಎಥರ್ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್

Ather Rizta Electric Scooter: ಏಪ್ರಿಲ್ 6ಕ್ಕೆ ಮಾರುಕಟ್ಟೆಗೆ ಬರಲಿದೆ ಎಥರ್ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್

Ather Rizta Electric Scooter: ಎಥರ್ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೊಸ ಅಪ್ಡೇಟ್ ಬಂದಿದೆ. ಮುಂದಿನ ತಿಂಗಳ ಸ್ಕೂಟರ್ ಮಾರುಕಟ್ಟೆಗೆ ಬರಲಿದೆ. ದರ ಹಾಗೂ ಇತರೆೆ ಮಾಹಿತಿ ತಿಳಿಯಿರಿ.

ಅತಿ ಶೀಘ್ರದಲ್ಲೇ ಎಥರ್ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲು  ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಅತಿ ಶೀಘ್ರದಲ್ಲೇ ಎಥರ್ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಎಥರ್ ಎನರ್ಜಿ ಕಂಪನಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಹೊಸ ಸ್ಕೂಟರ್‌ನ ಹೆಸರು ಎಥರ್ ರಿಜ್ಟಾ (Ather Rizta Electric Scooter). ಇದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಸ್ಕೂಟರ್ ಬಗ್ಗೆ ಮಹತ್ವದ ಅಪ್ಡೇಟ್‌ವೊಂದು ಹೊರಬಿದ್ದಿದೆ. ಅದೇನೆಂದರೆ 2024ರ ಏಪ್ರಿಲ್ 6ರ ಶನಿವಾರ ಈ ಸ್ಕೂಟರ್ ಅನ್ನು ಮಾರುಕಟ್ಟೆಗೆ ತರಲಾಗುತ್ತದೆ ಎಂದು ಮಾಹಿತಿಯನ್ನು ಬಹಿರಂಗಪಡಿಸಿದೆ. ಇದೇ ದಿನ ಎಥರ್ ಕಮ್ಯೂನಿಟಿ ಡೇ ಕೂಡ ನಡೆಯುತ್ತಿರುವುದರಿಂದ ರಿಜ್ಟಾವನ್ನು ಅದ್ಧೂರಿಯಾಗಿ ಲಾಂಚ್ ಮಾಡಲು ಪ್ಲಾನ್ ಮಾಡಿಕೊಳ್ಳುತ್ತಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಎಥರ್ ರಿಜ್ಟಾ ಫೋಟೋಗಳು ಲೀಕ್ ಆಗಿವೆ.

ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ ವೈಶಿಷ್ಟ್ಯಗಳು

ಮಾರುಕಟ್ಟೆಯಲ್ಲಿರುವ ಇತರೆ ಕಂಪನಿಗಳ ಸ್ಕೂಟರ್‌ಗಳಿಗೆ ಹೋಲಿಸಿದರೆ ಎಥರ್ ರಿಜ್ಟಾ ಗಾತ್ರದಲ್ಲಿ ದೊಡ್ಡದಾಗಿದೆ. ಸೀಟಿನಲ್ಲಿ ಕುಳಿತುಕೊಳ್ಳಲು ತುಂಬಾ ಆರಾಮದಾಯಕವಾಗಿರುತ್ತದೆ. ಇಲ್ಲಿಯವರೆಗೆ ಲೀಕ್ ಆಗಿರುವ ಫೋಟೊಗಳನ್ನು ದೊಡ್ಡ ಸೀಟ್ ಮತ್ತು ಫ್ಲೋರ್ ಬೋರ್ಡ್ ಗಮನಿಸಿದರೆ ಈ ವಿಷಯ ಅರ್ಥವಾಗುತ್ತದೆ. ಆದರೆ ಎಲೆಕ್ಟ್ರಿಕ್ ಸ್ಕೂಟರ್ ಫುಟ್‌ಪ್ರಿಂಟ್ ಕೂಡ ದೊಡ್ಡದಾಗಿಯೇ ಇರಲಿದೆ ಎಂದು ಹೇಳಲಾಗುತ್ತಿದೆ. ವೈಶಿಷ್ಟ್ಯಗಳ ವಿಷಯದಲ್ಲಿ ಈ ಮಾದರಿಯ ಸಖತ್ ರಿಚ್ ಆಗಿ ಕಾಣಿಸುತ್ತದೆ. ಎಥರ್ ತನ್ನ ಹಿಂದಿನ ಆಫರ್‌ಗಳಿಗೆ ಅನುಗುಣವಾಗಿ ಸೆಗ್ಮೆಂಟ್ ಫೀಚರ್‌ಗಳನ್ನು ತರುತ್ತಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಎಥರ್ ರಿಜ್ಟಾ ಇಲೆಕ್ಟ್ರಿಕ್ ಸ್ಕೂಟರ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ಕನೆಕ್ಟಡ್ ತಂತ್ರಜ್ಞಾನದೊಂದಿಗೆ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟಲ್ ಕನ್ಸೋಲ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಟರ್ನ್-ಬೈ-ಟರ್ನ್ ನೇವಿಗೇಷನ್, ಮಲ್ಟಿಪಲ್ ರೈಡಿಂಗ್ ಮೋಡ್, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ಸೂಪರ್ ಫೀಚರ್‌ಗಳು ಈ ಸ್ಕೂಟರ್‌ನಲ್ಲಿ ಇರಲಿವೆ ಎಂದು ಹೇಳಲಾಗುತ್ತಿದೆ.

ಈಥರ್ ಎನರ್ಜಿಯ ಮುಂಬರುವ ಇ-ಸ್ಕೂಟರ್ ಎಂಜಿನ್, ಬ್ಯಾಟರಿ ಪ್ಯಾಕ್, ಚಾರ್ಜರ್ ಇತ್ಯಾದಿಗಳನ್ನು ಕಂಪನಿ ಇನ್ನಷ್ಟೇ ಅಧಿಕೃತವಾಗಿ ಘೋಷಿಸಬೇಕಾಗಿದೆ. ಇವುಗಳ ಸಂಪೂರ್ಣ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಎಥರ್ 450ಎಕ್ಸ್‌ಗೆ ಹೋಲಿಸಿದರೆ ರಿಜ್ಟಾ ಹೊಸ ಸ್ಕೂಟರ್ ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ ಸಾಧ್ಯತೆ ಇದೆ. 2.9 KWH ಬ್ಯಾಟರಿ ಪ್ಯಾಕ್ ಇದರಲ್ಲಿ ಇರುವ ಸಾಧ್ಯತೆ ಎಂದು ವರದಿಯಾಗಿದೆ.

ಎಥರ್ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ

ಎಥರ್ ರಿಜ್ಟಾ ಇ-ಸ್ಕೂಟರ್ ಲೋವರ್ ಅಪ್ರೋನ್‌ನಲ್ಲಿ ಎಲ್‌ಇಡಿ ಹೆಡ್‌ಲೈಟ್ ಸಂಯೋಜಿಸಲಾಗಿದೆ. ಮುಂಭಾಗದಲ್ಲಿ ವಿಶಾಲವಾದ ಇನ್‌ಸ್ಟ್ರುಮೆಂಟಲ್ ಪ್ಯಾನಲ್ ಕೂಡ ಇದೆ. ಓಲಾ ಎಸ್ 1 ಪ್ರೊ ಮತ್ತು ಟಿವಿಎಸ್ ಐಕ್ಯೂಬ್ ಎಸ್‌ ನಂತರಹ ಮಾದರಿಗಳೊಂದಿಗೆ ಎಥರ್ ರಿಜ್ಟಾ ಸ್ಪರ್ಧಿಸುತ್ತದೆ. ಆದರೆ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.40 ಲಕ್ಷ ರೂಪಾಯಿ ಇರುವ ಸಾಧ್ಯತೆ ಇದೆ. ಆಗ ಮಾತ್ರ ಮಾರುಕಟ್ಟೆಯಲ್ಲಿರುವ ಸ್ಪರ್ಧಿಗಳಿಗೆ ಉತ್ತಮ ಪೈಪೋಟಿ ನೀಡಲು ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಎಥರ್ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಕಳೆದ ವರ್ಷದಿಂದ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಕಾರು ಹಾಗೂ ಸಣ್ಣ ಸರಕು ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಐಷಾರಾಮಿ ಕಾರು ತಯಾರಿಕಾ ಕಂಪನಿಗಳೂ ಇದೀಗ ಇವಿಗಳತ್ತ ಮುಖ ಮಾಡಿದ್ದು, ಹೊಸ ಇವಿಗಳನ್ನು ಮಾರುಕಟ್ಟೆಗೆ ತರುತ್ತಿವೆ.

Whats_app_banner