Ethanol motorcycle: ಬಜಾಜ್ ಎಥೆನಾಲ್ ಬೈಕ್ ನೋಡಲು ರೆಡಿಯಾಗಿ, ಸೆಪ್ಟೆಂಬರ್‌ನಲ್ಲಿ ಬೈಕ್ ಜತೆ ಮೂರು ಚಕ್ರದ ವಾಹನವೂ ಆಗಮನ
Ethanol motorcycle: ಬಜಾಜ್ ಆಟೋ ಕಂಪನಿಯು ಮುಂದಿನ ತಿಂಗಳು ತನ್ನ ಮೊದಲ ಎಥೆನಾಲ್ ಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನವನ್ನು ಪ್ರದರ್ಶಿಸಲಿದೆ. ಇದು ಬಜಾಜ್‌ನ ಮೊದಲ ಎಥೆನಾಲ್ ದ್ವಿಚಕ್ರವಾಹನವಾಗಿರಲಿದೆ. ಆದರೆ, ಇತರೆ ದ್ವಿಚಕ್ರವಾಹನ ಕಂಪನಿಗಳು ಈಗಾಗಲೇ ತಮ್ಮ ಎಥೆನಾಲ್ ಪರಿಕಲ್ಪನೆ, ಮಾದರಿಗಳನ್ನು ಪ್ರದರ್ಶಿಸಿವೆ.
ಬಜಾಜ್ ಆಟೋ ಕಂಪನಿಯು ಮುಂದಿನ ತಿಂಗಳು ತನ್ನ ಮೊದಲ ಎಥೆನಾಲ್ ಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನವನ್ನು ಪ್ರದರ್ಶಿಸಲಿದೆ. ಸಿಎನ್‌ಬಿಸಿ ಟಿವಿ 18 ಜತೆಗಿನ ಮಾತುಕತೆಯಲ್ಲಿ ಈ ಕುರಿತು ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಬಜಾಜ್ ಖಚಿತಪಡಿಸಿದ್ದಾರೆ. ಕಂಪನಿಯು ತನ್ನ ಕ್ಲೀನ್ ಎನರ್ಜಿ ವಿಭಾಗದಲ್ಲಿ ದ್ವಿಚಕ್ರವಾಹನದ ಜತೆ ತ್ರಿಚಕ್ರವಾಹನವನ್ನೂ ಶೋಕೇಸ್ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಎಥೆನಾಲ್ ವಾಹನ ಆಗಮನ ಯಾವಾಗ?
ಈ ಹಣಕಾಸು ವರ್ಷದಲ್ಲಿಯೇ ಎಥೆನಾಲ್ ಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರವಾಹನವನ್ನು ಲಾಂಚ್ ಮಾಡಲು ಉದ್ದೇಶಿಸಲಾಗಿದೆ ಎಂದು ರಾಜೀವ್ ಬಜಾಜ್ ಸ್ಪಷ್ಟಪಡಿಸಿದ್ದಾರೆ. ಇದೇ ಸಮಯದಲ್ಲಿ ಇನ್ನಷ್ಟು ಕಡಿಮೆ ದರದ ಸಿಎನ್‌ಜಿ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಫ್ರೀಡಂ 125 ಬಳಿಕದ ಈ ಪ್ರಾಡಕ್ಟ್ ಇನ್ನು ಡೆವಲಪ್‌ಮೆಂಟ್ ಹಂತದಲ್ಲಿದೆ ಎಂದರು. 2025 ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ 100 ಸಿಸಿಯ ಈ ಬೈಕ್ ಬಿಡುಗಡೆಯಾಗಲಿದೆ ಎಂದರು.
ಬಜಾಜ್‌ನ ಮೊದಲ ಎಥೆನಾಲ್ ಬೈಕ್ಕ್
ಇದು ಬಜಾಜ್‌ನ ಮೊದಲ ಎಥೆನಾಲ್ ದ್ವಿಚಕ್ರವಾಹನವಾಗಿರಲಿದೆ. ಆದರೆ, ಇತರೆ ದ್ವಿಚಕ್ರವಾಹನ ಕಂಪನಿಗಳು ಈಗಾಗಲೇ ತಮ್ಮ ಎಥೆನಾಲ್ ಪರಿಕಲ್ಪನೆ, ಮಾದರಿಗಳನ್ನು ಪ್ರದರ್ಶಿಸಿವೆ. ಮುಂದಿನ ದಿನಗಳಲ್ಲಿ ಟಿವಿಎಸ್ ಅಪಾಚೆ ಆರ್‌ಟಿಆರ್ 200 ಶೇಕಡ 100ರಷ್ಟು ಎಥೆನಾಲ್‌ನಿಂದ ಚಾಲನೆಗೊಳ್ಳಲಿದೆ ಎಂದು ಟಿವಿಎಸ್ ಮೋಟಾರ್ ಕಂಪನಿಯು ಈ ಹಿಂದೆ ತಿಳಿಸಿತ್ತು. ಎಥೆನಾಲ್ ಚಾಲಿತ ಹೋಂಡಾ ಸಿಬಿ300ಎಫ್ ಬೈಕನ್ನು ಭಾರತ್ ಮೊಬಿಲಿಟಿ ಆಟೋ ಎಕ್ಸ್‌ಪೋ 2024 (ಜನವರಿ)ರಲ್ಲಿ ಹೋಂಡಾ ಪ್ರದರ್ಶಿಸಿತ್ತು.
ಬಜಾಝ್ ಕಂಪನಿಯ ಎಥೆನಾಲ್ ದ್ವಿಚಕ್ರವಾಹನ ಮತ್ತು ತ್ರಿಚಕ್ರ ವಾಹನ ಯಾವಾಗ ಲಾಂಚ್ ಆಗಲಿದೆ ಎಂಬ ವಿವರ ಮುಂದಿನ ತಿಂಗಳು ತಿಳಿಯಲಿದೆ. ಎಥೆನಾಲ್ ಇಂಧನದ ಲಭ್ಯತೆಯೂ ಹೆಚ್ಚಾಗಬೇಕಿದೆ. ಪೆಟ್ರೋಲ್ ಬಂಕ್‌ಗಳು ಇದಕ್ಕೆ ತಕ್ಕಂತೆ ತಮ್ಮ ಫ್ಯೂಯೆಲ್ ಸ್ಟೇಷನ್‌ಗಳನ್ನು ಅಪ್‌ಗ್ರೇಡ್ ಮಾಡಬೇಕಿದೆ. ಬಿಎಸ್6 2.0 ಪ್ರಕಾರ ಶೇಕಡ 20ರಷ್ಟು ಎಥೆನಾಲ್ ಬ್ಲೆಂಡ್ ಮಾಡಿ ಫ್ಯೂಯೆಲ್ ಎಮಿಷನ್ ಸ್ಟಾಂಡರ್ಡ್ ಹೆಚ್ಚಿಸಬೇಕಿದೆ.́
ಎಥೆನಾಲ್ ಪ್ರಪಂಚದಾದ್ಯಂತ ಬಳಸುವ ಅತ್ಯಂತ ಸಾಮಾನ್ಯವಾದ ಜೈವಿಕ ಇಂಧನವಾಗಿದೆ. ಎಥೆನಾಲ್ ಪೆಟ್ರೋಲ್‌ಗಿಂತ ಹೆಚ್ಚಿನ ಆಕ್ಟೇನ್ ರೇಟಿಂಗ್ ಅನ್ನು ಹೊಂದಿದೆ, ಇದನ್ನು ಪಳೆಯುಳಿಕೆ ಇಂಧನದೊಂದಿಗೆ ಯಾವುದೇ ದರಕ್ಕೆ ಮಿಶ್ರಣ ಮಾಡಬಹುದು ಮತ್ತು ಪೆಟ್ರೋಲ್ ಇಂಜಿನ್‌ಗಳ ಭಾಗವಾಗಿ ಗ್ಯಾಸೋಲಿನ್‌ಗೆ ಬದಲಿಯಾಗಿ ಬಳಸಿಕೊಳ್ಳಬಹುದು