Bajaj Freedom 125: ಮೊದಲ ತಿಂಗಳಲ್ಲೇ ಭರ್ಜರಿ ಮಾರಾಟ ಕಂಡ ಬಜಾಜ್ ಸಿಎನ್‌ಜಿ ಬೈಕ್: ಎಷ್ಟು ಸೇಲ್ ಆಗಿದೆ ನೋಡಿ
ಬಜಾಜ್ ಫ್ರೀಡಂ125 ಸಿಎನ್‌ಜಿಮೋಟಾರ್‌ಸೈಕಲ್ ವಿನ್ಯಾಸವು ವಿಭಿನ್ನವಾಗಿದೆ. ಈ ಬೈಕ್ ನೋಡಲು ಸಾಕಷ್ಟು ಆಕರ್ಷಕವಾಗಿದ್ದು ಕಾಂಪ್ಯಾಕ್ಟ್ಮತ್ತು ಹಗುರವಾದ ಬೈಕ್ ಆಗಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಈ ಬೈಕ್ ಇದೀಗ ಭರ್ಜರಿ ಮಾರಾಟ ಕಾಣುತ್ತಿದೆ.(ಬರಹ: ವಿನಯ್ ಭಟ್)
ಕಳೆದ ಜುಲೈನಲ್ಲಿ, ಬಜಾಜ್ ಆಟೋ ಲಿಮಿಟೆಡ್ ದೇಶಕ್ಕೆ ಮತ್ತು ವಿಶ್ವದ ಮೊದಲ CNG ಮೋಟಾರ್‌ಸೈಕಲ್ ಬಜಾಜ್ ಫ್ರೀಡಂ 125 ಅನ್ನು ಬಿಡುಗಡೆ ಮಾಡಿತ್ತು. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಈ ಬೈಕ್ ಇದೀಗ ಭರ್ಜರಿ ಮಾರಾಟ ಕಾಣುತ್ತಿದೆ. ಇದುವರೆಗೆ 60 ಸಾವಿರಕ್ಕೂ ಹೆಚ್ಚು ವಿಚಾರಣೆಗಳನ್ನು ಸ್ವೀಕರಿಸಿದೆ. ಡೆಲಿವರಿ ಪ್ರಾರಂಭವಾದ ಮೊದಲ ತಿಂಗಳಲ್ಲಿ ಅಂದರೆ ಜುಲೈ ತಿಂಗಳಿನಲ್ಲಿ ಎಷ್ಟು ಜನರು ಖರೀದಿಸಿದ್ದಾರೆ ಎಂಬ ಪ್ರಶ್ನೆಗೆ ಬಂದರೆ, ಜುಲೈ 16 ರಂದು ಪುಣೆಯಲ್ಲಿ ಡೆಲಿವರಿ ಪ್ರಾರಂಭವಾದ ನಂತರ, ಮುಂದಿನ 15 ದಿನಗಳಲ್ಲಿ 1,933 ಯುನಿಟ್‌ಗಳನ್ನು ವಿತರಿಸಲಾಗಿದೆ.
ಇದಾದ ಬಳಿಕ ಕಂಪನಿಯು ಆಗಸ್ಟ್ 15 ರವರೆಗೆ ದೇಶದ 78 ನಗರಗಳಲ್ಲಿ ಬಜಾಜ್ ಫ್ರೀಡಂ 125 ಮಾರಾಟವನ್ನು ಪ್ರಾರಂಭಿಸಿದೆ. ಇಲ್ಲೂ ಅತ್ಯುತ್ತಮ ಬೇಡಿಕೆ ಇದೆಯಂತೆ. ಮುಂಬರುವ ಸಮಯದಲ್ಲಿ, ಮಾರಾಟದ ಅಂಕಿಅಂಶಗಳು ಹೆಚ್ಚುವ ಸಾಧ್ಯತೆ ಇದೆ.
ಬಜಾಜ್ ಫ್ರೀಡಂ 125 ಸಿಎನ್‌ಜಿ ಮೋಟಾರ್‌ಸೈಕಲ್ ವಿನ್ಯಾಸವು ವಿಭಿನ್ನವಾಗಿದೆ. ಈ ಬೈಕ್ ನೋಡಲು ಸಾಕಷ್ಟು ಆಕರ್ಷಕವಾಗಿದ್ದು ಕಾಂಪ್ಯಾಕ್ಟ್ ಮತ್ತು ಹಗುರವಾದ ಬೈಕ್ ಆಗಿದೆ. ಇದು ಸ್ಪೋರ್ಟಿ ಇಂಧನ ಟ್ಯಾಂಕ್, ದೊಡ್ಡ ಮತ್ತು ಆರಾಮದಾಯಕ ಸೀಟ್, ಗಟ್ಟಿಯಾದ ಗ್ರಾಬ್ ರೈಲ್, ಸೀಟಿನ ಕೆಳಗೆ ಎರಡು ಕಿಲೋಗ್ರಾಂ ಸಿಎನ್‌ಜಿ ಟ್ಯಾಂಕ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಸ್ಟಾರ್ಟ್, ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ರಿಯರ್ ಡ್ರಮ್ ಬ್ರೇಕ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
124.5 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಇದು ಗರಿಷ್ಠ 10.9 ಬಿಎಚ್‌ಪಿ ಪವರ್ ಮತ್ತು 11 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಈ ಸಿಎನ್‌ಜಿ ಬೈಕ್ 2 ಲೀಟರ್ ಪೆಟ್ರೋಲ್ ಇಂಧನ ಟ್ಯಾಂಕ್ ಮತ್ತು 2 ಕೆಜಿ ಸಿಎನ್‌ಜಿ ಟ್ಯಾಂಕ್‌ನೊಂದಿಗೆ 330 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ಬೆಲೆ
ಬಜಾಜ್ ಫ್ರೀಡಂ 125 CNG ಮೋಟಾರ್‌ಸೈಕಲ್‌ನಲ್ಲಿ ಒಟ್ಟು 3 ರೂಪಾಂತರಗಳಿವೆ. ಅವುಗಳೆಂದರೆ NG04 ಡ್ರಮ್, NG04 ಡ್ರಮ್ LED ಮತ್ತು NG04 ಡಿಸ್ಕ್ LED. ಫ್ರೀಡಂ 125 ಅನ್ನು ಕೆರಿಬಿಯನ್ ಬ್ಲೂ, ಪ್ಯೂಟರ್ ಗ್ರೇ ಬ್ಲಾಕ್, ಸೈಬರ್ ವೈಟ್, ಎಬೊನಿ ಬ್ಲ್ಯಾಕ್ ಗ್ರೇ, ರೇಸಿಂಗ್ ರೆಡ್, ಪ್ಯೂಟರ್ ಗ್ರೇ ಹಳದಿ ಮತ್ತು ಎಬೊನಿ ಬ್ಲ್ಯಾಕ್ ರೆಡ್‌ನಂತಹ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಬೆಲೆಯ ಬಗ್ಗೆ ಮಾತನಾಡುವುದಾದರೆ, ಇದರ ಮೂಲ ಮಾದರಿಯ ಬೆಲೆ ರೂ 95 ಸಾವಿರ, ಮಧ್ಯಮ ರೂಪಾಂತರದ ಬೆಲೆ ರೂ 1.05 ಲಕ್ಷ ಮತ್ತು ಟಾಪ್ ರೂಪಾಂತರದ ಬೆಲೆ ರೂ 1.10 ಲಕ್ಷ. ಇವೆಲ್ಲವೂ ಎಕ್ಸ್ ಶೋ ರೂಂ ಬೆಲೆಗಳಾಗಿವೆ.
ವಿಭಾಗ