SUV Guide: ಹೊಸ ಕಾರು ಖರೀದಿಸುವ ಪ್ಲಾನ್ ಇದೆಯೇ? 8 ಲಕ್ಷದೊಳಗಿನ ಸ್ಟೈಲಿಶ್ ಕಾರುಗಳ ಪಟ್ಟಿ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Suv Guide: ಹೊಸ ಕಾರು ಖರೀದಿಸುವ ಪ್ಲಾನ್ ಇದೆಯೇ? 8 ಲಕ್ಷದೊಳಗಿನ ಸ್ಟೈಲಿಶ್ ಕಾರುಗಳ ಪಟ್ಟಿ ಇಲ್ಲಿದೆ ನೋಡಿ

SUV Guide: ಹೊಸ ಕಾರು ಖರೀದಿಸುವ ಪ್ಲಾನ್ ಇದೆಯೇ? 8 ಲಕ್ಷದೊಳಗಿನ ಸ್ಟೈಲಿಶ್ ಕಾರುಗಳ ಪಟ್ಟಿ ಇಲ್ಲಿದೆ ನೋಡಿ

ಭಾರತದಲ್ಲಿಂದು ಕಾರುಗಳ ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ. ಅದರಲ್ಲೂ ಮಿನಿ ಎಸ್‌ಯುವಿ ಕಾರುಗಳಿಗೆ ಬಂಪರ್ ಬೇಡಿಕೆ ಇದೆ. 8 ಲಕ್ಷ ರೂಪಾಯಿ ಎಕ್ಸ್ ಶೋರೂಂ ಬಜೆಟ್ ಬೆಲೆಯಲ್ಲಿ ಹಲವು SUV ಲಭ್ಯವಿವೆ. 8 ಲಕ್ಷ ರೂ (ಎಕ್ಸ್ ಶೋ ರೂಂ) ಅಡಿಯಲ್ಲಿ ಮಾರಾಟಕ್ಕೆ ಲಭ್ಯವಿರುವ ಸ್ಟೈಲಿಶ್ ಎಸ್‌ಯುವಿಗಳನ್ನು ಈಗ ನೋಡೋಣ. (ಬರಹ: ವಿನಯ್ ಭಟ್)

ಕಡಿಮೆ ಬೆಲೆಗೆ ಸಿಗುವ ಸ್ಟೈಲಿಶ್ ಕಾರ್‌ಗಳು ವಿವರ ಇಲ್ಲಿದೆ.
ಕಡಿಮೆ ಬೆಲೆಗೆ ಸಿಗುವ ಸ್ಟೈಲಿಶ್ ಕಾರ್‌ಗಳು ವಿವರ ಇಲ್ಲಿದೆ.

ಕಳೆದ 10 ವರ್ಷಗಳಿಂದ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಹ್ಯಾಚ್‌ಬ್ಯಾಕ್, ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಹೆಚ್ಚು ಬೇಡಿಕೆಯಿರುವ ವಿಭಾಗವಾಗಿದ್ದು, ಮಾರುಕಟ್ಟೆ ಷೇರಿನಲ್ಲಿ ಗಮನಾರ್ಹ ಕುಸಿತವನ್ನು ಕಂಡಿದೆ. ಪ್ರಸ್ತುತ ರೂ. 8 ಲಕ್ಷ ಎಕ್ಸ್ ಶೋರೂಂ ಬಜೆಟ್ ಬೆಲೆಯಲ್ಲಿ ವಿವಿಧ ಎಸ್‌ಯುವಿಗಳು ಲಭ್ಯವಿವೆ. ನೀವು ಹೊಸ ಕಾರು ಖರೀದಿಸುವ ಪ್ಲಾನ್‌ನಲ್ಲಿದ್ದರೆ ಇಲ್ಲಿ ನೀವು ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಸ್ಟೈಲಿಶ್ ಎಸ್‌ಯುವಿ ಕಾರುಗಳನ್ನು (ಎಕ್ಸ್ ಶೋರೂಂ) ಮತ್ತು ಆ ಕಾರುಗಳ ಎಂಜಿನ್ ವಿವರಗಳನ್ನು ನೋಡಬಹುದು. ಕಾರುಗಳ ಬೆಲೆಗಳು ರೂ 5,99,000 ರಿಂದ ಪ್ರಾರಂಭವಾಗುತ್ತವೆ.

1) ಟಾಟಾ ಪಂಚ್

ಸದ್ಯ ಟ್ರೆಂಡಿಂಗ್‌ನಲ್ಲಿರುವ ಸ್ಟೈಲಿಶ್ ಕಾರು ಎಂದರೆ ಅದು ಟಾಟಾ ಪಂಚ್. ಈ ಕಾರು ರೂ 5.99 ಲಕ್ಷ ಬೆಲೆಯಲ್ಲಿ ಲಭ್ಯವಿದ್ದು, ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿ ಮಾತ್ರವಲ್ಲದೆ ಕಳೆದ ಎರಡು ತಿಂಗಳಿನಿಂದ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರು ಕೂಡ ಆಗಿದೆ. ಈ ಮಿನಿ SUV ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಗ್ಲೋಬಲ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದರ ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಹೀಗೆ ಮೂರೂ ಮಾದರಿಗಳಿಗೆ ಭರ್ಜರಿ ಬೇಡಿಕೆ ಇದೆ.

2) ಹುಂಡೈ ಎಕ್ಸ್‌ಟರ್

ಹುಂಡೈ ಎಕ್ಸ್‌ಟರ್ ಕಾರುಗಳ ಬೆಲೆ 6.12 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. 1.2 ಲೀಟರ್ ಡಬಲ್-ಫ್ಯೂಯೆಲ್ ಕಪ್ಪಾ ಪೆಟ್ರೋಲ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾದ CNG ಎಂಜಿನ್ ಕಿಟ್‌ನೊಂದಿಗೆ ಲಭ್ಯವಿದೆ. ವೈಶಿಷ್ಟ್ಯಗಳ ವಿಷಯದಲ್ಲಿ, ಮೈಕ್ರೋ ಎಸ್‌ಯುವಿ ಸೌಂಡ್-ಆ್ಯಕ್ಟಿವೇಟೆಡ್ ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಡ್ಯಾಶ್‌ಕ್ಯಾಮ್, ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾ, 5.84 cm (2.31") LCD ಡಿಸ್‌ಪ್ಲೇ, ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಆಧಾರಿತ ಸಂಪರ್ಕ ಮತ್ತು ಬಹು ರೆಕಾರ್ಡಿಂಗ್ ಮೋಡ್‌ಗಳನ್ನು ಹೊಂದಿದೆ.

3) ರೆನಾಲ್ಟ್ ಕಿಗರ್-ನಿಸ್ಸಾನ್ ಮ್ಯಾಗ್ನೆಟ್

ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೆಟ್ ಎರಡನ್ನೂ 1.0L ಟರ್ಬೊ ಪೆಟ್ರೋಲ್ ಎಂಜಿನ್‌ಗಳಿಂದ ನಿಯಂತ್ರಿಸಲಾಗುತ್ತದೆ. ಎರಡೂ SUVಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ CVT ಮತ್ತು 5-ಸ್ಪೀಡ್ ಈಸಿ-R AMT ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಲಭ್ಯವಿದೆ. ಸುರಕ್ಷತೆಯ ಪ್ರಕಾರ, ಕಿಗರ್ ಮತ್ತು ಮ್ಯಾಗ್ನೈಟ್ ಡ್ರೈವರ್ ಮತ್ತು ಫ್ರಂಟ್ ಪ್ಯಾಸೆಂಜರ್ ರಕ್ಷಣೆಗಾಗಿ ನಾಲ್ಕು ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ, ಜೊತೆಗೆ ಸೀಟ್ ಬೆಲ್ಟ್‌ಗಳೊಂದಿಗೆ ಪ್ರಿಟೆನ್ಷನರ್‌ಗಳು ಮತ್ತು ಡ್ರೈವರ್‌ಗಾಗಿ ಲೋಡ್-ಲಿಮಿಟರ್‌ಗಳಿವೆ. ಈ ಕಾರುಗಳ ಬೆಲೆ ರೂ 5.99 ಲಕ್ಷದಿಂದ ಆರಂಭವಾಗಲಿದೆ.

4) ಮಹೀಂದ್ರ XUV 3XO

ಮಹೀಂದ್ರಾ XUV 3XO ಕಾರಿನ ಬೆಲೆ 7,49,000 ರೂ. XUV 300 ನ ರೀವರ್ಕ್ ಆವೃತ್ತ 3XO ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಎಂಜಿನ್ ಆಯ್ಕೆಗಳಲ್ಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಯುನಿಟ್ (109 bhp / 200 Nm), 1.5-ಲೀಟರ್ ಡೀಸೆಲ್ ಎಂಜಿನ್ (115 bhp / 300 Nm) ಮತ್ತು 1.2-ಲೀಟರ್ TGDi ಟರ್ಬೊ-ಪೆಟ್ರೋಲ್ ಎಂಜಿನ್ (128 bhp / 230 Nm) ಸೇರಿವೆ.

5) ಹುಂಡೈ ವೆನ್ಯೂ

ಈ ಕಾರಿನ ಬೆಲೆ ರೂ 7.94 ಲಕ್ಷ ಎಲ್ಲಾ ಮೂರು ಎಂಜಿನ್‌ಗಳು ಈ ಕಾರಿನಲ್ಲಿ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಲಭ್ಯವಿರುವ ಎಂಜಿನ್‌ಗಳು 82 bhp 1.2-ಲೀಟರ್ ಪೆಟ್ರೋಲ್ ಮತ್ತು 118 bhp 1.0-ಲೀಟರ್ ಟರ್ಬೊ-ಪೆಟ್ರೋಲ್‌ನಿಂದ ಕೂಡಿದೆ.

Whats_app_banner