ಹೊಸ ವೈಶಿಷ್ಟ್ಯದೊಂದಿಗೆ ಬಂತು ಟಿಯಾಗೊ-ಬಲೆನೊಗೆ ಪೈಪೋಟಿ ನೀಡಿದ್ದ ಈ ಕಾರು: ಎಲ್ಲರ ಹುಬ್ಬೇರುವಂತೆ ಮಾಡಿದೆ ಇದರ ಬೆಲೆ
ಸಿಟ್ರಾನ್ C3 ಬಿಡುಗಡೆ ಆದಾಗ ಅದರ ವಿನ್ಯಾಸ ಮಾರುಕಟ್ಟೆಯಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿತು. ಕಂಪನಿಯು ಇದನ್ನು ಹ್ಯಾಚ್‌ಬ್ಯಾಕ್ ಕಾರುಎಂದು ಪ್ರಸ್ತುತಪಡಿಸಿತು, ಆದರೆ ಇದು ಮೈಕ್ರೋ-ಎಸ್‌ಯುವಿಯಂತೆ ಕಾಣುತ್ತದೆ. ಇದೀಗ ನವೀಕರಣದ ನಂತರ, ಇದು ಮೊದಲಿಗಿಂತಲೂ ಸಾಕಷ್ಟು ಉತ್ತಮವಾಗಿವೆ. (ಬರಹ: ವಿನಯ್ ಭಟ್)
ಇತ್ತೀಚೆಗಷ್ಟೆ ಪ್ರಸಿದ್ಧ ಸಿಟ್ರಾನ್ ಕಂಪನಿ ಆಕರ್ಷಕವಾದ ಎಸ್ಯುವಿ ಕೂಪ್ ಬಸಾಲ್ಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಸಿಟ್ರಾನ್ ತನ್ನ ಹ್ಯಾಚ್‌ಬ್ಯಾಕ್ ಕಾರ್ C3 ಯ ನವೀಕರಿಸಿದ ಆವೃತ್ತಿಯನ್ನು ಪರಿಚಯಿಸಿದೆ. ಇದಕ್ಕೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಆದಾಗ್ಯೂ, ಈ ವೈಶಿಷ್ಟ್ಯಗಳನ್ನು ಪಡೆಯಲು ನೀವು ಹೆಚ್ಚಿನ ಹಣ ವ್ಯಹಿಸಬೇಕು. 2024 ರಕ್ಷಾಬಂಧನದಂದು ಸಿಟ್ರಾನ್ C3 ಬೆಲೆ ದುಬಾರಿಯಾಗಿದೆ. ಎರಡು ವರ್ಷಗಳ ಹಿಂದೆ, ಈ ಕಾರು ಟಾಟಾ ಟಿಯಾಗೊ ಮತ್ತು ಮಾರುತಿ ಸುಜುಕಿ ಬಲೆನೊದಂತಹ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಕಠಿಣ ಪೈಪೋಟಿ ನೀಡಿತ್ತು.
ಸಿಟ್ರಾನ್ C3 ಬಿಡುಗಡೆ ಆದಾಗ ಅದರ ವಿನ್ಯಾಸ ಮಾರುಕಟ್ಟೆಯಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿತು. ಕಂಪನಿಯು ಇದನ್ನು ಹ್ಯಾಚ್‌ಬ್ಯಾಕ್ ಕಾರು ಎಂದು ಪ್ರಸ್ತುತಪಡಿಸಿತು. ಆದರೆ ಇದು ಮೈಕ್ರೋ-ಎಸ್‌ಯುವಿಯಂತೆ ಕಾಣುತ್ತದೆ. ಇದೀಗ ನವೀಕರಣದ ನಂತರ, ಇದು ಮೊದಲಿಗಿಂತಲೂ ಸಾಕಷ್ಟು ಉತ್ತಮವಾಗಿವೆ.
ಸಿಟ್ರಾನ್ C3 2024 ಎಷ್ಟು ದುಬಾರಿಯಾಗಿದೆ?
ಸಿಟ್ರಾನ್ C3 ಬೆಲೆಯನ್ನು 30,000 ರೂ. ಗಳಷ್ಟು ಹೆಚ್ಚಿಸಲಾಗಿದೆ. ಇತ್ತೀಚಿನ C3 ನ ಎಕ್ಸ್ ಶೋ ರೂಂ ಬೆಲೆ 6.16 ಲಕ್ಷ ರೂ. ಗಳಿಂದ ಪ್ರಾರಂಭವಾಗುತ್ತದೆ. ಈ ಕಾರನ್ನು ಎಂಟು ರೂಪಾಂತರಗಳಲ್ಲಿ ಖರೀದಿಸಬಹುದು. ಇವುಗಳಲ್ಲಿ ಲೈವ್, ಫೀಲ್, ಶೈನ್, ಶೈನ್ ವೈಬ್ ಪ್ಯಾಕ್, ಶೈನ್ ಡ್ಯುಯಲ್ ಟೋನ್, ಶೈನ್ ಡ್ಯುಯಲ್ ಟೋನ್ ವೈಬ್ ಪ್ಯಾಕ್, ಶೈನ್ ಟರ್ಬೊ ಡ್ಯುಯಲ್ ಟೋನ್ ಮತ್ತು ಶೈನ್ ಟರ್ಬೊ ಡ್ಯುಯಲ್ ಟೋನ್ ವೈಬ್ ಸೇರಿವೆ.
ಸಿಟ್ರಾನ್ C3 2024: ಉನ್ನತ ಮಾದರಿಯ ಬೆಲೆ
ಸಿಟ್ರಾನ್ C3 ನ ಟಾಪ್ ಮಾಡೆಲ್ನ ಎಕ್ಸ್ ಶೋ ರೂಂ ಬೆಲೆ 9.41 ಲಕ್ಷ ರೂ. ಸದ್ಯಕ್ಕೆ ಮೂಲ ಮಾದರಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಆದರೆ ಟಾಪ್ ವೆರಿಯಂಟ್ ಬೆಲೆ 30,000 ರೂ.ಗಳಷ್ಟು ಹೆಚ್ಚಾಗಿದೆ. ಹೊಸ ವೈಶಿಷ್ಟ್ಯಗಳನ್ನು ಪಡೆದ ನಂತರ, ಕಂಪನಿಯು ಈ ಕಾರಿನ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ.
ಸಿಟ್ರೊಯೆನ್ C3: ವೈಶಿಷ್ಟ್ಯಗಳು ಮತ್ತು ವಿಶೇಷಣಗಳು
ನೂತನ ಬದಲಾವಣೆಗಳಲ್ಲಿ ಈ ಕಾರಿಗೆ ಹೊಸ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್ ಘಟಕಗಳು ಮತ್ತು ಅಟೊಮೆಟಿಕ್ ಆಗಿ ಮಡಿಸುವ ಹೊರಗಿನ ರಿಯರ್‌ವ್ಯೂ ಮಿರರ್‌ಗಳು ಸೇರಿವೆ. ಕಾರಿನ ಉಳಿದ ವಿನ್ಯಾಸವು ಒಂದೇ ಆಗಿರುತ್ತದೆ. ಹೊಸ C3 ನ ವೈಶಿಷ್ಟ್ಯಗಳಲ್ಲಿ ಲೆದರ್ ಸ್ಟೀರಿಂಗ್ ವೀಲ್, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿವೆ. ಇದಲ್ಲದೇ 6 ಏರ್‌ಬ್ಯಾಗ್‌ಗಳಿವೆ. ಈ ಎಲ್ಲಾ ಸೌಲಭ್ಯಗಳು ಟಾಪ್-ಸ್ಪೆಕ್ ಶೈನ್ ಮಾದರಿಗಳಲ್ಲಿ ಲಭ್ಯವಿರುತ್ತವೆ.
ಸಿಟ್ರಾನ್‍ನ C3 ನ ಉಳಿದ ರೂಪಾಂತರಗಳು ಪವರ್ ವಿಂಡೋಗಳು, ಹಿಲ್-ಸ್ಟಾರ್ಟ್ ಅಸಿಸ್ಟ್, ಆಪಲ್ CarPlay ಮತ್ತು ಆಂಡ್ರಾಯ್ಡ್ ಅಟೊ ಜೊತೆಗೆ 10.2 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ. C3 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2 ಲೀಟರ್ ಮೂರು ಸಿಲಿಂಡರ್, ಪೆಟ್ರೋಲ್ ಎಂಜಿನ್‌ನ ಶಕ್ತಿಯನ್ನು ಪಡೆಯುತ್ತದೆ. ಇದಲ್ಲದೆ, 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2 ಲೀಟರ್ ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಆಯ್ಕೆಯೂ ಇದೆ.
ವಿಭಾಗ