ಭಾರತದಲ್ಲಿ ವರುಣನ ಆರ್ಭಟ: ಕಾರುಗಳ ಬೇಡಿಕೆಯಲ್ಲಿ ದಿಢೀರ್ ಕುಸಿತ, ಜುಲೈನಲ್ಲಿ ಮಾರಾಟವಾದ ಕಾರುಗಳೆಷ್ಟು?
ಮಾರುತಿ ಸುಜುಕಿ,ಹುಂಡೈ ಮೋಟಾರ್ಸ್ ಹಾಗೂ ಟಾಟಾ ಮೋಟಾರ್ಸ್ ಜುಲೈನಲ್ಲಿ ಸಗಟು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದೆ.ಮಾರುತಿ ಸುಜುಕಿ ಇಂಡಿಯಾ ಜುಲೈನಲ್ಲಿ ತನ್ನ ಒಟ್ಟು ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು1,52,126 ಯುನಿಟ್‌ಗಳ ಪೈಕಿ1,37,463 ಯುನಿಟ್‌ಗಳಷ್ಟು ಮಾತ್ರ ಆಗಿದೆ.(ವರದಿ:ವಿನಯ್ ಭಟ್)
ಕರ್ನಾಟಕ ಸೇರಿದಂತೆ ದೇಶದಲ್ಲಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಇದರ ಪರಿಣಾಮ ಆಟೊ ಮಾರುಕಟ್ಟೆಯ ಮೇಲೂ ಬಿದ್ದಿದೆ. ಕಳೆದ ತಿಂಗಳು ಅಂದರೆ ಜುಲೈ 2024 ರಲ್ಲಿ ಕಾರುಗಳ ಬೇಡಿಕೆಯು ದಿಢೀರ್ ಕುಸಿತ ಕಂಡಿದೆ. ದೇಶದ ಮೂರು ದೊಡ್ಡ ಕಾರು ಕಂಪನಿಗಳ ಮಾರಾಟದಲ್ಲಿ ವಾರ್ಷಿಕ ಕುಸಿತವನ್ನು ಕಂಡಿವೆ. ಮಾರುತಿ ಸುಜುಕಿ, ಹುಂಡೈ ಮೋಟಾರ್ಸ್ ಹಾಗೂ ಟಾಟಾ ಮೋಟಾರ್ಸ್ ಜುಲೈನಲ್ಲಿ ಸಗಟು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದೆ. ಮಾರುತಿ ಸುಜುಕಿ ಇಂಡಿಯಾ ಜುಲೈನಲ್ಲಿ ತನ್ನ ಒಟ್ಟು ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು 1,52,126 ಯುನಿಟ್‌ಗಳ ಪೈಕಿ 1,37,463 ಯುನಿಟ್‌ಗಳಷ್ಟು ಮಾತ್ರ ಆಗಿದೆ. 9.64 ಶೇಕಡಾ ಕಡಿಮೆಯಾಗಿದೆ ಎಂದು ಹೇಳಿದೆ.
ಆದರೆ, ಮಾರುತಿ ಸುಜುಕಿ ಈ ವರ್ಷ ಬಿಡುಗಡೆ ಮಾಡಿದ ಹೊಸ ತಲೆಮಾರಿನ ಸ್ವಿಫ್ಟ್ ಭಾರತದಲ್ಲಿ ಬಂಪರ್ ಮಾರಾಟವನ್ನು ಹೊಂದಿದೆ. ಪ್ರಸ್ತುತ ಕಂಪನಿಯ ಅಗ್ರ ಮಾರಾಟವಾದ ಕಾರು ಆಗಿದೆ. ಇದರ ನಂತರ, ಬಲೆನೊ ಮತ್ತು ವ್ಯಾಗನ್ಆರ್ ಜೊತೆಗೆ, ಬ್ರೆಝಾ, ಎರ್ಟಿಗಾ ವಾಹನಗಳಿವೆ. ಈ ವರ್ಷ, ಮಾರುತಿ ಸುಜುಕಿ ಹೊಸ ಪೀಳಿಗೆಯ ಡಿಜೈರ್ ಅನ್ನು ಸಹ ಬಿಡುಗಡೆ ಮಾಡಬಹುದು ಎನ್ನಲಾಗಿದೆ.
ಹ್ಯುಂಡೈ ಮತ್ತು ಟಾಟಾ ಕೂಡ ಕುಸಿತ
ಮಾರುತಿಯ ಪ್ರಮುಖ ಪ್ರತಿಸ್ಪರ್ಧಿ ಹ್ಯುಂಡೈ ಮೋಟಾರ್ ಇಂಡಿಯಾದ ದೇಶೀಯ ಸಗಟು ಮಾರಾಟವು ಜುಲೈನಲ್ಲಿ 49,013 ಯುನಿಟ್‌ಗಳಿಗೆ ಇಳಿದಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ 50,701 ಯುನಿಟ್‌ಗಳು ಮಾರಾಟವಾಗಿತ್ತು. ಇದೀಗ 3 ಶೇಕಡಾ ಕುಸಿದಿದೆ. ಅದೇ ರೀತಿ, ಟಾಟಾ ಮೋಟಾರ್ಸ್ನ ಒಟ್ಟು ದೇಶೀಯ ಮಾರಾಟವು ಕಳೆದ ತಿಂಗಳು 70,161 ಯುನಿಟ್‌ಗಳಷ್ಟೇ ಆಗಿದೆ. ಶೇಕಡಾ 11 ರಷ್ಟು ಕುಸಿದಿದ್ದು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 78,844 ಯುನಿಟ್‌ಗಳು ಮಾರಾಟವಾಗಿತ್ತು.
ಮಹೀಂದ್ರಾ ಮತ್ತು ಕಿಯಾಗೆ ಉತ್ತಮ ತಿಂಗಳು
ಕಳೆದ ಜುಲೈನಲ್ಲಿ, ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ ವಾಹನ ಮಾರಾಟದಲ್ಲಿ ಶೇಕಡಾ 15 ರಷ್ಟು ಹೆಚ್ಚಳವನ್ನು ದಾಖಲಿಸಿದೆ, ಇದು ಜುಲೈನಲ್ಲಿ 41,623 ಯುನಿಟ್‌ಗಳಷ್ಟಿತ್ತು, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಅಂದರೆ ಜುಲೈನಲ್ಲಿ 36,205 ಯುನಿಟ್ ಸೇಲ್ ಆಗಿತ್ತು. ಕಿಯಾದ ಬಗ್ಗೆ ಮಾತನಾಡುವುದಾದರೆ ಜುಲೈ 2023 ರಲ್ಲಿ 20,002 ವಾಹನಗಳು ಮಾರಾಟ ಆಗಿದ್ದವು. ಈ ಬಾರಿಯ ಜುಲೈನಲ್ಲಿ ತನ್ನ ದೇಶೀಯ ಮಾರಾಟವು 20,507 ಯುನಿಟ್‌ಗಳಿಗೆ ಹೆಚ್ಚಿಸಿದೆ. ವರ್ಷದಿಂದ ವರ್ಷಕ್ಕೆ 2.5 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಕಿಯಾ ಇಂಡಿಯಾ ಹೇಳಿದೆ.
ಹೋಂಡಾ ಕಾರುಗಳ ರಫ್ತು ಹೆಚ್ಚಳ
ಜುಲೈನಲ್ಲಿ ಹೋಂಡಾ ಕಾರ್ಸ್ ಇಂಡಿಯಾದ ಸಗಟು ಮಾರಾಟವು ದೇಶೀಯ ಮಾರುಕಟ್ಟೆಯಲ್ಲಿ 5 ಪ್ರತಿಶತದಷ್ಟು ಕುಸಿದು 4,624 ಯುನಿಟ್‌ಗಳಿಗೆ ತಲುಪಿದೆ. ಕಂಪನಿಯು ಜುಲೈ 2023 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಚಿಲ್ಲರೆ ವ್ಯಾಪಾರಿಗಳಿಗೆ 4,864 ವಾಹನಗಳನ್ನು ರವಾನಿಸಿದೆ. ಆದಾಗ್ಯೂ, ಕಳೆದ ವರ್ಷ ಜುಲೈನಲ್ಲಿ ರಫ್ತು ಮಾಡಿದ 1,112 ಹೋಂಡಾ ಕಾರುಗಳಿಗೆ ಹೋಲಿಸಿದರೆ ಈ ಬಾರಿ ಕಂಪನಿಯ ರಫ್ತು ಜುಲೈನಲ್ಲಿ 2,710 ಯುನಿಟ್‌ಗಳಿಗೆ ದ್ವಿಗುಣಗೊಂಡಿದೆ.
ವಿಭಾಗ