Ganesh idol for Car: ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶ ವಿಗ್ರಹ ಇಡಬಹುದೇ? ವಾಹನ ಚಾಲಕರಿಗೆ ಗಣಪತಿ ಅನುಗ್ರಹ-automobile news ganesh idol for car dashboard can i used a ganpati bappa idol in your car pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Ganesh Idol For Car: ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶ ವಿಗ್ರಹ ಇಡಬಹುದೇ? ವಾಹನ ಚಾಲಕರಿಗೆ ಗಣಪತಿ ಅನುಗ್ರಹ

Ganesh idol for Car: ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶ ವಿಗ್ರಹ ಇಡಬಹುದೇ? ವಾಹನ ಚಾಲಕರಿಗೆ ಗಣಪತಿ ಅನುಗ್ರಹ

Ganesh idol for Car: ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶನ ವಿಗ್ರಹ ಇಡಬಹುದೇ? ಈ ರೀತಿ ಗಣಪತಿ ಮೂರ್ತಿ ಇಡುವ ಸಂದರ್ಭದಲ್ಲಿ ಗಮನಿಸಬೇಕಾದ ಸಂಗತಿಗಳೇನು? ಗಣೇಶನ ವಿಗ್ರಹವನ್ನು ಕಾರಿನಲ್ಲಿ ಇಡುವುದರಿಂದ ಆಗುವ ಲಾಭವೇನು? ಯಾವ ಗಾತ್ರದ ಗಣೇಶನ ವಿಗ್ರಹ ಇಡಬಹುದು ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Ganesh idol for Car: ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶ ವಿಗ್ರಹ ಇಡಬಹುದೇ?
Ganesh idol for Car: ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶ ವಿಗ್ರಹ ಇಡಬಹುದೇ? (amazon and flipkart photos)

Ganesh idol for Car Dashboard: ಭಾರತದಲ್ಲಿ ಹೆಚ್ಚಿನ ಕಾರು ಮಾಲೀಕರು ಕಾರಿನ ಡ್ಯಾಷ್‌ಬೋರ್ಡ್‌ನಲ್ಲಿ ಗಣೇಶನ ಪುಟ್ಟ ವಿಗ್ರಹ ಇಟ್ಟುಕೊಳ್ಳುವುದು ಸಾಮಾನ್ಯ. ಪ್ರಯಾಣದಲ್ಲಿ ಯಾವುದೇ ವಿಘ್ನ ಬರಹದಂತೆ, ತೊಂದರೆಯಾಗದಂತೆ ಕಾಪಾಡು ಎಂದು ಡ್ಯಾಶ್‌ಬೋರ್ಡ್‌ ಗಣಪನಿಗೆ ಪ್ರಾರ್ಥಿಸಿ ಪ್ರಯಾಣಿಸುತ್ತಾರೆ. ಹಿಂದೂ ಧರ್ಮದಲ್ಲಿ ಗಣೇಶ ದೇವರಿಗೆ ವಿಶೇಷ ಸ್ಥಾನವಿದೆ. ಯಾವುದೇ ಕಾರ್ಯ ಆರಂಭಿಸುವ ಮುನ್ನ ಗಣೇಶನ ಪ್ರಾರ್ಥಿಸಲಾಗುತ್ತದೆ. ಇದೇ ಕಾರಣಕ್ಕೆ ಮೊದಲೊಂದಿಪೆ ಗಣನಾಥ ಎಂದು ಭಜಿಸಲಾಗುತ್ತದೆ. ಕಾರು ಚಾಲನೆ ಮಾಡುವ ಮುನ್ನವೇ ಬಹುತೇಕರು ಡ್ಯಾಶ್‌ಬೋರ್ಡ್‌ ಗಣೇಶನ ನೆನೆದು ಕಾರ್‌ ಸ್ಟಾರ್ಟ್‌ ಮಾಡುತ್ತಾರೆ.

ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶನ ವಿಗ್ರಹ ಇಡಬಹುದೇ?

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನ ವಿಗ್ರಹ ಇರಬಾರದು. ಗಣೇಶನ ವಿಗ್ರಹವಿದ್ದರೆ ಅದಕ್ಕೆ ನೈವೇದ್ಯ ಕಡ್ಡಾಯವಾಗಿ ಇಡಲೇಬೇಕು ಎಂಬ ನಂಬಿಕೆಯಿದೆ. ಆದರೆ, ವಾಹನ, ಆಫೀಸ್‌ ಟೇಬಲ್‌ನಲ್ಲಿ ಗಣೇಶನ ವಿಗ್ರಹ ಇಡಬಾರದೆಂದು ಯಾರೂ ಹೇಳುವುದಿಲ್ಲ. ಇದೇ ಕಾರಣಕ್ಕೆ ಕಾರು, ಬಸ್‌, ಲಾರಿ, ಪಿಕಪ್‌, ಮೆಟಾಡೋರ್‌, ಆಟೋ ರಿಕ್ಷಾ ಸೇರಿದಂತೆ ಯಾವುದೇ ಬಗೆಯ ವಾಹನಗಳಲ್ಲಿಯೂ ಗಣೇಶನನ್ನು ಇಡಬಹುದು. ಪುಟ್ಟ ಗಣೇಶ ಮುಂದಿದ್ದರೆ ಭಕ್ತಿಭಾವ ಇರುತ್ತದೆ.

ಪ್ರಯಾಣದಲ್ಲಿ ಗಣೇಶನ ಆಶೀರ್ವಾದ

ಕಾರಿನ ಡ್ಯಾಷ್‌ಬೋರ್ಡ್‌ನಲ್ಲಿ(ಅಥವಾ ಡ್ಯಾಶ್‌ಬೋರ್ಡ್‌) ಗಣೇಶನ ಪುಟ್ಟ ವಿಗ್ರಹ ಇಡುವುದು ಭಕ್ತಿಯ ಸಂಕೇತ. ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶನಿದ್ದರೆ ಪ್ರಯಾಣ ಸುಗಮ ಮತ್ತು ಸುರಕ್ಷಿತವಾಗಿರುತ್ತದೆ ಎಂದು ಆಸ್ತಿಕರು ನಂಬುತ್ತಾರೆ. ಬಾಡಿಗೆ ವಾಹನಗಳನ್ನು ಓಡಿಸುವವರು ಗಣೇಶನನ್ನು ಅದೃಷ್ಟವೆಂದು ಭಾವಿಸುತ್ತಾರೆ.

ರಸ್ತೆಯ ಅಡೆತಡೆ ನಿವಾರಣೆ

ಗಣೇಶ ನಮ್ಮ ಜತೆಗೆ ಪ್ರಯಾಣದಲ್ಲಿ ಇದ್ದರೆ ಪ್ರಯಾಣದಲ್ಲಿ ಯಾವುದೇ ಅಡೆತಡೆ ಎದುರಾಗದು ಎನ್ನುವ ನಂಬಿಕೆಯಿದೆ. ಅಪಘಾತವಾಗದಂತೆ ಗಣೇಶ ನೋಡಿಕೊಳ್ಳಬಹುದು. ಸುರಕ್ಷಿತ ಪ್ರಯಾಣಕ್ಕಾಗಿ ಗಣೇಶನ ಆಶೀರ್ವಾದ ದೊರಕಬಹುದು ಎನ್ನುವ ನಂಬಿಕೆ ಇದೆ.

ಪ್ರಶಾಂತತೆ ಮತ್ತು ಏಕಾಗ್ರತೆ

ದೇವರನ್ನು ಪ್ರಾರ್ಥಿಸುವುದರಿಂದ ಏಕಾಗ್ರತೆ ಮೂಡುತ್ತದೆ. ನಮ್ಮ ಮನಸ್ಸು ಗೊಂದಲದ ಗೂಡಾಗಿರುವ ಸಂದರ್ಭದಲ್ಲಿ, ಏನೋ ಟೆನ್ಷನ್‌ ಇರುವ ಸಂದರ್ಭದಲ್ಲಿ ಗಣೇಶನ ನೆನೆದರೆ ಪ್ರಶಾಂತ ಭಾವ ಮೂಡುವುದು. ಈ ರೀತಿ ದೇವರನ್ನು ನೆನೆಯುವ ಸಂದರ್ಭದಲ್ಲಿ ಮನಸ್ಸಿನಲ್ಲಿ ಏಕಾಗ್ರತೆಯ ಅನುಭವವಾಗುತ್ತದೆ. ವಾಹನ ಚಾಲನೆಗೆ ಏಕಾಗ್ರತೆ ಅತ್ಯಗತ್ಯ. ಒತ್ತಡ ಮುಕ್ತವಾಗಿ ಪ್ರಯಾಣಿಸಲು ಗಣೇಶ ನೆರವಾಗುತ್ತಾನೆ.

ಧನಾತ್ಮಕತೆ ಮತ್ತು ಅದೃಷ್ಟದ ನಿರೀಕ್ಷೆ

ಸಾಕಷ್ಟು ಕಾರು ಚಾಲಕರು ತಮಗೆ ಸಾಕಷ್ಟು ಬಾಡಿಗೆ ಸಿಗಲಿ ಎಂದು ಬಯಸುತ್ತಾರೆ. ಪ್ರತಿದಿನ ಹೊಟ್ಟೆ ತುಂಬಲು ಬಾಡಿಗೆ ದೊರಕುವುದು ಅಗತ್ಯ. ಗಣೇಶ ಜತೆಗಿದ್ದರೆ ಅದೃಷ್ಟ ಎಂಬ ಭಾವನೆ ವಾಹನ ಚಾಲಕರಿಗಿದೆ.

ಕಾರ್‌ ಡ್ಯಾಶ್‌ಬೋರ್ಡ್‌ ಗಣೇಶನ ವಿಗ್ರಹದ ಆಯ್ಕೆ ಹೇಗೆ?

ಕಾರಿನ ಡ್ಯಾಶ್‌ಬೋರ್ಡ್‌ಗೆ ವಿಗ್ರಹವನ್ನು ಆಯ್ಕೆಮಾಡುವಾಗ, ಗಾತ್ರ ಮತ್ತು ನಿರ್ಮಿಸಿದ ವಸ್ತುವನ್ನು ಪರಿಗಣಿಸುವುದು ಬಹಳ ಮುಖ್ಯ. ಚಾಲಕನ ನೋಟಕ್ಕೆ ಅಡ್ಡಿಯಾಗದಂತೆ ಡ್ಯಾಶ್‌ಬೋರ್ಡ್‌ನಲ್ಲಿ ಚೆನ್ನಾಗಿ ಹೊಂದಿಕೊಳ್ಳುವ ಪುಟ್ಟ ವಿಗ್ರಹವನ್ನು ಆಯ್ಕೆಮಾಡಿ. ಇಷ್ಟು ಮಾತ್ರವಲ್ಲದೆ ವಾಹನದ ಕಂಪನಗಳು ಮತ್ತು ಚಲನೆಯನ್ನು ತಡೆದುಕೊಳ್ಳಲು ಗಟ್ಟಿಮುಟ್ಟಾದ ಮತ್ತು ಬಾಳಿಕೆ ಬರುವ ವಸ್ತುವನ್ನು ಆಯ್ಕೆಮಾಡಿ. ಹಳೆಯ, ಹಾನಿಗೀಡಾದ ಗಣೇಶನ ವಿಗ್ರಹವನ್ನು ಕಾರಿನಲ್ಲಿ ಇಟ್ಟುಕೊಳ್ಳಬೇಡಿ.

FAQs: ಕಾರ್‌ ಡ್ಯಾಶ್‌ಬೋರ್ಡ್‌ ಗಣೇಶ: ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳು

1. ಹಿಂದುಗಳು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶನ ವಿಗ್ರಹ ಇಡುವುದು ಕಡ್ಡಾಯವೇ?

ಇಲ್ಲ. ಇದು ಕಾರು ಚಾಲಕರು ಅಥವಾ ಮಾಲೀಕರ ನಂಬಿಕಗೆ ಬಿಟ್ಟ ವಿಚಾರ. ಇದು ಹಿಂದೂ ಧರ್ಮಕ್ಕೆ ಸೀಮಿತವಾದ ವಿಚಾರವೂ ಅಲ್ಲ. ಬೇರೆ ಧರ್ಮದವರೂ ತಮ್ಮ ವಾಹನಗಳಲ್ಲಿ ಗಣೇಶನ ವಿಗ್ರಹವನ್ನು ಇಡುವುದುಂಟು. ಕೆಲವು ವಿದೇಶಿಯರೂ ತಮ್ಮ ವಾಹನಗಳಲ್ಲಿ ಪುಟ್ಟ ಗಣೇಶನ ವಿಗ್ರಹ ಇಡುವ ಉದಾಹರಣೆಗಳುಂಟು.

2. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇಡುವ ಗಣೇಶನ ವಿಗ್ರಹ ಇಷ್ಟೇ ಗಾತ್ರ ಹೊಂದಿರಬೇಕೆಂದು ನಿಯಮವಿದೆಯೇ?

ಯಾವುದೇ ಗಾತ್ರದ ಗಣೇಶನ ವಿಗ್ರಹ ಇಡಬಹುದು. ಆದರೆ, ವಾಹನ ಚಾಲನೆಗೆ ಅಡ್ಡಿಯಾಗದಂತೆ ಪುಟ್ಟ ಗಣೇಶನ ವಿಗ್ರಹ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

3. ಕಾರಿನ ಡ್ಯಾಶ್‌ಬೋರ್ಡ್‌ ಗಣಪನಿಗೆ ಪೂಜೆ ಮಾಡಬೇಕೆ?

ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶನ ವಿಗ್ರಹವಿದೆ ಎಂದು ಅಗರಬತ್ತಿ, ದೀಪ ಇಡಬೇಡಿ. ಬೆಂಕಿಯಿಂದ ಬೇರೆ ಅಪಾಯಗಳು ಉಂಟಾಗಬಹುದು. ಕೆಲವರು ಗಣೇಶನಿಗೆ ಹೂವು ಇಡುತ್ತಾರೆ. ಈ ರೀತಿ ಹೂವು, ಅಲಂಕಾರ ಮಾಡುವಾಗ ಪ್ರತಿದಿನ ಕ್ಲೀನ್‌ ಮಾಡಲು ಮರೆಯಬೇಡಿ.

4. ಒಂದು ಕಾರಿನಿಂದ ಇನ್ನೊಂದು ಕಾರಿಗೆ ಗಣೇಶನ ವಿಗ್ರಹವನ್ನು ವರ್ಗಾವಣೆ ಮಾಡಬಹುದೇ?

ಖಂಡಿತಾವಾಗಿಯೂ ಮಾಡಬಹುದು.