ಕನ್ನಡ ಸುದ್ದಿ  /  Lifestyle  /  Automobile News Hyundai Creta N Suv Line Launch On March 11 Official Booking Starts In India Rmy

ಮಾ 11ಕ್ಕೆ ಹುಂಡೈ ಕ್ರೆಟಾ ಎನ್ ಲೈನ್ ಬಿಡುಗಡೆ; ಭಾರತದಲ್ಲಿ ಅಧಿಕೃತ ಬುಕಿಂಗ್ ಆರಂಭ - Hyundai Creta N Line

Hyundai Creta N Line: ಹುಂಡೈ ಕ್ರೆಟಾ ಎನ್ ಲೈನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ ಮುಹೂರ್ತ ಫಿಕ್ಸ್ ಆಗಿದೆ. ಆದರೆ ಬಿಡುಗಡೆಗೂ ಮುನ್ನವೇ ಬುಕಿಂಗ್ ಆರಂಭವಾಗಿದೆ. ಹೊಸ ಕಾರಿನ ಕುರಿತ ಅಪ್ಡೇಟ್ಸ್ ಇಲ್ಲಿದೆ.

ಮಾರ್ಚ್ 11ಕ್ಕೆ ಭಾರತದ ಮಾರುಕಟ್ಟೆಯಲ್ಲಿ ಹುಂಡೈ ಕ್ರೆಟಾ ಎನ್ ಲೈನ್ ಬಿಡುಗಡೆಯಾಗಲಿದೆ. ಈ ಕಾರಿನ ಬೆಲೆ, ವೈಶಿಷ್ಟ್ಯಗಳನ್ನ ತಿಳಿಯಿರಿ.
ಮಾರ್ಚ್ 11ಕ್ಕೆ ಭಾರತದ ಮಾರುಕಟ್ಟೆಯಲ್ಲಿ ಹುಂಡೈ ಕ್ರೆಟಾ ಎನ್ ಲೈನ್ ಬಿಡುಗಡೆಯಾಗಲಿದೆ. ಈ ಕಾರಿನ ಬೆಲೆ, ವೈಶಿಷ್ಟ್ಯಗಳನ್ನ ತಿಳಿಯಿರಿ.

ಪ್ರಮುಖ ಕಾರು ತಯಾರಿಕಾ ಕಂಪನಿ ಹುಂಡೈ ತನ್ನ ಹೊಸ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ದಿನಾಂಕವನ್ನು ನಿಗದಿ ಮಾಡಿದೆ. ಆದರೆ ಬಿಡುಗಡೆಗೂ ಮುನ್ನವೇ ಈ ಎಸ್‌ಯುವಿಯ ಅಧಿಕೃತ ಬುಕಿಂಗ್ ಆರಂಭವಾಗಿದೆ. ಈ ಹೊಸ ಕಾರಿನ ಹೆಸರು ಹುಂಡೈ ಕ್ರೆಟಾ ಎನ್ ಲೈನ್ (Hyundai Creta N Line) ಅಂತ. ಮಾರ್ಚ್ 11 ರಂದು ಬಿಡುಗಡೆಯಾಗಲಿರುವ ಹುಂಡೈ ಕ್ರೆಟಾ ಎನ್ ಲೈನ್ ಕಾರಿಗೆ ಆಯ್ದ ಹುಂಡೈ ಡೀಲರ್‌ಶಿಪ್‌ಗಳಲ್ಲಿ ಮುಂಚಿತವಾಗಿ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಆಸಕ್ತರು ಬುಕ್ ಮಾಡಿಕೊಳ್ಳಬಹುದು ಎಂದು ಹುಂಡೈ ಕಂಪನಿ ಹೇಳಿದೆ. ಅಧಿಕೃತ ಪೋರ್ಟಲ್‌ನಲ್ಲಿ ಇನ್ನೂ ಬುಕಿಂಗ್ ಆರಂಭವಾಗಿಲ್ಲ. ಆಯ್ದ ಡೀಲರ್‌ಶಿಪ್‌ಗಳಿಗೆ ಮಾತ್ರ ಅವಕಾಶ ನೀಡಿದೆ.

ಆಸಕ್ತ ಗ್ರಾಹಕರು ಕ್ರೆಟಾ ಎನ್‌ ಲೈನ್‌ಗಾಗಿ 25,000 ರೂಪಾಯಿ ಟೋಕನ್ ಹಣವನ್ನು ಪಾವತಿಸಿ ಬುಕಿಂಗ್ ಮಾಡಿಕೊಳ್ಳಬಹುದು. ಒಂದು ವೇಳೆ ಬುಕಿಂಗ್ ರದ್ದು ಮಾಡಿಕೊಂಡರೆ ಅವರ ಟೋಕನ್ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಹುಂಡೈ ಕಂಪನಿ ಮಾಹಿತಿ ನೀಡಿದೆ. ಎನ್‌ ಲೈನ್ ನಿರ್ದಿಷ್ಟ ಸಿಗ್ನೇಚರ್ ಥಂಡರ್ ಬ್ಲೂ ಪೇಂಟ್ ಸ್ಕೀಮ್ ಜೊತೆಗೆ ಕಾರಿನ ಛಾವಣಿ ಕಪ್ಪು ಬಣ್ಣದಲ್ಲಿದ್ದು, ನೋಡಲು ತುಂಬಾ ಆಕರ್ಷಕವಾಗಿದೆ. ಹುಂಡೈ ವೆನ್ಯೂ ಎನ್‌ ಲೈನ್ ಮತ್ತು ಹುಂಡೈ ಐ20 ಎನ್ ಲೈನ್‌ನಂತೆಯೇ ಥಂಡರ್ ಬ್ಲೂ ಪೇಂಟ್ ಸ್ಕೀಮ್ ವಿವಿಧ ಭಾಗಗಗಳಲ್ಲಿ ಕೆಂಪು ಉಚ್ಚಾರಣೆಯನ್ನು ಪಡೆಯುತ್ತದೆ.

ಈ ಬಣ್ಣದ ಯೋಜನೆ ಜೊತೆಗೆ ಮುಂಬರುವ ಹುಂಡೈ ಕ್ರೆಟಾ ಎನ್‌ ಲೈನ್ ಜನಪ್ರಿಯ ಮಧ್ಯಮ ಗಾತ್ರದ ಎಸ್‌ಯುವಿ ಪ್ರಮಾಣಿತ ಆವೃತ್ತಿಗೆ ಹೋಲಿಸಿದರೆ ವಿಶಿಷ್ಟ ಶೈಲಿಯೊಂದಿಗೆ ಬರುತ್ತಿದೆ. ಈ ಕಾರಿನ ಮುಂಭಾಗ ಮತ್ತ ಹಿಂಭಾಗದ ಬಂಪರ್‌ಗಳನ್ನು ರಿಡಿಸೈನ್ ಮಾಡಲಾಗಿದೆ. ಸ್ಪೋರ್ಟಿಯರ್ ಮತ್ತು ಹೆಚ್ಚು ಆಕ್ರಮಣಕಾರಿ ಶೈಲಿಯಲ್ಲಿದೆ. ವಿಭಿನ್ನ ಬಣ್ಣದ ಆಯ್ಕೆಗಳು ಲಭ್ಯವಿರುತ್ತವೆ. ಹುಂಡೈ ಕ್ರೆಟಾ ಎನ್ ಲೈನ್‌ನಲ್ಲಿ ಎನ್‌8 ಮತ್ತು ಎನ್‌10 ಎಂಬ ಎರಡು ವೇರಿಯಂಟ್‌ಗಳಿವೆ. ವೇರಿಯಂಟ್‌ಗಳಿವೆ.

ಹೊರಭಾಗದಂತೆಯೇ ಕ್ಯಾಬಿನ್ ಒಳಗೂ ವಿಶಿಷ್ಟ ವಿನ್ಯಾಸವನ್ನು ಮಾಡಲಾಗಿದೆ. ಸ್ಪೋರ್ಟಿ ಆಲ್‌-ಬ್ಲಾಕ್ ಥೀಮ್ ಅನ್ನು ಪಡೆದಿದ್ದು, ಡ್ಯುಯಲ್ ಡಿಸ್‌ಪ್ಲೇ ಸೆಟಪ್, ಡ್ಯುಯಲ್-ಝೋನ್ ಕ್ಲೈಮೇಟ್‌ ಕಂಟ್ರೋಲ್, ಪನೋರಮಿಕ್ ಸನ್‌ರೂಪ್, 360 ಡಿಗ್ರಿ ಸರೌಂಟ್ ಕ್ಯಾಮೆರಾ, ಸ್ಟೈಲಿಶ್ ಸ್ಟೇರಿಂಗ್, ವೈರ್‌ಲೆಸ್ ಚಾರ್ಜರ್ ಹಾಗೂ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ಎಸ್‌ಯುವಿನಲ್ಲಿ ಕಾಣಬಹುದು. ಸುರಕ್ಷತೆಯ ದೃಷ್ಟಿಯಿಂದ ಆರು ಏರ್‌ಬ್ಯಾಗ್‌ಗಳು ಮತ್ತು ಎಡಿಎಎಸ್ ಸೂಟ್‌ ಅನ್ನು ನೀಡಲಾಗಿದೆ.

ಹುಂಡೈ ಕ್ರೆಟಾ ಎನ್‌ ಲೈನ್ 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನಿಂದ ನಿಯಂತ್ರಿಸಲ್ಪಡುತ್ತದೆ. ಇದು 158 ಬಿಎಚ್‌ಪಿ ಪವರ್ ಮತ್ತು 253 ಎನ್‌ಎಂ ಪೀಕ್ ಟಾರ್ಕ್‌ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಆರು ಸ್ಪೀಡ್ ಮ್ಯಾನುವಲ್ ಮತ್ತು ಏಳು ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ನೀಡಲಾಗಿದೆ. ಈ ಕಾರಿನ ಎಕ್ಸ್‌ ಶೋಂ ಬೆಲೆ 17.5 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹುಂಡೈ ಮೋಟಾರ್ ಕಂಪನಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಕಾರಿನ ಹೆಸರು ಹುಂಡೈ ಕಾಸ್ಪರ್ ಇವಿ. ಇದು ಬಜೆಟ್ ಸ್ನೇಹಿ ಇವಿಯಾಗಿದೆ. 2024ರ ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ.

ವಿಭಾಗ