ಗಣೇಶ ಚತುರ್ಥಿಗೆ ಬಂಪರ್ ಗಿಫ್ಟ್: ಬಿಡುಗಡೆ ಆಯಿತು ಬ್ಲ್ಯಾಕ್ ಬ್ಯೂಟಿ ಕ್ರೆಟಾದ ನೈಟ್ ಆವೃತ್ತಿ- ಬೆಲೆ ಎಷ್ಟು, ಇಲ್ಲಿದೆ ಮಾಹಿತಿ-automobile news hyundai motor launched hyundai creta knight edition hyundai creta knight price mileage vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗಣೇಶ ಚತುರ್ಥಿಗೆ ಬಂಪರ್ ಗಿಫ್ಟ್: ಬಿಡುಗಡೆ ಆಯಿತು ಬ್ಲ್ಯಾಕ್ ಬ್ಯೂಟಿ ಕ್ರೆಟಾದ ನೈಟ್ ಆವೃತ್ತಿ- ಬೆಲೆ ಎಷ್ಟು, ಇಲ್ಲಿದೆ ಮಾಹಿತಿ

ಗಣೇಶ ಚತುರ್ಥಿಗೆ ಬಂಪರ್ ಗಿಫ್ಟ್: ಬಿಡುಗಡೆ ಆಯಿತು ಬ್ಲ್ಯಾಕ್ ಬ್ಯೂಟಿ ಕ್ರೆಟಾದ ನೈಟ್ ಆವೃತ್ತಿ- ಬೆಲೆ ಎಷ್ಟು, ಇಲ್ಲಿದೆ ಮಾಹಿತಿ

ಹುಂಡೈ ಕ್ರೆಟಾ ನೈಟ್ ಆವೃತ್ತಿ ಬಿಡುಗಡೆ ಮಾಡಲಾಗಿದೆ. ಈ ಹೊಸ ಆವೃತ್ತಿಯ ಆರಂಭಿಕ ಬೆಲೆ ರೂ. 14 ಲಕ್ಷ 51 ಸಾವಿರ (ಎಕ್ಸ್ ಶೋ ರೂಂ). ಈ ನೈಟ್ ಆವೃತ್ತಿಯು ಕಂಪನಿಯ ಫೇಸ್‌ಲಿಫ್ಟ್ ಮಾದರಿಯನ್ನೇ ಆಧರಿಸಿದೆ.(ಬರಹ: ವಿನಯ್ ಭಟ್)

ಹ್ಯುಂಡೈನ ಜನಪ್ರಿಯ ಎಸ್‌ಯುವಿ ಕ್ರೆಟಾದ ಹೊಸ ಮಾದರಿ, ಕ್ರೆಟಾ ನೈಟ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.
ಹ್ಯುಂಡೈನ ಜನಪ್ರಿಯ ಎಸ್‌ಯುವಿ ಕ್ರೆಟಾದ ಹೊಸ ಮಾದರಿ, ಕ್ರೆಟಾ ನೈಟ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಹ್ಯುಂಡೈನ ಜನಪ್ರಿಯ ಎಸ್‌ಯುವಿ ಕ್ರೆಟಾದ ಹೊಸ ಮಾದರಿ, ಕ್ರೆಟಾ ನೈಟ್ ಆವೃತ್ತಿಯನ್ನು ಗಣೇಶ ಚತುರ್ಥಿ ಪ್ರಯುಕ್ತ ಗ್ರಾಹಕರಿಗಾಗಿ ಬಿಡುಗಡೆ ಮಾಡಲಾಗಿದೆ. ನೀವು ಕಪ್ಪು ಬಣ್ಣದ 'ಬ್ಲ್ಯಾಕ್ ಬ್ಯೂಟಿ' ಕಾರನ್ನು ಇಷ್ಟಪಟ್ಟರೆ, ಕ್ರೆಟಾದ ಈ ಹೊಸ ಆವೃತ್ತಿಗೆ ಮನಸೋಲುತ್ತೀರಿ. ಈ ವರ್ಷದ ಆರಂಭದಲ್ಲಿ, ಹುಂಡೈ ಕ್ರೆಟಾದ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಾಗಿತ್ತು, ಈ ನೈಟ್ ಆವೃತ್ತಿಯು ಕಂಪನಿಯ ಫೇಸ್‌ಲಿಫ್ಟ್ ಮಾದರಿಯನ್ನೇ ಆಧರಿಸಿದೆ.

ಕ್ರೆಟಾದ ಈ ಆವೃತ್ತಿಯನ್ನು ಕಪ್ಪು ಬಣ್ಣದ ಜೊತೆಗೆ 21 ಬಾಹ್ಯ ಮತ್ತು ಆಂತರಿಕ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ವಿನ್ಯಾಸದ ಬಗ್ಗೆ ಮಾತನಾಡುತ್ತಾ, ಗ್ರಾಹಕರು ಕಪ್ಪು ಬಣ್ಣದ ಮುಂಭಾಗದ ಗ್ರಿಲ್, 17 ಇಂಚಿನ ಕಪ್ಪು ಮಿಶ್ರಲೋಹದ ಟಯರ್​ಗಳು, ಕಪ್ಪು ಬಣ್ಣದ ಮುಂಭಾಗದ ಮ್ಯಾಟ್ ಮತ್ತು ಹಿಂಭಾಗದ ಹ್ಯುಂಡೈ ಲೋಗೊ, ವಿಶೇಷ ನೈಟ್ ಲಾಂಛನ, ಹಿಂಭಾಗದ ಸ್ಕಿಡ್ ಪ್ಲೇಟ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಹುಂಡೈ ಕ್ರೆಟಾ ನೈಟ್ ಆವೃತ್ತಿಯ ಬೆಲೆ

ಹುಂಡೈ ಕ್ರೆಟಾದ ಈ ಹೊಸ ಆವೃತ್ತಿಯ ಆರಂಭಿಕ ಬೆಲೆ ರೂ. 14 ಲಕ್ಷ 51 ಸಾವಿರ (ಎಕ್ಸ್ ಶೋ ರೂಂ). ಈ ಮಾದರಿಯ ಟಾಪ್ ವೆರಿಯಂಟ್‌ನ ಬೆಲೆ 20 ಲಕ್ಷ 15 ಸಾವಿರ (ಎಕ್ಸ್ ಶೋ ರೂಂ) ವರೆಗೆ ಇದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಬ್ಲಾಕ್ ಆವೃತ್ತಿಯ ಹೊರತಾಗಿ, ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಮತ್ತು ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್‌ನಂತಹ ವಾಹನಗಳೊಂದಿಗೆ ಇದು ಸ್ಪರ್ಧಿಸುತ್ತದೆ.

ಹುಂಡೈ ಕ್ರೆಟಾ ನೈಟ್ ಆವೃತ್ತಿಯ ಎಂಜಿನ್ ವಿವರಗಳು

ಹ್ಯುಂಡೈ ಕ್ರೆಟಾ ನೈಟ್ ಆವೃತ್ತಿಯು 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 6 ಸ್ಪೀಡ್ ಮ್ಯಾನುವಲ್ ಮತ್ತು IVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದಲ್ಲದೇ, 1.5 ಲೀಟರ್ ಡೀಸೆಲ್ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿಯೂ ಇದೆ. ಈ ಆವೃತ್ತಿಯು S(O) ಮತ್ತು SX(O) ರೂಪಾಂತರಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ಹುಂಡೈ ಕ್ರೆಟಾ ನೈಟ್ ಆವೃತ್ತಿಯ ವೈಶಿಷ್ಟ್ಯಗಳು

ಕಂಪನಿಯು ವೈಶಿಷ್ಟ್ಯಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ, ಕ್ರೆಟಾ ಫೇಸ್‌ಲಿಫ್ಟ್‌ನ ಅದೇ ವೈಶಿಷ್ಟ್ಯಗಳು ಈ ಮಾದರಿಯಲ್ಲಿ ನೀಡಲಾಗಿದೆ. ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ರಿಯರ್ ಎಸಿ ವೆಂಟ್‌ಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಕಾಣಬಹುದು.

ಕ್ರೆಟಾ ನೈಟ್ 1.5-ಲೀಟರ್ MPi ಪೆಟ್ರೋಲ್ ಬೆಲೆ

S(O) MT - 14.51 ಲಕ್ಷ ರೂ.

S(O) IVT - 16.01 ಲಕ್ಷ ರೂ.

SX(O) MT - 17.42 ಲಕ್ಷ ರೂ.

SX(O) IVT - 18.88 ಲಕ್ಷ ರೂ.

ಕ್ರೆಟಾ ನೈಟ್ 1.5-ಲೀಟರ್ U2 CRDi ಡೀಸೆಲ್ ಬೆಲೆ

S(O) MT - 16.08 ಲಕ್ಷ ರೂ.

S(O) AT - 17.58 ಲಕ್ಷ ರೂ.

SX(O) MT - 19 ಲಕ್ಷ ರೂ.

SX(O) AT - 20.15 ಲಕ್ಷ ರೂ.