ಸ್ಕೋಡಾ, ಫೋಕ್ಸ್‌ವ್ಯಾಗನ್‌, ಔಡಿ, ಪೋರ್ಷೆ, ಲಂಬೋರ್ಗಿನಿ ಕಾರುಗಳು ಮಹೀಂದ್ರ ಪಾಲಾಗುತ್ತ? ಪಾಲು ಖರೀದಿ ವದಂತಿ ಕುರಿತು ಸ್ಪಷ್ಟನೆ ನೀಡಿದ ಕಂಪನಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ಕೋಡಾ, ಫೋಕ್ಸ್‌ವ್ಯಾಗನ್‌, ಔಡಿ, ಪೋರ್ಷೆ, ಲಂಬೋರ್ಗಿನಿ ಕಾರುಗಳು ಮಹೀಂದ್ರ ಪಾಲಾಗುತ್ತ? ಪಾಲು ಖರೀದಿ ವದಂತಿ ಕುರಿತು ಸ್ಪಷ್ಟನೆ ನೀಡಿದ ಕಂಪನಿ

ಸ್ಕೋಡಾ, ಫೋಕ್ಸ್‌ವ್ಯಾಗನ್‌, ಔಡಿ, ಪೋರ್ಷೆ, ಲಂಬೋರ್ಗಿನಿ ಕಾರುಗಳು ಮಹೀಂದ್ರ ಪಾಲಾಗುತ್ತ? ಪಾಲು ಖರೀದಿ ವದಂತಿ ಕುರಿತು ಸ್ಪಷ್ಟನೆ ನೀಡಿದ ಕಂಪನಿ

Mahindra Volkswagen merger: ಮಹೀಂದ್ರ ಕಂಪನಿಯು ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಇಂಡಿಯಾದ ಶೇಕಡ 50 ಪಾಲು ಖರೀದಿಸಲಿದೆ ಎಂದು ಮಾಧ್ಯಮ ವರದಿಯೊಂದು ಹೇಳಿತ್ತು. ಇದಕ್ಕೆ ಮಹೀಂದ್ರ ಕಂಪನಿಯು ಸ್ಪಷ್ಟನೆ ನೀಡಿದೆ. ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಗ್ರೂಪ್‌ ಭಾರತದಲ್ಲಿ ಸ್ಕೋಡಾ, ಫೋಕ್ಸ್‌ವ್ಯಾಗನ್‌, ಔಡಿ, ಪೋರ್ಷೆ, ಲಂಬೋರ್ಗಿನಿ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಮಹೀಂದ್ರ ಕಂಪನಿಯು ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಇಂಡಿಯಾದ ಶೇಕಡ 50 ಪಾಲು ಖರೀದಿಸಲಿದೆ  ಎಂಬ ವದಂತಿಗೆ ಮಹೀಂದ್ರ ಪ್ರತಿಕ್ರಿಯೆ ನೀಡಿದೆ.
ಮಹೀಂದ್ರ ಕಂಪನಿಯು ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಇಂಡಿಯಾದ ಶೇಕಡ 50 ಪಾಲು ಖರೀದಿಸಲಿದೆ ಎಂಬ ವದಂತಿಗೆ ಮಹೀಂದ್ರ ಪ್ರತಿಕ್ರಿಯೆ ನೀಡಿದೆ.

ಬೆಂಗಳೂರು: ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಗ್ರೂಪ್‌ನ ಪಾಲನ್ನು ಖರೀದಿಸಲು ಕಂಪನಿ ಉತ್ಸುಕವಾಗಿದೆ ಎಂದು ಮಾಧ್ಯಮ ವರದಿಗಳು ಪ್ರಕಟವಾದ ಬಳಿಕ ಮಹೀಂದ್ರ ಆಂಡ್‌ ಮಹೀಂದ್ರ ಕಂಪನಿಯು ಸ್ಪಷ್ಟನೆ ನೀಡಿದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುರೋಪ್‌ನ ಅತಿದೊಡ್ಡ ಕಾರು ತಯಾರಿಕಾ ಗ್ರೂಪ್‌ನಲ್ಲಿ ಶೇಕಡ 50 ಪಾಲು ಪಡೆಯುವ ತನ್ನ ಯೋಜನೆಯ ಕುರಿತಾದ ವರದಿಗಳು "ಊಹಾಪೋಹ" ಎಂದು ಮಹೀಂದ್ರ ಕಂಪನಿಯು ಪ್ರತಿಕ್ರಿಯೆ ನೀಡಿದೆ. ಆದರೆ, ಸಂಭವನೀಯ ವಿಲೀನದ ಕುರಿತು ಮಾತುಕತೆ ನಡೆಯುತ್ತಿದೆ ಎಂಬ ವರದಿಯನ್ನು ನಿರ್ದಿಷ್ಟವಾಗಿ ಕಂಪನಿ ನಿರಾಕರಿಸಿಲ್ಲ. ಇವೆರಡು ಕಂಪನಿಗಳು ಸುಮಾರು 1 ಶತಕೋಟಿ ಡಾಲರ್‌ (ಸುಮಾರು 8,358 ಕೋಟಿ ರೂಪಾಯಿ) ಮೌಲ್ಯದ ಒಪ್ಪಂದದ ಕುರಿತು ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಈಗ ಮಹೀಂದ್ರಾ ಮತ್ತು ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಎಲೆಕ್ಟ್ರಿಕ್ ವಾಹನಗಳ ಪಾಲುದಾರಿಕೆ ಮಾಡಿಕೊಂಡಿವೆ. ಮಹೀಂದ್ರ ಕಂಪನಿಯು ತನ್ನ ಮುಂದಿನ ಐದು ಎಲೆಕ್ಟ್ರಿಕ್‌ ವಾಹನಗಳ ಸಾಧನಗಳನ್ನು ಎಂಇಬಿ ಘಟಕದಿಂದ ಪಡೆಯಲು ಜರ್ಮನ್‌ನ ಪ್ರಮುಖ ವಾಹನ ಕಂಪನಿ ಜತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಮಹೀಂದ್ರದ ಇಂಗ್ಲೊ ಇವಿ ಘಟಕಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಿಡಿಭಾಗಗಳನ್ನು ಪೂರೈಸುವುದನ್ನು ಈ ಒಪ್ಪಂದ ಒಳಗೊಂಡಿದೆ.

ಮಹೀಂದ್ರ ಕಂಪನಿಯ ಸ್ಪಷ್ಟನೆ

ಷೇರು ವಿನಿಮಯ ಕೇಂದ್ರದ ಫೈಲಿಂಗ್‌ ಸಮಯದಲ್ಲಿ ಮಹೀಂದ್ರ ಕಂಪನಿ ಹೇಳಿಕೆ ನೀಡಿದೆ. "ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಗ್ರೂಪ್‌ನ ಪಾಲು ಖರೀದಿ ವರದಿಯು ಊಹಾಪೋಹದಿಂದ ಕೂಡಿದೆ ಎಂದು ಮಹೀಂದ್ರ ಬಣ್ಣಿಸಿದೆ. ಸಂಭವನೀಯ ವಿಲೀನದ ಬಗ್ಗೆ ಯಾವುದೇ ನಿರ್ದಿಷ್ಟ ಫಲಿತಾಂಶ ಇಲ್ಲ ಎಂದು ಹೇಳಿರುವ ಕಂಪನಿಯು ನಿರ್ದಿಷ್ಟವಾಗಿ "ಪಾಲು ಖರೀದಿಸುವುದಿಲ್ಲ" ಎಂದು ಹೇಳಿಲ್ಲ. "ಯಾವುದೇ ನಿರ್ದಿಷ್ಟ ಫಲಿತಾಂಶಗಳು ಇದ್ದಲ್ಲಿ ಈ ವಿಷಯದ ಕುರಿತು ಮಾಹಿತಿ ಬಹಿರಂಗಪಡಿಸುವುದಾಗಿ" ಕಂಪನಿ ತಿಳಿಸಿದೆ. ಮಹೀಂದ್ರ ಕಂಪನಿಯು ಈ ಹಿಂದೆ ಫೋರ್ಡ್‌ ಇಂಡಿಯಾದಲ್ಲಿ ಹೊಂದಿದ್ದ ಶೇಕಡ 50 ಪಾಲನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಎಲ್ಲಾದರೂ ಇದಕ್ಕಿಂತ ಕಡಿಮೆ ಷೇರು ಪಡೆಯಲು ಸೂಚಿಸಿದರೆ ಅದಕ್ಕೆ ಮಹೀಂದ್ರ ಒಪ್ಪದೆ ಇರಬಹುದು ಎಂದು ವರದಿ ತಿಳಿಸಿದೆ.

ಸದ್ಯ ಯಾವುದೇ ವಿಲೀನವಿಲ್ಲ ಎಂದು ಕಂಪನಿ ತಿಳಿಸಿದರೂ ಭವಿಷ್ಯದಲ್ಲಿ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಇಂಡಿಯಾದ ಪಾಲು ಖರೀದಿಸುವ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ. "ಮಹೀಂದ್ರಾ ಮತ್ತು ಮಹೀಂದ್ರಾ ಹಾಗೂ ವಿಡಬ್ಲ್ಯೂ ಗ್ರೂಪ್ ಸಹಯೋಗದ ಸಾಧ್ಯತೆ ವಿಸ್ತರಿಸುವ ಅವಕಾಶಗಳನ್ನು ಮುಂದುವರೆಸಲಿದೆ" ಎಂದು ಕಂಪನಿ ತಿಳಿಸಿದೆ.

ಮಹೀಂದ್ರ ಕಂಪನಿಯು ಎಲೆಕ್ಟ್ರಿಕ್‌ ವಾಹನಗಳಿಗಾಗಿ ಇಂಗ್ಲೊ ಪ್ಲಾಟ್‌ಫಾರ್ಮ್‌ (INGLO platform) ಅಭಿವೃದ್ಧಿಪಡಿಸಿದೆ. ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಐದು ಇವಿ ಕಾರುಗಳ ಕಾನ್ಸೆಪ್ಟ್‌ ಅನ್ನು ಪರಿಚಯಿಸಿದೆ. ಮುಂದಿನ ವರ್ಷ ಮಹೀಂದ್ರ ಕಂಪನಿಯ ಮೊದಲ ಎಲೆಕ್ಟ್ರಿಕ್‌ ವಾಹನ ಬಿಡುಗಡೆಯಾಗುವ ಸೂಚನೆಯಿದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ 60 ಕಿಲೋವ್ಯಾಟ್‌ ಮತ್ತು 80 ಕಿಲೋ ವ್ಯಾಟ್‌ನ 30 ನಿಮಿಷದಲ್ಲಿ ಶೇಕಡ 80 ಚಾರ್ಜ್‌ ಆಗುವ ಬ್ಯಾಟರಿಗಳನ್ನು ನೀಡುವ ಗುರಿಯನ್ನು ಕಂಪನಿ ಹೊಂದಿದೆ.