ಮಾರುತಿ ಕಾರಿನಲ್ಲಿ ಪ್ರಾಬ್ಲಂ: ನೀವು ಹೊಸ ಆಲ್ಟೊ K10 ಖರೀದಿಸಿದ್ದರೆ ತಕ್ಷಣವೇ ಶೋ ರೂಮ್ಗೆ ದೌಡಾಯಿಸಿ
Maruti Suzuki Alto K10: ಹೊಸ ‘ಮಾರುತಿ ಆಲ್ಟೊ ಕೆ10’ ಹೊಂದಿರುವ ಮತ್ತು ಈ ರೀತಿಯ ದೋಷ ಕಂಡುಬಂದ ಗ್ರಾಹಕರು ತಮ್ಮ ಕಾರನ್ನು ಮಾರುತಿ ಸುಜುಕಿ ಅಧಿಕೃತ ಡೀಲರ್‌ಶಿಪ್‌ನಲ್ಲಿ ಪರಿಶೀಲಿಸಬಹುದು.ಇದಲ್ಲದೆ,ಅವರು ಹತ್ತಿರದMSIಸೇವಾ ಕೇಂದ್ರಕ್ಕೂ ಭೇಟಿ ನೀಡಬಹುದು. (ಬರಹ:ವಿನಯ್ ಭಟ್)
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ನ (MSIL) ಭಾರತದ ಅತ್ಯಂತ ಜನಪ್ರಿಯ ಸಣ್ಣ ಕಾರು ಮಾರುತಿ ಸುಜುಕಿ ಆಲ್ಟೊ ಕೆ10 ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಕಾರಿನ ಸ್ಟೀರಿಂಗ್ ಗೇರ್ ಬಾಕ್ಸ್ ಜೋಡಣೆಯಲ್ಲಿ ದೋಷ ಕಂಡುಬಂದಿದೆ. ತೊಂದರೆಗೊಳಗಾದ ಭಾಗವನ್ನು ಬದಲಾಯಿಸದೆ ಆಲ್ಟೊ ಕೆ10 ಅನ್ನು ಚಾಲನೆ ಮಾಡದಂತೆ ಕಂಪನಿಯು ಗ್ರಾಹಕರಿಗೆ ಸಲಹೆ ನೀಡಿದೆ. ಆಲ್ಟೊ K10 ನ ಒಟ್ಟು 2555 ಮಾದರಿಗಳಲ್ಲಿ ಈ ದೋಷಗಳು ಕಂಡುಬಂದಿವೆ ಎಂದು ಕಂಪನಿ ಹೇಳಿದ್ದು, ಇದಕ್ಕಾಗಿ ಕಾರ್‌ಗಳನ್ನು ಉಚಿತವಾಗಿ ಪರಿಶೀಲಿಸುವ, ದೋಷಯುಕ್ತ ಭಾಗಗಳ ಬದಲಾವಣೆಗೆ ಅವಕಾಶ ನೀಡಲಾಗಿದೆ.
ಹೊಸದಾದ ಮಾರುತಿ ಆಲ್ಟೊ ಕೆ10 ಹೊಂದಿರುವ ಮತ್ತು ಈ ರೀತಿಯ ದೋಷ ಕಂಡುಬಂದ ಗ್ರಾಹಕರು ತಮ್ಮ ಕಾರನ್ನು ಮಾರುತಿ ಸುಜುಕಿ ಅಧಿಕೃತ ಡೀಲರ್‌ಶಿಪ್‌ನಲ್ಲಿ ಪರಿಶೀಲಿಸಬಹುದು. ಇದಲ್ಲದೆ, ಹತ್ತಿರದ MSI ಸೇವಾ ಕೇಂದ್ರಕ್ಕೂ ಭೇಟಿ ನೀಡಬಹುದು. ಕಂಪನಿಯು ದೋಷಯುಕ್ತ ಭಾಗಗಳನ್ನು ಬದಲಾಯಿಸುತ್ತದೆ ಮತ್ತು ಗ್ರಾಹಕರಿಂದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ ಎಂದು ಮಾರುತಿ ಹೇಳಿದೆ.
ನಿಮ್ಮ ಹೊಸ ಆಲ್ಟೊ ಕೆ10 ಕಾರಿನಲ್ಲಿ ಈ ತೊಂದರೆ ಇದೆಯೇ ಎಂದು ಪರಿಶೀಲಿಸಲು ಕಾರಿನ ಮಾಲೀಕರು ಮಾರುತಿ ಸುಜುಕಿಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ವೆಬ್‌ಸೈಟ್‌ನಲ್ಲಿ ಆಲ್ಟೊ ಕೆ 10 ನ ಚಾಸಿಸ್ ಸಂಖ್ಯೆಯನ್ನು ನಮೂದಿಸುವ ಮೂಲಕ ಪರಿಶೀಲಿಸಬಹುದು. ಈ ಸಂಖ್ಯೆಯನ್ನು ಎಂಜಿನ್‌ನ ಹಿಂದಿನ ಫಲಕದಲ್ಲಿ ನೀಡಲಾಗಿರುತ್ತದೆ. ಸಂಖ್ಯೆಯು MA3 ನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ನಂತರ 14 ಅಂಕೆಗಳಿರುತ್ತವೆ.
ಮಾರುತಿ ಸುಜುಕಿ ಆಲ್ಟೊ ಕೆ10 ಭಾರತದಲ್ಲಿ ಮಾರಾಟವಾಗುವ ಅತ್ಯಂತ ಕೈಗೆಟುಕುವ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಈ ಸಣ್ಣ ಕಾರು 998cc, 1.0 ಲೀಟರ್, 3-ಸಿಲಿಂಡರ್ ಡ್ಯುಯಲ್ಜೆಟ್ ಎಂಜಿನ್ ಹೊಂದಿದೆ. ಇದು 66.62PS ಪವರ್ ಮತ್ತು 89Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೇ ಎಂಜಿನ್ ಅನ್ನು ಮಾರುತಿ ಸುಜುಕಿ ಸೆಲೆರಿಯೊದಲ್ಲಿ ನೀಡಲಾಗಿದೆ. ಇದಲ್ಲದೆ, ಈ ಕಾರು ಸಿಎನ್‌ಜಿ ಆಯ್ಕೆಯಲ್ಲಿಯೂ ಬರುತ್ತದೆ.
ಮಾರುತಿ ಸುಜುಕಿ ಆಲ್ಟೊ ಕೆ10 ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ - Std, LXi, VXi, ಮತ್ತು VXi Plus, ಏಳು ಬಣ್ಣಗಳ ಆಯ್ಕೆಗಳಿವೆ - ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ, ಸ್ಪೀಡಿ ಬ್ಲೂ, ಪರ್ಲ್ ಮಿಡ್ನೈಟ್ ಬ್ಲಾಕ್, ಸಾಲಿಡ್ ವೈಟ್ ಮತ್ತು ಪ್ರೀಮಿಯಂ ಅರ್ಥ್ ಗೋಲ್ಡ್.
ಇದೇ ಕಾರಿನ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 24.90 ಕಿಲೋಮೀಟರ್ ಮೈಲೇಜ್ ನೀಡಬಲ್ಲದು ಮತ್ತು ಸಿಎನ್‌ಜಿ ಮಾದರಿಯು 33.85km/kg ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಆಲ್ಟೊ ಕೆ10 ಬೆಲೆ
ಮಾರುತಿ ಆಲ್ಟೊ K10 ಪ್ರಸ್ತುತ ಕಂಪನಿಯ ಅಗ್ಗದ ಕಾರು. ಇದರ ಬೆಲೆಯು 3.99 ರಿಂದ 5.96 ಲಕ್ಷದವರೆಗೆ ಇರುತ್ತದೆ, ಇದು ಎಕ್ಸ್ ಶೋ ರೂಂ ಬೆಲೆ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ, ಇದು ರೆನಾಲ್ಟ್ ಕ್ವಿಡ್‌ನೊಂದಿಗೆ ಸರ್ಧಿಸುತ್ತಿದೆ.
ವಿಭಾಗ