Maruti Suzuki: ಬಂಪರ್ ಮೈಲೇಜ್ ನೀಡುವ ಈ ಮಾರುತಿಯ ಶಕ್ತಿಶಾಲಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್: ಇನ್ನಷ್ಟು ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Maruti Suzuki: ಬಂಪರ್ ಮೈಲೇಜ್ ನೀಡುವ ಈ ಮಾರುತಿಯ ಶಕ್ತಿಶಾಲಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್: ಇನ್ನಷ್ಟು ವಿವರ ಇಲ್ಲಿದೆ

Maruti Suzuki: ಬಂಪರ್ ಮೈಲೇಜ್ ನೀಡುವ ಈ ಮಾರುತಿಯ ಶಕ್ತಿಶಾಲಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್: ಇನ್ನಷ್ಟು ವಿವರ ಇಲ್ಲಿದೆ

ಮಾರುತಿ ಸುಜುಕಿಯ ವೆಬ್‌ಸೈಟ್ ಪ್ರಕಾರ, ಆಲ್ಟೊ ಕೆ10 ಎಕ್ಸ್ ಶೋರೂಂ ಬೆಲೆ ₹3,99,000 ರಿಂದ ಆರಂಭವಾಗುತ್ತದೆ ಮತ್ತು ಎಸ್-ಪ್ರೆಸ್ಸೊ ಬೆಲೆಗಳು ರೂ. 4,26,500 (ಎಕ್ಸ್ ಶೋರೂಂ) ನಿಂದ ಪ್ರಾರಂಭವಾಗುತ್ತವೆ.(ಬರಹ: ವಿನಯ್ ಭಟ್)

ಆಲ್ಟೊ ಕೆ 10 ಮತ್ತು ಎಸ್-ಪ್ರೆಸ್ಸೊ ಕಾರುಗಳ ಕೆಲವು ರೂಪಾಂತರಗಳ ಬೆಲೆ ಕಡಿತವನ್ನು ಘೋಷಿಸಿದೆ.
ಆಲ್ಟೊ ಕೆ 10 ಮತ್ತು ಎಸ್-ಪ್ರೆಸ್ಸೊ ಕಾರುಗಳ ಕೆಲವು ರೂಪಾಂತರಗಳ ಬೆಲೆ ಕಡಿತವನ್ನು ಘೋಷಿಸಿದೆ.

ಭಾರತದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ, ಸೆಪ್ಟೆಂಬರ್ 2 ರಿಂದ ಆಲ್ಟೊ ಕೆ 10 ಮತ್ತು ಎಸ್-ಪ್ರೆಸ್ಸೊ ಕಾರುಗಳ ಕೆಲವು ರೂಪಾಂತರಗಳ ಬೆಲೆ ಕಡಿತವನ್ನು ಘೋಷಿಸಿದೆ. "ಎಸ್-ಪ್ರೆಸ್ಸೋ ಎಲ್‌ಎಕ್ಸ್‌ಐ ಪೆಟ್ರೋಲ್ ಬೆಲೆ 2,000 ರೂ. ಮತ್ತು ಆಲ್ಟೊ ಕೆ 10 ವಿಎಕ್ಸ್‌ಐ ಪೆಟ್ರೋಲ್ ಬೆಲೆ ರೂ. 6,500 ಕಡಿಮೆಯಾಗಿದೆ" ಎಂದು ಮಾರುತಿ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದ್ದಾರೆ.

ಮಾರುತಿ ಸುಜುಕಿಯ ವೆಬ್‌ಸೈಟ್ ಪ್ರಕಾರ, ಆಲ್ಟೊ ಕೆ10 ಎಕ್ಸ್ ಶೋರೂಂ ಬೆಲೆ 3,99,000 ರಿಂದ ಆರಂಭವಾಗುತ್ತದೆ ಮತ್ತು ಎಸ್-ಪ್ರೆಸ್ಸೊ ಬೆಲೆಗಳು ರೂ. 4,26,500 (ಎಕ್ಸ್ ಶೋರೂಂ) ನಿಂದ ಪ್ರಾರಂಭವಾಗುತ್ತವೆ. ಕಂಪನಿಯು ಮಾಸಿಕ ಮಾರಾಟದ ಡೇಟಾವನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ.

ಆಗಸ್ಟ್ 2023ಕ್ಕೆ ಹೋಲಿಸಿದರೆ ಕಂಪನಿಯು ಈ ವರ್ಷ ಶೇ. 4ರಷ್ಟು ಕಡಿಮೆ ಕಾರುಗಳನ್ನು ಮಾರಾಟ ಮಾಡಿದೆ, ಆದರೂ ಒಟ್ಟು ಮಾರಾಟವು ಮಾಸಿಕ ಆಧಾರದ ಮೇಲೆ 1.82 ಲಕ್ಷ ಯುನಿಟ್‌ಗಳಲ್ಲಿ ಶೇ. 1ರಷ್ಟು ಹೆಚ್ಚಾಗಿದೆ. ಕಂಪನಿಯ ಮಾಹಿತಿಯ ಪ್ರಕಾರ, ಎಸ್-ಪ್ರೆಸ್ಸೊ ಮತ್ತು ಆಲ್ಟೊಗಳ ಒಟ್ಟು ಮಾರಾಟವು ಆಗಸ್ಟ್ 2023 ರಲ್ಲಿ 12,209 ಯುನಿಟ್‌ಗಳಿಂದ ಆಗಸ್ಟ್ 2024 ರಲ್ಲಿ 10,648 ಯುನಿಟ್‌ಗಳಿಗೆ ಇಳಿಕೆಯಾಗಿದೆ.

ಆಲ್ಟೊ ಮತ್ತು ಎಸ್-ಪ್ರೆಸ್ಸೊ ಮಾರುತಿ ಸುಜುಕಿಯ 'ಮಿನಿ' ಉಪ-ವರ್ಗದ ಅಡಿಯಲ್ಲಿ ಬರುತ್ತದೆ. ಮಾರುತಿ ಸುಜುಕಿಯ ಯುಟಿಲಿಟಿ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 7ರಷ್ಟು ಬೆಳೆದರೆ, ಕಾಂಪ್ಯಾಕ್ಟ್ ವಿಭಾಗದಲ್ಲಿ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.20 ರಷ್ಟು ಮತ್ತು ತಿಂಗಳಿಗೆ ಶೇ. 1ರಷ್ಟು ಕಡಿಮೆಯಾಗಿದೆ.

ಮಾರುತಿ ಸುಜುಕಿಯಿಂದ ಸಣ್ಣ ಕಾರುಗಳ ಮಾರಾಟದಲ್ಲಿನ ಕುಸಿತವು 2023 ರ ಆರಂಭದಿಂದಲೂ ಮುಂದುವರೆದಿದೆ. ಕಂಪನಿಯ ಇತ್ತೀಚಿನ ಮಾಹಿತಿಯ ಪ್ರಕಾರ, ಅದರ ಮಿನಿ ಮತ್ತು ಕಾಂಪ್ಯಾಕ್ಟ್ ವಿಭಾಗದ ವಾಹನಗಳ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2024 ರ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಶೇ. 13 ಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಇದರ ಹೊರತಾಗಿ, ಯುಟಿಲಿಟಿ ವೆಹಿಕಲ್ ವಿಭಾಗದ ಮಾರಾಟವು ಇದೇ ಅವಧಿಯಲ್ಲಿ ಶೇ. 14ರಷ್ಟು ಹೆಚ್ಚಾಗಿದೆ.

ಕಂಪನಿಯು ಮಾರುತಿ ಸುಜುಕಿ ಆಲ್ಟೊ ಕೆ10 ನಲ್ಲಿ 1.0 ಲೀಟರ್ 3 ಸಿಲಿಂಡರ್ ಎಂಜಿನ್ ಅನ್ನು ಒದಗಿಸಿದೆ. ಈ ಎಂಜಿನ್ ಗರಿಷ್ಠ 66 BHP ಶಕ್ತಿಯೊಂದಿಗೆ 89 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ CNG ಆಯ್ಕೆಯೂ ಲಭ್ಯವಿದೆ. ಕಂಪನಿಯ ಪ್ರಕಾರ, ಕಾರಿನ ಪೆಟ್ರೋಲ್ ರೂಪಾಂತರವು ಪ್ರತಿ ಲೀಟರ್‌ಗೆ ಸುಮಾರು 25 ಕಿಮೀ ಮೈಲೇಜ್ ನೀಡುತ್ತದೆ. ಈ ಕಾರಿನ CNG ರೂಪಾಂತರವು 33 ಕಿಮೀ ವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಮಾರುತಿ ಎಸ್​​-ಪ್ರೆಸ್ಸೊದ ಮ್ಯಾನುವಲ್ ರೂಪಾಂತರಗಳು 24.76kmpl ಮೈಲೇಜ್ ನೀಡುತ್ತವೆ ಮತ್ತು ಅಟೊಮೆಟಿಕ್ ವೇರಿಯೆಂಟ್ 25.30kmpl ವರೆಗೆ ಮೈಲೇಜ್ ನೀಡುತ್ತದೆ. ಇದು ARAI ಪ್ರಮಾಣೀಕೃತ ಮೈಲೇಜ್ ಆಗಿದೆ, ಅಂದರೆ ಮೈಲೇಜ್ ವಿಷಯದಲ್ಲಿ ಇದು ಉತ್ತಮ ಕಾರು ಆಗಿದೆ.

Whats_app_banner