Maruti Suzuki Swift vs Tata Tiago: ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಟಿಯಾಗೊ ಎರಡರಲ್ಲಿ ಯಾವುದು ಬೆಸ್ಟ್?
Maruti Suzuki Swift vs Tata Tiago: ಟಾಟಾ ಟಿಯಾಗೊ, ಮಾರುತಿ ಸುಜುಕಿ vs ಟಾಟಾ ಟಿಯಾಗೊ. ಯಾವುದು ಬೆಸ್ಟ್, ಬೆಲೆ ಹಾಗೂ ವೈಶಿಷ್ಟ್ಯಗಳ ಕುರಿತ ಮಾಹಿತಿ ಇಲ್ಲಿ ತಿಳಿಯಿರಿ.
ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಸ್‌ಯುವಿ (SUV Cars) ವಿಭಾಗಕ್ಕೆ ಭಾರಿ ಬೇಡಿಕೆಯಿದೆ. ಸದ್ಯದ ಮಟ್ಟಿಗೆ ಕೆಲವೇ ಕೆಲವು ಬ್ಯಾಚ್‌ಬ್ಯಾಕ್ ವಾಹನಗಳು ಮಾತ್ರ ಎಸ್‌ಯುವಿಗಳಿಗೆ ಸ್ಪರ್ಧೆಯನ್ನು ನೀಡುತ್ತಿವೆ. ಅವುಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಮತ್ತು ಟಾಟಾ ಟಿಯಾಗೊ (TATA Tiago) ಪ್ರಮುಖ ಕಾರುಗಳಾಗಿವೆ. ಮಾರುತಿ ಸುಜುಕಿ ಇತ್ತೀಚೆಗಷ್ಟೇ ಹೊಸ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ. ಅತ್ತ ಟಾಟಾ ಕಂಪನಿಯಿಂದ ಟಾಟಾ ಟಿಯಾಗೊ ಕೂಡ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇವೆರಡನ್ನು ಹೋಲಿಕೆ ಮಾಡಿ ನೋಡಿದಾಗ ಯಾವುದನ್ನು ಖರೀದಿಸಿದರೆ ಉತ್ತಮ ಅನ್ನೋದನ್ನು ಇಲ್ಲಿ ತಿಳಿಯೋಣ.
ಮಾರುತಿ ಸುಜುಕಿ ಸ್ವಿಫ್ಟ್ vs ಟಾಟಾ ಟಿಯಾಗೊ ಬೆಲೆ (Maruti Suzuki Swift vs Tata Tiago Price)
2024 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಎಕ್ಸ್‌ಶೋ ರೂಂ ಬೆಲೆ 6.49 ಲಕ್ಷ ರೂಪಾಯಿಯಿಂದ 9.65 ಲಕ್ಷ ರೂಪಾಯಿ ವರೆಗೆ ಇದೆ. ಟಾಟಾ ಟಿಯಾಗೊ ಎಕ್ಸ್ ಶೋರೂಂ ಬೆಲೆ 5.65 ಲಕ್ಷ ರೂಪಾಯಿಯಿಂದ 8.90 ಲಕ್ಷ ರೂಪಾಯಿವರೆಗೆ ಇದೆ. ಈ ಬೆಲೆಗಳನ್ನು ಗಮನಿಸಿದಾಗ ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಟಾಟಾ ಟಿಯಾಗೊಗಿಂತ ಬೆಲೆ ಹೆಚ್ಚಿದೆ.
ಮಾರುತಿ ಸುಜುಕಿ ಸ್ವಿಫ್ಟ್ vs ಟಾಟಾ ಟಿಯಾಗೊ ವೈಶಿಷ್ಯಗಳು
ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ ಹಿಂದಿನ ಕಾರಿನಲ್ಲಿದ್ದ 1.2 ಲೀಟರ್, 4 ಸಿಲಿಂಡರ್ ಪವರ್ ಮಿಲ್ ಸ್ಥಾನದಲ್ಲಿ ಹೊಸ ಝೆಡ್-ಸರಣಿಯ 1.2 ಲೀಟರ್ 3-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ಗೆ ಬದಲಾಯಿಸಲಾಗಿದೆ. ಈ ಎಂಜಿನ್ 5 ಸ್ಪೀಡ್ ಗೇರ್ ಬಾಕ್ಸ್, 5-ಸ್ಪೀಡ್ ಎಂಎಂಟಿ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಂಜಿನ್ ಗರಿಷ್ಠ 80.46bhp ಪವರ್ ಮತ್ತು 111.7Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹ್ಯಾಚ್‌ಬ್ಯಾಕ್ ಎಂಜಿನ್ ಮ್ಯಾನುವಲ್ ವೇರಿಯಂಟ್‌ನಲ್ಲಿ ಪ್ರತಿ ಲೀಟರ್‌ಗೆ 24.8 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಎಎಂಟಿ ವೇರಿಯಂಟ್ ಕಾರು ಲೀಟರ್‌ಗೆ 25.75 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಹಿಂದಿನ ತಲೆಮಾರಿನ ಸ್ವಿಫ್ಟ್ ಪೆಟ್ರೋಲ್-ಸಿಎನ್‌ಜಿ ಬೈ-ಫ್ಯೂಯಲ್ ಆಯ್ಕೆಗಳೊಂದಿಗೆ ಲಭ್ಯವಿದ್ದರೂ, ಹೊಸ ಮಾದರಿಯ ಕಾರಿನಲ್ಲಿ ಇನ್ನೂ ಸಿಎನ್‌ಜಿ ವೇರಿಯಂಟ್ ಬಿಡುಗಡೆ ಮಾಡಿಲ್ಲ.
ಟಾಟಾ ಟಿಯಾಗೊ ಕಾರಿನ ವೈಶಿಷ್ಯಗಳು
ಟಾಟಾ ಟಿಯಾಗೊ 1.2 ಲೀಟರ್ ನ್ಯಾಚುರಲ್ ಆಸ್ಪಿರೇಡೆಟ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಂಜಿನ್ ಗರಿಷ್ಠ 84bhp ಪವರ್ ಹಾಗೂ 113Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸದಾಗಿ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಸ್ವಿಫ್ಟ್‌ಗಿಂತ ಇದು ಭಿನ್ನವಾಗಿದೆ. ಟಾಟಾ ಟಿಯಾಗೊ ಪೆಟ್ರೋಲ್-ಸಿಎನ್‌ಜಿ ಆಯ್ಕೆಗಳೊಂದಿಗೆ ಲಭ್ಯವಿದೆ. ಸಿಎನ್‌ಜಿ ವೇರಿಯಂಟ್‌ನಲ್ಲಿ ಟಾಟಾ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ.
2024ರ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಹೋಲಿಸಿದರೆ ಟಾಟಾ ಟಿಯಾಗೊ ಸ್ವಲ್ಪ ಉತ್ತಮ ಶಕ್ತಿ ಮತ್ತು ಹೆಚ್ಚಿನ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ, ಸಿಎನ್‌ಜಿ ವೇರಿಯಂಟ್ ಲಭ್ಯತೆ ಹಾಗೂ ಸಿಎನ್‌ಜಿ-ಎಎಂಟಿ ಸಂಯೋಜನೆಯಲ್ಲಿ ಟಿಯಾಗೊ ತನ್ನ ಪ್ರತಿಸ್ಪರ್ಧಿಯಾದ ಮಾರುತಿ ಸುಜುಕಿ ಸ್ವಿಫ್ಟ್‌ಗಿಂತ ಸ್ವಲ್ಪ ಎಡ್ಜ್‌ಅನ್ನು ನೀಡುತ್ತದೆ. ಸಂಪೂರ್ಣ ವಿವರಿಗಳಿಗಾಗಿ ನೀವು ನಿಮ್ಮ ಸಮೀಪದ ಡೀಲರ್‌ಶಿಪ್ ಶೋರೂಂಗಳಿಗೆ ಭೇಟಿ ನೀಡಿ. ಈ ಎರಡಲ್ಲಿ ಯಾವ ಕಾರನ್ನು ಖರೀದಿಸಿದರೆ ಉತ್ತಮ ಎಂಬ ನಿರ್ಧಾರವನ್ನು ಗ್ರಾಹಕರೇ ಕೈಗೊಳ್ಳಬೇಕಿದೆ.