Hyundai Creta: ಪಂಚ್ ಅಲ್ಲ, ಸ್ವಿಫ್ಟ್ ಕೂಡ ಅಲ್ಲ: ಜುಲೈನಲ್ಲಿ ಭಾರತದಲ್ಲಿ ಮಾರಾಟವಾದ ನಂಬರ್ ಒನ್ ಕಾರು ಇದೇ ನೋಡಿ
ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ ಕಾಣುತ್ತಿದ್ದ ಟಾಟಾ ಪಂಚ್,ಸ್ವಿಫ್ಟ್ ಮತ್ತು ವ್ಯಾಗನಾರ್ಗೆ ದೊಡ್ಡ ಹೊಡೆತ ಬಿದ್ದಿದೆ.ಕಳೆದ ತಿಂಗಳು ದೇಶದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ ಕಾರುಗಳಲ್ಲಿ ಕ್ರೆಟಾ ನಂಬರ್-1 ಸ್ಥಾನದಲ್ಲಿದೆ. (ಬರಹ:ವಿನಯ್ ಭಟ್)
ಜುಲೈ 2024 ರಲ್ಲಿ ನಾಲ್ಕು ಚಕ್ರಗಳ ವಾಹನಗಳ ವಿಭಾಗದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ದೇಶದ ನಂಬರ್-1 ಕಾರಾಗಿದ್ದ ಟಾಟಾ ಪಂಚ್, ಮಾರುತಿ ಸ್ವಿಫ್ಟ್ ಮತ್ತು ಮಾರುತಿ ವ್ಯಾಗನಾರ್ ಕಳೆದ ತಿಂಗಳು ತಮ್ಮ ಸ್ಥಾನದಿಂದ ಕೆಳಗಿಳಿದಿವೆ. ಎಸ್‌ಯುವಿಗಳೊಂದಿಗೆ ಹ್ಯುಂಡೈ ಕ್ರೆಟಾ ಎಲ್ಲಾ ವಿಭಾಗಗಳಲ್ಲಿ ನಂಬರ್-1 ಕಾರಾಗಿ ಕಾಣಿಸಿಕೊಂಡಿದೆ. ಬಹಳ ಸಮಯದ ನಂತರ ಕ್ರೆಟಾ ಇಂತಹ ಸಾಧನೆ ಮಾಡಿದೆ. ಮಾರುಕಟ್ಟೆಯಲ್ಲಿ ಅಚ್ಚರಿಯ ವಿಚಾರ ಎಂದರೆ ಭರ್ಜರಿ ಸೇಲ್ ಕಾಣುತ್ತಿದ್ದ ಟಾಟಾ ಪಂಚ್, ಸ್ವಿಫ್ಟ್ ಮತ್ತು ವ್ಯಾಗನಾರ್ಗೆ ದೊಡ್ಡ ಹೊಡೆತ ಬಿದ್ದಿದೆ.
ಕಳೆದ ತಿಂಗಳು ದೇಶದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ ಕಾರುಗಳಲ್ಲಿ ಕ್ರೆಟಾ ನಂಬರ್-1 ಸ್ಥಾನದಲ್ಲಿದೆ. ಜುಲೈನಲ್ಲಿ ಒಟ್ಟು 17,350 ಯುನಿಟ್‌ಗಳು ಮಾರಾಟವಾಗಿವೆ. ಮಾರುತಿ ಸ್ವಿಫ್ಟ್‌ನ 16,854 ಯುನಿಟ್‌ಗಳು, ವ್ಯಾಗನ್‌ಆರ್‌ನ 16,191 ಯುನಿಟ್‌ಗಳು ಮತ್ತು 16,121 ಯುನಿಟ್ ಪಂಚ್‌ಗಳು ಸೇಲ್ ಕಂಡಿವೆ. ಹುಂಡೈ ಈ ವರ್ಷದ ಆರಂಭದಲ್ಲಿ ಹೊಸ ಕ್ರೆಟಾವನ್ನು ಬಿಡುಗಡೆ ಮಾಡಿತ್ತು. ಮೊದಲ 7 ತಿಂಗಳುಗಳು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕ್ರೆಟಾಗೆ ಭರ್ಜರಿ ಬೇಡಿಕೆ ಕಂಡುಬಂತು. ಇದೀಗ ಹ್ಯುಂಡೈ ಕ್ರೆಟಾ, ಜುಲೈ 2024 ರಲ್ಲಿ 17,350 ಯುನಿಟ್‌ಗಳ ಅತಿ ಹೆಚ್ಚು ಮಾಸಿಕ ದೇಶೀಯ ಮಾರಾಟವನ್ನು ಕಂಡಿದೆ.
ಹುಂಡೈ ಕ್ರೆಟಾ ಬೆಲೆ
ಮಾರ್ಚ್ 2024 ರಲ್ಲಿ ಕೂಡ ಕ್ರೆಟಾ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ಇತ್ತೀಚೆಗಷ್ಟೆ ಬೆಲೆಯನ್ನೂ ಹೆಚ್ಚಳ ಮಾಡಿತ್ತು. ಹ್ಯುಂಡೈ ಕ್ರೆಟಾದ ಮೂಲ ಮಾದರಿ E ಮತ್ತು ಎರಡು ಟರ್ಬೊ ಪೆಟ್ರೋಲ್ ರೂಪಾಂತರಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಈ ವೇರಿಯಂಟ್‌ಗಳು ಮೊದಲಿನ ದರದಲ್ಲೇ ಲಭ್ಯವಿರಲಿದೆ. ಮಧ್ಯಮ SUV ಯ ಆರಂಭಿಕ ಬೆಲೆ 11 ಲಕ್ಷ ರೂ. ಆಗಿದೆ. ಆದರೆ, 1.5 ಟರ್ಬೊ DCT SX(O) ಮತ್ತು 1.5 Turbo DCT SX(O) ಡ್ಯುಯಲ್ ಟೋನ್ ಮಾದರಿಯ ಬೆಲೆ ರೂ. 20 ಲಕ್ಷ ಮತ್ತು ರೂ 20.15 ಲಕ್ಷ (ಎಕ್ಸ್ ಶೋ ರೂಂ ಬೆಲೆ) ಆಗಿದೆ. ಇನ್ನುಳಿದ ಎಲ್ಲಾ ಪೆಟ್ರೋಲ್ ಮಾದರಿಗಳ ಬೆಲೆಯನ್ನು 3,500 ರೂ. ಗಳಷ್ಟು ಹೆಚ್ಚಿಸಲಾಗಿತ್ತು.
ಹ್ಯುಂಡೈ ಕ್ರೆಟಾದ ಡೀಸೆಲ್ ಮಾದರಿಗಳ ಬೆಲೆಯನ್ನು ಸಹ ಹೆಚ್ಚಿಸಲಾಗಿದೆ. ಡೀಸೆಲ್ ಶ್ರೇಣಿಯಲ್ಲಿ, ಉನ್ನತ ಮಾದರಿಗಳಾದ SX(O) 1.5 AT ಮತ್ತು SX(O) 1.5 AT ಡ್ಯುಯಲ್-ಟೋನ್ ಬೆಲೆಗಳು ಮಾತ್ರ ಹೆಚ್ಚಿಲ್ಲ. ಇವೆರಡರ ಬೆಲೆ ಮೊದಲಿನಂತೆಯೇ ಇದೆ, ಅಂದರೆ ರೂ. 20 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ಮತ್ತು ರೂ. 20.15 ಲಕ್ಷ (ಎಕ್ಸ್ ಶೋ ರೂಂ ದೆಹಲಿ). ಇನ್ನುಳಿದ ಎಲ್ಲಾ ಡೀಸೆಲ್ ಮಾದರಿಗಳ ಬೆಲೆ 10,500 ರೂ. ಹೆಚ್ಚಿಸಲಾಗಿದೆ.
ಕ್ರೆಟಾ ಮೂರು ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ - 1.5 ಲೀಟರ್ ನೈಸರ್ಗಿಕವಾಗಿ ಪೆಟ್ರೋಲ್, 1.5 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್. ನೈಸರ್ಗಿಕವಾಗಿ ಎಂಜಿನ್ 113bhp ಪವರ್ ಮತ್ತು 143.8Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಟರ್ಬೊ ಎಂಜಿನ್ 158bhp ಪವರ್ ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ 114bhp ಪವರ್ ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ನೈಸರ್ಗಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಅಟೊಮೆಟಿಕ್ ಆಯ್ಕೆಯು ಎಲ್ಲಾ ಮೂರು ಎಂಜಿನ್‌ಗಳಲ್ಲಿ ಲಭ್ಯವಿದೆ, 1.5 ಲೀಟರ್ ಪೆಟ್ರೋಲ್‌ನೊಂದಿಗೆ CVT, 7-ಸ್ಪೀಡ್ ಡ್ಯುಯಲ್-ಕ್ಲಚ್ ಜೊತೆಗೆ ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 6-ಸ್ಪೀಡ್ ಟಾರ್ಕ್ ಆಯ್ಕೆಯೊಂದಿಗೆ ನೀಡಲಾಗಿದೆ.
ವಿಭಾಗ