ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಗ್ರಾಹಕರಿಂದ ಪ್ರತಿತಿಂಗಳು 80 ಸಾವಿರ ದೂರು; ಕೆಲವೊಮ್ಮೆ ದಿನಕ್ಕೆ 6-7 ಸಾವಿರ ಕಂಪ್ಲೇಂಟ್‌, ಸರ್ವೀಸ್‌ ಗೋಳು-automobile news ola electric builds new service team every month 80 000 complaint grow customer dissatisfaction pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಗ್ರಾಹಕರಿಂದ ಪ್ರತಿತಿಂಗಳು 80 ಸಾವಿರ ದೂರು; ಕೆಲವೊಮ್ಮೆ ದಿನಕ್ಕೆ 6-7 ಸಾವಿರ ಕಂಪ್ಲೇಂಟ್‌, ಸರ್ವೀಸ್‌ ಗೋಳು

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಗ್ರಾಹಕರಿಂದ ಪ್ರತಿತಿಂಗಳು 80 ಸಾವಿರ ದೂರು; ಕೆಲವೊಮ್ಮೆ ದಿನಕ್ಕೆ 6-7 ಸಾವಿರ ಕಂಪ್ಲೇಂಟ್‌, ಸರ್ವೀಸ್‌ ಗೋಳು

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಸರ್ವೀಸ್‌ ಸಂಬಂಧಪಟ್ಟಂತೆ ಗ್ರಾಹಕರ ಅಸಂಖ್ಯಾತ ದೂರುಗಳನ್ನು ನಿಭಾಯಿಸುವುದೇ ಕಂಪನಿಗೆ ದೊಡ್ಡ ಸವಾಲಾಗಿದೆ. ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಗ್ರಾಹಕರಿಂದ ಪ್ರತಿತಿಂಗಳು ಕಂಪನಿಗೆ 80 ಸಾವಿರದಷ್ಟು ದೂರುಗಳು ಬರುತ್ತಿದ್ದು, ಇದನ್ನು ನಿರ್ವಹಿಸಲು ಕಂಪನಿಯು ಹೊಸ ಸರ್ವೀಸ್‌ ತಂಡ ರೂಪಿಸುತ್ತಿದೆ.

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಗ್ರಾಹಕರಿಂದ ಪ್ರತಿತಿಂಗಳು 80 ಸಾವಿರ ದೂರು ದಾಖಲಾಗುತ್ತಿದೆ. ಇದನ್ನು ನಿರ್ವಹಿಸಲು ಹೊಸ ಸರ್ವೀಸ್‌ ಟೀಮ್‌ ರಚಿಸುತ್ತಿದೆ.
ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಗ್ರಾಹಕರಿಂದ ಪ್ರತಿತಿಂಗಳು 80 ಸಾವಿರ ದೂರು ದಾಖಲಾಗುತ್ತಿದೆ. ಇದನ್ನು ನಿರ್ವಹಿಸಲು ಹೊಸ ಸರ್ವೀಸ್‌ ಟೀಮ್‌ ರಚಿಸುತ್ತಿದೆ.

ಬೆಂಗಳೂರು: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಗ್ರಾಹಕರಿಂದ ಪ್ರತಿತಿಂಗಳು ಕಂಪನಿಗೆ 80 ಸಾವಿರದಷ್ಟು ದೂರುಗಳು ಬರುತ್ತಿದ್ದು, ಇದನ್ನು ನಿರ್ವಹಿಸಲು ಕಂಪನಿಯು ಹೊಸ ಸರ್ವೀಸ್‌ ತಂಡ ರೂಪಿಸುತ್ತಿದೆ. ಇತ್ತೀಚೆಗೆ ಬೆಂಗಳೂರಿನ ಮಹಿಳೆಯೊಬ್ಬರು "ಕನ್ನಡಿಗರೇ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಬೇಡಿ. ಅದು ಡಬ್ಬಾ ಗಾಡಿ" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಕಲಬುರಗಿಯಲ್ಲಿ ಹತಾಶ ಗ್ರಾಹಕರೊಬ್ಬರು ಶೋರೂಂಗೆ ಬೆಂಕಿ ಹಚ್ಚಿದ್ದರು. ಓಲಾ ಕುರಿತು ಒಂದಿಬ್ಬರ ಅಸಹನೆ ಇದಲ್ಲ. ಓಲಾ ಕಂಪನಿಗೆ ಪ್ರತಿನಿತ್ಯ ಸಾವಿರಾರು ಗ್ರಾಹಕರು ದೂರು ಸಲ್ಲಿಸುತ್ತಿದ್ದಾರೆ. ಈ ರೀತಿ ಹೆಚ್ಚುತ್ತಿರುವ ಗ್ರಾಹಕರ ದೂರನ್ನು ಬಗೆಹರಿಸಲು ಓಲಾ ಎಲೆಕ್ಟ್ರಿಕ್‌ ಕಂಪನಿಯು ಹೊಸ ಸರ್ವೀಸ್‌ ತಂಡವನ್ನು ರಚಿಸುತ್ತಿದೆ. ಸರ್ವೀಸ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಗ್ರಾಹಕರ ದೂರುಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಿರುವುದರಿಂದ ಓಲಾ ಕಂಪನಿಯು ಹೊಸ ಸರ್ವೀಸ್‌ ಟೀಮ್‌ ರಚಿಸುತ್ತಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರಿ ಪತ್ರಿಕೆ ದಿ ಮಿಂಟ್‌ ವರದಿ ಮಾಡಿದೆ.

ದಿನಕ್ಕೆ 6-7 ಸಾವಿರ ಗ್ರಾಹಕರ ದೂರು

ಬೆಂಗಳೂರು ಮೂಲದ ಓಲಾ ಕಂಪನಿಯು ಪ್ರತಿತಿಂಗಳು ಸುಮಾರು 80 ಸಾವಿರ ದೂರುಗಳನ್ನು ಸ್ವೀಕರಿಸುತ್ತಿದೆಯಂತೆ. ಕಂಪನಿಯ ಸರ್ವೀಸ್‌ ಸೆಂಟರ್‌ಗಳಲ್ಲಿ ದೂರುಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಕೆಲವೊಂದು ದಿನ ದಿನಕ್ಕೆ 6-7 ಸಾವಿರ ದೂರುಗಳು ಬರುತ್ತವೆಯಂತೆ. ಇದರಿಂದ ಗ್ರಾಹಕರಿಗೆ ಕಾಯುವಿಕೆ ಹೆಚ್ಚಾಗುತ್ತಿದೆ. ಇದರಿಂದ ಸಿಬ್ಬಂದಿಗಳಿಗೆ ಒತ್ತಡ ಹೆಚ್ಚಾಗುತ್ತಿದೆ. ಗ್ರಾಹಕರ ಅತೃಪ್ತಿಯೂ ಹೆಚ್ಚುತ್ತಿದೆ.

ಇದೀಗ ಕಂಪನಿಯು ಎಸ್‌1 ಸೀರಿಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ನ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ನೀಡಲು ಹೊಸ ತಂಡವನ್ನು ರಚಿಸುತ್ತಿದೆ. ಪ್ರಾಡಕ್ಟ್‌ ಆಂಡ್‌ ಆಪರೇಷನ್‌ನಿಂದ ವಿವಿಧ ಉದ್ಯೋಗಿಗಳನ್ನು ಸರ್ವೀಸ್‌ ಟೀಮ್‌ಗೆ ಸೇರಿಸಿಕೊಂಡು ಗ್ರಾಹಕರ ಕುಂದುಕೊರತೆಗಳನ್ನು ಬಗೆಹರಿಸಲು ಮುಂದಾಗಿದೆ ಎಂದು ಮಿಂಟ್‌ ವರದಿ ಮಾಡಿದೆ.

ಮಾರಾಟದ ಮೇಲೆ ಹೊಡೆತ

ಹಳೆ ಗ್ರಾಹಕರ ಸ್ಕೂಟರ್‌ಗೆ ಸರ್ವೀಸ್‌ ವಿಳಂಬವಾಗುತ್ತಿರುವುದರಿಂದ ಮಾರಾಟವೂ ಕಡಿಮೆಯಾಗಿದೆ. ಈ ವರ್ಷದ ಅತ್ಯಂತ ಕೆಟ್ಟ ಮಾರಾಟಕ್ಕೆ ಓಲಾ ಕಳೆದ ಅಗಸ್ಟ್‌ ತಿಂಗಳಲ್ಲಿ ಸಾಕ್ಷಿಯಾಗಿದೆ. ಕಳೆದ ತಿಂಗಳು ಕಂಪನಿಯು ಕೇವಲ 27,506 ಯೂನಿಟ್‌ ಓಲಾ ಸ್ಕೂಟರ್‌ ಮಾರಾಟ ಮಾಡಿತ್ತು. ಜುಲೈ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 34ರಷ್ಟು ಕುಸಿತವಾಗಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಪಾಲು ಶೇಕಡ 39ರಿಂದ ಶೇಕಡ 31ಕ್ಕೆ ಇಳಿಕೆ ಕಂಡಿದೆ. ಇದೇ ಸಮಯದಲ್ಲಿ ಓಲಾದ ಪ್ರತಿಸ್ಪರ್ಧಿ ಕಂಪನಿಗಳಾದ ಬಜಾಜ್‌ ಆಟೋ ಲಿಮಿಟೆಡ್‌ ಮತ್ತು ಟಿವಿಎಸ್‌ ಮೋಟಾರ್‌ ಕಂಪನಿಗಳ ಎಲೆಕ್ಟ್ರಿಕ್‌ ಸ್ಕೂಟರ್‌ ಮಾರಾಟ ಸ್ಥಿರವಾಗಿದೆ.

ಓಲಾ ಎಲೆಕ್ಟ್ರಿಕ್‌ ಕಂಪನಿಯು ತನ್ನ ಸ್ಕೂಟರ್‌ ಮಾರಾಟ ಆರಂಭಿಸಿದ ಬಳಿಕ ಇಲ್ಲಿಯವರೆಗೆ 6,80,000 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಭಾರತದಲ್ಲಿ 430 ಸರ್ವೀಸ್‌ ಸೆಂಟರ್‌ಗಳನ್ನು ಹೊಂದಿದೆ. ಓಲಾ ಕೇರ್‌ ಪ್ಲಸ್‌ಗೆ ಚಂದಾದಾರಿಕೆ ಪಡೆದಿದ್ದರೂ ಸರ್ವೀಸ್‌ ಅಪಾಯಿಂಟ್‌ಮೆಂಟ್‌ ಪಡೆಯುವುದು ಕಷ್ಟವಾಗುತ್ತಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ. ಕೆಲವು ಗ್ರಾಹಕರು ಕಂಪನಿಯ ಸರ್ವೀಸ್‌ ವಿಳಂಬದಿಂದ ಬೇಸೆತ್ತಿದ್ದಾರೆ. ಓಲಾ ಸ್ಕೂಟರ್‌ ಸರ್ವೀಸ್‌ಗೆ ನೀಡಿದರೆ ರಿಪೇರಿಯಾಆಗಲು 30ರಿಂದ 45 ದಿನಗಳು ಬೇಕಾಗುತ್ತಿದೆ ಎಂದೆಲ್ಲ ಕಂಪ್ಲೆಂಟ್‌ ಮಾಡುತ್ತಿದ್ದಾರೆ.

mysore-dasara_Entry_Point