Tata Nexon CNG: ಟಾಟಾ ಕಾರು ಖರೀದಿಸುವ ಪ್ಲಾನ್ ಇದೆಯೇ: ಸ್ವಲ್ಪ ದಿನ ಕಾಯಿರಿ, ಬರುತ್ತಿದೆ ನೆಕ್ಸಾನ್ ಹೊಸ ರೂಪಾಂತರ
ಬಹಳ ಸಮಯದಿಂದ ಕಾದು ಕುಳಿತಿದ್ದ ಟಾಟಾ ಪ್ರಿಯರಿಗೆ ದೊಡ್ಡ ಸುದ್ದಿ ಸಿಕ್ಕಿದೆ. ಟಾಟಾ ಮೋಟಾರ್ಸ್ ಈ ವರ್ಷದ ಹಬ್ಬದ ಋತುವಿನಲ್ಲಿ ನೆಕ್ಸಾನ್ ಸಿಎನ್‌ಜಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಿದೆ.(ಬರಹ: ವಿನಯ್ ಭಟ್)
ಟಾಟಾ ಕಂಪನಿಯ ಕಾರುಗಳಿಗೆ ದೇಶದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಸೇಫ್ಟಿ ವಿಚಾರದಲ್ಲಿ ನಂಬರ್ ಒನ್ ಕಾರಾಗಿರುವ ಟಾಟಾ ಇದೀಗ ತನ್ನ ನೆಕ್ಸಾನ್ ಅನ್ನು ಸಿಎನ್‌ಜಿ ರೂಪಾಂತರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೂಲಕ ಬಹಳ ಸಮಯದಿಂದ ಕಾದು ಕುಳಿತಿದ್ದ ಟಾಟಾ ಪ್ರಿಯರಿಗೆ ದೊಡ್ಡ ಸುದ್ದಿ ಸಿಕ್ಕಿದೆ. ಟಾಟಾ ಮೋಟಾರ್ಸ್ ಈ ವರ್ಷದ ಹಬ್ಬದ ಋತುವಿನಲ್ಲಿ ನೆಕ್ಸಾನ್ ಸಿಎನ್‌ಜಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಿದೆ.
ಪ್ರಸ್ತುತ, ಮಾರುತಿ ಸುಜುಕಿ ಬ್ರೆಝಾ ಸಬ್-4 ಮೀಟರ್ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಪೈಪೋಟಿ ನೀಡುತ್ತಿದೆ. ಆದರೀಗ ಟಾಟಾ ಕಂಪನಿಯು ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಿಎನ್‌ಜಿ ಎಸ್‌ಯುವಿ ವಿಭಾಗದಲ್ಲಿ ತೋರಲು ತಯಾರಾಗಿದೆ. ಆಟೋಕಾರ್ ಇಂಡಿಯಾದ ವರದಿಯಲ್ಲಿ ನೆಕ್ಸಾನ್‌ನ ಸಿಎನ್‌ಜಿ ಅವತಾರ್‌ನಲ್ಲಿ ಮ್ಯಾನುವಲ್ ಮತ್ತು ಅಟೊಮೆಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಇರಲಿವೆ ಎಂಬ ಮಾಹಿತಿ ಕೂಡ ನೀಡಲಾಗಿದೆ.
ನೆಕ್ಸಾನ್ ಸಿಎನ್‌ಜಿ ವಿಶೇಷತೆ
ಪ್ರಸ್ತುತ, ಟಾಟಾ ಮೋಟಾರ್ಸ್ ತನ್ನ ಎಸ್‌ಯುವಿ ಕೂಪೆ ಕರ್ವ್‌ನ ಡೀಸೆಲ್-ಪೆಟ್ರೋಲ್ ರೂಪಾಂತರಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಟಾಟಾ ಕರ್ವ್‌ನ ಪೆಟ್ರೋಲ್-ಡೀಸೆಲ್ ಮಾದರಿಯ ಬೆಲೆ ಸೆಪ್ಟೆಂಬರ್ 2 ರಂದು ಬಹಿರಂಗಗೊಳ್ಳಲಿದೆ. ಇದಾದ ಬಳಿಕ ನೆಕ್ಸಾನ್ ಸಿಎನ್‌ಜಿ ಅನಾವರಣಗೊಳ್ಳಲಿದೆ. ಈ ಸಿಎನ್‌ಜಿ ಎಸ್‌ಯುವಿಯನ್ನು ಈ ವರ್ಷ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು.
ಪಂಚ್ ಸಿಎನ್‌ಜಿಯಂತೆ ಡ್ಯುಯಲ್ ಸಿಎನ್‌ಜಿ ಸಿಲಿಂಡರ್‌ಗಳು ಇದರಲ್ಲಿ ಕಂಡುಬರುತ್ತವೆ, ಇದರಿಂದಾಗಿ ಗ್ರಾಹಕರಿಗೆ ಯಾವುದೇ ಬೂಟ್ ಸ್ಪೇಸ್ ಸಮಸ್ಯೆಯಾಗುವುದಿಲ್ಲ ಎಂದು ಕಂಪನಿ ಹೇಳಿದೆ. ನೆಕ್ಸಾನ್ ಸಿಎನ್‌ಜಿಯ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ರೂಪಾಂತರವನ್ನು ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಆದರೆ ಈಗ ಇದು ಎಎಮ್‌ಟಿ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ಪಡೆಯಲಿದೆ ಎಂಬ ಸುದ್ದಿ ಬಂದಿರುವುದು ಖುಷಿ ವಿಚಾರ.
ಟಾಟಾ ನೆಕ್ಸಾನ್ ಸಿಎನ್‌ಜಿಯನ್ನು 1.2 ಲೀಟರ್ ಟರ್ಬೋಚಾರ್ಜ್ಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವುದು ಮತ್ತು ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿರುವ ದೇಶದ ಮೊದಲ ಸಿಎನ್‌ಜಿ ಎಸ್‌ಯುವಿಯಾಗಿದೆ. ಟಾಟಾ ಮೋಟಾರ್ಸ್ ತನ್ನ ಸಿಎನ್‌ಜಿ ಕಾರುಗಳಲ್ಲಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಆದ್ದರಿಂದ ನೆಕ್ಸಾನ್ ಸಿಎನ್‌ಜಿ ಖಂಡಿತವಾಗಿಯೂ ಅತ್ಯಂತ ಸುರಕ್ಷಿತ ಕಾರಾಗಿರುತ್ತದೆ.
ಟಾಟಾ ನೆಕ್ಸಾನ್ ಸಿಎನ್‌ಜಿಯಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮೆರಾ, ಮಲ್ಟಿಪಲ್ ಏರ್‌ಬ್ಯಾಗ್‌ಗಳು ಮತ್ತು 5 ಸ್ಟಾರ್ ಸುರಕ್ಷತಾ ವೈಶಿಷ್ಟ್ಯಗಳನ್ನು ಇದರಲ್ಲಿ ಕಾಣಬಹುದು. ಇದರ ಬೆಲೆ ಎಷ್ಟೆಂದು ಇನ್ನಷ್ಟೆ ಬಹಿರಂಗವಾಗಬೇಕಿದೆ.
ವಿಭಾಗ