TVS Jupiter 110 launch: ಸ್ಕೂಟಿ ಪ್ರಿಯರು ಫುಲ್ ಫಿದಾ: ಕಡಿಮೆ ಬೆಲೆಗೆ ಬಿಡುಗಡೆ ಆಯಿತು ಹೊಸ ಟಿವಿಎಸ್ ಜುಪಿಟರ್-automobile news tvs jupiter 110 launch tvs jupiter 110 milage cc scooter tvs motor new launch 2024 vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tvs Jupiter 110 Launch: ಸ್ಕೂಟಿ ಪ್ರಿಯರು ಫುಲ್ ಫಿದಾ: ಕಡಿಮೆ ಬೆಲೆಗೆ ಬಿಡುಗಡೆ ಆಯಿತು ಹೊಸ ಟಿವಿಎಸ್ ಜುಪಿಟರ್

TVS Jupiter 110 launch: ಸ್ಕೂಟಿ ಪ್ರಿಯರು ಫುಲ್ ಫಿದಾ: ಕಡಿಮೆ ಬೆಲೆಗೆ ಬಿಡುಗಡೆ ಆಯಿತು ಹೊಸ ಟಿವಿಎಸ್ ಜುಪಿಟರ್

ಆಲ್ ನ್ಯೂ ಟಿವಿಎಸ್ ಜುಪಿಟರ್ 110 ಇದೀಗ ದೇಶದಲ್ಲಿ ಅನಾವರಣಗೊಂಡಿದೆ. ಇದು ಉತ್ತಮ ನೋಟಮತ್ತು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.ಏಳುಬಣ್ಣ ಆಯ್ಕೆಗಳಿಂದ ಕೂಡಿರುವ ಈ ಸ್ಕೂಟಿಯ ಎಕ್ಸ್ ಶೋರೂಂ ಬೆಲೆ ಕೇವಲ 73,700 ರೂ. (ಬರಹ: ವಿನಯ್ ಭಟ್)

ಆಲ್ ನ್ಯೂ ಟಿವಿಎಸ್ ಜುಪಿಟರ್ 110 ಇದೀಗ ಭಾರತದಲ್ಲಿ ಅನಾವರಣಗೊಂಡಿದೆ.
ಆಲ್ ನ್ಯೂ ಟಿವಿಎಸ್ ಜುಪಿಟರ್ 110 ಇದೀಗ ಭಾರತದಲ್ಲಿ ಅನಾವರಣಗೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾಕ್ಕೆ ಪೈಪೋಟಿ ನೀಡಲು ಟಿವಿಎಸ್ ಮೋಟಾರ್ ಕಂಪನಿಯು ತನ್ನ ಟಾಪ್ ಸೆಲ್ಲಿಂಗ್ ಸ್ಕೂಟರ್ ಜುಪಿಟರ್​ನ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ. ಆಲ್ ನ್ಯೂ ಟಿವಿಎಸ್ ಜುಪಿಟರ್ 110 ಇದೀಗ ಭಾರತದಲ್ಲಿ ಅನಾವರಣಗೊಂಡಿದೆ. ಇದು ಉತ್ತಮ ನೋಟ ಮತ್ತು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. 7 ಬಣ್ಣ ಆಯ್ಕೆಗಳಿಂದ ಕೂಡಿರುವ ಈ ಸ್ಕೂಟಿಯ ಎಕ್ಸ್ ಶೋರೂಂ ಬೆಲೆ ಕೇವಲ 73,700 ರೂ.

2024 ಟಿವಿಎಸ್ ಜುಪಿಟರ್ 110 ನ ವಿಶೇಷ ವೈಶಿಷ್ಟ್ಯಗಳು

ಮೊಟ್ಟ ಮೊದಲ ಮೆಟಲ್ ಮ್ಯಾಕ್ಸ್ ಬಾಡಿ

ಇನ್ಫಿನಿಟಿ ಲ್ಯಾಂಪ್‌

ಫಾಲೋ ಮಿ ಹೆಡ್‌ಲ್ಯಾಂಪ್

ಆರಾಮದಾಯಕ ಆಸನ

110 ಸಿಸಿ ಹೊಸ ಎಂಜಿನ್

ಹೆಚ್ಚಿನ ಮೈಲೇಜ್‌ಗಾಗಿ ಆಟೋ ಸ್ಟಾರ್ಟ್ ಸ್ಟಾಪ್ ತಂತ್ರಜ್ಞಾನ

ನವೀನ ತಂತ್ರಜ್ಞಾನದ TVS Eyego ಅಸಿಸ್ಟ್

ಮುಂಭಾಗದಲ್ಲಿ ಇಂಧನ ತುಂಬುವಿಕೆ

ತರ ಸ್ಕೂಟರ್‌ಗಳಿಗಿಂತ ಹೆಚ್ಚು ಲೆಗ್ ಸ್ಪೇಸ್

ಡಬಲ್ ಹೆಲ್ಮೆಟ್ ಜಾಗ

ಸಿಗ್ನಸ್ ಲ್ಯಾಂಪ್ ರೀಸೆಟ್ ಮಾಡಬಹುದು

ಸಂಪೂರ್ಣ ಡಿಜಿಟಲ್ ಬ್ಲೂಟೂತ್ ಸಕ್ರಿಯಗೊಳಿಸಿದ ಕ್ಲಸ್ಟರ್

ಟಿವಿಎಸ್ ಸ್ಮಾರ್ಟ್ ಕನೆಕ್ಟ್ ಬೆಂಬಲ

ಸರ್ಚ್ ಮೈ ವೈಕಲ್ ಆಯ್ಕೆ

ಇದರಲ್ಲಿರುವ ಇನ್ಫಿನಿಟಿ ಲೈಟಿಂಗ್ ಬಾರ್ ಹೊಸ ಟಿವಿಎಸ್ ಜುಪಿಟರ್‌ನ ನೋಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದಲ್ಲದೆ, ಆರಾಮದಾಯಕ ಸೀಟುಗಳು ಮತ್ತು ಹೊಸ ತಂತ್ರಜ್ಞಾನವು ಜನರಿಗೆ ಸವಾರಿ ಮಾಡುವಾಗ ಹೆಚ್ಚು ಆರಾಮವಾಗಲಿದೆ. ಈ ಸ್ಕೂಟರ್ 113.3 cc ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದೆ, ಇದು 6500 rpm ನಲ್ಲಿ 5.9 kW ಗರಿಷ್ಠ ಶಕ್ತಿಯನ್ನು ಮತ್ತು 5,000 rpm ನಲ್ಲಿ 9.8 ನ್ಯೂಟನ್ ಮೀಟರ್‌ಗಳ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ ಇದರಲ್ಲಿರುವ ಜುಪಿಟರ್‌ನ iGO ಅಸಿಸ್ಟ್ ವೈಶಿಷ್ಟ್ಯವು ಶೇಕಡಾ 10 ರಷ್ಟು ಹೆಚ್ಚಿನ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಟಿವಿಎಸ್ ಜುಪಿಟರ್ ಅನ್ನು ಮೊದಲ ಬಾರಿಗೆ 11 ವರ್ಷಗಳ ಹಿಂದೆ 2013 ರಲ್ಲಿ ಬಿಡುಗಡೆ ಮಾಡಲಾಯಿತು. ಮುಂಬರುವ ವರ್ಷಗಳಲ್ಲಿ ಟಿವಿಎಸ್ ಜೂಪಿಟರ್ ಮಾರಾಟ ಪಟ್ಟಿಯಲ್ಲಿ ವಿಶೇಷ ಸ್ಥಾನವನ್ನು ಗಳಿಸಿತು. ಇದರ ನಂತರ, ಟಿವಿಎಸ್ ಜುಪಿಟರ್ 125 ಅನ್ನು 2021 ರಲ್ಲಿ ಬಿಡುಗಡೆ ಮಾಡಿತು. ಇದು ಹೆಚ್ಚಿನ ಶಕ್ತಿ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. 50 ಲಕ್ಷಕ್ಕೂ ಹೆಚ್ಚು ಟಿವಿಎಸ್ ಜೂಪಿಟರ್‌ಗಳು ಪ್ರಸ್ತುತ ಭಾರತೀಯ ರಸ್ತೆಗಳಲ್ಲಿ ಓಡಾಡುತ್ತಿವೆ.