TVS Apache RR 310: ಅಪಾಚೆ ಬೈಕ್ ಪ್ರೇಮಿಗಳಿಗೆ ರೋಮಾಂಚನ, ಮುಂಬರುವ ಟಿವಿಎಸ್ ಅಪಾಚೆ ಆರ್‌ಆರ್ 310 ಸ್ಪೈ ಫೋಟೋಗಳು ವೈರಲ್
TVS Apache RR 310: ಟಿವಿಎಸ್ ಕಂಪನಿಯು ಬಿಎಂಡಬ್ಲ್ಯು ಮೋಟೊರಾಡ್ ಜತೆ ಜಂಟಿ ಉದ್ಯಮ ಸ್ಥಾಪಿಸಿ ಹೊರತರುತ್ತಿರುವ ಮೊದಲ ಬೈಕ್‌ನ ಹೆಸರು ಟಿವಿಎಸ್ ಅಪಾಚೆ ಆರ್‌ಆರ್ 310. ಕಳೆದ ವರ್ಷ ಅಪಾಚೆ ಆರ್‌ಟಿಆರ್ 310ಗೆ ಶಕ್ತಿಶಾಲಿ ಎಂಜಿನ್ ದೊರಕಿತ್ತು. ಆದರೆ, ಅಪಾಚೆ ಆರ್‌ಆರ್ 310 ಕುರಿತು ಯಾವುದೇ ಅಪ್‌ಡೇಟ್ ದೊರಕಿರಲಿಲ್ಲ. ಇದೀಗ ಇದರ ಸ್ಪೈ ಶಾಟ್ಸ್ ಲಭ್ಯವಾಗಿವೆ.
TVS Apache RR 310: ಟಿವಿಎಸ್ ಮೋಟಾರ್ ಕಂಪನಿಯು ಭಾರತದ ಪ್ರಮುಖ ದ್ವಿಚಕ್ರವಾಹನ ತಯಾರಕಾ ಕಂಪನಿಯಾಗಿದೆ. ಈ ಕಂಪನಿಯ ಅಪಾಚೆ ಬೈಕ್‌ಗಳು ಸಾಕಷ್ಟು ಜನಪ್ರಿಯತೆ ಪಡೆದಿವೆ. ಇದೀಗ ಅಪಾಚೆ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್‌ನ ಕುರಿತು ಅಪ್‌ಡೇಟ್ ದೊರಕಿದೆ. ಈ ಬೈಕನ್ನು ರಸ್ತೆಯಲ್ಲಿ ಟೆಸ್ಟ್ ಮಾಡಲಾಗುತ್ತಿದೆ. ಈ ಬೈಕ್‌ನ ಬಿಡುಗಡೆ ಸನ್ನಿಹಿತವಾಗಿರುವುದರ ಸೂಚನೆ ಇದಾಗಿದೆ. ಟಿವಿಎಸ್ ಕಂಪನಿಯು ಬಿಎಂಡಬ್ಲ್ಯು ಮೋಟೊರಾಡ್ ಜತೆ ಜಂಟಿ ಉದ್ಯಮ ಸ್ಥಾಪಿಸಿ ಹೊರತರುತ್ತಿರುವ ಮೊದಲ ಬೈಕ್‌ನ ಹೆಸರು ಟಿವಿಎಸ್ ಅಪಾಚೆ ಆರ್‌ಆರ್ 310. ಕಳೆದ ವರ್ಷ ಅಪಾಚೆ ಆರ್‌ಟಿಆರ್ 310ಗೆ ಶಕ್ತಿಶಾಲಿ ಎಂಜಿನ್ ದೊರಕಿತ್ತು. ಆದರೆ, ಅಪಾಚೆ ಆರ್‌ಆರ್ 310 ಕುರಿತು ಯಾವುದೇ ಅಪ್‌ಡೇಟ್ ದೊರಕಿರಲಿಲ್ಲ. ಇದೀಗ ಅಪಾಚೆ ಆರ್‌ಆರ್ 310 ಸ್ಪೈ ಶಾಟ್‌ಗಳು ಲಭ್ಯವಾಗಿವೆ.
ಪರಿಷ್ಕೃತ ಟಿವಿಎಸ್ ಅಪಾಚೆ ಆರ್‌ಆರ್ 310
ಸದ್ಯ ಲಭ್ಯವಾಗಿರುವ ಸ್ಪೈ ಶಾಟ್‌ಗಳನ್ನು ಗಮನಿಸಿದರೆ ಟಿವಿಎಸ್ ಅಪಾಚೆ ಆರ್‌ಆರ್ 310 ಸಾಕಷ್ಟು ಬದಲಾವಣೆಗಳನ್ನು ಗುರುಸಿಬಹುದು. ಮೊದಲ ನೋಟಕ್ಕೆ ಈಗ ಮಾರುಕಟ್ಟೆಯಲ್ಲಿರುವ ಅಪಾಚೆ ಆರ್‌ಟಿಆರ್ 310ನಂತೆಯೇ ಕಾಣಿಸುತ್ತದೆ. ಆದರೆ, ವಿಂಗ್‌ಲೆಟ್ಸ್ ಸೇರ್ಪಡೆ ಕಾಣಿಸುತ್ತದೆ.
ಆರೋ ಎಲಿಮೆಂಟ್‌ಗಳು (aero elements) ಬೈಕ್‌ನ ಆಕರ್ಷಣೆ ಹೆಚ್ಚಿಸಿದೆ. ಇದರಿಂದಾಗಿ ಬೈಕ್ ಹೆಚ್ಚು ದೊಡ್ಡದಾಗಿ ಕಾಣಿಸುತ್ತದೆ. ಹೆಚ್ಚು ಶಕ್ತಿಶಾಲಿ ಬೈಕ್‌ನಂತೆ ಕಾಣಿಸುತ್ತದೆ. ಇದೇ ಸಮಯದಲ್ಲಿ ಬೈಕ್ ರಸ್ತೆಯಲ್ಲಿ ಹೆಚ್ಚು ಸ್ಥಿರತೆ ನೀಡಲೂ ಇದು ಕಾರಣವಾಗುತ್ತದೆ. ಭಾರತದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ 310 ಸಿಸಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಫೀಚರ್ ಪರಿಚಯಿಸಲಾಗುತ್ತದೆ.
ಅಪಾಚೆ ಆರ್‌ಆರ್ 310: ಫೀಚರ್ ಮತ್ತು ಪರ್ಫಾಮೆನ್ಸ್
ಪರಿಷ್ಕೃತ ಟಿವಿಎಸ್ ಅಪಾಚೆ ಆರ್‌ಆರ್ 310ನಲ್ಲಿ ಆರ್‌ಟಿಆರ್ 310ನಲ್ಲಿರುವ ಎಂಜಿನ್ ಮುಂದುವರೆಯುವ ನಿರೀಕ್ಷೆಯಿದೆ. ಅಂದರೆ, 35.08 ಬಿಎಚ್‌ಪಿ ಪವರ್ ಮತ್ತು 28.7 ಎನ್‌ಎಂ ಟಾರ್ಕ್ ಬಿಡುಗಡೆ ಮಾಡುವ ಎಂಜಿನ್ ಇರಲಿದೆ. ಆದರೆ, ಎಲೆಕ್ಟ್ರಾನಿಕ್ಸ್ ಅಂಶಗಳು ಸಾಕಷ್ಟು ಬದಲಾವಣೆಯಾಗಲಿದೆ. ಸ್ಲಿಪ್ಪರ್ ಕ್ಲಚ್, ರೈಡ್ ಬೈ ವೈರ್ ಥ್ರೋಟಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಬೈ ಡೈರೆಕ್ಷನಲ್ ಕ್ವಿಕ್ ಶಿಫ್ಟರ್, ಹೀಟೆಡ್ ಮತ್ತು ಕೂಲ್ಡ್ ಸೀಟುಗಳು ಇತ್ಯಾದಿ ಹೊಸ ಎಲೆಕ್ಟ್ರಾನಿಕ್ಸ್ ಫೀಚರ್‌ಗಳನ್ನು ಅಳವಡಿಸಿರುವ ನಿರೀಕ್ಷೆಯಿದೆ.
ಪರಿಷ್ಕೃತ ಟಿವಿಎಸ್ ಅಪಾಚೆ ಆರ್‌ಆರ್ 310ನಲ್ಲಿ ನಿರೀಕ್ಷೆ ಮಾಡಬಹುದಾದ ಪ್ರಮುಖ ಅಪ್‌ಡೇಟ್ ಎಂದರೆ 6 ಆಕ್ಸಿಸ್ ಐಎಂಯು. ಈ ಪ್ಯಾಕೇಜ್‌ನಿಂದಾಗಿ ಅಡ್ವಾನ್ಸಡ್ ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ವೀಲಿ ಮಿಟಿಗೇಷನ್, ಕಾರ್ನರಿಂಗ್ ಟ್ರಾಕ್ಷನ್ ಕಂಟ್ರೋಲ್, ರಿಯರ್ ಲಿಫ್ಟ್ ಆಫ್ ತಪ್ಪಿಸುವಿಕೆ, ಸ್ಲೋಪ್ ರೆಸ್ಪಾನ್ಸಿವ್ ಕಂಟ್ರೋಲ್, ಕಾರ್ನರಿಂಗ್ ಕ್ರೂಸ್ ಕಂಟ್ರೋಲ್ ಮುಂತಾದ ಫೀಚರ್‌ಗಳು ದೊರಕಲಿವೆ. ಒಟ್ಟಾರೆ ಬೈಕ್ ಚಾಲನೆ ಸಂದರ್ಭದಲ್ಲಿ ಚಕ್ರವು ರಸ್ತೆಯಲ್ಲಿ ಹಿಡಿದಿಟ್ಟುಕೊಳ್ಳುವಂತೆ, ತಿರುವುಗಳಲ್ಲಿ ಆರಾಮವಾಗಿ ಚಾಲನೆ ಮಾಡುವಂತೆ ಈ ಫೀಚರ್‌ಗಳು ನೆರವಾಗಲಿದೆ.
ಪರಿಷ್ಕೃತ ಟಿವಿಎಸ್ ಅಪಾಚೆ ಆರ್‌ಆರ್ 310 ಬಿಡುಗಡೆ ದಿನಾಂಕ
ಸದ್ಯಕ್ಕೆ ಪರಿಷ್ಕೃತ ಟಿವಿಎಸ್ ಅಪಾಚೆ ಆರ್‌ಆರ್ 310 ಯಾವಾಗ ಬಿಡುಗಡೆಯಾಗಲಿದೆ ಎಂಬ ವಿವರ ದೊರಕಿಲ್ಲ. ಆದರೆ, ಈ ಬೈಕಿನ ಟೆಸ್ಟಿಂಗ್ ಆರಂಭವಾಗಿರುವುದರಿಂದ ಮುಂದಿನ ಕೆಲವು ತಿಂಗಳಲ್ಲಿ ಲಾಂಚ್ ಮಾಡುವ ಸೂಚನೆ ಇದೆ.