ಕನ್ನಡ ಸುದ್ದಿ  /  ಜೀವನಶೈಲಿ  /  Jeep New Ev: ಜೀಪ್ ಕಂಪನಿಯಿಂದ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗೆ ಸಿದ್ಧತೆ; ಭಾರತಕ್ಕೂ ಎಂಟ್ರಿ ಕೊಡುತ್ತಾ?

Jeep New EV: ಜೀಪ್ ಕಂಪನಿಯಿಂದ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗೆ ಸಿದ್ಧತೆ; ಭಾರತಕ್ಕೂ ಎಂಟ್ರಿ ಕೊಡುತ್ತಾ?

Jeep New EV: ಜೀಪ್ ಕಂಪನಿಯಿಂದ ಹೊಸ ಇವಿ ಸಿದ್ಧವಾಗುತ್ತಿದೆ. ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಜೀಪ್ ಎಸ್‌ಯುವಿ ಎಲೆಕ್ಟ್ರಿಕ್ ಕಾರು ಭಾರತಕ್ಕೂ ಎಂಟ್ರಿ ಕೊಡುತ್ತಾ ಅನ್ನೋದನ್ನು ಇಲ್ಲಿ ತಿಳಿಯೋಣ.

ಜೀಪ್ ಕಂಪನಿಯಿಂದ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗೆ ಸಿದ್ಧತೆ; ಭಾರತಕ್ಕೂ ಎಂಟ್ರಿ ಕೊಡುತ್ತಾ?
ಜೀಪ್ ಕಂಪನಿಯಿಂದ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗೆ ಸಿದ್ಧತೆ; ಭಾರತಕ್ಕೂ ಎಂಟ್ರಿ ಕೊಡುತ್ತಾ?

ಬೆಂಗಳೂರು: ಅಂತಾರಾಷ್ಟ್ರೀಯ ಕಾರು ತಯಾರಕ ಸಂಸ್ಥೆ ಜೀಪ್ ಹೊಸ ಎಲೆಕ್ಟ್ರಿಕ್ ವಾಹನವನ್ನು ಸಿದ್ಧಪಡಿಸುತ್ತಿದೆ. ಈ ಕೈಗೆಟಕುವ ಬೆಲೆಯ ಎಸ್‌ಯುವಿ ಕೆಲವೇ ತಿಂಗಳುಗಳಲ್ಲಿ ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನಲೆಯಲ್ಲಿ ಹೊಸ ಜೀಪ್ ಎಲೆಕ್ಟ್ರಿಕ್ ಎಸ್‌ಯುವಿ (Jeep New EV 2024) ಕಾರಿನ ವೈಶಿಷ್ಟ್ಯಗಳನ್ನು ಇಲ್ಲಿ ತಿಳಿಯೋಣ

ಟ್ರೆಂಡಿಂಗ್​ ಸುದ್ದಿ

ಜೀಪ್ ಅವೆಂಜರ್ ಇವಿ ಈಗಾಗಲೇ ಯುರೋಪಿಯನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಬೆಲೆ 35 ಸಾವಿರ ಯುರೋಗಳು. ಅಂದರೆ ಸುಮಾರು 31.50 ಲಕ್ಷ ರೂಪಾಯಿ. ಈ ಎಲೆಕ್ಟ್ರಿಕ್ ವೆಹಿಕಲ್ ಈ ವಾರವೇ ಅಮೆರಿಕದಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಈ ಪ್ರೀಮಿಯಂ ಇವಿ ಬಜೆಟ್ ಸ್ವಲ್ಪ ಜಾಸ್ತಿಯೇ ಇದೆ. ಅದಕ್ಕಾಗಿಯೇ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ತರಲು ಜೀಪ್ ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಿದೆ.

ಬಿಡುಗಡೆ ಮಾಡಲಿರುವ ಹೊಸ ಎಲೆಕ್ಟ್ರಿಕ್ ಕಾರಿಗೆ (Jeep SUV EV Price) ಇನ್ನೂ ಹೆಸರು ಇಟ್ಟಿಲ್ಲ. ಆದರೆ ಇದರ ಬೆಲೆ 25 ಸಾವಿರ ಡಾಲರ್, ಅಂದರೆ 20 ಲಕ್ಷ ರೂಪಾಯಿಗಿಂತ ಕಡಿಮೆ ಇರಲಿದೆ ಎಂದು ವರದಿಯಾಗಿದೆ. ಸ್ಟಾಲೆಂಟಿಸ್ ಸಿಇಒ ಕಾರ್ಲೋಸ್ ತವರೆಸ್ ಕೂಡ ಇದನ್ನು ಖಚಿತಪಡಿಸಿದ್ದಾರೆ. ಸ್ಟಾಲಾಂಟಿಸ್ ಜೀಪ್, ಸಿಟ್ರೊಯೆನ್, ಫಿಯೆಟ್ ಮತ್ತು ಇತರ ಬ್ರಾಂಡ್‌ಗಳ ಮಾಲೀಕರಾಗಿದ್ದಾರೆ.

"ಮೊಮು 20,000 ಯೂರೋ ಸಿಟ್ರೊಯೆನ್ ಇ-ಸಿ3 ತಂದಂತೆ, ನಾವು ಶೀಘ್ರದಲ್ಲೇ 25,000 ಡಾಲರ್ ಜೀಪ್ ತರುತ್ತೇವೆ. ಕೈಗೆಟುಕುವ ಎಲೆಕ್ಟ್ರಿಕ್ ವಾಹನದ ಬೆಲೆ ಎಷ್ಟು ಎಂದು ನೀವು ನನ್ನನ್ನು ಕೇಳಿದರೆ, ನಾನು ಯುರೋಪ್‌ನಲ್ಲಿ 20,000 ಯುರೋಗಳು ಮತ್ತು ಅಮೆರಿಕಾದಲ್ಲಿ 25,000 ಡಾಲರ್‌ಗಳು ಎಂದು ಹೇಳುತ್ತೇನೆ ಎಂದು ಕಾರ್ಲೋಸ್ ತಿಳಿಸಿದ್ದಾರೆ.

ಪ್ರಸ್ತುತ ನಿಸ್ಸಾನ್ ಲೀಫ್ ಮತ್ತು ಆರಿಯಾ ಅಮೆರಿಕಾದ ಮಾರುಕಟ್ಟೆಯಲ್ಲಿ ಅಗ್ಗದ ಇವಿಗಳಾಗಿವೆ. ಇವುಗಳ ಬೆಲೆ 28 ಸಾವಿರ ಡಾಲರ್ ಅಂದರೆ ಸುಮಾರು 23.30 ಲಕ್ಷ ರೂಪಾಯಿ ಇದೆ. ಆದರೆ ಇತ್ತೀಚೆಗೆ ಅಮೆರಿಕಾದ ಆಟೋಮೊಬೈಲ್ ಮಾರುಕಟ್ಟೆಯ ಇವಿ ವಿಭಾಗದಲ್ಲಿ ಆಸಕ್ತಿದಾಯಕ ಬೆಳವಣಿಗೆಗಳು ನಡೆಯುತ್ತಿವೆ. ಚೀನಾದ ಕಂಪನಿಗಳ ಆಕ್ರಮಣದಿಂದ, ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಸಾಕಷ್ಟು ಪೈಪೋಟಿ ಇದೆ. ಅನೇಕ ಕಂಪನಿಗಳು ಪೈಪೋಟಿಗಾಗಿ ಬೆಲೆಗಳನ್ನು ಕಡಿತಗೊಳಿಸುತ್ತಿವೆ. ಅದಕ್ಕಾಗಿಯೇ ಅನೇಕ ಜನರು ಈಗ ಕೈಗೆಟುಕುವ ಇವಿಗಳತ್ತ ಗಮನ ಹರಿಸುತ್ತಿದ್ದಾರೆ.

ಜೀಪ್‌ನ ಹೊಸ ಇವಿ ಭಾರತದಲ್ಲಿ ಬಿಡುಗಡೆಯಾಗಲಿದೆಯೇ?

ಭಾರಿ ಬೇಡಿಕೆ ಇರುವ ಭಾರತೀಯ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಜೀಪ್ ಕಂಪನಿಯಿಂದ ಒಂದೇ ಒಂದು ಎಲೆಕ್ಟ್ರಿಕ್ ವಾಹನವನ್ನು ಹೊಂದಿಲ್ಲ. ಆದರೆ ಕಂಪಾಸ್, ಮೆರಿಡಿಯನ್, ರಾಂಗ್ಲರ್, ಗ್ರ್ಯಾಂಡ್ ಚೆರೋಕಿಯಂತಹ ಐಸಿಇ ಮಾದರಿಗಳು ಧೂಳು ಹಿಡಿಯುತ್ತಿವೆ. ಭಾರತಕ್ಕೆ ಇವಿ ತರಲು ಏನಾದರೂ ಯೋಜನೆ ಇದೆಯೇ? ಎಂಬ ಪ್ರಶ್ನೆಗೆ ಜೀಪ್ ಇಂಡಿಯಾ ಬ್ರಾಂಡ್ ನಿರ್ದೇಶಕ ಪ್ರಿಯೇಶ್ ಕುಮಾರ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆ ಆಯ್ಕೆಯ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ ಎಂದರು.

ಆದರೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಯಾವುದು ಉತ್ತಮವಾಗಿ ಕ್ಲಿಕ್ ಆಗುತ್ತದೆ? ಉತ್ತಮ ಬೇಡಿಕೆ ಏನು? ಇದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಆ ದತ್ತಾಂಶವನ್ನು ಆಧರಿಸಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಮತ್ತು ಈ ಹೊಸ ಜೀಪ್ ಇವಿ ಭಾರತಕ್ಕೆ ಪ್ರವೇಶಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)