Safety Cars: 10 ಲಕ್ಷ ರೂಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ 8 ಸುರಕ್ಷಿತ ಕಾರುಗಳು, ಸೇಫ್ಟಿಯಲ್ಲಿ ಟಾಟಾ ಮೋಟಾರ್ಸ್‌ ಕಾರುಗಳದ್ದೇ ಪಾರಮ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  Safety Cars: 10 ಲಕ್ಷ ರೂಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ 8 ಸುರಕ್ಷಿತ ಕಾರುಗಳು, ಸೇಫ್ಟಿಯಲ್ಲಿ ಟಾಟಾ ಮೋಟಾರ್ಸ್‌ ಕಾರುಗಳದ್ದೇ ಪಾರಮ್ಯ

Safety Cars: 10 ಲಕ್ಷ ರೂಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ 8 ಸುರಕ್ಷಿತ ಕಾರುಗಳು, ಸೇಫ್ಟಿಯಲ್ಲಿ ಟಾಟಾ ಮೋಟಾರ್ಸ್‌ ಕಾರುಗಳದ್ದೇ ಪಾರಮ್ಯ

Safety Cars: ಭಾರತದಲ್ಲಿ ಹತ್ತು ಲಕ್ಷ ರೂಪಾಯಿಯೊಳಗೆ ಟಾಟಾ ಪಂಚ್‌, ಟಾಟಾ ಆಲ್ಟ್ರೋಝ್‌, ಟಾಟಾ ನೆಕ್ಸಾನ್‌, ಮಾರುತಿ ಸುಜುಕಿ ಡಿಜೈರ್‌, ನಿಸ್ಸಾನ್‌ ಮ್ಯಾಗ್ನೈಟ್‌, ರೆನೊ ಕೈಗರ್‌ ಮುಂತಾದ ಹಲವು ಸುರಕ್ಷಿತ ಕಾರುಗಳು ದೊರಕುತ್ತವೆ. ಇವು ಗ್ಲೋಬಲ್‌ ಎನ್‌ಕ್ಯಾಪ್‌ ಸೇಫ್ಟಿ ರೇಟಿಂಗ್‌ನಲ್ಲಿ ಉತ್ತಮ ಅಂಕ ಪಡೆದಿವೆ.

Safety Cars: 10 ಲಕ್ಷ ರೂನೊಳಗೆ ಖರೀದಿಸಬಹುದಾದ 8 ಸುರಕ್ಷಿತ ಕಾರುಗಳು, ಸೇಫ್ಟಿಯಲ್ಲಿ ಟಾಟಾ ಮೋಟಾರ್ಸ್‌ ಕಾರುಗಳದ್ದೇ ಪಾರಮ್ಯ
Safety Cars: 10 ಲಕ್ಷ ರೂನೊಳಗೆ ಖರೀದಿಸಬಹುದಾದ 8 ಸುರಕ್ಷಿತ ಕಾರುಗಳು, ಸೇಫ್ಟಿಯಲ್ಲಿ ಟಾಟಾ ಮೋಟಾರ್ಸ್‌ ಕಾರುಗಳದ್ದೇ ಪಾರಮ್ಯ

Safety Cars: ಅಪಘಾತ ಸಮಯದಲ್ಲಿ ಹೆಚ್ಚು ಸುರಕ್ಷತೆ ನೀಡುವಂತಹ ಕಾರುಗಳನ್ನು ಖರೀದಿಸಲು ಗ್ರಾಹಕರು ಗಮನ ನೀಡುತ್ತಾರೆ. ಈಗ ವಾಹನ ಎಷ್ಟು ಸುರಕ್ಷಿತವಿದ್ದರೂ ಕಡಿಮೆಯೇ. ಎಷ್ಟೇ ಸುರಕ್ಷತೆಯ ಕಾರಾಗಿದ್ದರೂ ಕೆಲವೊಮ್ಮೆ ಅನಾಹುತ ಸಂಭವಿಸುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ನೆಲಮಂಗಲ ಸಮೀಪ ವೋಲ್ವೊ ಎಕ್ಸ್‌90 ಎಸ್‌ಯುವಿ ಅಪಘಾತವೇ ಸಾಕ್ಷಿ. ಈ ಕಾರು ಅತ್ಯಂತ ಸುರಕ್ಷಿತ ಕಾರೆಂಬ ಖ್ಯಾತಿ ಪಡೆದಿತ್ತು. ಎದುರಿನಿಂದ ಯಾವ ವಾಹನ ಡಿಕ್ಕಿ ಹೊಡೆದರೂ ವಾಹನದೊಳಗೆ ಇದ್ದವರ ಪ್ರಾಣ ಸುರಕ್ಷಿತವಾಗಿರುತ್ತದೆ ಎಂದು ಈ ಕಾರಿನ ಬಗ್ಗೆ ಪ್ರಚಾರ ಮಾಡಲಾಗಿತ್ತು. ಈ ಕಾರು ಸುರಕ್ಷತೆಯ ವಿಷಯದಲ್ಲಿ ಅಷ್ಟೊಂದು ಚೆನ್ನಾಗಿತ್ತು. ಆದರೆ, ವಿಧಿಯಾಟ ಆ ಕಾರಿನ ಮೇಲೆ ದೊಡ್ಡ ಟ್ರಕ್‌ ಅನ್ನೇ ಹೊತ್ತು ಹಾಕಿತ್ತು. ಇಂತಹ ಅಪಘಾತಗಳು ನಡೆಯುವುದು ಅಪರೂಪ. ಸಾಮಾನ್ಯವಾಗಿ ಒಂದು ವಾಹನ ಮತ್ತು ಇನ್ನೊಂದು ವಾಹನ ಎದುರು ಬದುರು ಡಿಕ್ಕಿಯಾಗುವುದು ಹೆಚ್ಚು. ಅಥವಾ ವಾಹನದ ಒಂದು ಸೈಡ್‌ಗೆ, ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಯುತ್ತದೆ. ಕೆಲವೊಮ್ಮೆ ನಿಯಂತ್ರಣ ತಪ್ಪಿ ವಾಹನಗಳು ಅಪಘಾತವಾಗುವುದುಂಟು. ಇಂತಹ ಸಂದರ್ಭಗಳಲ್ಲಿ ವಾಹನದ ಸುರಕ್ಷತೆಯ ಫೀಚರ್‌ಗಳು ಪ್ರಯೋಜನಕ್ಕೆ ಬರುತ್ತವೆ.

ಪ್ರಯಾಣಿಕರು ಮತ್ತು ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆಧುನಿಕ ಕಾರುಗಳು ನಿರ್ಮಾಣಗೊಂಡಿರುತ್ತವೆ. ಎಬಿಎಸ್‌, ಇಎಸ್‌ಪಿಯಂತಹ ಹಲವು ಸುರಕ್ಷತೆಯ ಫೀಚರ್‌ಗಳನ್ನು ಹೊಂದಿರುತ್ತವೆ. ಆದರೆ, ಸಾಮಾನ್ಯವಾಗಿ ಹೆಚ್ಚು ಸುರಕ್ಷಿತ ಕಾರುಗಳ ದರ ದುಬಾರಿಯಾಗಿರುತ್ತದೆ. ಈಗ ಕೆಲವು ಕಾರು ಕಂಪನಿಗಳು ಹತ್ತು ಲಕ್ಷ ರೂಪಾಯಿಯೊಳಗೂ ಅತ್ಯುತ್ತಮ ಸುರಕ್ಷತಾ ಸೌಲಭ್ಯಗಳನ್ನು ನೀಡುತ್ತವೆ. ಗ್ರೋಬಲ್‌ ಎನ್‌ಕ್ಯಾಪ್‌ ಎಂಬ ವಾಹನ ಸುರಕ್ಷತಾ ಟೆಸ್ಟಿಂಗ್‌ ಏಜೆನ್ಸಿ ನೀಡುವ ರೇಟಿಂಗ್‌ ಆಧಾರದಲ್ಲಿ ಹತ್ತು ಲಕ್ಷ ರೂಪಾಯಿಯೊಳಗಿನ ಕೆಲವು ಕಾರುಗಳ ವಿವರ ಇಲ್ಲಿ ನೀಡಲಾಗಿದೆ. ಸುರಕ್ಷಿತಾ ಕಾರು ಖರೀದಿಸಲು ಬಯಸುವವರು ಇದನ್ನು ಪರಿಶೀಲಿಸಬಹುದು.

ಟಾಟಾ ಪಂಚ್‌

ಇದು ಭಾರತದಲ್ಲಿ ಬೆಸ್ಟ್‌ ಸೆಲ್ಲಿಂಗ್‌ ಕಾರು. ಟಾಟಾದ ಆಲ್ಪಾ ಎಆರ್‌ಸಿ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಏರ್‌ಬ್ಯಾಗ್‌ಗಳು, ಐಎಸ್‌ಒಫಿಕ್ಸ್‌ ಆಂಕರ್ಸ್‌, ಎಬಿಎಸ್‌ನಂತಹ ಕಡ್ಡಾಯ ಸುರಕ್ಷತಾ ಫೀಚರ್‌ಗಳನ್ನು ಇದು ಹೊಂದಿದೆ. ಇದರಲ್ಲಿ ಕಾರ್ನರ್‌ ಸ್ಟೆಬಿಲಿಟಿ ಕಂಟ್ರೋಲ್‌, ಬ್ರೇಕ್‌ ಸ್ವಯ್‌ ಕಂಟ್ರೋಲ್‌ ಹೊಂದಿದೆ. ಗ್ಲೋಬಲ್‌ ಎನ್‌ಕ್ಯಾಪ್‌ನಲ್ಲಿ ಇದು ಐದರಲ್ಲಿ 5 ಸ್ಟಾರ್‌ ರೇಟಿಂಗ್‌ ಪಡೆದಿದೆ. ಇದರ ಎಕ್ಸ್‌ಶೋರೂಂ ದರ 6.1 ಲಕ್ಷ ರೂನಿಂದ 10.2 ಲಕ್ಷ ರೂ.ವರೆಗಿದೆ.

ಟಾಟಾ ಆಲ್ಟ್ರೋಝ್‌

ಟಾಟಾದ ಪ್ರೀಮಿಯಂ ಸಣ್ಣ ಕಾರು ಆಲ್ಟ್ರೋಜ್‌ ಕೂಡ ಗ್ಲೋಬಲ್‌ ಎನ್‌ಕ್ಯಾಪ್‌ನಲ್ಲಿ 5 ಸ್ಟಾರ್‌ ರೇಟಿಂಗ್‌ ಪಡೆದಿದೆ. ಇದು ಕೂಡ ಟಾಟಾದ ಆಲ್ಪಾ ಎಆರ್‌ಸಿ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಂಡ ಕಾರು. ಡ್ಯೂಯೆಲ್‌ ಏರ್‌ಬ್ಯಾಗ್‌, ಎಬಿಎಸ್‌ ಮತ್ತು ಇಬಿಡಿ, ಕಾರ್ನರ್‌ ಸ್ಟೆಬಿಲಿಟಿ ಕಂಟ್ರೋಲ್‌, ಪಾರ್ಕಿಂಗ್‌ ಸೆನ್ಸಾರ್‌, ರಿವರ್ಸ್‌ ಕ್ಯಾಮೆರಾ, ಐಎಸ್‌ಒಫಿಕ್ಸ್‌ ಸೀಟ್‌ ಆಂಕರ್ಸ್‌ ಮುಂತಾದ ಸುರಕ್ಷತಾ ಫೀಚರ್‌ಗಳನ್ನು ಹೊಂದಿದೆ. ಎಕ್ಸ್‌ಶೋರೂಂ ದರ 6.6 ಲಕ್ಷ ರೂನಿಂದ 11.4 ಲಕ್ಷ ರೂ.ವರೆಗಿದೆ.

ಟಾಟಾ ನೆಕ್ಸಾನ್‌

10 ಲಕ್ಷ ರೂಪಾಯಿಯೊಳಗೆ ದೊರಕುವ ಭಾರತದ ಅತ್ಯಂತ ಸುರಕ್ಷಿತ ಎಸ್‌ಯುವಿ ಇದಾಗಿದೆ. ಅಡಲ್ಟ್‌ ಆಕ್ಯುಪಂಟ್‌ ಸುರಕ್ಷತೆಗೆ ಗ್ಲೋಬಲ್‌ ಎನ್‌ಕ್ಯಾಪ್‌ನಿಂದ 5 ಸ್ಟಾರ್‌ ರೇಟಿಂಗ್‌ ಪಡೆದಿದೆ. ಮಕ್ಕಳ ಸುರಕ್ಷತೆಗೆ ಮೂರು ಸ್ಟಾರ್‌ ರೇಟಿಂಗ್‌ ಪಡೆದಿದೆ. ಹಳೆಯ ಎಕ್ಸ್‌1 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಆರು ಏರ್‌ಬ್ಯಾಗ್‌ಗಳು, ಐಎಸ್‌ಒ ಫಿಕ್ಸ್‌ ಚೈಲ್ಡ್‌ ಸೀಟ್‌ ಮೌಂಟ್‌, ಎಲೆಕ್ಟ್ರಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ, ರಿವರ್ಸ್‌ ಪಾರ್ಕಿಂಗ್‌ ಸೆನ್ಸಾರ್‌ ಮುಂತಾದ ಫೀಚರ್‌ಗಳನ್ನು ಹೊಂದಿದೆ. ಟಾಪ್‌ ಎಂಡ್‌ ಕಾರಿನಲ್ಲಿ ಹಿಲ್‌ ಹೋಲ್ಡ್‌ ಕಂಟ್ರೋಲ್‌, 360 ಡಿಗ್ರಿ ಕ್ಯಾಮೆರಾ, ಟೈರ್‌ ಪ್ರೆಸರ್‌ ಮಾನಿಟರ್‌ ಮುಂತಾದ ಫೀಚರ್‌ಗಳಿವೆ. ಎಕ್ಸ್‌ ಶೋರೂಂ ದರ 8 ಲಕ್ಷ ರೂನಿಂದ 15.8 ಲಕ್ಷ ರೂವರೆಗಿದೆ.

ಮಾರುತಿ ಸುಜುಕಿ ಡಿಜೈರ್‌

2024ರಲ್ಲಿ ಬಿಡುಗಡೆಯಾದ ಹೊಸ ಆವೃತ್ತಿಯು ಹೆಚ್ಚು ಸುರಕ್ಷಿತವಾದ ಕಾರು ಮಾರುತಿ ಸುಜುಕಿ ಡಿಜೈರ್. ಐದರಲ್ಲಿ 5 ಸ್ಟಾರ್‌ ರೇಟಿಂಗ್‌ ಪಡೆದಿದೆ. ಆರು ಏರ್‌ಬ್ಯಾಗ್‌ಗಳು, ಎಬಿಎಸ್‌-ಇಬಿಡಿ, ಸೀಟ್‌ ಬೆಲ್ಟ್‌ ರಿಮೈಂಡರ್‌ ಮುಂತಾದ ಫೀಚರ್‌ಗಳನ್ನು ಹೊಂದಿದೆ.

ಟಾಟಾ ಟಿಯಾಗೊ

ಇದು ಗ್ಲೋಬಲ್‌ ಎನ್‌ಕ್ಯಾಪ್‌ನಿಂದ ಐದರಲ್ಲಿ 4 ಸ್ಟಾರ್‌ ರೇಟಿಂಗ್‌ ಪಡೆದಿದೆ. ದೊಡ್ಡವರ ಸುರಕ್ಷತೆಯಲ್ಲಿ 4 ಸ್ಟಾರ್‌ ರೇಟಿಂಗ್‌, ಮಕ್ಕಳ ಸುರಕ್ಷತೆಯಲ್ಲಿ 3 ಸ್ಟಾರ್‌ ರೇಟಿಂಗ್‌ ಪಡೆದಿದೆ. ಎಬಿಎಸ್‌-ಇಬಿಡಿ, ಕಾರ್ನರ್‌ ಸ್ಟೆಬಲಿಟಿ ಕಂಟ್ರೋಲ್‌, ಡ್ಯೂಯೆಲ್‌ ಏರ್‌ಬ್ಯಾಗ್ಸ್‌, ಐಎಸ್‌ಒ ಫಿಕ್ಸ್‌ ಚೈಲ್ಡ್‌ ಸೀಟ್‌ ಮೌಂಟ್‌ ಮುಂತಾದ ಫೀಚರ್‌ಗಳನ್ನು ಹೊಂದಿಎ. ಹೈ ಎಂಡ್‌ ಕಾರಿನಲ್ಲಿ ಇನ್ನಷ್ಟು ಸೇಫ್ಟಿ ಫೀಚರ್‌ಗಳು ಇವೆ. ಎಕ್ಸ್‌ ಶೋರೂಂ ದರ 5.7 ಲಕ್ಷ ರೂನಿಂದ 8.9 ಲಕ್ಷ ರೂವರೆಗಿದೆ.

ನಿಸ್ಸಾನ್‌ ಮ್ಯಾಗ್ನೈಟ್‌

ಇದರ ಆರಂಭಿಕ ಎಕ್ಸ್‌ ಶೋರೂಂ ದರ 6 ಲಕ್ಷ ರೂಪಾಯಿ. ದೊಡ್ಡವರ ಸುರಕ್ಷತೆಯಲ್ಲಿ ಐದರಲ್ಲಿ 4 ಮತ್ತು ಮಕ್ಕಳ ಸುರಕ್ಷತೆಯಲ್ಲಿ ಐದರಲ್ಲಿ 2 ರೇಟಿಂಗ್‌ ಪಡೆದಿದೆ. ಮ್ಯಾಗ್ನೈಟ್‌ನಲ್ಲಿ ಡ್ಯೂಯೆಲ್‌ ಫ್ರಂಟ್‌ ಏರ್‌ಬ್ಯಾಗ್‌ಗಳು, ಎಬಿಎಸ್‌-ಇಬಿಡಿ, ಟ್ರಾಕ್ಷನ್‌ ಆಂಡ್‌ ಸ್ಟೆಬಿಲಿಟಿ ಕಂಟ್ರೋಲ್‌, ಟೈರ್‌ ಪ್ರೆಸರ್‌ ಮಾನಿಟರಿಂಗ್‌ ಸ್ಟಾಂಡರ್ಡ್‌ ಫೀಚರ್‌ಗಳಾಗಿವೆ.

ರೆನೊ ಕೈಗರ್‌

ನಿಸ್ಸಾನ್‌ ಮ್ಯಾಗ್ನೈಟ್‌ನ ಅವಳಿ. ರೆನೊ ಕೈಗರ್‌ ಕೂಡ ದೊಡ್ಡವರ ಸುರಕ್ಷತೆಯಲ್ಲಿ ಐದರಲ್ಲಿ 4 ಮತ್ತು ಮಕ್ಕಳ ಸುರಕ್ಷತೆಯಲ್ಲಿ ಐದರಲ್ಲಿ 2 ರೇಟಿಂಗ್‌ ಪಡೆದಿದೆ. ಡ್ಯೂಯೆಲ್‌ ಫ್ರಂಟ್‌ ಏರ್‌ಬ್ಯಾಗ್‌ಗಳು, ಎಬಿಎಸ್‌-ಇಬಿಡಿ, ಟ್ರಾಕ್ಷನ್‌ ಆಂಡ್‌ ಸ್ಟೆಬಿಲಿಟಿ ಕಂಟ್ರೋಲ್‌, ಟೈರ್‌ ಪ್ರೆಸರ್‌ ಮಾನಿಟರಿಂಗ್‌ ಸ್ಟಾಂಡರ್ಡ್‌ ಫೀಚರ್‌ಗಳಾಗಿವೆ. ಟಾಪ್‌ ಎಂಡ್‌ನಲ್ಲಿ ಇನ್ನಷ್ಟು ಉತ್ತಮ ಸೇಫ್ಟಿ ಫೀಚರ್‌ಗಳು ಇವೆ. ಎಕ್ಸ್‌ ಶೋರೂಂ ದರ 6 ಲಕ್ಷ ರೂನಿಂದ 11.2 ಲಕ್ಷ ರೂವರೆಗಿದೆ.

ಟಾಟಾ ಟೈಗೂರ್‌

ಟಾಟಾ ಟೈಗೂರ್‌ ಕಾರು ಐದರಲ್ಲಿ ನಾಲ್ಕು ರೇಟಿಂಗ್‌ ಪಡೆದಿದೆ. ಎಕ್ಸ್‌ ಶೋರೂಂ ದರ 6.3 ಲಕ್ಷ ರೂನಿಂದ ಆರಂಭವಾಗುತ್ತದೆ. 10 ಲಕ್ಷ ರೂಪಾಯಿಯೊಳಗೆ ದೊರಕುವ ಅತ್ಯಧಿಕ ಸ್ಟಾರ್‌ ರೇಟಿಂಗ್‌ ಹೊಂದಿರು ಸೆಡಾನ್‌ ಕಾರು ಇದಾಗಿದೆ.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner