Electric Scooters: ಡ್ರೈವಿಂಗ್‌ ಲೈಸನ್ಸ್‌ ಅಗತ್ಯವಿಲ್ಲದ 5 ಎಲೆಕ್ಟ್ರಿಕ್‌ ಸ್ಕೂಟರ್‌ಗಳು; ಉತ್ತಮ ರೇಂಜ್‌, ದರ ಕೂಡ ಕಡಿಮೆ
ಕನ್ನಡ ಸುದ್ದಿ  /  ಜೀವನಶೈಲಿ  /  Electric Scooters: ಡ್ರೈವಿಂಗ್‌ ಲೈಸನ್ಸ್‌ ಅಗತ್ಯವಿಲ್ಲದ 5 ಎಲೆಕ್ಟ್ರಿಕ್‌ ಸ್ಕೂಟರ್‌ಗಳು; ಉತ್ತಮ ರೇಂಜ್‌, ದರ ಕೂಡ ಕಡಿಮೆ

Electric Scooters: ಡ್ರೈವಿಂಗ್‌ ಲೈಸನ್ಸ್‌ ಅಗತ್ಯವಿಲ್ಲದ 5 ಎಲೆಕ್ಟ್ರಿಕ್‌ ಸ್ಕೂಟರ್‌ಗಳು; ಉತ್ತಮ ರೇಂಜ್‌, ದರ ಕೂಡ ಕಡಿಮೆ

Electric Scooters Without Driving Licence: ಭಾರತದಲ್ಲಿ ಈ ವರ್ಷ ಹತ್ತು ಹಲವು ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಆಗಮಿಸಿವೆ. ಕೆಲವೊಂದು ಇ ಸ್ಕೂಟರ್‌ಗಳನ್ನು ಚಾಲನೆ ಮಾಡಲು ಡ್ರೈವಿಂಗ್‌ ಲೈಸನ್ಸ್‌ ಅಗತ್ಯವಿರುವುದಿಲ್ಲ. ಅಂತಹ 5 ಎಲೆಕ್ಟ್ರಿಕ್‌ ಸ್ಕೂಟರ್‌ಗಳ ವಿವರ ಇಲ್ಲಿ ನೀಡಲಾಗಿದೆ.

Electric Scooters: ಡ್ರೈವಿಂಗ್‌ ಲೈಸನ್ಸ್‌ ಅಗತ್ಯವಿಲ್ಲದ 5 ಎಲೆಕ್ಟ್ರಿಕ್‌ ಸ್ಕೂಟರ್‌ಗಳು
Electric Scooters: ಡ್ರೈವಿಂಗ್‌ ಲೈಸನ್ಸ್‌ ಅಗತ್ಯವಿಲ್ಲದ 5 ಎಲೆಕ್ಟ್ರಿಕ್‌ ಸ್ಕೂಟರ್‌ಗಳು

ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ, ಪಟ್ಟಣಗಳಲ್ಲಿ ಮಾತ್ರವಲ್ಲದೆ ಸಣ್ಣಪುಟ್ಟ ಹಳ್ಳಿಗಳಲ್ಲಿಯೂ ಈಗ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಕಾಣಿಸುತ್ತಿವೆ. ಪೆಟ್ರೋಲ್‌ಗೆ ಹಣ ಹಾಕುವುದಕ್ಕಿಂತ ಚಾರ್ಜಿಂಗ್‌ ಮಾಡುವ ಇ ಸ್ಕೂಟರ್‌ಗಳೇ ಉತ್ತಮ ಎಂಬ ಅಭಿಪ್ರಾಯ ಸಾಕಷ್ಟು ಜನರಿಗಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಓಲಾ ಎಲೆಕ್ಟ್ರಿಕ್‌, ಬಜಾಜ್‌ ಚೇತಕ್‌ ಇವಿ, ಟಿವಿಎಸ್‌ ಐ ಕ್ಯೂಬ್‌, ಆಥೆರ್‌ ಎನರ್ಜಿಯಂತಹ ಪ್ರಮುಖ ಕಂಪನಿಗಳು ಇವಿ ಮಾರುಕಟ್ಟೆಯನ್ನು ಆಳುತ್ತಿವೆ. ಆದರೆ ಈ ಕಂಪನಿಗಳನ್ನು ಹೊರತುಪಡಿಸಿ ಡ್ರೈವಿಂಗ್ ಲೈಸೆನ್ಸ್ ಮತ್ತು ನೋಂದಣಿ ಅಗತ್ಯವಿಲ್ಲದ ಇವಿ ಸ್ಕೂಟರ್‌ಗಳೂ ಮಾರುಕಟ್ಟೆಯಲ್ಲಿವೆ. ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ, 250 ವ್ಯಾಟ್‌ಗಳಿಗಿಂತ ಕಡಿಮೆ ವಿದ್ಯುತ್ ಬಳಸುವ ಮತ್ತು ಗಂಟೆಗೆ ಗರಿಷ್ಠ 25 ಕಿಲೋಮೀಟರ್‌ಗಿಂತ ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲ. ಅಂತಹ 5 ಎಲೆಕ್ಟ್ರಿಕ್‌ ಸ್ಕೂಟರ್‌ಗಳ ವಿವರ ಇಲ್ಲಿದೆ.

ಲೋಹಿಯಾ ಓಮಾ ಸ್ಟಾರ್

ಈ ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ಬೆಲೆ 40,850 ರೂಪಾಯಿ. ಇದು 250 ವ್ಯಾಟ್ ಪವರ್ ಮೋಟಾರ್ ಹೊಂದಿದೆ. ಇದು ಬಿಎಲ್‌ಡಿಸಿ ಹಬ್ ಮೋಟಾರ್ ಆಗಿದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 25 ಕಿ.ಮಿ.ಯಾಗಿದೆ. ಇದು ಒಂದು ಚಾರ್ಜ್‌ನಲ್ಲಿ 70 ಕಿಲೋಮೀಟರ್ ರೇಂಜ್‌ ನೀಡುತ್ತದೆ. 4.5 ರಿಂದ 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ಬ್ಯಾಟರಿಯ ಮೇಲೆ 3 ವರ್ಷಗಳ ವಾರಂಟಿ ನೀಡುತ್ತದೆ. ಇದರ ತೂಕ 66 ಕೆ.ಜಿ. ಇದೆ. ಬ್ಯಾಟರಿ ಕಡಿಮೆಯಾದರೆ ಸೂಚಿಸುವ ಸೂಚಕ, ಟೈಲ್ ಲೈಟ್ ಬಲ್ಬ್, ಟರ್ನ್ ಸಿಗ್ನಲ್ ಲ್ಯಾಂಪ್, ಹೆಡ್ ಲ್ಯಾಂಪ್ ಇತ್ಯಾದಿಗಳನ್ನು ಹೊಂದಿದ್ದು, ಆಕರ್ಷಕವಾಗಿದೆ.

ಆಂಪಿಯರ್ ರಿಯೊ ಇಲೈಟ್

ಈ ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ದರ 42,999 ರೂಪಾಯಿ ಇದೆ. ಇದು 250 ವ್ಯಾಟ್ ಪವರ್ ಮೋಟಾರ್ ಹೊಂದಿದೆ. ಇದು ಬಿಎಲ್‌ಡಿಸಿ ಹಬ್ ಮೋಟಾರ್ ಆಗಿದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 25 ಕಿಮೀ. ಇದೆ. ಒಂದೇ ಚಾರ್ಜ್‌ನಲ್ಲಿ 55 ರಿಂದ 60 ಕಿಲೋಮೀಟರ್ ರೇಂಜ್‌ ನೀಡುತ್ತದೆ. ಇದರ ಬ್ಯಾಟರಿಯು 5 ರಿಂದ 6 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ. ಕಂಪನಿಯು ಬ್ಯಾಟರಿಯ ಮೇಲೆ 2 ವರ್ಷಗಳ ವಾರಂಟಿ ನೀಡುತ್ತದೆ. ಇದರ ತೂಕ 70 ಕೆ.ಜಿ ಇದೆ. ಇದು ಚಾರ್ಜಿಂಗ್ ಪಾಯಿಂಟ್, ಸ್ಪೀಡೋಮೀಟರ್, ಪ್ಯಾಸೆಂಜರ್ ಫುಟ್‌ರೆಸ್ಟ್‌ನಂತಹ ಫೀಚರ್‌ಗಳನ್ನು ಹೊಂದಿದೆ.

ಕೊಮಕಿ ಎಕ್ಸ್‌ಜಿಟಿ ಕೆಎಂ

ಕೊಮಕಿ ಎಕ್ಸ್‌ಜಿಟಿ ಕೆಎಂ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 85 ಕಿಮೀ ನಿಂದ 90 ಕಿಮೀ ರೇಂಜ್‌ ನೀಡುತ್ತದೆ. ಇದಕ್ಕೆ ಆರ್‌ಟಿಒ ನೋಂದಣಿ ಅಥವಾ ಚಾಲನಾ ಪರವಾನಗಿ ಅಗತ್ಯವಿಲ್ಲ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ದರ 56,890 ರೂಪಾಯಿ ಇದೆ. ಇದು 60 ವೋಲ್ಟ್ ಪವರ್ ಮೋಟಾರ್ ಹೊಂದಿದೆ. ಇದು ಬಿಎಲ್‌ಡಿಸಿ ಹಬ್ ಮೋಟಾರ್ ಆಗಿದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 60 ಕಿಮೀ. ಇದೆ. ಇದು ಒಂದೇ ಚಾರ್ಜ್‌ನಲ್ಲಿ 130 ರಿಂದ 150 ಕಿಲೋಮೀಟರ್ ರೇಂಜ್‌ ನೀಡುತ್ತದೆ. ಬ್ಯಾಟರಿಯು 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ. ಕಂಪನಿಯು ಬ್ಯಾಟರಿಯ ಮೇಲೆ 1 ವರ್ಷದ ವಾರಂಟಿ ನೀಡುತ್ತದೆ. ಇದು ಟ್ಯೂಬ್‌ಲೆಸ್‌ ಟೈರ್, ಡಿಸ್ಕ್ ಬ್ರೇಕ್, ಅಲ್ಟ್ರಾ ಬ್ರೈಟ್ ಫುಲ್ ಎಲ್ ಇಡಿ ಲೈಟಿಂಗ್ ಸಿಸ್ಟಮ್ ಮುಂತಾದ ಫೀಚರ್‌ಗಳನ್ನು ಹೊಂದಿದೆ.

ಓಕಿನಾವಾ ಆರ್‌30

ಈ ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ದರ 58,992 ರೂಪಾಯಿ. ಇದು 250 ವ್ಯಾಟ್ ಪವರ್ ಮೋಟಾರ್ ಹೊಂದಿದೆ. ಇದು ಬಿಎಲ್‌ಡಿಸಿ ಹಬ್ ಮೋಟಾರ್ ಆಗಿದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 25 ಕಿಮೀ. ಇದು ಒಂದು ಬಾರಿ ಚಾರ್ಜ್ ಮಾಡಿದರೆ 60 ಕಿಲೋಮೀಟರ್ ರೇಂಜ್‌ ನೀಡುತ್ತದೆ. ಇದರ ಬ್ಯಾಟರಿಯು 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ಬ್ಯಾಟರಿಯ ಮೇಲೆ 3 ವರ್ಷಗಳ ವಾರಂಟಿ ನೀಡುತ್ತದೆ. ಇದರ ತೂಕ 150 ಕೆ.ಜಿ. ಇದೆ. ಇದು ಎಲ್‌ಇಡಿ ಡಿಆರ್‌ಎಲ್ , ಹಿಂಭಾಗದ ಸಸ್ಪೆನ್‌ಶನ್‌ನೊಂದಿಗೆ ಡ್ಯುಯಲ್ ಟ್ಯೂಬ್ ತಂತ್ರಜ್ಞಾನ, ಸೆಂಟ್ರಲ್ ಲಾಕಿಂಗ್‌ನೊಂದಿಗೆ ಆಂಟಿ-ಥೆಫ್ಟ್ ಅಲಾರ್ಮ್‌ನಂತಹ ಫೀಚರ್‌ಗಳನ್ನು ಹೊಂದಿದೆ.

ಮಿಸೊ ಆನ್ ಗೇಮ್

ಈ ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ದರ 44,000 ರೂಪಾಯಿ ಇದೆ. ಇದು 250 ವ್ಯಾಟ್ ಪವರ್ ಮೋಟಾರ್ ಹೊಂದಿದೆ. ಇದು ಬಿಎಲ್‌ಡಿಸಿ ಹಬ್ ಮೋಟಾರ್ ಆಗಿದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 25 ಕಿ.ಮೀ. ಒಂದು ಫುಲ್‌ ಚಾರ್ಜ್‌ನಲ್ಲಿ 60 ಕಿಲೋಮೀಟರ್‌ಗಳ ರೇಂಜ್‌ ನೀಡುತ್ತದೆ.. ಇದರ ಬ್ಯಾಟರಿ 3 ರಿಂದ 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ಬ್ಯಾಟರಿಯ ಮೇಲೆ 3 ವರ್ಷಗಳ ವಾರಂಟಿ ನೀಡುತ್ತದೆ. ಇದರ ತೂಕ 45 ಕೆ.ಜಿ. ಇದು ಆಂಟಿ ಥೆಪ್ಟ್‌ ಅಲಾರ್ಮ್‌ (ಕಳ್ಳತನ ವಿರೋಧಿ) ಫೀಚರ್‌ ಕೂಡ ಹೊಂದಿದೆ.

Whats_app_banner