Best Mileage Cars: ಆಲ್ಟೊ 800 ನಿಂದ ರೆನಾಲ್ಟ್‌ ಕ್ವಿಡ್‌ವರೆಗೆ; ಬೆಸ್ಟ್ ಮೈಲೇಜ್ ಕಾರುಗಳು, ಬೆಲೆಯ ವಿವರ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Best Mileage Cars: ಆಲ್ಟೊ 800 ನಿಂದ ರೆನಾಲ್ಟ್‌ ಕ್ವಿಡ್‌ವರೆಗೆ; ಬೆಸ್ಟ್ ಮೈಲೇಜ್ ಕಾರುಗಳು, ಬೆಲೆಯ ವಿವರ ಹೀಗಿದೆ

Best Mileage Cars: ಆಲ್ಟೊ 800 ನಿಂದ ರೆನಾಲ್ಟ್‌ ಕ್ವಿಡ್‌ವರೆಗೆ; ಬೆಸ್ಟ್ ಮೈಲೇಜ್ ಕಾರುಗಳು, ಬೆಲೆಯ ವಿವರ ಹೀಗಿದೆ

ಉತ್ತಮ ಮೈಲೇಜ್ ಹಾಗೂ ಬಜೆಟ್ ಸ್ನೇಹಿ ಕಾರು ಖರೀದಿಸುವ ಪ್ಲಾನ್ ಮಾಡುತ್ತಿದ್ದರೆ ನಿಮಗಾಗಿ ವಿವಿಧ ಕಂಪನಿಗಳ ಕಾರುಗಳ ಪಟ್ಟಿ ಮಾಡಲಾಗಿದೆ. ಬೆಲೆ ಕಡಿಮೆ, ಹೆಚ್ಚಿನ ಮೈಲೇಜ್ ಕಾರುಗಳು ಇಲ್ಲಿವೆ.

ಹೆಚ್ಚು ಮೈಲೇಜ್ ಹಾಗೂ ಬಜೆಟ್ ಸ್ನೇಹಿ ಕಾರು ಆಲ್ಟೊ 800
ಹೆಚ್ಚು ಮೈಲೇಜ್ ಹಾಗೂ ಬಜೆಟ್ ಸ್ನೇಹಿ ಕಾರು ಆಲ್ಟೊ 800

ಬೆಂಗಳೂರು: ಕುಟುಂಬದ ಅಗತ್ಯಗಳಿಗೆ ಸರಿಹೊಂದುವಂತಹ ಹೊಸ ಕಾರು ಖರೀದಿಸುವ ಆಲೋಚನೆ ನಿಮ್ಮದ್ದಾಗಿದ್ದರೆ, ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ವಿವಿಧ ಕಂಪನಿಗಳ ಕಾರುಗಳ ಪಟ್ಟಿ ಇಲ್ಲಿದೆ. ಬೆಲೆ, ಮೈಲೇಜ್ ಆಧಾರದ ಮೇಲೆ ನೀವು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ಕಾರುಗಳು ಲಭ್ಯಇವೆ. ಆಕರ್ಷಕ ಹಾಗೂ ಉತ್ತಮ ವಿನ್ಯಾಸದೊಂದಿಗೆ ಗಮನ ಸೆಳೆಯುತ್ತಿವೆ.

ಬಜಾಜ್ ಕ್ಯೂಟ್

ಉತ್ತಮ ಮೈಲೇಜ್ ಹಾಗೂ ಕಡಿಮೆ ಬೆಲೆಯ ಕಾರುಗಳ ಸಾಲಿನಲ್ಲಿ ಬಜಾಜ್ ಕ್ಯೂಟ್ ಅಗ್ರ ಸ್ಥಾನದಲ್ಲಿದೆ. ಸಂಚಾರ ದಟ್ಟಣೆ ಹಾಗೂ ನಗರದೊಳಗಿನ ಸಂಚಾರಕ್ಕೆ ಬೆಸ್ಟ್ ಎನಿಸಿರುವ ಬಜಾಜ್ ಕ್ಯೂಟ್ ಎಕ್ಸ್‌ ಶೋರೂಂ ಬೆಲೆ 2.64 ಲಕ್ಷದಿಂದ 2.84 ಲಕ್ಷ ರೂಪಾಯಿ ವರೆಗೆ ಇದೆ. ಪೆಟ್ರೋಲ್ ಮತ್ತು ಸಿಎನ್‌ಜಿಯ ಈ ಕಾರು ಲೀಟರ್‌ಗೆ 43 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ.

ಮಾರುತಿ ಆಲ್ಟೊ 800

ದೇಶದ ಪ್ರಮುಖ ಆಟೋಮೊಬೈಲ್ ಸಂಸ್ಥೆಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಕಂಪನಿಯ ಆಲ್ಟೊ 800 ಗೆ ದಶಕಗಳ ಇತಿಹಾಸವಿದೆ. ಬೆಲೆ ಹಾಗೂ ಮೈಲೇಜ್‌ ವಿಚಾರದಲ್ಲಿ ಆಲ್ಟೊ 800 ಬೆಸ್ಟ್ ಆಯ್ಕೆ ಅಂತ ಹೇಳಬಹುದು. ಈ ಕಾರಿನ ಎಕ್ಸ್ ಶೋರೂಂ ಬೆಲೆ 3.54 ಲಕ್ಷ ರೂಪಾಯಿಯಿಂದ 5.13 ಲಕ್ಷ ರೂಪಾಯಿ ವರೆಗೆ ಇದೆ. ಲೀಟರ್ ಪೆಟ್ರೋಲ್‌ಗೆ 31.39 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಬಿಎಸ್‌6 ಗೆ ಈ ಕಾರು ಅಪ್‌ಗ್ರೇಡ್ ಆಗದ ಕಾರಣ ಗ್ರಾಹಕರ ಆಸಕ್ತಿ ಕಡಿಮೆಯಾಗಿದೆ. ಹೀಗಾಗಿ 2023ರಲ್ಲಿ ಕಾರಿನ ಉತ್ಪಾದನೆಯನ್ನ ಸ್ಥಗಿತಗೊಳಿಸಲಾಗಿದೆ.

ರೆನಾಲ್ಟ್ ಕ್ವಿಡ್

ಬಜೆಟ್ ಸ್ನೇಹಿ ಹಾಗೂ ಉತ್ತಮ ಮೈಲೇಜ್ ಕಾರುಗಳಲ್ಲಿ ರೆನಾಲ್ಟ್ ಕ್ವಿಡ್ ಕೂಡ ಉತ್ತಮ ಆಯ್ಕೆಯಾಗಿದೆ. ಪೆಟ್ರೋಲ್ ಇಂಜಿನ್ ಹೊಂದಿರುವ ಈ ಕಾರಿನ ಎಕ್ಸ್‌ಶೋರೂಂ ಬೆಲೆ 4.7 ಲಕ್ಷ ದಿಂದ 6.33 ಲಕ್ಷ ರೂಪಾಯಿ ವರೆಗೆ ಇದೆ. ಲೀಟರ್ ಪೆಟ್ರೋಲ್‌ಗೆ 23 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ.

ದಟ್ಸನ್ ರೆಡಿಗೊ

ಕಡಿಮೆ ಬೆಲೆ ಹಾಗೂ ಉತ್ತಮ ಮೈಲೇಜ್ ಕಾರು ಖರೀದಿಸುವವರಿಗೆ ದಟ್ಸನ್ ರೆಡಿಗೊ ಒಳ್ಳೆಯ ಆಯ್ಕೆಯಾಗಿದ್ದು, ಇದು 799 ಸಿಸಿ, ಮ್ಯಾನುಯಲ್ ಹಾಗೂ ಪೆಟ್ರೋಲ್ ಚಾಲಿತ ಕಾರು ಇದಾಗಿದೆ. ಕಾರಿನ ಎಕ್ಸ್‌ಶೋರೂಂ ಬೆಲೆ 3.84 ಲಕ್ಷ ರೂಪಾಯಿಯಿಂದ 4.96 ಲಕ್ಷ ರೂಪಾಯಿ ಇದೆ. ಲೀಟರ್ ಪೆಟ್ರೋಲ್‌ಗೆ 22 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಆಲ್ಟೊ ಕೆ10

ಮಾರುತಿ ಸುಜುಕಿಯ ಇತ್ತೀಚಿನ ಕಾರು ಆಲ್ಟೊ ಕೆ10 ಗೆ ಉತ್ತಮ ಸ್ಪಂದನೆ ಇದೆ. ಹೊಸ ತಲೆಮಾರಿನ ಕೆ ಸರಣಿಯ 1.0L ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್ ಅನ್ನು ಹೊಂದಿದೆ. ಹೊಸ ಆಲ್ಟೊ ಕೆ10 3,530 ಎಂಎಂ ಉದ್ದ, 1,490 ಎಂಎಂ ಅಗಲ ಮತ್ತು 1,520 ಎಂಎಂ ಎತ್ತರವಿದೆ. ಇದು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಇತರ ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 7 ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದೆ. ಆರಂಭಿಕ ಎಕ್ಸ್ ಶೋ ರೂಂ ಬೆಲೆ 3.99 ಲಕ್ಷ ರಿಂದ 5.95 ಲಕ್ಷ ರೂಪಾಯಿವರೆಗೆ ಇದೆ. ಲೀಟರ್ ಪೆಟ್ರೋಲ್‌ಗೆ 27 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ.

ಮಾರುತಿ ಎಸ್ ಪ್ರೆಸ್ಸೊ

ಮಾರುತಿ ಸುಜುಕಿಯ ಮತ್ತೊಂದು ಬಜೆಟ್ ಸ್ನೇಹಿ ಕಾರೆಂದರೆ ಅದು ಎಸ್ ಪ್ರೆಸ್ಸೊ. ಇದು 5 ಸೀಟ್‌ಗಳ ಹ್ಯಾಚ್‌ಬ್ಯಾಕ್‌ ಹೊಂದಿರುವ ಈ ಕಾರು 998 ಸಿಸಿ, 2 ಟ್ರಾನ್ಸ್‌ಮಿಷನ್ ಆಯ್ಕೆಗಳು, ಮ್ಯಾನುಯಲ್ ಹಾಗೂ ಆಟೊಮಿಟಿಕ್ ಸೇರಿದಂತೆ ಹಲವು ವಿಶಿಷ್ಟ್ಯಗಳನ್ನು ಹೊಂದಿದ್ದು, ಕಾರಿನ ಎಕ್ಸ್‌ಶೋರೂಂ ಬೆಲೆ 4.26 ಲಕ್ಷದಿಂದ 6.12 ಲಕ್ಷ ರೂಪಾಯಿವರೆಗೆ ಇದೆ. ಲೀಟರ್ ಪೆಟ್ರೋಲ್‌ಗೆ 32.73 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ.

ಹೊಂಡೈ ನ್ಯೂ ಸ್ಯಾಂಟ್ರೊ

ಸಿಎನ್‌ಜಿ ಮತ್ತು ಪೆಟ್ರೋಲ್ ಇಂಜಿನ್, ಮ್ಯಾನುಯಲ್ ಹಾಗೂ ಆಟೊಮಿಟಿಕ್ ಸೇರಿದಂತೆ ಹಲವು ವಿಶಿಷ್ಟ್ಯಗಳನ್ನು ಹೊಂದಿದೆ. ಕಾರಿನ ಎಕ್ಸ್‌ಶೋರೂಂ ಬೆಲೆ 4.87 ಲಕ್ಷ ದಿಂದ 6.45 ಲಕ್ಷ ರೂಪಾಯಿವರೆಗೆ ಇದೆ. ಲೀಟರ್ ಪೆಟ್ರೋಲ್‌ಗೆ 30.48 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. (This copy first appeared in Hindustan Times Kannada website. To read more like this please logon to kannada.hindustantime.com)

Whats_app_banner