ಒಮ್ಮೆ ಚಾರ್ಜ್ ಮಾಡಿದರೆ 190 ಕಿಮೀ ಓಡುತ್ತೆ, 4kwh ಬ್ಯಾಟರಿ ಪ್ಯಾಕ್; ಓಲಾ ಎಲೆಕ್ಟ್ರಿಕ್ S1 X ಸ್ಕೂಟರ್ ಬಿಡುಗಡೆ, ಬೆಲೆ ಹೀಗಿದೆ
Ola Electric S1 X: ಓಲಾ ಎಲೆಕ್ಟ್ರಿಕ್ S1 X ಎರಡು ಹೊಸ ವೇರಿಯಂಟ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಕೂಟರ್‌ಗೆ ಬೆಲೆ ಹಾಗೂ ವೈಶಿಷ್ಟ್ಯಗಳನ್ನ ತಿಳಿಯಿರಿ.
ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಓಲಾ ತನ್ನ ಹೊಸ ಸ್ಕೂಟರ್‌ಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಓಲಾ ಎಲೆಕ್ಟ್ರಿಕ್ S1 X (Ola Electric S1 X) ಹೊಸ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಎರಡು ವೇರಿಯಂಟರ್‌ಗಳಲ್ಲಿ ಬಿಡುಗಡೆಯಾಗಿರುವುದು ವಿಶೇಷ. ಈಗಾಗಲೇ ಬುಕಿಂಗ್ ಕೂಡ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈ 2 ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಹಾಗೂ ವೈಶಿಷ್ಟ್ಯಗಳನ್ನು ತಿಳಿಯೋಣ.
ಓಲಾ ಎಲೆಕ್ಟ್ರಿಕ್ S1 X ಹೊಸ ರೂಪಾಂತರಗಳ ವೈಶಿಷ್ಟ್ಯಗಳು ಹೀಗಿವೆ
ಓಲಾ ಎಲೆಕ್ಟ್ರಿಕ್ S1 X ಎರಡು ವೇರಿಯಂಟ್‌ಗಳು ಡ್ಯುಯಲ್ ಟೋನ್ ವಿನ್ಯಾಸದೊಂದಿಗೆ ಬರುತ್ತಿವೆ. ಡ್ಯುಯಲ್ ಪಾಡ್ ಎಲ್‌ಇಡಿ ಹೆಡ್‌ಲೈಟ್, ಫ್ಲಾಟ್ ಫುಟ್ ಬೋರ್ಡ್, ರೈಸ್ಡ್ ಹ್ಯಾಂಡಲ್ ಬಾರ್, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸಿಂಗಲ್ ಪೀಸ್ ಸೀಟ್, 12 ಇಂಚಿನ ಸ್ಟೀಲ್ ವೀನ್ಸ್, ಸ್ಲೀಕ್ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿವೆ.
ಇದನ್ನೂ ಓದಿ: ಬರ್ತಿದೆ ಭಾರತದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್
ಸವಾರರ ಸುರಕ್ಷತೆಗಾಗಿ ಈ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಮುಂದೆ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳು ಇವೆ. ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು, ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬರ್‌ಗಳು ಹೊಸ ಸ್ಕೂಟರ್‌ನಲ್ಲಿವೆ.
ಓಲಾ ಎಲೆಕ್ಟ್ರಿಕ್ S1 X ನ ಬ್ಯಾಟರಿ ಸಾಮರ್ಥ್ಯ
ಓಲಾ ಎಲೆಕ್ಟ್ರಿಕ್ S1 X ನ ಮೊದಲ ವೇರಿಯಂಟ್ 3KWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಒಮ್ಮೆ ಜಾರ್ಜ್ ಮಾಡಿದರೆ 143 ಕಿಲೋ ಮೀಟರ್ ವರೆಗೆ ಓಡಿಸಬಹದು. ಎರಡನೇ ವೇರಿಯಂಟ್ ಸ್ಕೂಟರ್‌ನಲ್ಲಿ 4KWh ಬ್ಯಾಟರಿ ಪ್ಯಾಕ್ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 190 ಕಿಲೋ ಮೀಟರ್ ವರೆಗೆ ಓಡುವ ಸಾಮರ್ಥ್ಯವಿದೆ ಎಂದು ಓಲಾ ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ: ಜುಲೈನಲ್ಲಿ ಆಗಮಿಸುವ ಹೊಸ ಕಾರು ಬೈಕ್ಗಳ ವಿವರ
ಓಲಾ ಎಲೆಕ್ಟ್ರಿಕ್ S1 X ಬೆಲೆ
ಓಲಾ ಎಲೆಕ್ಟ್ರಿಕ್ S1 X ನ 3KWh ಬ್ಯಾಟರಿ ಸಾಮರ್ಥ್ಯ ಮೊದಲ ವೇರಿಯಂಟ್ ಸ್ಕೂಟರ್ ಎಕ್ಸ್ ಶೋರೂಂ ಬೆಲೆ 89,999 ರೂಪಾಯಿಂದ ಆರಂಭವಾಗುತ್ತದೆ. 4KWh ಬ್ಯಾಟರಿ ಪ್ಯಾಕ್ ಹೊಂದಿರುವ ಎರಡನೇ ವೇರಿಯಂಟ್ ಸ್ಕೂಟರ್ ಎಕ್ಸ್ ಶೋರೂಂ ಬೆಲೆ 1,09,999 ರೂಪಾಯಿವರೆಗೆ ಇದೆ. ಬುಕಿಂಗ್ ಈಗಾಗಲೇ ಪ್ರಾರಂಭವಾಗಿದ್ದು, ಈ ವರ್ಷದ ಏಪ್ರಿಲ್‌ನಲ್ಲಿ ಗ್ರಾಹಕರ ಕೈಗೆ ಈ ಸ್ಕೂಟರ್‌ಗಳು ಲಭ್ಯವಾಗುವ ಸಾಧ್ಯತೆ ಇದೆ.
ಭಾರತದಲ್ಲಿ ಓಲಾ ಜೊತೆಗೆ ಇನ್ನೂ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿವೆ. ಓಲಾ ಎಲೆಕ್ಟ್ರಿಕ್ ಕಂಪನಿಯು ಬ್ಯಾಟರಿ ವಾರಂಟಿಯ ಕುರಿತು ಪ್ರಮುಖ ಘೋಷಣೆಗಳನ್ನು ಮಾಡಿದೆ. ತಮ್ಮ ಪೋರ್ಟಫೋಲಿಯೊದಲ್ಲಿರುವ ವಾಹನಗಳಿಗೆ 8 ವರ್ಷಗಳ ಬ್ಯಾಟರಿ ವಾರಂಟಿ ನೀಡುವುದಾಗಿ ಹೇಳಿದೆ. ಇಂಡಿಯಾ ಆಟೋಮೊಬೈಲ್‌ನ ದ್ವಿಚಕ್ರ ಎಲೆಕ್ಟ್ರಿಕ್ ವಿಭಾಗದಲ್ಲಿ ದೀರ್ಘಕಾಲದ ವಾರಂಟಿ ನೀಡಿರುವ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಓಲಾ ಪಾತ್ರವಾಗಿದೆ. ಗುಣಮಟ್ಟ ಮತ್ತು ಸೇವೆಗೆ ತಾವು ಬದ್ಧರಾಗಿದ್ದೇವೆ. ವಿಸ್ತೃತ ವಾರಂಟಿಯನ್ನು ಸಹ ನೀಡಲಾಗುತ್ತಿದೆ ಎಂದು ಆ ಕಂಪನಿ ಹೇಳಿಕೊಂಡಿದೆ.
ಮತ್ತೊಂದೆಡೆ, ಓಲಾ ಎಲೆಕ್ಟ್ರಿಕ್ ತಮ್ಮ ಸಾರ್ವಜನಿಕ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ವಿಸ್ತರಿಸುವುದಾಗಿ ಹೇಳಿದೆ. ಪ್ರಸ್ತುತ 1000 ಚಾರ್ಜರ್‌ಗಳಿವೆ. ಮುಂದಿನ ತ್ರೈಮಾಸಿಕದ ವೇಳೆಗೆ 10,000 ಚಾರ್ಜರ್‌ಗಳಿಗೆ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದೆ. ಇದೆಲ್ಲವನ್ನೂ ಗಮನಿಸಿದರೆ ಹೆಚ್ಚುತ್ತಿರುವ ಪೈಪೋಟಿಯ ನಡುವೆ ಓಲಾ ಎಲೆಕ್ಟ್ರಿಕ್ ಕಂಪನಿಯು ದ್ವಿಚಕ್ರ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ನಂಬರ್ 1 ಸ್ಥಾನಕ್ಕಾಗಿ ಸಾಕಷ್ಟು ಶ್ರಮ ವಹಿಸುತ್ತಿರುವುದು ಇದರಿಂದ ಗೊತ್ತಾಗುತ್ತಿದೆ. (This copy first appeared in Hindustan Times Kannada website. To read more like this please logon to kannada.hindustantime.com).