Budget Cars: ಕಡಿಮೆ ರೇಟ್‌ನಲ್ಲಿ ಖರೀದಿಸಲು ಈ 5 ಅಗ್ಗದ ಕಾರುಗಳು ಬೆಸ್ಟ್, ಆರಂಭಿಕ ದರ 3.90 ಲಕ್ಷ ರೂಪಾಯಿ
Budget Cars: ಸಾಕಷ್ಟು ಜನರು ಕಡಿಮೆ ದರದ ಕಾರು ಖರೀದಿಸಲು ಬಯಸುತ್ತಾರೆ. ಮಧ್ಯಮ ವರ್ಗದ ಜನರಿಗೆ ಈ ಕಾರುಗಳು ಸೂಕ್ತವಾಗಿವೆ. ಯಾವ ಕಾರುಗಳು ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್‌ಗಳೊಂದಿಗೆ ದೊರಕುತ್ತದೆ ಎಂಬ ವಿವರ ಇಲ್ಲಿದೆ.
Budget Cars: ಮೊದಲ ಬಾರಿಗೆ ಕಾರು ಖರೀದಿಸಲು ಬಯಸುವವರು ಸಾಮಾನ್ಯವಾಗಿ ಬಜೆಟ್ ಕಾರುಗಳಿಗೆ ಆದ್ಯತೆ ನೀಡುತ್ತಾರೆ. ಈಗಷ್ಟೇ ಡ್ರೈವಿಂಗ್ ಕಲಿತವರು ಕೂಡ ಕಡಿಮೆ ದರದ ಕಾರುಗಳನ್ನು ಖರೀದಿಸಲು ಬಯಸುತ್ತಾರೆ. ನೀವು ಶೀಘ್ರದಲ್ಲೇ ಅಗ್ಗದ ಕಾರು ಖರೀದಿಸಲು ಯೋಚಿಸುತ್ತಿದ್ದರೆ ಇಲ್ಲಿ ನಿಮಗಾಗಿ ಕೆಲವು ಆಯ್ಕೆಗಳಿವೆ. ಭಾರತೀಯ ಆಟೋಮೊಬೈಲ್ ಕ್ಷೇತ್ರ ದೊಡ್ಡದಾಗಿದೆ. ಇಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಕಾರುಗಳಿಂದ ಹಿಡಿದು ಮಧ್ಯಮ ವರ್ಗದವರು ಖರೀದಿಸಬಹುದಾದ ಬಜೆಟ್ ಕಾರುಗಳು ಇವೆ. ಕಡಿಮೆ ದರದ ಈ ಕಾರುಗಳಲ್ಲಿಯೂ ಉತ್ತಮ ಫೀಚರ್‌ಗಳು ದೊರಕುತ್ತವೆ. ಐದು ಲಕ್ಷ ರೂಪಾಯಿ ಆಸುಪಾಸಿನಲ್ಲಿ ಇಂತಹ ಕಾರುಗಳನ್ನು ಖರೀದಿಸಬಹುದು. ಕೆಲವು ಕಾರುಗಳ ಆರಂಭಿಕ ಎಕ್ಸ್ ಶೋರೂಂ ದರ 3.90 ಲಕ್ಷ ರೂಪಾಯಿ ಅಷ್ಟೇ.
ಮಾರುತಿ ಸುಜುಕಿ ಆಲ್ಟೊ ಕೆ10
ಮಾರುತಿ ಸುಜುಕಿ ಆಲ್ಟೊ ಇಲ್ಲಿಯವರೆಗೆ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರು. ಕಳೆದ ವರ್ಷ ಆಲ್ಟೊ 800 ಸ್ಥಗಿತಗೊಂಡಿರುವುದು ಗೊತ್ತೇ ಇದೆ. ಈಗ ಬಳಕೆದಾರರು ಆಲ್ಟೊ ಕೆ10 ಖರೀದಿಸಬಹುದು. ಮಾರುತಿ ಆಲ್ಟೊ ಕೆ10 ಆರಂಭಿಕ ಬೆಲೆ (ಎಕ್ಸ್ ಶೋ ರೂಂ) 3.99 ಲಕ್ಷ ರೂಪಾಯಿ. 1.0-ಲೀಟರ್ ಕೆ10 ಪೆಟ್ರೋಲ್ ಎಂಜಿನ್ 67 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು 89 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
ಮಾರುತಿ ಸುಜುಕಿ ಎಸ್-ಪ್ರೆಸ್ಸೊ
ನೀವು ಬಜೆಟ್ ವಿಭಾಗದಲ್ಲಿ ಹೊಸ ಕಾರನ್ನು ಖರೀದಿಸಲು ಬಯಸಿದರೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸೂಕ್ತವಾಗಿದೆ. ಇದು ಮಾರುತಿ ಸುಜುಕಿಯ ಮತ್ತೊಂದು ಕೈಗೆಟುಕುವ ಮಾದರಿ. ಇದರ ಆರಂಭಿಕ ಬೆಲೆ 4.26 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಎಸ್-ಪ್ರೆಸ್ಸೊ ಆಲ್ಟೊ ಕೆ10 ನಂತೆಯೇ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಮ್ಯಾನುವಲ್ ಗಿಯರ್ ಹೊಂದಿರುವ ಕಾರಿನ ಮೂಲ ಆವೃತ್ತಿಯ ದರ ಕೇವಲ 5 ಲಕ್ಷ ರೂಪಾಯಿಗಿಂತ ಕಡಿಮೆ (ಎಕ್ಸ್ ಶೋ ರೂಂ) ಇದೆ.
ಮಾರುತಿ ಸುಜುಕಿ ಸೆಲೆರಿಯೊ
ಮಾರುತಿ ಸುಜುಕಿ ಸೆಲೆರಿಯೊ ಸಹ ಕೈಗೆಟುಕುವ ದರದ ಕಾರು. ಮಾರುತಿ ಸೆಲೆರಿಯೊ 1.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಗರಿಷ್ಠ 67 ಬಿಎಚ್‌ಪಿ ಪವರ್ ಮತ್ತು 89 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಮಾರುತಿ ಸೆಲೆರಿಯೊ ಪ್ರಸ್ತುತ 4 ಆವೃತ್ತಿಗಳಲ್ಲಿ ಲಭ್ಯವಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸೆಲೆರಿಯೊದ ಆರಂಭಿಕ ಎಕ್ಸ್ ಶೋ ರೂಂ ಬೆಲೆ 5.36 ಲಕ್ಷ ರೂ. ಇದೆ.
ರೆನಾಲ್ಟ್ ಕ್ವಿಡ್
ಈ ಕಾರು ಕಾರು 0.8-ಲೀಟರ್ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಆದರೆ ಕಳೆದ ವರ್ಷ ಕಾರಿನಿಂದ ಚಿಕ್ಕ ಎಂಜಿನ್ ತೆಗೆಯಲಾಗಿತ್ತು. ಕ್ವಿಡ್‌ನ ಆರಂಭಿಕ (ಎಕ್ಸ್ ಶೋ ರೂಂ) ಬೆಲೆ 4.69 ಲಕ್ಷ ರೂ. ಕ್ವಿಡ್ 1.0-ಲೀಟರ್ ಎಸ್‌ಸಿ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಗರಿಷ್ಠ 68 ಬಿಎಚ್‌ಪಿ ಪವರ್ ಮತ್ತು 91 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
ಟಾಟಾ ಟಿಯಾಗೊ
ನೀವು ಬಜೆಟ್ ವಿಭಾಗದಲ್ಲಿ ಹೊಸ ಕಾರನ್ನು ಖರೀದಿಸಲು ಬಯಸಿದರೆ ಟಾಟಾ ಟಿಯಾಗೊ ನಿಮಗೆ ಉತ್ತಮ ಆಯ್ಕೆಯಾಗಿದೆ. ಮೂಲ ಆವೃತ್ತಿ ದರ ಕಡಿಮೆ ಇದೆ. ಟಾಟಾ ಟಿಯಾಗೊ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಗರಿಷ್ಠ 86 ಬಿಎಚ್‌ಪಿ ಪವರ್ ಮತ್ತು 113 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯಲ್ಲಿಯೂ ಲಭ್ಯ. ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ಆರಂಭಿಕ ಎಕ್ಸ್ ಶೋ ರೂಂ ಬೆಲೆ 4.99 ಲಕ್ಷ ರೂ. ಇದೆ.