ಚಳಿಗಾಲದಲ್ಲಿ ಮಗುವಿಗೆ ಎಣ್ಣೆ ಮಸಾಜ್ ಮಾಡುವುದು ಹೇಗೆ ಎಂದು ಕಳವಳ ಪಡದಿರಿ; ಈ 5 ವಿಚಾರ ತಿಳಿದುಕೊಂಡಿರಿ
ಚಳಿಗಾಲದಲ್ಲಿ ಮಗುವಿಗೆ ಮಸಾಜ್ ಮಾಡುವುದು ಎಂದರೆ ಕೆಲವು ತಾಯಂದಿರು ಚಿಂತೆಗೊಳಗಾಗುತ್ತಾರೆ. ಶಿಶುಗಳಿಗೆ ಎಣ್ಣೆ ಹಚ್ಚುವುದರಿಂದ ಶೀತ ಉಂಟಾಗಬಹುದು ಎಂಬುದು ಕೆಲವರ ಕಳವಳಕ್ಕೆ ಕಾರಣ. ನವಜಾತ ಶಿಶುವಿನಮಸಾಜ್‌ಗೆ ಸಂಬಂಧಿಸಿದಂತೆ ಈ ವಿಷಯಗಳನ್ನು ನೆನಪಿನಲ್ಲಿಡಿ.
![ಚಳಿಗಾಲದಲ್ಲಿ ಮಗುವಿಗೆ ಮಸಾಜ್ ಮಾಡುವುದು ಹೇಗೆ ಎಂದು ಕಳವಳ ಪಡದಿರಿ; ಈ ಟಿಪ್ಸ್ ಅನುಸರಿಸಿ ಚಳಿಗಾಲದಲ್ಲಿ ಮಗುವಿಗೆ ಮಸಾಜ್ ಮಾಡುವುದು ಹೇಗೆ ಎಂದು ಕಳವಳ ಪಡದಿರಿ; ಈ ಟಿಪ್ಸ್ ಅನುಸರಿಸಿ](https://images.hindustantimes.com/kannada/img/2024/12/25/550x309/baby_massage_1735109452473_1735109458970.png)
ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ಮಸಾಜ್ ಮಾಡುವುದು ಬಹಳ ಮುಖ್ಯ. ಇದು ಮಕ್ಕಳಿಗೆ ಆರಾಮದಾಯಕ ಭಾವನೆಯನ್ನು ನೀಡುತ್ತದೆ. ಅಲ್ಲದೆ ಮಕ್ಕಳ ಬೆಳವಣಿಗೆಗೂ ಪ್ರಯೋಜನಕಾರಿ. ಆದರೆ, ಚಳಿಗಾಲದಲ್ಲಿ ಮಗುವಿದೆ ಮಸಾಜ್ ಮಾಡಬೇಕೇ ಅಥವಾ ಬೇಡವೇ ಎಂದು ಕೆಲವು ತಾಯಂದಿರು ಗೊಂದಲಕ್ಕೊಳಗಾಗುತ್ತಾರೆ. ಒಂದೋ ಅವರು ಮಸಾಜ್ ಮಾಡದಿರಬಹುದು. ಮಗುವಿಗೆ ಶೀತ ಅಥವಾ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂಬ ಕಾರಣಕ್ಕೆ ಕೆಲವು ತಪ್ಪುಗಳನ್ನು ಮಾಡುತ್ತಾರೆ. ನವಜಾತ ಶಿಶುವಿನ ಮಸಾಜ್‌ಗೆ ಸಂಬಂಧಿಸಿದಂತೆ ಈ ವಿಷಯಗಳನ್ನು ನೆನಪಿನಲ್ಲಿಡಿ. ಸ್ತ್ರೀರೋಗತಜ್ಞೆ ಶೆಫಾಲಿ ಎಂಬುವವರು ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಚಿಕ್ಕ ಮಕ್ಕಳಿಗೆ ಮಸಾಜ್ ಮಾಡುವಾಗ ಈ ವಿಚಾರ ನೆನಪಿನಲ್ಲಿಡಿ
ಎಣ್ಣೆಯನ್ನು ಲಘುವಾಗಿ ಬಿಸಿ ಮಾಡಿ: ಮಸಾಜ್ ಮಾಡುವ ಮುನ್ನ ಎಣ್ಣೆಯನ್ನು ಯಾವಾಗಲೂ ಸ್ವಲ್ಪ ಉಗುರು ಬೆಚ್ಚಗೆ ಬಿಸಿ ಮಾಡಿ. ಇದನ್ನು ಮಗುವಿನ ದೇಹದ ಮೇಲೆ ಹಚ್ಚುವುದರಿಂದ ನೆಗಡಿ ಸಮಸ್ಯೆ ಉಂಟಾಗುವುದಿಲ್ಲ.
ಮಕ್ಕಳ ಬಟ್ಟೆಗಳನ್ನು ತೆಗೆಯಬೇಡಿ: ಮಸಾಜ್ ಮಾಡಲು ಮಗುವಿನ ಬಟ್ಟೆಗಳನ್ನು ತೆಗೆಯುವುದು ಅವಶ್ಯಕ. ಮಗುವಿನ ಉಡುಪುಗಳನ್ನು ತೆಗೆದು ಎಣ್ಣೆಯಿಂದ ಮಸಾಜ್ ಮಾಡಲಾಗುತ್ತದೆ. ಆದರೆ, ಶೀತ ವಾತಾವರಣದಲ್ಲಿ ಇದನ್ನು ಮಾಡದಿರಿ. ಬಟ್ಟೆಯನ್ನು ತೆಗೆದು ಮಗುವಿಗೆ ಮಸಾಜ್ ಮಾಡುವುದರಿಂದ ಶೀತ ಉಂಟಾಗಬಹುದು. ಹೀಗಾಗಿ ಮಗುವಿನ ಬಟ್ಟೆಯನ್ನು ತೆಗೆಯದೆ, ಹಾಗೆಯೇ ಎಣ್ಣೆ ಹಚ್ಚುವುದು ಉತ್ತಮ. ಮಗುವಿನ ಬಟ್ಟೆಯೊಳಗಿಂದ ಕೈ ಹಾಕಿ ಎಣ್ಣೆ ಹಚ್ಚಿ ಮಸಾಜ್ ಮಾಡಬಹುದು. ಇದರಿಂದ ಮಗುವಿಗೆ ಅಷ್ಟಾಗಿ ಚಳಿಯೂ ಆಗುವುದಿಲ್ಲ.
ಕೈಗಳನ್ನು ಬೆಚ್ಚಗಾಗಿಸಿ: ಮಸಾಜ್ ಮಾಡುವ ಮೊದಲು ನಿಮ್ಮ ಕೈಗಳಿಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿ. ಮೊದಲು ನಿಮ್ಮ ಕೈಗಳನ್ನು ಬೆಚ್ಚಗೆ ಮಾಡಿ. ತಣ್ಣನೆಯ ಕೈಗಳಿಂದ ಮಗುವಿಗೆ ಮಸಾಜ್ ಮಾಡುವುದರಿಂದ ಅನಾನುಕೂಲತೆ ಉಂಟಾಗಬಹುದು. ಹೀಗಾಗಿ ಮೊದಲಿಗೆ ಕೈಗಳನ್ನು ಬೆಚ್ಚಗಾಗಿಸಿ ಮಸಾಜ್ ಮಾಡುವುದು ಉತ್ತಮ.
ಕೋಣೆಯ ಉಷ್ಣಾಂಶವನ್ನು ನಿರ್ವಹಿಸಿ: ಮಸಾಜ್ ಮಾಡುವ ಮೊದಲು, ಕೋಣೆಯಲ್ಲಿ ಫ್ಯಾನ್ ಹಾಕಿದ್ದರೆ ಆಫ್ ಮಾಡಿ. ಕಿಟಕಿಗಳನ್ನು ಮುಚ್ಚಿ. ತಾಪಮಾನವನ್ನು ಸಾಮಾನ್ಯಗೊಳಿಸಲು ಹೀಟರ್ ಅನ್ನು ಆನ್ ಮಾಡಿ. ಹೀಟರ್ ಅನ್ನು ಆನ್ ಮಾಡುವುದರ ಜೊತೆಗೆ, ಕೋಣೆಯ ತೇವಾಂಶವನ್ನು ಸಹ ಕಾಪಾಡಿಕೊಳ್ಳಿ. ಇದರಿಂದ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲದೆ, ಶೀತದ ಅಪಾಯವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಮಗುವನ್ನು ನೇರವಾಗಿ ಪ್ಲಾಸ್ಟಿಕ್ ಅಥವಾ ಹತ್ತಿ ಹಾಳೆಗಳ ಮೇಲೆ ಇಡಬೇಡಿ: ಎಣ್ಣೆ ಮಸಾಜ್ ಮಾಡಿದ ಬಳಿಕ ಬಹುತೇಕ ಮಂದಿ ಮಗುವನ್ನು ಪ್ಲಾಸ್ಟಿಕ್ ಚಾಪೆಯಲ್ಲಿ ಮಲಗಿಸುತ್ತಾರೆ. ಹತ್ತಿ ಅಥವಾ ಪ್ಲಾಸ್ಟಿಕ್ ಚಾಪೆ ಮೇಲೆ ಶಿಶುವನ್ನು ಮಲಗಿಸುವುದರಿಂದ ಮಗುವಿಗೆ ಶೀತದ ಸಮಸ್ಯೆ ಉಂಟಾಗಬಹುದು. ಯಾವಾಗಲೂ ಸ್ವಚ್ಛವಾದ ಉಣ್ಣೆ ಬಟ್ಟೆ ಅಥವಾ ಹಾಸಿಗೆಯಲ್ಲಿ ಮಲಗಿಸುವುದು ಉತ್ತಮ. ಇದರಿಂದ ಮಗುವಿಗೆ ಶೀತವಾಗುವುದಿಲ್ಲ. ಹಾಗೆಯೇ ಈ ರೀತಿ ಮಸಾಜ್ ಮಾಡಿ ಮಲಗಿಸುವುದರಿಂದ ಯಾವುದೇ ರೀತಿಯ ಅನಾನುಕೂಲ ಉಂಟಾಗುವುದಿಲ್ಲ.
![Whats_app_banner Whats_app_banner](https://kannada.hindustantimes.com/static-content/1y/wBanner.png)