Baby Names: ಭಗವದ್ಗೀತೆಯಿಂದ ಪುಟ್ಟ ಕಂದನಿಗೆ ಇಡಬಹುದಾದ ಸುಂದರ ಹೆಸರುಗಳಿವು; ಎಲ್ಲರೂ ಇಷ್ಟ ಪಡುತ್ತಾರೆ
Baby Names: ನಿಮ್ಮ ಮಗುವಿಗೆ ಸುಂದರವಾದ ಹೆಸರು ಹುಡುಕುತ್ತಿದ್ದೀರಾ? ನಾವು ನಿಮಗೆ ಇಲ್ಲಿ ಕೆಲವು ಹೆಸರುಗಳನ್ನು ಪಟ್ಟಿ ಮಾಡಿದ್ದೇವೆ. ಇವು ಬಹಳ ಅರ್ಥಪೂರ್ಣವಾಗಿವೆ ಮತ್ತು ಭಗವದ್ಗೀತೆಯಿಂದ ಆಯ್ಕೆ ಮಾಡಲಾಗಿರುವ ಹೆಸರುಗಳು. ಈ ಹೆಸರುಗಳು ನಿಮ್ಮ ಪುಟ್ಟ ಕಂದನಿಗೆ ಸೂಕ್ತ ಎನಿಸಬಹುದು.
ಮನೆಯಲ್ಲಿ ಮಗು ಜನಿಸಿದ ತಕ್ಷಣ ಪೋಷಕರಿಗೆ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಾಗುತ್ತವೆ. ಈ ಪೈಕಿ ತಮ್ಮ ಪುಟ್ಟ ಕಂದನಿಗೆ ಒಳ್ಳೆಯ ಹೆಸರು ಇಡುವುದು ಕೂಡ ಸೇರಿರುತ್ತೆ. ಮಗುವಿನ ಹೆಸರು ಅದರ ಜೀವನದುದ್ದಕ್ಕೂ ಸಂಪೂರ್ಣ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ಸ್ವಭಾವ, ವ್ಯಕ್ತಿತ್ವವನ್ನು ಹೆಸರಿನ ಮೂಲಕವೂ ನೋಡುತ್ತಾರೆ. ಇದಕ್ಕಾಗಿಯೇ ಪೋಷಕರು ತಮ್ಮ ಮಗುವಿಗೆ ಹೆಸರನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಾರೆ. ಭಗವದ್ಗೀತೆಯಲ್ಲಿನ ಕೆಲವು ಹೆಸರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದು ಕಂದನಿಗೆ ಹೆಸರಿಡಬೇಕಾದ ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತೆ. ಇಲ್ಲಿ ನೀಡಲಾಗಿರುವ ಹೆಸರುಗಳು ಕೇವಲ ಕೇಳುವುದಕ್ಕೆ ಅಷ್ಟೇ, ಒಳ್ಳೆಯ ಅರ್ಥವನ್ನೂ ಹೊಂದಿವೆ. ಭಗವದ್ಗೀತೆಯ ಶ್ಲೋಕಗಳಿಂದ ಸ್ಫೂರ್ತಿ ಪಡೆದ ಹೆಸರುಗಳಲ್ಲಿ ನಿಮ್ಮ ಪುಟ್ಟ ಮಗನಿಗೆ ನೀವು ಯಾವ ಹೆಸರನ್ನು ಸೂಕ್ತ ಎನಿಸುತ್ತೆ ಎಂಬುದನ್ನು ನೀವೇ ನಿರ್ಧರಿಸಿ.
ಭಗವದ್ಗೀತೆಯಿಂದ ಪ್ರೇರಿತರಾದ ಹುಡುಗರ ಹೆಸರುಗಳು
ಅಭಿರಥ: ಈ ಹೆಸರಿನ ಅರ್ಥ ಉತ್ತಮ ಸಾರಥಿ.
ಅರ್ಜುನ: ಮಹಾಭಾರತದ ಪಾಂಡವರ ಮೂರನೇ ಪುತ್ರನ ಮಗ. ಈತನನ್ನು ಮಹಾನ್ ಯೋಧ ಎಂದು ಹೇಳಲಾಗುತ್ತದೆ.
ಮಾಧವ: ಭಗವಾನ್ ಕೃಷ್ಣನನ್ನು ಮಾಧವ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಅದ್ವೈತ್ : ಆತನ ವ್ಯಕ್ತಿತ್ವವು ತುಂಬಾ ವಿಭಿನ್ನ ಮತ್ತು ಅನನ್ಯವಾಗಿದೆ ಎಂಬ ಅರ್ಥವನ್ನು ಕೊಡುತ್ತದೆ
ಅಚ್ಯುತ್: - ಈ ಹೆಸರು ಶ್ರೀಕೃಷ್ಣನ ಅನೇಕ ಹೆಸರುಗಳಲ್ಲಿ ಒಂದಾಗಿದೆ.
ಕೇಶವ್: ಶ್ರೀ ಕೃಷ್ಣನ ಸುಂದರವಾದ ಕೂದಲಿನ ಕಾರಣದಿಂದಾಗಿ ಕೇಶವ್ ಎಂದೂ ಕರೆಯಲ್ಪಡುತ್ತಾನೆ. ನೀವು ನಿಮ್ಮ ಮಗನಿಗೆ ಈ ಹೆಸರನ್ನು ಇಡಬಹುದು.
ಪಲಾಶ್: ಇದೊಂದು ಮರದ ಹೆಸರು. ಈ ಮರದ ಹೂವುಗಳಿಂದ ಹೋಳಿ ಬಣ್ಣಗಳನ್ನು ಸಹ ತಯಾರಿಸಲಾಗುತ್ತದೆ.
ಅಮಿಶ್: - ಈ ಹೆಸರಿನ ಅರ್ಥ ನಿಜವಾದ, ವಿಶ್ವಾಸಾರ್ಹ ವ್ಯಕ್ತಿ.
ಅಯಾನು: ಸೂರ್ಯನ ಪಥವನ್ನು ಅಯನ ಎಂದು ಕರೆಯಲಾಗುತ್ತದೆ. ಅಯನ ಪದದಿಂದ ಅಯಾನು ಬಂದಿದೆ.
ವಿಭಾಗ