Baby Boy Names: ಗಂಡು ಮಗುವಿಗೆ ಇಡಬಹುದಾದ ರಾಜಮನೆತನದ ಹೆಸರುಗಳು; ವಿಶೇಷವಾಗಿದ್ದು, ಕೇಳಲು ಮುದ್ದಾಗಿವೆ ನೋಡಿ
ನಿಮ್ಮನೆಯಲ್ಲಿ ಗಂಡು ಮಗು ಜನಿಸಿದ್ದು ಮಗುವಿಗೆ ವಿಶೇಷವಾದ ಹೆಸರು ಇಡಬೇಕು ಅಂತಿದ್ದೀರಾ? ರಾಜ ಮನೆತನಗಳಲ್ಲಿ ಇರಿಸಿದ್ದ ರಾಜರು, ಚಕ್ರವರ್ತಿಗಳ ಹೆಸರು ಹಾಗೂ ಅದರ ಅರ್ಥ ವಿವರಣೆ ಇಲ್ಲಿದೆ. ಈ ಹೆಸರುಗಳನ್ನು ನಿಮ್ಮ ಮಗುವಿಗೂ ಆಯ್ಕೆ ಮಾಡಬಹುದು.

ಮಗು ಹುಟ್ಟಿದಾಗ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ ಹರಡುತ್ತದೆ. ಗಂಡಾಗಲಿ, ಹೆಣ್ಣಾಗಲಿ ಒಂದು ಮಗು ಬೇಕು ಎನ್ನುವ ಈ ಕಾಲದಲ್ಲಿ ಮಗುವಿಗೆ ಹೆಸರಿಡುವುದು ಸವಾಲಾಗುತ್ತದೆ. ವಿಶೇಷವಾದ, ವಿಭಿನ್ನ ಅರ್ಥ ಬರುವ ಹೆಸರು ಇರಿಸಬೇಕು ಎಂದು ಎಲ್ಲರೂ ಬಯಸುತ್ತಾರೆ.
ನಿಮ್ಮ ಮನೆಯಲ್ಲಿ ಗಂಡು ಮಗು ಹುಟ್ಟಿದ್ದು, ಮಗುವಿಗಾಗಿ ವಿಶೇಷ ಹೆಸರುಗಳ ಹುಡುಕಾಟದಲ್ಲಿ ನೀವಿರಬಹುದು. ನಾವು ಇಲ್ಲಿ ಕೆಲವು ಹೆಸರುಗಳನ್ನು ಪಟ್ಟಿ ನೀಡಿದ್ದೇವೆ. ಹೆಸರು ಒಬ್ಬ ವ್ಯಕ್ತಿಗೆ ಅನನ್ಯತೆಯನ್ನು ನೀಡುತ್ತದೆ. ವ್ಯಕ್ತಿಯ ಹೆಸರು ಅವರ ಜೀವನದುದ್ದಕ್ಕೂ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಹಲವು ಪೋಷಕರು ತಮ್ಮ ಮಗುವಿಗೆ ಅರ್ಥಪೂರ್ಣವಾದ ಹೆಸರನ್ನು ಹುಡುಕುತ್ತಾರೆ. ನಿಮ್ಮ ಮಗುವಿಗೆ ರಾಜರು ಮತ್ತು ಚಕ್ರವರ್ತಿಗಳಿಗೆ ಸಂಬಂಧಿಸಿದ ರಾಜ ಮನೆತನದ ಹೆಸರನ್ನು ಇಡಲು ಬಯಸಿದರೆ, ಇಲ್ಲೊಂದಿಷ್ಟು ಹೆಸರು ಹಾಗೂ ಅರ್ಥ ವಿವರಣೆಗಳಿವೆ. ಇವುಗಳಲ್ಲಿ ನಿಮಗೆ ಇಷ್ಟವಾದದ್ದನ್ನು ಆರಿಸಿ.
ಗಂಡು ಮಕ್ಕಳಿಗೆ ಇಡಬಹುದಾದ ರಾಜಮನೆತನದ ಹೆಸರು
ಅಭಯ್ ರಾಜ್: ನೀವು ಕಂದಮ್ಮನಿಗೆ ಈ ರಾಜರ ಹೆಸರನ್ನು ಆಯ್ಕೆ ಮಾಡಬಹುದು. ಈ ಹೆಸರು ಕೇಳಲು ಕೂಡ ವಿಭಿನ್ನವಾಗಿದೆ. ಇದು ವಿಶೇಷವಾದ ಹೆಸರಾಗಿದ್ದು, ಈಗಿನ ಕಾಲಕ್ಕೆ ಹೊಂದುತ್ತದೆ.
ಹರ್ಷವರ್ಧನ್: ಇತಿಹಾಸದಲ್ಲಿದ್ದ ಅತ್ಯಂತ ಶಕ್ತಿಶಾಲಿ ರಾಜನೀತ , ಮಹಾರಾಜ ಹರ್ಷವರ್ಧನನ ಹೆಸರು ಕೂಡ ತುಂಬಾ ವಿಶಿಷ್ಟವಾಗಿದೆ. ರಾಜಮನೆತನದ ಈ ಹೆಸರನ್ನು ನಿಮ್ಮ ಮಗುವಿಗೂ ಇಡಬಹುದು.
ಸಂಗ್ರಾಮ್: ಸಂಗ್ರಾಮ ಎಂದರೆ ಯುದ್ಧ. ಯುದ್ಧವು ಶೌರ್ಯದೊಂದಿಗೆ ಸಂಬಂಧ ಹೊಂದಿದೆ. ಈ ಹೆಸರು ನಿಮ್ಮ ಮಗುವಿಗೆ ಚೆನ್ನಾಗಿ ಹೊಂದುತ್ತದೆ. ಇದು ಟ್ರೆಂಡಿ ಆಗಿ ಕೂಡ ಇದೆ.
ಆರ್ಯಮಾನ್: ಈ ಹೆಸರು ಸಾಂಪ್ರದಾಯಿಕ ಮಾತ್ರವಲ್ಲ, ಕೇಳಿಸಿಕೊಳ್ಳಲು ತುಂಬಾ ಆಧುನಿಕವೂ ಆಗಿದೆ. ನಿಮ್ಮ ಪ್ರೀತಿಯ ಮಗನಿಗೆ ಈ ಹೆಸರನ್ನು ಇಡಬಹುದು.
ಶೌರ್ಯವಾನ್: ಶೌರ್ಯ ಮತ್ತು ಧೈರ್ಯಕ್ಕೆ ಸಂಬಂಧಿಸಿದ ಈ ರಾಜಮನೆತನದ ಹೆಸರು ಕೂಡ ಬಹಳ ವಿಶಿಷ್ಟ ಮತ್ತು ಸುಂದರವಾಗಿದೆ.
ಚೈತನ್ಯವರ್ಧನ: ಇದು ರಜಪೂತ ಹೆಸರು. ನಿಮ್ಮ ಮಗುವಿಗೆ ದೊಡ್ಡ ಹೆಸರು ಇಡಲು ಬಯಸಿದರೆ, ಅದೇ ಅತ್ಯುತ್ತಮ ಹೆಸರಾಗಿರುತ್ತದೆ. ಇದು ಬಹಳ ವಿಭಿನ್ನವಾದ ಹೆಸರು ಕೂಡ ಹೌದು.
ಅಭಿಜಿತ್: ಅಭಿಜಿತ್ ಎಂದರೆ ಎಂದಿಗೂ ಸೋಲದ ವ್ಯಕ್ತಿ. ನಿಮ್ಮ ಮಗುವಿಗೆ ಈ ಸುಂದರವಾದ ಹೆಸರನ್ನು ನೀವು ಇಡಬಹುದು.
ರಂಜಿತ್: ಮಹಾರಾಜ ರಂಜಿತ್ ಸಿಂಗ್ ಅವರಿಂದ ಸ್ಫೂರ್ತಿ ಪಡೆದು, ನಿಮ್ಮ ಪ್ರೀತಿಪಾತ್ರರಿಗೆ ಈ ಹೆಸರನ್ನು ಇಡಬಹುದು. ಧೈರ್ಯದಿಂದ ತುಂಬಿರುವ ಈ ಹೆಸರು ಎಲ್ಲರಿಗೂ ಬಹಳ ಜನಪ್ರಿಯವಾಗಿದೆ.
ರಣವೀರ್: ಯುದ್ಧಭೂಮಿಯಲ್ಲಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸುವ ವೀರರನ್ನು ರಣವೀರ್ ಎಂದು ಕರೆಯಲಾಗುತ್ತದೆ. ಈ ಹೆಸರು ತುಂಬಾ ಪುರುಷಾರ್ಥದ್ದಾಗಿದೆ.
ದಿಗ್ವಿಜಯ್: ದಿಗ್ವಿಜಯ್ ಎಂದರೆ ಹತ್ತು ದಿಕ್ಕುಗಳಲ್ಲಿಯೂ ತನ್ನ ವಿಜಯದ ಧ್ವಜವನ್ನು ಹಾರಿಸಿದವನು. ನಿಮ್ಮ ಮಗನಿಗೆ ಈ ಸುಂದರವಾದ ಹೆಸರನ್ನು ನೀವು ಇಡಬಹುದು.
ರಿಷಭ್ ರಾಜ್: ಇದು ರಜಪೂತ ಹೆಸರು. ನೀವು ಮಗುವಿಗೆ ಪ್ರೀತಿಯಿಂದ ರಿಷಭ್ ಎಂದು ಕರೆಯಬಹುದು.
ರಣಧೀರ್: ರಣಧೀರ್ ತುಂಬಾ ಮುದ್ದಾದ ಮತ್ತು ಅರ್ಥಪೂರ್ಣ ಹೆಸರು. ಇದನ್ನು ಸಾಂಪ್ರದಾಯಿಕ ಮತ್ತು ಆಧುನಿಕ ಹೆಸರಾಗಿ ಪರಿಗಣಿಸಬಹುದು.
ಪ್ರತಾಪ್: ನೀವು ಮಹಾರಾಣಾ ಪ್ರತಾಪ್‌ನಂತೆ ಧೈರ್ಯಶಾಲಿಯಾಗಲು ಬಯಸಿದರೆ, ನಿಮ್ಮ ಮಗನಿಗೆ ಅವರ ಹೆಸರಿಡಬಹುದು.
ಪೃಥ್ವಿರಾಜ್: ಇದು ವೀರ ಯೋಧ ಮಹಾರಾಜ ಪೃಥ್ವಿರಾಜ್ ಚೌಹಾಣ್ ಅವರ ಹೆಸರು. ನಿಮ್ಮ ಮಗನಿಗೆ ನೀವು ಈ ಹೆಸರನ್ನೂ ಇಡಬಹುದು.

ವಿಭಾಗ