ದುಪ್ಪಟ್ಟಾಯ್ತು ರೈಲ್ವೆ ಟಿಕೆಟ್ ದರ, ಬೆಂಗಳೂರಿನಿಂದ ಕೋಲ್ಕತ್ತ ಪ್ರಯಾಣಕ್ಕೆ 10,000 ರೂಪಾಯಿ; ಜಾಲತಾಣದಲ್ಲಿ ಶುರುವಾಯ್ತು ತರಹೇವಾರಿ ಚರ್ಚೆ
ಕನ್ನಡ ಸುದ್ದಿ  /  ಜೀವನಶೈಲಿ  /  ದುಪ್ಪಟ್ಟಾಯ್ತು ರೈಲ್ವೆ ಟಿಕೆಟ್ ದರ, ಬೆಂಗಳೂರಿನಿಂದ ಕೋಲ್ಕತ್ತ ಪ್ರಯಾಣಕ್ಕೆ 10,000 ರೂಪಾಯಿ; ಜಾಲತಾಣದಲ್ಲಿ ಶುರುವಾಯ್ತು ತರಹೇವಾರಿ ಚರ್ಚೆ

ದುಪ್ಪಟ್ಟಾಯ್ತು ರೈಲ್ವೆ ಟಿಕೆಟ್ ದರ, ಬೆಂಗಳೂರಿನಿಂದ ಕೋಲ್ಕತ್ತ ಪ್ರಯಾಣಕ್ಕೆ 10,000 ರೂಪಾಯಿ; ಜಾಲತಾಣದಲ್ಲಿ ಶುರುವಾಯ್ತು ತರಹೇವಾರಿ ಚರ್ಚೆ

ಆಗಸ್ಟ್ 9 ರಂದು ಬೆಂಗಳೂರು ಮತ್ತು ಕೋಲ್ಕತ್ತಾ ನಡುವಿನ SMVB ಹೌರಾ ಎಕ್ಸ್‌ಪ್ರೆಸ್‌ನಲ್ಲಿ ಪ್ರೀಮಿಯಂ ತತ್ಕಾಲ್ ಟಿಕೆಟ್ ಅನ್ನು ಬುಕ್ ಮಾಡಲು ಅವರು ವೆಬ್‌ಸೈಟ್‌ ತೆರೆದಾಗ ದರ ನೋಡಿ ಪ್ರಯಾಣಿಕರೊಬ್ಬರು ದಂಗಾಗಿದ್ದಾರೆ.

ದುಪ್ಪಟ್ಟಾಯ್ತು ರೈಲ್ವೆ ಟಿಕೆಟ್ ದರ (ಪ್ರಾತಿನಿಧಿಕ ಚಿತ್ರ)
ದುಪ್ಪಟ್ಟಾಯ್ತು ರೈಲ್ವೆ ಟಿಕೆಟ್ ದರ (ಪ್ರಾತಿನಿಧಿಕ ಚಿತ್ರ)

ಈಗ ಸಾಲು ಸಾಲು ಹಬ್ಬಗಳು ಬರುತ್ತಿದೆ. ಈ ಕಾರಣದಿಂದ ದೂರದ ಊರುಗಳಲ್ಲಿ ಉಳಿದುಕೊಂಡು ಕೆಲಸ ಮಾಡುತ್ತಿದ್ದ ಎಷ್ಟೋ ಜನರು ಹಬ್ಬಕ್ಕೆ ತಮ್ಮ ಊರಿಗೆ ಮರಳಿ ಹೋಗುತ್ತಾರೆ. ರಜಾ ದಿನವನ್ನು ಊರಿನಲ್ಲಿ ಕಳೆಯಲು ಉತ್ಸುಕರಾಗಿರುತ್ತಾರೆ. ಆದರೆ ಬಸ್‌ ಮತ್ತು ರೈಲ್ವೆ ಟಿಕೆಟ್‌ ದರಗಳನ್ನು ನೋಡಿ ಎಲ್ಲರೂ ಶಾಕ್‌ ಆಗುತ್ತಾರೆ. ಇದು ಪ್ರತಿವರ್ಷವೂ ಆಗುವ ಸಂಗತಿ. ಈ ಬಾರಿ ಬೆಂಗಳೂರಿನಿಂದ ಕೋಲ್ಕತ್ತಾ ಟಿಕೆಟ್‌ ದರ ನೋಡಿ ಪ್ರಯಾಣಿಕರು ಅವಾಕ್ಕಾಗಿದ್ದಾರೆ ಅಂದಾಜನ್ನು ಮೀರಿ ಈ ಬಾರಿ ಟಿಕೆಟ್‌ ದರ ಏರಿಕೆಯಾಗಿದೆ ಎಂದು ಚರ್ಚೆ ನಡೆಸುತ್ತಿದ್ದಾರೆ.

ವೈರಲ್‌ ಆಯ್ತು ಪೋಸ್ಟ್‌

ಭಾರತೀಯ ರೈಲ್ವೆ ಟಿಕೆಟ್ ದರ ಈಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಾ ಇದೆ. ಪ್ರಯಾಣಿಕರೊಬ್ಬರು ಟಿಕೆಟ್‌ ದರ ನೋಡುವಾಗ ಅವರಿಗೆ ಈ ಮೊತ್ತ ಕಾಣಿಸಿದೆ. ಅದನ್ನು ಅವರು ಫೋಟೋ ತೆಗೆದು ಹಂಚಿಕೊಂಡಿದ್ದಾರೆ. ಆಗಸ್ಟ್ 9 ರಂದು ಬೆಂಗಳೂರು ಮತ್ತು ಕೋಲ್ಕತ್ತಾ ನಡುವಿನ SMVB ಹೌರಾ ಎಕ್ಸ್‌ಪ್ರೆಸ್‌ನಲ್ಲಿ ಪ್ರೀಮಿಯಂ ತತ್ಕಾಲ್ ಟಿಕೆಟ್ ಅನ್ನು ಬುಕ್ ಮಾಡಲು ಅವರು ವೆಬ್‌ಸೈಟ್‌ ತೆರೆದಾಗ ದರ ನೋಡಿ ದಂಗಾಗಿದ್ದಾರೆ. ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿರುವ ರೆಡ್ಡಿಟ್ ಪೋಸ್ಟ್ ಇದಕ್ಕೆ ಸಾಕ್ಷಿಯಾಗಿದೆ.

2,900ರ ಟಿಕೆಟ್‌ಗೆ ಹತ್ತು ಸಾವಿರ

ಇಷ್ಟೊಂದು ಹಣ ಕೊಟ್ಟು ಯಾರು ಪ್ರಯಾಣ ಮಾಡುತ್ತಾರೆ‌ ನನಗಂತೂ ಅರ್ಥವಾಗುತ್ತಿಲ್ಲ. ಸೆಕೆಂಡ್‌ ಕ್ಲಾಸ್‌ AC ಕೋಚ್‌ಗೆ ಇಷ್ಟು ಹಣ ಇದ್ದರೆ ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಸಾಮಾನ್ಯ 2A ಟಿಕೆಟ್‌ಗೆ ಈ ಮಾರ್ಗದಲ್ಲಿ 2,900ರೂಪಾಯಿ ಇರುತ್ತದೆ ಅಷ್ಟೇ ಎಂದು ಅವರು ಹೇಳಿದ್ದಾರೆ.

ಟಿಕೆಟ್‌ ದರ
ಟಿಕೆಟ್‌ ದರ (Reddit)

ಸಾಮಾಜಿಕ ಜಾಲತಾಣಗಳಲ್ಲಿನ ಅಭಿಪ್ರಾಯ

ಇಷ್ಟೊಂದು ಹಣ ಕೊಟ್ಟು ಯಾರು ಯಾಕೆ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ? ಇದಕ್ಕಿಂತ ಕಡಿಮೆ ದರದಲ್ಲಿ ನಿಮಗೆ ವಿಮಾನ ಬುಕ್‌ ಮಾಡಬಹುದು ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ಹಾಗೆ ಇನ್ನೊಬ್ಬರು ಹೇಳಿದ್ದಾರೆ ಟಿಕೆಟ್‌ ತೆಗೆದುಕೊಳ್ಳದೆ ರೈಲಿನಲ್ಲಿ ಕುಳಿತು ಪ್ರಯಾಣ ಮಾಡಿ ಆ ನಂತರ ಫೈನ್‌ ಕಟ್ಟಿದರೂ ಇದಕ್ಕಿಂತ ಕಡಿಮೆ ಹಣದಲ್ಲಿ ಪ್ರಯಾಣ ಮಾಡಬಹುದು ಎಂದು ಕಮೆಂಟ್‌ ಮಾಡಿದ್ದಾರೆ.

ಇನ್ನೊಬ್ಬರು -"ಇಲ್ಲ, ಇಷ್ಟು ದುಬಾರಿ ಆದರೂ ಕೆಲವರು ಬುಕ್‌ ಮಾಡುತ್ತಾರೆ. ಯಾಕೆಂದರೆ ಡ್ರೈವಿಂಗ್‌ ಮಾಡಲು ಕಷ್ಟ ಆಗುವವರು, ಆರೋಗ್ಯ ಸರಿ ಇಲ್ಲದೇ ವಿಮಾನದಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲದವರೂ ಇರುತ್ತಾರೆ. ಅಂಥವರಲ್ಲಿ ನಾನೂ ಒಬ್ಬ" ಎಂದು ಪ್ರತಿಕ್ರಿಯಿಸಿದ್ದಾರೆ.

Whats_app_banner