ಜೂನ್ 27ಕ್ಕೆ ಬೆಂಗಳೂರಿನಿಂದ ಕೇರಳದ ಮುನ್ನಾರ್ ರೈಲು ಪ್ರವಾಸ; ಟಿಕೆಟ್ ದರ, ಪ್ರವಾಸಿ ತಾಣಗಳು, ಊಟ, ಹೋಟೆಲ್ ವಿವರ ತಿಳಿಯಿರಿ
ಐಆರ್‌ಸಿಟಿಸಿ ವತಿಯಿಂದ ಬೆಂಗಳೂರನಿಂದ ಕೇರಳದ ಮುನ್ನಾರ್, ಕೊಚ್ಚಿ, ಅತಿರಪಲ್ಲಿ ರೈಲು ಪ್ರವಾಸ ಜೂನ್ 27 ರಂದು ಆರಂಭವಾಗಲಿದೆ. ಈ ಮಳೆಗಾಲದಲ್ಲಿ ಕೇರಳದಲ್ಲಿ ನೋಡಬಹುದಾದ ಅತ್ಯಂತ ಸುಂದರ ತಾಣಗಳನ್ನು ಈ ಪ್ಯಾಕೇಜ್‌ನಲ್ಲಿ ಕವರ್ ಮಾಡಲಾಗುತ್ತೆ. ಟೂರ್ ಪ್ಯಾಕೇಜ್ ದರ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ.

ದೇವರ ನಾಡು ಕೇರಳದಲ್ಲಿನ (Gods Own Country Kerala) ಪ್ರವಾಸಿ ತಾಣಗಳು (Tourist Places) ದೇಶ ಮಾತ್ರವಲ್ಲದೆ, ಜಗತ್ತಿನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಇಲ್ಲಿನ ಕೆಲವು ತಾಣಗಳನ್ನು ಕಣ್ತುಂಬಿಕೊಳ್ಳಲೇಬೇಕು. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸ ಕಾರ್ಪೊರೇಷನ್ - (IRCTC) ಕೇರಳದ ಪ್ರಮುಖ ತಾಣಗಳನ್ನು ವೀಕ್ಷಿಸುವ ಸಲುವಾಗಿ ಮುನ್ನಾರ್-ಅತಿರಪಲ್ಲಿ ರೈಲು ಟೂರ್ ಪ್ಯಾಕೇಜ್ (SBR007) ಘೋಷಣೆ ಮಾಡಿದ್ದು, ಈ ಪ್ರವಾಸಿ ಪ್ಯಾಕೇಜ್ ಬೆಂಗಳೂರಿನಿಂದ ಜೂನ್ 27 ರಂದು ಆರಂಭವಾಗಲಿದೆ. ಪ್ಯಾಕೇಜ್ ಮೊತ್ತವೆಷ್ಟು, ಊಟ, ಹೋಟೆಲ್, ಯಾವ ತಾಣದಲ್ಲಿ ಏನೆಲ್ಲಾ ನೋಡಬಹುದು ಎಂಬುದನ್ನು ಇಲ್ಲಿ ತಿಳಿಯೋಣ.
ಕೇರಳ ಎನ್ನುವಷ್ಟರಲ್ಲಿ ಮೊದಲ ನೆನಪಾಗುವುದೇ ಅಲ್ಲಿನ ಪ್ರಾಚೀನ ಕಾಲದ ಹಿನ್ನೀರಿನ ಚಿತ್ರಣ, ಪಾಮ್ ಫ್ರಿಂಜ್ಡ್ ಬೀಚ್‌ಗಳು, ಪ್ರಶಾಂತವಾದ ಹಳ್ಳಿಗಳು ಹಾಗೂ ಸಮೃದ್ಧವಾಗಿರುವ ಹಸಿರು ಪರಿಸರ. ಊಟ ಕೂಡ ಸಖತ್ ವೆರೈಟಿಯಾಗಿರುತ್ತೆ. ಪ್ರಕೃತಿಯನ್ನು ಭಾರತದಲ್ಲಿ ಅತ್ಯುತ್ತಮ ತಾಣಗಳಲ್ಲಿ ಕೇರಳಕ್ಕೆ ಅಗ್ರ ಸ್ಥಾನವಿದೆ. ಕೇರಳವನ್ನು ದೇವರ ಸ್ವಂತ ನಾಡು ಅಂತ ಕರೆಯಲಾಗುತ್ತದೆ. ಸೂರ್ಯನು ಚುಂಬಿಸುವ ಕಡಲ ತೀರಗಳು, ಮಂಜಿನ ಗಿರಿಧಾಮಗಳು, ಲಯಬದ್ಧವಾದ ಹಿನ್ನೀರು, ವಿವಿಧ ಸಸ್ಯ ಮತ್ತು ಪ್ರಾಣಿಗಳನ್ನು ಇಲ್ಲಿ ಕಾಣಬಹುದು.
ಯಾತ್ರಾ ಕೇಂದ್ರ, ಐತಿಹಾಸಿಕ ಸ್ಮಾರಕಗಳನ್ನು ಕೇರಳದಲ್ಲಿ ನೋಡಬಹುದು. ಒಂದೇ ಭೇಟಿಯಲ್ಲಿ ಇಲ್ಲಿನ ಸುಂದರ ತಾಣಗಳನ್ನು ಕಣ್ತುಂಬಿಕೊಳ್ಳಬಹುದು. ಈ ತಾಣಗಳು ನಿಮ್ಮ ಮಂತ್ರಮುಗ್ಧರನ್ನಾಗಿಸುವಲ್ಲಿ ಯಾವುದೇ ಅನುಮಾನವಿಲ್ಲ. ಕೇರಳದ ಮುನ್ನಾರ್, ಅಲ್ಲಪ್ಪುಳ ಹಾಗೂ ಕೊಚ್ಚಿಯ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಐಆರ್‌ಸಿಟಿಸಿಯ ಟೂರ್ ಪ್ಯಾಕೇಜ್‌ನ ವಿವರ ಇಲ್ಲಿದೆ.
ಬೆಂಗಳೂರು ಮುನ್ನಾರ್, ಕೊಚ್ಚಿ, ಅತಿರಪಲ್ಲಿ ರೈಲು ಟೂರ್ ಪ್ಯಾಕೇಜ್ ವಿವರ
ರೈಲಿನ 3ಎಸಿ ಕೋಚ್‌ನಲ್ಲಿ ಒಬ್ಬರಿಗೆ 31,490 ರೂಪಾಯಿ, ಇಬ್ಬರಿಗೆ ತಲಾ 17,750 ರೂಪಾಯಿ, ಮೂವರಿಗೆ 14,720 ರೂಪಾಯಿ, ಹಾಸಿಗೆ ಹೊಂದಿರುವ ಮಗು (5-11 ವರ್ಷ) 12,820 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 10,040 ರೂಪಾಯಿ ಇರಲಿದೆ.
ರೈಲಿನ ಎಸ್‌ಎಲ್ (ಸ್ಲೀಪರ್) ಕೋಚ್‌ನಲ್ಲಿ ಒಬ್ಬರಿಗೆ 29,290 ರೂಪಾಯಿ, ಇಬ್ಬರಿಗೆ 15,540 ರೂಪಾಯಿ, ಮೂವರಿಗೆ 12,520 ರೂಪಾಯಿ, ಹಾಸಿಗೆ ಹೊಂದಿರುವ ಮಗು (5-11 ವರ್ಷ) 10,620 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 7,830 ರೂಪಾಯಿ ಇರಲಿದೆ. (ಈ ಎಲ್ಲಾ ಬೆಲೆಗಳು ಪ್ರತಿ ವ್ಯಕ್ತಿಗೆ ನಮೂದಿಸಲಾಗಿದೆ.
ಜೂನ್ 27 ರಿಂದ ಪ್ರವಾಸ ಆರಂಭವಾಗಲಿದ್ದು, ಮೊದಲ ದಿನ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ರೈಲು ಸಂಖ್ಯೆ 16526 ಮೂಲಕ ರಾತ್ರಿ 8.10ಕ್ಕೆ ನಿರ್ಮಿಸುತ್ತದೆ. ರಾತ್ರಿಯ ಪ್ರಯಾಣ ಇರಲಿದೆ.
ಎರಡನೇ ದಿನ ಎರ್ನಾಕುಲಂ ಟೌನ್ ರೈಲು ನಿಲ್ದಾಣದಿಂದ 7.20ಕ್ಕೆ ಪಿಕ್ ಅಪ್ ಇರುತ್ತದೆ. ರಸ್ತೆಯ ಮೂಲಕ ಮುನ್ನಾರ್‌ಗೆ ಆಗಮಿಸಿ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಲಾಗುತ್ತದೆ. ಫ್ರೆಶ್‌ಅಪ್ ಆದ ನಂತರ ಟೀ ಮ್ಯೂಸಿಯಂಗೆ ಸಂಜೆ ಭೇಟಿ ನೀಡಲಾಗುತ್ತದೆ. ರಾತ್ರಿ ಮುನ್ನಾರ್‌ನಲ್ಲಿ ಹಾಲ್ಟ್ ಹಾಕಲಾಗುತ್ತದೆ.
ಮೂರನೇ ದಿನ ಎರ್ನಾಕುಲಂ ರಾಷ್ಟ್ರೀಯ ಉದ್ಯಾವನಕ್ಕೆ ಅಥವಾ ಟಾಪ್ ಸ್ಟೇಷನ್ ವ್ಯೂ ಪಾಯಿಂಟ್‌ಗೆ ಮುಂಜಾನೆ ಉಪಹಾರ ಮತ್ತು ಬೆಳಗ್ಗೆ ಭೇಟಿ ನೀಡಲಾಗುತ್ತದೆ. ಮಧ್ಯಾಹ್ನ ಮೆಟ್ಟುಪಟ್ಟಿ ಅಹೆಕಟ್ಟು ಮತ್ತು ಎಕೋ ಪಾಯಿಂಟ್, ಕುಂಡ್ಲಾ ಸರೋವರ, ಶಾಂಪಿಗ್‌ಗಾಗಿ ಮುನ್ನಾರ್ ಟೌನ್‌ಗೆ ಸಂಜೆ ಭೇಟಿ ನೀಡಲಾಗುತ್ತದೆ. ಮುನ್ನಾರ್‌ನಲ್ಲಿ ರಾತ್ರಿ ತಂಗಲಾಗುತ್ತದೆ. ನಾಲ್ಕು ಮತ್ತು 5ನೇ ದಿನದ ಪ್ರವಾಸದ ವಿವರ ಊಟ, ಪ್ರವಾಸಿ ತಾಣಗಳ ವಿವರ ಸೇರಿ ಹೆಚ್ಚಿನ ಮಾಹಿತಿಗಾಗಿ ಐಆರ್‌ಸಿಟಿಸಿ ಅಧಿಕೃತ ಜಾಲತಾಣ irctc.com ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)