ಕನ್ನಡ ಸುದ್ದಿ  /  ಜೀವನಶೈಲಿ  /  ಬೆಂಗಳೂರಿನಿಂದ ಜಗನ್ನಾಥ ದೇವಾಲಯದ ಪುರಿಗೆ ವಿಮಾನದಲ್ಲಿ ಹೋಗುವುದು ಹೇಗೆ; ಟಿಕೆಟ್ ದರ, ಸಮಯದ ಮಾಹಿತಿ ಇಲ್ಲಿದೆ

ಬೆಂಗಳೂರಿನಿಂದ ಜಗನ್ನಾಥ ದೇವಾಲಯದ ಪುರಿಗೆ ವಿಮಾನದಲ್ಲಿ ಹೋಗುವುದು ಹೇಗೆ; ಟಿಕೆಟ್ ದರ, ಸಮಯದ ಮಾಹಿತಿ ಇಲ್ಲಿದೆ

ಜಗನ್ನಾಥನ ಸನ್ನಿಧಿಗೆ ಭೇಟಿ ನೀಡುವ ಪ್ಲಾನ್ ನಿಮ್ಮದಾಗಿದ್ದರೆ ಬೆಂಗಳೂರಿನಿಂದ ಪುರಿಗೆ ವಿಮಾನದಲ್ಲಿ ಹೋಗಿ ಬರಬಹುದು. ಟಿಕೆಟ್ ದರ, ಸಮಯ ಸೇರಿದಂತೆ ಅಗತ್ಯ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರಿನಿಂದ ಜಗನ್ನಾಥ ದೇವಾಲಯದ ಪುರಿಗೆ ವಿಮಾನದಲ್ಲಿ ಹೋಗುವುದು ಹೇಗೆ; ಟಿಕೆಟ್ ದರ, ಸಮಯದ ಮಾಹಿತಿ ಇಲ್ಲಿದೆ
ಬೆಂಗಳೂರಿನಿಂದ ಜಗನ್ನಾಥ ದೇವಾಲಯದ ಪುರಿಗೆ ವಿಮಾನದಲ್ಲಿ ಹೋಗುವುದು ಹೇಗೆ; ಟಿಕೆಟ್ ದರ, ಸಮಯದ ಮಾಹಿತಿ ಇಲ್ಲಿದೆ

ಭಾರತದ ಪೂರ್ವ ಕರಾವಳಿಯಲ್ಲಿರುವ ಒಡಿಶಾ ಪ್ರಮುಖ ಧಾರ್ಮಿಕ ಕ್ಷೇತ್ರವನ್ನು ಹೊಂದಿದೆ. ಇಲ್ಲಿನ ಪುರಿಯಲ್ಲಿ ಐತಿಹಾಸಿಕ ಜಗನ್ನಾಥನ ದೇವಾಲಯವಿದ್ದು (Puri Jagannath Temple), ಪ್ರತಿ ವರ್ಷ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡಿ ವಿಷ್ಣುವಿನ ಜಗನ್ನಾಥ ಅವತಾರವನ್ನು ಕಣ್ತುಂಬಿಕೊಳ್ಳುತ್ತಾರೆ. ಒಂದು ವೇಳೆ ನೀವೇನಾದರೂ ವಿಮಾನದ ಮೂಲಕ ಬೆಂಗಳೂರಿನಿಂದ ಪುರಿಗೆ ಹೋಗುವ ಪ್ಲಾನ್ ಮಾಡಿಕೊಂಡಿದ್ದರೆ ನಿಮಗಾಗಿ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರಿನಿಂದ ಪುರಿಗೆ 1,437 ಕಿಲೋ ಮೀಟರ್ ಆಗಲಿದ್ದು, ಸುಮಾರು 25 ಗಂಟೆಗಳ ಜರ್ನಿಯನ್ನು ಮಾಡಬೇಕಾಗುತ್ತದೆ. ಬೆಂಗಳೂರಿನಿಂದ ಪುರಿಗೆ ವಿಮಾನ ಮಾರ್ಗದಲ್ಲಿ 1,162 ಕಿಲೋ ಮೀಟರ್ ಏರಿಯಲ್ ಅಂತರವಿದೆ. ಬೆಂಗಳೂರಿನಿಂದ ಪುರಿಗೆ ವಿಮಾನ ಇಲ್ಲ. ಆದರೆ ಒಡಿಶಾ ರಾಜಧಾನಿ ಭುವನೇಶ್ವರ್‌ಗೆ ವಿಮಾನ ಸಂಪರ್ಕ (Bangalore to Bhubaneswar Flight) ಸೇವೆಗಳಿವೆ. ಭುವನೇಶ್ವರ್‌ನಿಂದ ಪುರಿಗೆ 63 ಕಿಲೋ ಮೀಟರ್ ಇದ್ದು, 1 ಗಂಟೆ 23 ನಿಮಿಷದೊಳಗೆ ರಸ್ತೆ ಮೂಲಕ ಪುರಿ ತಲುಪಬಹುದು. ಬೆಂಗಳೂರಿನಿಂದ ಪುರಿಗೆ ವಿಮಾನದಲ್ಲಿ ಹೋಗಬೇಕಾದರೆ ಭುವನೇಶ್ವರ್‌ಗೆ ಹೋಗಿ ಅಲ್ಲಿಂದ ರಸ್ತೆ ಮಾರ್ಗವಾಗಿ ಪುರಿ ತಲುಪಬಹುದು.

ಬೆಂಗಳೂರು-ಭುವನೇಶ್ವರ್ ವಿಮಾನ ಹಾರಾಟದ ಮಾಹಿತಿ

  • ಬೆಂಗಳೂರಿನಿಂದ ಭುವನೇಶ್ವರ್‌ಗೆ ವಿಮಾನದ ಅತಿ ಕಡಿಮೆ ಟಿಕೆಟ್ ದರ 4,813 ರೂಪಾಯಿ ಇದೆ
  • ಒಂದು ವಾರದಲ್ಲಿ ಬೆಂಗಳೂರಿನಿಂದ ಭುವನೇಶ್ವರ್‌ಗೆ ಸುಮಾರು 141 ವಿಮಾನಗಳು ಹಾರಾಟ
  • ದಿನದ ಮೊದಲ ವಿಮಾನ ತಡರಾತ್ರಿ 00:55 ಕ್ಕೆ ಬೆಂಗಳೂರಿನಿಂದ ಭುವನೇಶ್ವರ್‌ಗೆ ಹಾರಾಟ
  • ದಿನದ ಕೊನೆಯ ವಿಮಾನ ರಾತ್ರಿ 10.50ಕ್ಕೆ ಇದೆ
  • ಏರ್ ಇಂಡಿಯಾ ಎಕ್ಸ್‌ಪ್ರೆಸ್, ಅಕಾಶ ಏರ್, ವಿಸ್ತಾರ, ಏರ್ ಇಂಡಿಯಾ ಹಾಗೂ ಇಂಡಿಗೊ ವಿಮಾನಗಳು ಬೆಂಗಳೂರಿನಿಂದ ಭುವನೇಶ್ವರ್‌ಗೆ ಸಂಚಾರ
  • ಬೆಂಗಳೂರು ಮತ್ತು ಭುವನೇಶ್ವರ್ ನಡುವಿನ ವಿಮಾನ ಹಾರಾಟದ ಏರ್‌ಪೋರ್ಟ್ ಕೋಡ್ ಬಿಎಲ್ಆರ್ (ಬೆಂಗಳೂರು-ಬಿಬಿಐ(ಭುವನೇಶ್ವರ್)
  • ಬೆಂಗಳೂರಿನಿಂದ ಭುವನೇಶ್ವರ್‌ಗೆ 4,813 ರೂಪಾಯಿಗಳಿಂದ ಗರಿಷ್ಠ 49,000 ರೂಪಾಯಿಗಳ ವರೆಗೆ ಟಿಕೆಟ್ ದರವಿದೆ. ಸಮಯದ ಆಧಾರದಲ್ಲಿ ಬೆಲೆಗಳು ನಿರ್ಧಾರವಾಗುತ್ತವೆ.

ಬೆಂಗಳೂರಿನಿಂದ ಭವನೇಶ್ವರ್‌ಗೆ ನಾನ್ ಸ್ಟಾಪ್ 7 ವಿಮಾನಗಳು ಹಾರಾಟ ನಡೆಸುತ್ತವೆ. ಈ ವಿಮಾನಗಳಲ್ಲಿ ಟಿಕೆಟ್ ಬೆಲೆ 5,346 ರೂಪಾಯಿ ಇರುತ್ತದೆ. ಇನ್ನ ಇಂಡಿಗೊ ಸಂಸ್ಥೆಯ 13 ವಿಮಾನಗಳು ಹಾರಾಟ ನಡೆಸುತ್ತವೆ. ಈ ವಿಮಾನದ ಟಿಕೆಟ್ 5,232 ರೂಪಾಯಿ ಇದೆ. ವಿಸ್ತಾರದ 88 ವಿಮಾನಗಳು ಹಾರಾಟ ನಡೆಸುತ್ತವೆ. ಈ ವಿಮಾನಗಳಲ್ಲಿ ಟಿಕೆಟ್ ದರ 9,578 ರೂಪಾಯಿ ಇರುತ್ತವೆ, ಮುಂಚಿತ ಬುಕಿಂಗ್‌ಗೆ ಕಡಿಮೆ ದರ ಇರುತ್ತದೆ. ಏರ್ ಇಂಡಿಯಾದ 26 ವಿಮಾನಗಳು ಬೆಂಗಳೂರಿನಿಂದ ಭುವನೇಶ್ವರ್‌ಗೆ ಹಾರಾಟ ನಡೆಸುತ್ತಿದೆ. ಒನ್‌ ವೇಗೆ 4,813 ರೂಪಾಯಿಯಿಂದ 49,000 ರೂಪಾಯಿ ವರೆಗೆ ಟಿಕೆಟ್ ದರಗಳು ಇರುತ್ತವೆ.

ಟ್ರೆಂಡಿಂಗ್​ ಸುದ್ದಿ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)