Bank Locker Rule Change: ಬ್ಯಾಂಕ್‌ ಲಾಕರ್‌ ನಿಯಮ ಬದಲಾವಣೆ; ಆರ್‌ಬಿಐ ತಗೊಂಡ ಕ್ರಮ ಏನು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bank Locker Rule Change: ಬ್ಯಾಂಕ್‌ ಲಾಕರ್‌ ನಿಯಮ ಬದಲಾವಣೆ; ಆರ್‌ಬಿಐ ತಗೊಂಡ ಕ್ರಮ ಏನು?

Bank Locker Rule Change: ಬ್ಯಾಂಕ್‌ ಲಾಕರ್‌ ನಿಯಮ ಬದಲಾವಣೆ; ಆರ್‌ಬಿಐ ತಗೊಂಡ ಕ್ರಮ ಏನು?

  • Bank Locker Rule Change: ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಸೂಚನೆ ಹೊರಡಿಸಿದೆ. ಬ್ಯಾಂಕ್ ಗ್ರಾಹಕರ ಭದ್ರತೆ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ವಿವಿಧ ನಿಯಮಗಳ ಪರಿಷ್ಕರಣೆ ಸಹಜ. ಬೆಲೆ ಬಾಳುವ ವಸ್ತುಗಳು ಲಾಕರ್‌ನಲ್ಲಿದೆಯಾ? ಈ ಸುದ್ದಿ ಗಮನಿಸಿ..

100 ಪಟ್ಟು ಬಾಡಿಗೆ ದಂಡ: ಬ್ಯಾಂಕ್ ಲಾಕರ್ ನಿಯಮ ಪರಿಷ್ಕರಿಸಿ ಆರ್‌ಬಿಐ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನಿಯಮಗಳು ಈ ವರ್ಷ ಜನವರಿ 1ರಿಂದಲೇ ಸದ್ದಿಲ್ಲದೇ ಜಾರಿಗೆ ಬಂದಿವೆ ಎಂದು ಹೇಳಲಾಗುತ್ತದೆ. ಬ್ಯಾಂಕ್‌ಗಳಲ್ಲಿ ಲಾಕರ್ ತೆಗೆದುಕೊಳ್ಳುವ ಗ್ರಾಹಕರ ದೂರಿನ ಮೇರೆಗೆ ಆರ್‌ಬಿಐ ನಿಯಮಗಳನ್ನು ಬದಲಾಯಿಸಿದೆ. ಬ್ಯಾಂಕ್ ಲಾಕರ್‌ಗಳಿಂದ ಹೆಚ್ಚಾಗಿ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ಆದರೆ ಈಗ ಬ್ಯಾಂಕ್ ಲಾಕರ್ ನಿಂದ ಏನಾದರೂ ಕಳ್ಳತನವಾದರೆ ಸಂಬಂಧಪಟ್ಟ ಬ್ಯಾಂಕ್, ಗ್ರಾಹಕರಿಗೆ ಲಾಕರ್ ಬಾಡಿಗೆಯ 100 ಪಟ್ಟು ಪರಿಹಾರ ನೀಡಬೇಕು. 
icon

(1 / 4)

ಖಾಲಿ ಲಾಕರ್‌ಗಳ ಮಾಹಿತಿ: ಬ್ಯಾಂಕ್‌ಗಳು ಇಲ್ಲಿಯವರೆಗೆ ಲಾಕರ್ ಕಳ್ಳತನವನ್ನು ನಿರ್ಲಕ್ಷಿಸುತ್ತಿದ್ದವು. ಅದಕ್ಕೆ ತಾವು ಜವಾಬ್ದಾರರಲ್ಲ ಎಂದು ಹೇಳುತ್ತಿದ್ದವು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಖಾಲಿ ಇರುವ ಲಾಕರ್‌ಗಳ ಪಟ್ಟಿ, ಲಾಕರ್‌ಗಳಿಗಾಗಿ ಕಾಯುವ ಪಟ್ಟಿ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದು ಆರ್‌ಬಿಐ ತನ್ನ ಆದೇಶದಲ್ಲಿ ತಿಳಿಸಿದೆ. ಇದು ಲಾಕರ್ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ನಿರೀಕ್ಷೆಯಿದೆ. ಗ್ರಾಹಕರನ್ನು ಕತ್ತಲಲ್ಲಿಡಲು ಬ್ಯಾಂಕ್‌ಗಳಿಗೆ ಇನ್ನು ಸಾಧ್ಯವಿಲ್ಲ ಎಂದು ಆರ್‌ಬಿಐ ನಂಬಿದೆ. ಅವರಿಗೆ ನಿಖರವಾದ ಮಾಹಿತಿ ತಿಳಿದುಕೊಳ್ಳುವ ಹಕ್ಕಿದೆ ಎಂದು ಆರ್‌ಬಿಐ ಹೇಳಿದೆ. 
icon

(2 / 4)

ಖಾಲಿ ಲಾಕರ್‌ಗಳ ಮಾಹಿತಿ: ಬ್ಯಾಂಕ್‌ಗಳು ಇಲ್ಲಿಯವರೆಗೆ ಲಾಕರ್ ಕಳ್ಳತನವನ್ನು ನಿರ್ಲಕ್ಷಿಸುತ್ತಿದ್ದವು. ಅದಕ್ಕೆ ತಾವು ಜವಾಬ್ದಾರರಲ್ಲ ಎಂದು ಹೇಳುತ್ತಿದ್ದವು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಖಾಲಿ ಇರುವ ಲಾಕರ್‌ಗಳ ಪಟ್ಟಿ, ಲಾಕರ್‌ಗಳಿಗಾಗಿ ಕಾಯುವ ಪಟ್ಟಿ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದು ಆರ್‌ಬಿಐ ತನ್ನ ಆದೇಶದಲ್ಲಿ ತಿಳಿಸಿದೆ. ಇದು ಲಾಕರ್ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ನಿರೀಕ್ಷೆಯಿದೆ. ಗ್ರಾಹಕರನ್ನು ಕತ್ತಲಲ್ಲಿಡಲು ಬ್ಯಾಂಕ್‌ಗಳಿಗೆ ಇನ್ನು ಸಾಧ್ಯವಿಲ್ಲ ಎಂದು ಆರ್‌ಬಿಐ ನಂಬಿದೆ. ಅವರಿಗೆ ನಿಖರವಾದ ಮಾಹಿತಿ ತಿಳಿದುಕೊಳ್ಳುವ ಹಕ್ಕಿದೆ ಎಂದು ಆರ್‌ಬಿಐ ಹೇಳಿದೆ. (HT_PRINT)

ಬಾಡಿಗೆ ಮಿತಿ ಮತ್ತು ಅಲರ್ಟ್‌:  ಈಗ ನೀವು ಲಾಕರ್‌ಗೆ ಭೇಟಿ ನೀಡಿದಾಗೆಲ್ಲ ಬ್ಯಾಂಕ್‌ನಿಂದ ಇ-ಮೇಲ್ ಮತ್ತು ಎಸ್‌ಎಂಎಸ್ ಮೂಲಕ ನಿಮಗೆ ಅಲರ್ಟ್‌ ಸಂದೇಶ ರವಾನೆಯಾಗುತ್ತದೆ. ಯಾವುದೇ ರೀತಿಯ ವಂಚನೆ ಆಗದಂತೆ ತಡೆಯಲು ಆರ್‌ಬಿಐ ಈ ನಿಯಮವನ್ನು ಮಾಡಿದೆ. ಅಲ್ಲದೆ, ಬ್ಯಾಂಕ್‌ಗಳು ಲಾಕರ್‌ಗಳನ್ನು ಗರಿಷ್ಠ ಮೂರು ವರ್ಷಗಳವರೆಗೆ ಬಾಡಿಗೆಗೆ ಪಡೆಯುವ ಹಕ್ಕನ್ನು ಹೊಂದಿವೆ. ಲಾಕರ್ ಬಾಡಿಗೆ 2000 ರೂಪಾಯಿ ಇದ್ದರೆ ಆಗಿದ್ದರೆ, ಬ್ಯಾಂಕ್ ನಿಮಗೆ 6000 ರೂಪಾಯಿಗಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ. ಆದಾಗ್ಯೂ, ಬ್ಯಾಂಕ್ ಇತರ ನಿರ್ವಹಣಾ ಶುಲ್ಕಗಳನ್ನು ವಿಧಿಸಬಹುದು.
icon

(3 / 4)

ಸಿಸಿಟಿವಿ ನಿಗಾ: ಈಗ ಸಿಸಿಟಿವಿ ಮೂಲಕ ಲಾಕರ್ ಕೋಣೆಗೆ ಬರುವ ಮತ್ತು ಹೋಗುವವರ ಮೇಲೆ ನಿಗಾ ಇಡುವುದು ಅಗತ್ಯ. ಅಲ್ಲದೆ, ಸಿಸಿಟಿವಿ ಫೂಟೇಜ್ ಡೇಟಾವನ್ನು 180 ದಿನಗಳವರೆಗೆ ಸಂಗ್ರಹಿಸಬೇಕು. ಕಳ್ಳತನ ಅಥವಾ ಭದ್ರತಾ ಲೋಪಗಳ ಸಂದರ್ಭದಲ್ಲಿಈ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸ್‌ ತನಿಖೆಗೆ ನೆರವಾಗುತ್ತವೆ. 
icon

(4 / 4)

ಸಿಸಿಟಿವಿ ನಿಗಾ: ಈಗ ಸಿಸಿಟಿವಿ ಮೂಲಕ ಲಾಕರ್ ಕೋಣೆಗೆ ಬರುವ ಮತ್ತು ಹೋಗುವವರ ಮೇಲೆ ನಿಗಾ ಇಡುವುದು ಅಗತ್ಯ. ಅಲ್ಲದೆ, ಸಿಸಿಟಿವಿ ಫೂಟೇಜ್ ಡೇಟಾವನ್ನು 180 ದಿನಗಳವರೆಗೆ ಸಂಗ್ರಹಿಸಬೇಕು. ಕಳ್ಳತನ ಅಥವಾ ಭದ್ರತಾ ಲೋಪಗಳ ಸಂದರ್ಭದಲ್ಲಿಈ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸ್‌ ತನಿಖೆಗೆ ನೆರವಾಗುತ್ತವೆ. (MINT_PRINT)

ಇತರ ಗ್ಯಾಲರಿಗಳು