Beauty Benefits of Algae: ಛೀ, ಗಲೀಜು ಪಾಚಿ ಅಂತಾ ಮೂಗು ಮುರಿಯದಿರಿ: ಮುಖದ ಕಾಂತಿ ಹೆಚ್ಚಿಸಲು ಇದು ಸಹಕಾರಿ
ಸಮುದ್ರದಲ್ಲಿ, ನೀರಿನಲ್ಲಿ ಅಥವಾ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಲೋಳೆ ತರಹದ ಹಸಿರು ಬಣ್ಣದ ಪಾಚಿಯು ಚರ್ಮಕ್ಕೆ ಅದ್ಭುತ ಪ್ರಯೋಜನಗಳನ್ನು ಉಂಟು ಮಾಡುತ್ತದೆ. ಪೋಷಕಾಂಶಗಳು, ಖನಿಜಗಳಿಂದ ಸಮೃದ್ಧವಾಗಿರುವ ಪಾಚಿಯಿಂದ ತ್ವಚೆಯ ಆರೈಕೆಗೆ ಬಹಳ ಉಪಯುಕ್ತವಾಗಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಬಹುತೇಕ ಎಲ್ಲಾ ಮಹಿಳೆಯರು ತಮ್ಮ ತ್ವಚೆಯ ಕಾಳಜಿ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಮುಖ ಕಾಂತಿಯುತವಾಗಿ ಕಂಗೊಳಿಸಲು ಸಾಮಾನ್ಯವಾಗಿ ಜನಪ್ರಿಯ ಅಥವಾ ದುಬಾರಿ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. ತಮ್ಮ ಮುಖದ ಸೌಂದರ್ಯಕ್ಕಾಗಿ ಏನೆಲ್ಲಾ ಪ್ರಯತ್ನಿಸಬೇಕು ಅನ್ನೋದರತ್ತ ಗಮನಹರಿಸುತ್ತಲೇ ಇರುತ್ತಾರೆ. ಕೆಲವರು ಬ್ಯೂಟಿಪಾರ್ಲರ್ ಗಳ ಮೊರೆ ಹೋದರೆ, ಇನ್ನೂ ಕೆಲವರು ಮನೆಯಲ್ಲಿಯೇ ಏನನ್ನಾದರೂ ಪ್ರಯತ್ನಿಸುತ್ತಲೇ ಇರುತ್ತಾರೆ. ಕಡಲೆಹಿಟ್ಟು, ಮೊಸರು, ಅರಶಿನ, ಜೇನುತುಪ್ಪ ಮುಂತಾದ ಮನೆಯ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳಿಂದ ತ್ವಚೆಯ ಆರೈಕೆ ಮಾಡುತ್ತಾರೆ. ಇದಲ್ಲದೆ, ಪಾಚಿಯಿಂದಲೂ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ?
ಪಾಚಿಯಿಂದ ಮುಖದ ಸೌಂದರ್ಯ ಹೆಚ್ಚಾಗಲು ಕಾರಣವಾಗುತ್ತಾ ಎಂದು ಅಚ್ಚರಿಪಡುತ್ತಿದ್ದೀರಾ? ಹೌದು, ಸಮುದ್ರದಲ್ಲಿ, ನೀರಿನಲ್ಲಿ ಅಥವಾ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಲೋಳೆ ತರಹದ ಹಸಿರು ಬಣ್ಣದ ಪಾಚಿಯು ಚರ್ಮಕ್ಕೆ ಅದ್ಭುತ ಪ್ರಯೋಜನಗಳನ್ನು ಉಂಟು ಮಾಡುತ್ತದೆ. ಪೋಷಕಾಂಶಗಳು, ಖನಿಜಗಳಿಂದ ಸಮೃದ್ಧವಾಗಿರುವ ಪಾಚಿಯಿಂದ ತ್ವಚೆಯ ಆರೈಕೆಗೆ ಬಹಳ ಉಪಯುಕ್ತವಾಗಿದೆ. ಹಾಗಿದ್ದರೆ, ಪಾಚಿಯ ಸೌಂದರ್ಯ ಪ್ರಯೋಜನಗಳನ್ನು ಮತ್ತು ಅದನ್ನು ತ್ವಚೆಯ ದಿನಚರಿಯಲ್ಲಿ ಹೇಗೆ ಅಳವಡಿಸಿಕೊಳ್ಳುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ತ್ವಚೆಗೆ ಪಾಚಿ ಹೇಗೆ ಪ್ರಯೋಜನಕಾರಿ?
ಪಾಚಿಯು ವಿಟಮಿನ್‍ಗಳು, ಖನಿಜಗಳು, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಅಮೈನೋ ಆಮ್ಲಗಳ ಸಮೃದ್ಧ ಮೂಲಗಳಾಗಿವೆ. ಚರ್ಮದ ಆರೈಕೆಗೆ ಇದು ಬಹಳ ಉಪಯುಕ್ತವಾಗಿದೆ. ಪಾಚಿಯು ಪಾಲಿಸ್ಯಾಕರೈಡ್‌ಗಳಲ್ಲಿ ಸಮೃದ್ಧವಾಗಿದೆ. ಇದು ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಇದು ಶುಷ್ಕ, ನಿರ್ಜಲೀಕರಣಗೊಂಡ ಚರ್ಮಕ್ಕೆ ಬಹಳ ಉಪಯುಕ್ತವಾಗಿದೆ. ಪಾಚಿಯು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಇ ಅನ್ನು ಹೊಂದಿರುತ್ತದೆ. ಸ್ವತಂತ್ರ ರಾಡಿಕಲ್ ಹಾನಿ ಮತ್ತು ಪರಿಸರ ಒತ್ತಡದಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗೆಯೇ ಪಾಚಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.
ಈ ರೀತಿ ತ್ವಚೆಗೆ ಪಾಚಿಯನ್ನು ಬಳಸಿ
ಪಾಚಿಯನ್ನು ಫೇಸ್ ಮಾಸ್ಕ್ ರೀತಿಯಲ್ಲಿ ತ್ವಚೆಗೆ ಬಳಸಬಹುದು. ಮಾರುಕಟ್ಟೆಯಲ್ಲಿ ಹಲವಾರು ಪಾಚಿ ಆಧಾರಿತ ಫೇಸ್ ಮಾಸ್ಕ್‌ಗಳು ಲಭ್ಯವಿವೆ. ಅಥವಾ ನೀವು ಮನೆಯಲ್ಲಿಯೇ ತಯಾರಿಸಬಹುದು. ಮನೆಯಲ್ಲೇ ತಯಾರಿಸುವುದಾದರೆ ಒಣಗಿಸಿ ಪುಡಿಮಾಡಿದ ಪಾಚಿಯನ್ನು ಸ್ವಲ್ಪ ನೀರು ಅಥವಾ ಅಲೋವೆರಾ ಜೆಲ್‌ನೊಂದಿಗೆ ಬೆರೆಸಿ. ನಂತರ ಇನದನ್ನು ಮುಖಕ್ಕೆ ಹಚ್ಚಿ, 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಕಿರಿಕಿರಿ ಉಂಟುಮಾಡುವ ಚರ್ಮವನ್ನು ಶಮನಗೊಳಿಸುವುದು ಮಾತ್ರವಲ್ಲದೆ ಇತರ ಪ್ರಯೋಜನಗಳನ್ನು ಸಹ ನೀಡುತ್ತದೆ. ಪಾಚಿ ಆಧಾರಿತ ಮಾಯಿಶ್ಚರೈಸರ್‌ಗಳು, ಸೀರಮ್‌ಗಳನ್ನು ಸಹ ಬಳಸಬಹುದು.
ತ್ವಚೆಯ ಕಾಳಜಿಗಾಗಿ ಪಾಚಿಯನ್ನು ಅನ್ವಯಿಸುವುದರಿಂದ ಆರೋಗ್ಯಕರ ತ್ವಚೆ ಪಡೆಯಲು, ತ್ವಚೆಯ ಹೈಡ್ರೀಕರಣಕ್ಕೆ, ಚರ್ಮದ ಸುಕ್ಕುಗಟ್ಟುವಿಕೆ ತಡೆಗಟ್ಟಲು ಇತ್ಯಾದಿ ಲಾಭವನ್ನು ಪಡೆಯಬಹುದು. ಒಂದು ವೇಳೆ ನೀವೇನಾದರೂ ಚರ್ಮದ ಕಿರಿಕಿರಿ ಅಥವಾ ಇನ್ನಿತರೆ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಇದನ್ನು ಪ್ರಯತ್ನಿಸುವ ಮುನ್ನ ಚರ್ಮದ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ವಿಭಾಗ