ತ್ವರಿತವಾಗಿ ತ್ವಚೆ ಕಾಂತಿಯುತವಾಗಿ ಹೊಳೆಯಬೇಕಾ: ಅಡುಗೆ ಮನೆಯಲ್ಲಿರುವ ಈ ವಸ್ತು ಬಳಸಿ ಸಾಕು
ಹೊಳೆಯುವ ತ್ವಚೆಯನ್ನುಪಡೆಯಲು ಪಾರ್ಲರ್‌ಗೆ ಹೋಗಿ ದುಬಾರಿ ಬ್ಯೂಟಿ ಟ್ರೀಟ್‌ಮೆಂಟ್‌ಗಳಿಗೆ ಹಣ ವ್ಯಯಿಸುತ್ತಿದ್ದೀರಾ?ಈ ರೀತಿ ಮಾಡುವುದನ್ನು ಬಿಟ್ಟು ಬಿಡಿ. ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳಿಂದ ನಿಮ್ಮ ತ್ವಚೆಯನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡಬಹುದು. ಅದು ಹೇಗೆ ಅಂತೀರಾ, ಇಲ್ಲಿದೆ ಮಾಹಿತಿ.

ಹೊಳೆಯುವ ತ್ವಚೆಯನ್ನು ಪಡೆಯಲು ಪಾರ್ಲರ್‌ಗೆ ಹೋಗಿ ದುಬಾರಿ ಬ್ಯೂಟಿ ಟ್ರೀಟ್‌ಮೆಂಟ್‌ಗಳಿಗೆ ಹಣ ವ್ಯಯಿಸುತ್ತಿದ್ದೀರಾ? ಆದರೂ ಮುಖದಲ್ಲಿ ಅಂತಹ ಬದಲಾವಣೆಗಳಾಗದೆ ಬೇಸರಗೊಂಡಿರುವಿರಾ? ಹಣ ವ್ಯಯಿಸುವ ಬದಲು ಮನೆಯಲ್ಲಿ ಕುಳಿತುಕೊಂಡು ನೀವು ಸುಲಭವಾಗಿ ಹೊಳೆಯುವ ಚರ್ಮವನ್ನು ಪಡೆಯಬಹುದು. ಈ ಫೇಸ್ ಪ್ಯಾಕ್ ಅನ್ನು ಬಳಸಿದ ತಕ್ಷಣ ನೀವು ಧನಾತ್ಮಕ ಪರಿಣಾಮಗಳನ್ನು ಅನುಭವಿಸವಿರಿ. ಮನೆಯಲ್ಲಿಯೇ ತಯಾರಿಸಲಾಗುವ ಈ ರಾಸಾಯನಿಕ ಮುಕ್ತ ಫೇಸ್ ಪ್ಯಾಕ್ ತ್ವಚೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಕಾಂತಿಯುತ ಮೈಬಣ್ಣವನ್ನು ಸಾಧಿಸಲು ನೀವು ನೈಸರ್ಗಿಕ ಮಾರ್ಗವನ್ನು ಆರಿಸಿಕೊಳ್ಳಬಹುದು. ಈ ಸೌತೆಕಾಯಿ, ಮೊಸರು ಮತ್ತು ಜೇನುತುಪ್ಪದ ಫೇಸ್ ಮಾಸ್ಕ್ ಮುಖವನ್ನು ಹೊಳೆಯುವಂತೆ ಮಾಡಲು ಪರಿಣಾಮಕಾರಿಯಾಗಿದೆ. ಹೈಡ್ರೇಟಿಂಗ್ ಗುಣಲಕ್ಷಣಗಳಿರುವ ಮನೆಯಲ್ಲಿ ತಯಾರಿಸಿದ ಈ ಸಿಂಪಲ್ ಫೇಸ್ ಮಾಸ್ಕ್ ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ತ್ವಚೆಯನ್ನು ಹೊಳೆಯುವಂತೆ, ಯೌವನದಂತೆ ಕಾಣಲು ಇದು ಸಹಾಯ ಮಾಡುತ್ತದೆ. ತ್ವಚೆಯನ್ನು ತಂಪಾಗಿರಿಸುವಲ್ಲಿಯೂ ಸಹಾಯಕವಾಗಿದೆ. ಮೊಸರು ಪ್ರೋಬಯಾಟಿಕ್‍ಗಳನ್ನು ಹೊಂದಿದ್ದು, ತ್ವಚೆಯನ್ನು ಹೈಡ್ರೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೇನುತುಪ್ಪವು ತೇವಾಂಶವನ್ನು ಹೊಂದಿದ್ದು, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಈ ಫೇಸ್ ಪ್ಯಾಕ್ ಅನ್ನು ಮನೆಯಲ್ಲಿಯೇ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಸೌತೆಕಾಯಿ ಫೇಸ್ ಮಾಸ್ಕ್ ಅನ್ನು ಹೇಗೆ ತಯಾರಿಸುವುದು
ಫೇಸ್ ಪ್ಯಾಕ್ ತಯಾರಿಸುವ ವಿಧಾನ: ಈ ಫೇಸ್ ಪ್ಯಾಕ್ ಮಾಡಲು, ಒಂದು ಸೌತೆಕಾಯಿ, ಒಂದು ಚಮಚ ಮೊಸರು ಮತ್ತು ಒಂದು ಚಮಚ ಜೇನುತುಪ್ಪ ಬೇಕಾಗುತ್ತದೆ. ಈ ಮೂರು ನೈಸರ್ಗಿಕ ವಸ್ತುಗಳು ನಿಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುತ್ತವೆ. ಸೌತೆಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ನಂತರ ಬ್ಲೆಂಡರ್‌ನಲ್ಲಿ ಹಾಕಿ ಪೇಸ್ಟ್ ತಯಾರಿಸಿ. ಈ ಸೌತೆಕಾಯಿ ಪೇಸ್ಟ್‌ಗೆ ಮೊಸರು ಮತ್ತು ಜೇನುತುಪ್ಪವನ್ನು ಬೆರೆಸಬಹುದು.
ಬಳಸಲು ಸರಿಯಾದ ಮಾರ್ಗ: ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಸಂಪೂರ್ಣವಾಗಿ ಅನ್ವಯಿಸಿ. 20 ರಿಂದ 25 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಮುಖವನ್ನು ತೊಳೆಯಿರಿ. ಮುಖ ತೊಳೆದ ನಂತರ ನಿಮ್ಮ ತ್ವಚೆಯು ಹೊಳೆಯಲು ಪ್ರಾರಂಭಿಸುತ್ತದೆ.
ಸೌತೆಕಾಯಿ ಫೇಸ್ ಪ್ಯಾಕ್‍ನ ಪ್ರಯೋಜನಗಳು
ಹೈಡ್ರೇಟ್ ಮಾಡುವಲ್ಲಿ ಸಹಕಾರಿ: ಈ ಫೇಸ್ ಪ್ಯಾಕ್ ಅನ್ನು ಬಳಸುವುದರಿಂದ ನಿಮ್ಮ ಒಣ ಚರ್ಮವನ್ನು ತೇವಗೊಳಿಸಬಹುದು. ಸೌತೆಕಾಯಿ, ಮೊಸರು ಮತ್ತು ಜೇನುತುಪ್ಪದಿಂದ ಮಾಡಿದ ಈ ಫೇಸ್ ಪ್ಯಾಕ್, ತ್ವಚೆಯನ್ನು ಶುಚಿಗೊಳಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು, ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ಫೇಸ್ ಪ್ಯಾಕ್ ಅನ್ನು ಬಳಸಬಹುದು.
ಪೋಷಕಾಂಶ ಭರಿತ ಫೇಸ್ ಮಾಸ್ಕ್: ಈ ಫೇಸ್ ಮಾಸ್ಕ್ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಚರ್ಮಕ್ಕೆ ವರದಾನ ಅಂದರೆ ತಪ್ಪಿಲ್ಲ. ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚುವ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡಲು ಮರೆಯಬೇಡಿ.
