ಸಾಲು ಸಾಲು ಹಬ್ಬಗಳಲ್ಲಿ ಸ್ಮಾರ್ಟ್‌ ಕಾಣಲಿ ಮುಖ; ಕೆಲಸದ ನಡುವೆ ಗಡ್ಡದ ಆರೋಗ್ಯ ಮರೆಯದಿರು ಸಖ
ಕನ್ನಡ ಸುದ್ದಿ  /  ಜೀವನಶೈಲಿ  /  ಸಾಲು ಸಾಲು ಹಬ್ಬಗಳಲ್ಲಿ ಸ್ಮಾರ್ಟ್‌ ಕಾಣಲಿ ಮುಖ; ಕೆಲಸದ ನಡುವೆ ಗಡ್ಡದ ಆರೋಗ್ಯ ಮರೆಯದಿರು ಸಖ

ಸಾಲು ಸಾಲು ಹಬ್ಬಗಳಲ್ಲಿ ಸ್ಮಾರ್ಟ್‌ ಕಾಣಲಿ ಮುಖ; ಕೆಲಸದ ನಡುವೆ ಗಡ್ಡದ ಆರೋಗ್ಯ ಮರೆಯದಿರು ಸಖ

Tips to keep healthy beard: ಹಬ್ಬಗಳನ್ನು ಎಂಜಾಯ್‌ ಮಾಡುವ ಸಮಯದಲ್ಲಿ ಆರೋಗ್ಯಕರ ಗಡ್ಡವನ್ನು ಕಾಪಾಡಿಕೊಳ್ಳಲು ಅಮೂಲ್ಯ ಸಲಹೆಗಳು ಇಲ್ಲಿವೆ.

ಗಡ್ಡದ ಆರೋಗ್ಯಕ್ಕೆ ಈ ಸಲಹೆ ಪಾಲಿಸಿ
ಗಡ್ಡದ ಆರೋಗ್ಯಕ್ಕೆ ಈ ಸಲಹೆ ಪಾಲಿಸಿ (Shutterstock)

ಮೇಲಿಂದ ಮೇಲೆ ಹಬ್ಬಗಳು ಬರುತ್ತಿವೆ. ಹಬ್ಬದ ಸೀಸನ್‌ನಲ್ಲಿ ಅಲ್ಲಿ ಇಲ್ಲಿ ಓಡಾಟ ಇದ್ದೇ ಇರುತ್ತದೆ. ಇಂಥ ಸಂದರ್ಭದಲ್ಲಿ ಆರೋಗ್ಯ, ಮುಖ ಮತ್ತು ದೇಹದ ಕಾಳಜಿಗೆ ಸಮಯ ಸಿಗುವುದಿಲ್ಲ. ಹಾಗಂತಾ ಹಬ್ಬದ ಸಂದರ್ಭದಲ್ಲಿ ನೂರಾರು ಜನರೆದುರು ನಮ್ಮ ಸೌಂದರ್ಯ ಅಳುಕಿದರೆ ಹೇಗೆ? ಹಾಗೆ ಆಗದಂತೆ ನಾವು ಎಚ್ಚರವಿರಬೇಕು. ಹೀಗಾಗಿ ಬ್ಯುಸಿ ಶೆಡ್ಯೂಲ್‌ ಇದ್ದರೂ ಮುಖದ ಸೌಂದರ್ಯದ ಬಗೆಗಿನ ಕಾಳಜಿ ಕಡಿಮೆಯಾಗಬಾರದು. ಬದಲಾಗಿ ದುಪ್ಪಟ್ಟಗಾಬೇಕು.

ಪುರುಷರಿಗೆ ಅವರ ಗಡ್ಡವೇ ಸರ್ವಸ್ವ. ಈಗೀಗ ಗಡ್ಡಧಾರಿ ಪುರುಷರನ್ನೇ ಸ್ತ್ರೀಯರು ಕೂಡಾ ಹೆಚ್ಚಾಗಿ ಮೆಚ್ಚುತ್ತಾರೆ. ಇದೇ ಕಾರಣಕ್ಕೆ ಗಡ್ಡವನ್ನು ಹತ್ತು ಹಲವಾರು ರೀತಿಯ ಸ್ಟೈಲ್‌ಗೆ ಪುರುಷರು ಬದಲಾಯಿಸುತ್ತಾರೆ. ಕೆಲವೊಬ್ಬರು ನಿಯಮಿತವಾಗಿ ಟ್ರಿಮ್‌ ಮಾಡಿದರೆ, ಇನ್ನೂ ಕೆಲ ಯುವಕರು ಉದ್ದನೆಯ ಗಡ್ಡ ಬಿಟ್ಟು ಟ್ರೆಂಡಿಯಾಗಿ ಕಾಣಲು ಇಷ್ಟಪಡುತ್ತಾರೆ. ಹಾಗಂತ ನಾಲ್ಕು ದಿನದ ಮಟ್ಟಿಗೆ ಅಪಾರ ಕಾಳಜಿ ವಹಿಸಿದರೆ ಸಾಲುವುದಿಲ್ಲ. ನಿತ್ಯದ ದಿನಚರಿಯಲ್ಲಿಯೂ ಗಡ್ಡಕ್ಕಾಗಿ ತುಸು ಸಮಯವನ್ನು ಮೀಸಲಿಡಬೇಕಾಗುತ್ತದೆ.

ಗಡ್ಡ ಉತ್ತಮವಾಗಿ ಕಾಣಲು ದಿನಚರಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಿ
ಗಡ್ಡ ಉತ್ತಮವಾಗಿ ಕಾಣಲು ದಿನಚರಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಿ (Shutterstock)

ಆರೋಗ್ಯಕರ ರೀತಿಯಲ್ಲಿ ಗಡ್ಡವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಗಡ್ಡದ ಆರೈಕೆ ಸಂಕೀರ್ಣ ಪ್ರಕ್ರಿಯೆ ಏನೂ ಅಲ್ಲ. ನಿತ್ಯದ ಬದುಕಿನಲ್ಲಿ ಸ್ವಲ್ಪ ಕಾಳಜಿ ವಹಿಸಿದರೆ, ಮುಖದ ಆರೋಗ್ಯದೊಂದಿಗೆ ಆರೋಗ್ಯಕರ ಹಾಗೂ ಸುಂದರ ಗಡ್ಡವೂ ನಿಮ್ಮದಾಗುತ್ತದೆ. ಹಬ್ಬಗಳನ್ನು ಎಂಜಾಯ್‌ ಮಾಡುವ ಸಮಯದಲ್ಲಿ ಆರೋಗ್ಯಕರ ಗಡ್ಡವನ್ನು ಕಾಪಾಡಿಕೊಳ್ಳಲು ಅಮೂಲ್ಯ ಸಲಹೆಗಳು ಇಲ್ಲಿವೆ.

ಉತ್ತಮ ಎಣ್ಣೆ‌ (ಬಿಯರ್ಡ್‌ ಆಯಿಲ್) ಬಳಸಿ

ಗಡ್ಡವನ್ನು ಮೃದುಗೊಳಿಸುವುದರಿಂದ ಹಿಡಿದು ನಿಮಗೆ ಬೇಕಾದ ಸ್ಟೈಲ್ ಮಾಡಲು ಉತ್ತಮ ಗಡ್ಡದ ಎಣ್ಣೆಯನ್ನು ಆಯ್ಕೆ ಮಾಡುವುದು ಮುಖ್ಯ. ಬಿಯರ್ಡ್‌ ಆಯಿಲ್‌ಗಳು ಗಡ್ಡಕ್ಕೆ ಆಳವಾದ ಪೋಷಣೆ ಮತ್ತು ಬೆಳವಣಿಗೆಯನ್ನು ಕೂಡಾ ಹೆಚ್ಚಿಸುತ್ತದೆ.

ಫೇಸ್‌ ವಾಶ್‌ ಜೊತೆಗೆ ಬಿಯರ್ಡ್‌ ವಾಷ್‌ ಬಳಸಿ

ನಮ್ಮ ದೇಹ ಮತ್ತು ಮುಖ ಹೇಗೆ ಬಿಸಿಲು ಮಳೆ ಎನ್ನದೆ ಹೊರ ಪ್ರಪಂಚವನ್ನು ನೋಡುತ್ತದೆಯೋ ನಿಮ್ಮ ಗಡ್ಡ ಕೂಡಾ ಕೆಲಸ ಕಾರ್ಯ, ಜಿಮ್, ಆಟ, ಪಾರ್ಟಿ ಹೀಗೆ ಎಲ್ಲಾ ಕಡೆ ನಿಮ್ಮೊಂದಿಗಿರುತ್ತದೆ. ಹೀಗಾಗಿ ಮುಖಕ್ಕೆ ಬಳಸುವ ಸಾಮಾನ್ಯ ಫೇಸ್ ವಾಶ್ ಗಡ್ಡಕ್ಕೆ ಸಾಲುವುದಿಲ್ಲ. ಹೀಗಾಗಿ ಮುಖದ ಕೂದಲನ್ನು ಸ್ವಚ್ಛಗೊಳಿಸಲು, ತಾಜಾತನದಿಂದ ಇಡಲು ಮತ್ತು ರಕ್ಷಿಸಲು ಬಿಯರ್ಡ್‌ ವಾಶ್‌ ಬಳಸಿ.

ಮುಖದ ಆಕಾರಕ್ಕೆ ತಕ್ಕಂತೆ ಗಡ್ಡ ಸ್ಟೈಲ್‌ ಇರಲಿ

ಮುಖದ ಆಕಾರಕ್ಕೆ ಸರಿಹೊಂದುವ ಗಡ್ಡದ ಸ್ಟೈಲ್‌ ಆಯ್ಕೆ ಮಾಡಿಕೊಳ್ಳಿ. ಮುಂದಿನ ಬಾರಿ ನೀವು ಸೆಲೂನ್‌ಗೆ ಹೋದಾಗ ನಿಮ್ಮ ಮುಖದ ಆಕಾರಕ್ಕೆ ಗಡ್ಡವನ್ನು ಹೊಂದಿಸಲು ಹೇಳಿ. ಇದು ನಿಮಗೆ ಕ್ಲಾಸಿ ಲುಕ್‌ ನೀಡುತ್ತದೆ.

ಸರಿಯಾದ ಬ್ರಷ್‌ ಅಥವಾ ಬಾಚಣಿಕೆ ಆಯ್ಕೆ ಮಾಡಿ

ತಲೆ ಕೂದಲಿನಂತೆ ಗಡ್ಡವನ್ನು ಕೂಡಾ ಬಾಚಬೇಕು. ಇದು ನಿಮ್ಮ ಗಡ್ಡವನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ. ಗಡ್ಡದಲ್ಲಿರುವ ಹೊಟ್ಟು ಕಡಿಮೆಯಾಗುತ್ತದೆ. ಗಡ್ಡ ಉದ್ದಕ್ಕೆ ಬೆಳೆದಂತೆ ದಟ್ಟತೆ ಹೆಚ್ಚುತ್ತದೆ. ಆಗ ನಿಯಮಿತವಾಗಿ ಬಾಚಿದರೆ, ಗಡ್ಡವನ್ನು ಬೆಳೆಸಲು ಸುಲಭವಾಗುತ್ತದೆ. ಅಲ್ಲದೆ ಗಡ್ಡದ ಸ್ವಚ್ಛತೆ ಕಾಪಾಡಿಸಂತಾಗುತ್ತದೆ.

ಗಡ್ಡದ ಚರ್ಮ ಪರೀಕ್ಷಿಸಿಕೊಳ್ಳಿ

ನಿಮ್ಮ ಮುಖದ ಚರ್ಮವು ಆರೋಗ್ಯಕರವಿಲ್ಲದೆ ನೀವು ಆರೋಗ್ಯಕರ ಗಡ್ಡ ಪಡೆಯಲು ಸಾಧ್ಯವಿಲ್ಲ. ರೇಜರ್ ಕಡಿತ ಮತ್ತು ಹೊಟ್ಟು ತಡೆಯಲು ನಿಮ್ಮ ಚರ್ಮವನ್ನು ತೇವಗೊಳಿಸಿ ಮತ್ತು ಎಕ್ಫ್ಫೋಲಿಯೇಟ್ ಮಾಡಿ.‌ ಆಗಾಗ ಗಡ್ಡವನ್ನು ಮತ್ತು ಚರ್ಮವನ್ನು ಸ್ವಚ್ಛಗೊಳಿಸಿ. ಇದರಿಂದ ಮುಖದ ಆರೋಗ್ಯದ ಜೊತೆಗೆ ಗಡ್ಡದ ಆರೋಗ್ಯ ಹೆಚ್ಚುತ್ತದೆ.

Whats_app_banner