Beauty Tips: ಮುಖದ ವಿವಿಧ ಭಾಗಗಳಲ್ಲಿ ಮೂಡುವ ಮೊಡವೆಗಳಿಗೆ ಇವೆ ನಾನಾ ಅರ್ಥ; ಮೊಡವೆಯ ಗೊಡವೆ ತಪ್ಪಿಸಲು ಸಲಹೆ-beauty pimples indicate health problems what is the cause for pimples acne problem harmone imbalance rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Beauty Tips: ಮುಖದ ವಿವಿಧ ಭಾಗಗಳಲ್ಲಿ ಮೂಡುವ ಮೊಡವೆಗಳಿಗೆ ಇವೆ ನಾನಾ ಅರ್ಥ; ಮೊಡವೆಯ ಗೊಡವೆ ತಪ್ಪಿಸಲು ಸಲಹೆ

Beauty Tips: ಮುಖದ ವಿವಿಧ ಭಾಗಗಳಲ್ಲಿ ಮೂಡುವ ಮೊಡವೆಗಳಿಗೆ ಇವೆ ನಾನಾ ಅರ್ಥ; ಮೊಡವೆಯ ಗೊಡವೆ ತಪ್ಪಿಸಲು ಸಲಹೆ

Pimples indicate health problems: ಮೊಡವೆ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಗಳಲ್ಲಿ ಒಂದು. ಆದರೆ ಈ ಮೊಡವೆಗಳು ಕೇವಲ ಜಿಡ್ಡಿನಂಶದಿಂದ ಮಾತ್ರ ಬರುತ್ತದೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಮುಖದ ಯಾವ್ಯಾವ ಭಾಗದಲ್ಲಿ ಉಂಟಾಗುವ ಮೊಡವೆ ಸಮಸ್ಯೆಗಳು ಏನನ್ನು ಸಂಕೇತಿಸುತ್ತವೆ ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.

Beauty Tips: ಮುಖದ ವಿವಿಧ ಭಾಗಗಳಲ್ಲಿ ಮೂಡುವ ಮೊಡವೆಗಳಿಗೆ ಇವೆ ನಾನಾ ಅರ್ಥ
Beauty Tips: ಮುಖದ ವಿವಿಧ ಭಾಗಗಳಲ್ಲಿ ಮೂಡುವ ಮೊಡವೆಗಳಿಗೆ ಇವೆ ನಾನಾ ಅರ್ಥ

ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗದೇ ಮನೆಯಲ್ಲಿಯೇ ಇರುವಾಗ ನಿಮ್ಮ ತ್ವಚೆ ಶುದ್ಧವಾಗಿ ಇರುತ್ತದೆ. ಆದರೆ ಯಾವುದಾದರೂ ಕಾರ್ಯಕ್ರಮಕ್ಕೆ ಹಾಜರಾಗಬೇಕು ಎಂದುಕೊಂಡಾಗಲೇ ಮುಖದ ಮೇಲೆ ಮೊಡವೆ ಥಟ್ ಅಂತಾ ಪ್ರತ್ಯಕ್ಷವಾಗಿ ಬಿಡುತ್ತದೆ. ಇಂಥಾ ಅನುಭವ ನಿಮಗೆ ಎಂದಾದರೂ ಆಗಿದೆಯೇ..? ಎಲ್ಲಿಯಾದರೂ ಹೊರಗೆ ಹೊರಡಬೇಕು ಎಂದುಕೊಂಡಾಗಲೇ ಕರೆಯದೇ ಬಂದ ಅತಿಥಿಯಂತೆ ಮುಖದ ಮೇಲೆ ಮೊಡವೆಯೊಂದು ಪ್ರತ್ಯಕ್ಷವಾಗಿಬಿಡುತ್ತದೆ.

ಮೊಡವೆಗಳು ಕಿರಿಕಿರಿಯುಂಟುಮಾಡುವುದು ಮಾತ್ರವಲ್ಲದೇ ವಿಪರೀತ ನೋವನ್ನು ಹೊಂದಿರುತ್ತದೆ. ಮೊಡವೆಯೊಂದಿಗೆ ಹೋರಾಟ ನಡೆಸುತ್ತಿರುವವರಿಗೆ ಮಾತ್ರ ಅದರ ಕಷ್ಟ ಗೊತ್ತಿರುತ್ತದೆ. ಆದರೆ ನಿಮ್ಮ ಮುಖದ ಮೇಲೆ ಮೊಡವೆಗಳು ಏಕೆ ಬರುತ್ತದೆ ಎಂಬುದು ನಿಮಗೆ ತಿಳಿದಿದೆಯೇ..? ನಿಮ್ಮ ಮುಖದ ಒಂದೊಂದು ಭಾಗದಲ್ಲಿ ಮೂಡುವ ಮೊಡವೆಯು ನಿಮ್ಮ ಆರೋಗ್ಯವನ್ನು ತಿಳಿಸುತ್ತದೆ.

ಮುಖದ ವಿವಿಧ ಭಾಗಗಳಲ್ಲಿ ಮೂಡುವ ಮೊಡವೆಗಳು ವಿವಿಧ ಆರೋಗ್ಯ ಸಮಸ್ಯೆಗಳನ್ನು ಪ್ರತಿನಿಧಿಸುತ್ತವೆ. ಇವುಗಳು ನಿಮ್ಮ ಜೀವನಶೈಲಿಯನ್ನೂ ಸೂಚಿಸುತ್ತಿರಬಹುದು. ಹೀಗಾಗಿ ಯಾವ ಸ್ಥಳದಲ್ಲಿ ಮೊಡವೆ ಮೂಡಿದೆ ಎಂಬುದನ್ನು ಆಧರಿಸಿ ನಿಮಗೆ ಯಾವ ರೀತಿಯ ಆರೋಗ್ಯ ಸಮಸ್ಯೆ ಇದೆ ಎಂದು ತಿಳಿದುಕೊಳ್ಳಬಹುದಾಗಿದೆ.

ಮುಖದ ಯಾವ ಭಾಗಗಳಲ್ಲಿ ಮೊಡವೆ ಮೂಡಿದೆ ಯಾವುದರ ಸಂಕೇತ ಎಂಬುದನ್ನು ತಿಳಿದುಕೊಳ್ಳೋಣ :

ಹಣೆ : ಹಣೆಯ ಮೇಲೆ ಮೂಡುವ ಮೊಡವೆಗಳು ಜೀರ್ಣಕಾತಿ ಸಮಸ್ಯೆ ಅಥವಾ ಒತ್ತಡಕ್ಕೆ ಸಂಬಂಧಿಸಿದ್ದಾಗಿರಬಹದು. ಕಳಪೆ ಆಹಾರ. ನಿದ್ರೆಯ ಕೊರತೆ ಹಾಗೂ ಕರುಳಿನ ಅಸಮತೋಲನ ಸೇರಿದಂತೆ ವಿವಿಧ ಕಾರಣಗಳಿಂದ ಹಣೆಯ ಮೇಲೆ ಮೊಡವೆ ಮೂಡುತ್ತದೆ. ಅಲ್ಲದೇ ಕೂದಲಿಗೆ ಬಳಕೆ ಮಾಡುವ ಕೆಲವು ಉತ್ಪನ್ನಗಳು ಕೂಡ ಮೊಡವೆಗೆ ಕಾರಣವಾಗುತ್ತದೆ.

ಇದು ಮಾತ್ರವಲ್ಲದೇ ನಿಮ್ಮ ಹಣೆಯಲ್ಲಿ ಮೂಡುತ್ತಿರುವ ಮೊಡವೆಗಳು ನಿಮ್ಮ ಕಿಡ್ನಿಯಲ್ಲಿ ಸಮಸ್ಯೆ ಇದೆ ಎಂಬುದನ್ನೂ ತಿಳಿಸುತ್ತಿದ್ದಿರಬಹುದು. ನೀವು ಸರಿಯಾಗಿ ನೀರು ಕುಡಿಯುತ್ತಿಲ್ಲ ಹಾಗೂ ನೀವು ಸೇವಿಸುತ್ತಿರುವ ಆಹಾರ ಆರೋಗ್ಯಕರವಾಗಿಲ್ಲ ಎಂಬುದರ ಸಂಕೇತ ಕೂಡ ಆಗಿರಬಹುದು.

ಆರೋಗ್ಯಕರ ಆಹಾರ, ಸಾಕಷ್ಟು ನೀರು ಕುಡಿಯುವುದು, ಒತ್ತಡ ನಿರ್ವಹಣೆಯ ಮೂಲಕ ನೀವು ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಕೆನ್ನೆ : ಕೆನ್ನೆಗಳ ಮೇಲೆ ಮೂಡುವ ಮೊಡವೆಯು ಸಾಮಾನ್ಯವಾಗಿ ದಿಂಬುಗಳಲ್ಲಿ ಶೇಖರಣೆಯಾಗಿರುವ ಬ್ಯಾಕ್ಟೀರಿಯಾದಿಂದ ಆಗಿರಬಹುದು. ಕೊಳಕಾದ ದಿಂಬಿನಿಂದಾಗಿ ಕೆನ್ನೆಯ ಮೇಲೆ ಮೊಡವೆ ಮೂಡುತ್ತದೆ. ಅಲರ್ಜಿ ಹಾಗೂ ಉಸಿರಾಟದ ಸಮಸ್ಯೆ ಕೂಡ ಇದಕ್ಕೆ ಕಾರಣವಾಗಿದ್ದಿರಬಹುದು.

ಕೆನ್ನೆಗಳಲ್ಲಿ ಮೂಡುವ ಮೊಡವೆಗಳಿಂದ ಪಾರಾಗಲು ಮೊದಲನೆಯದಾಗಿ ನೀವು ಬಳಕೆ ಮಾಡುವ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪದೇ ಪದೇ ನಿಮ್ಮ ಮುಖವನ್ನು ಸ್ಪರ್ಶಿಸುವುದನ್ನು ತಪ್ಪಿಸಬೇಕು. ಸ್ಯಾಲಿಸಿಲಿಕ್ ಆಮ್ಲ ಹಾಗೂ ಬೆನ್ಝಾಯ್ಲ್ ಪೆರಾಕ್ಸೈಡ್ನ್ನು ಒಳಗೊಂಡಿರುವ ಕ್ರೀಂಗಳನ್ನು ಬಳಕೆ ಮಾಡಬಹುದಾಗಿದೆ.

ಜಾ ಲೈನ್ : ಹಾರ್ಮೋನ್ಗಳಲ್ಲಿ ಉಂಟಾಗುವ ಏರಿಳಿತಗಳು. ವಿಶೇಷವಾಗಿ ಋತುಚಕ್ರದ ಸಮಯದಲ್ಲಿ ಈ ಭಾಗದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತದೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಇರುವ ಸಮಸ್ಯೆಗಳು ಹಾಗೂ ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಕೂಡ ಈ ಭಾಗದಲ್ಲಿ ಮೊಡವೆ ಮೂಡಲು ಕಾರಣವಾಗಿರುತ್ತದೆ.

ಆರೋಗ್ಯಕರ ಆಹಾರ ಸೇವನೆ ಮಾಡುವ ಮೂಲಕ ಈ ಭಾಗದಲ್ಲಿ ಮೂಡುವ ಮೊಡವೆಗಳಿಂದ ಪಾರಾಗಬಹುದಾಗಿದೆ.

ಮೂಗು : ಮೂಗಿನ ಅಂಚುಗಳಲ್ಲಿ ಎಣ್ಣೆಯಂಶ ಶೇಖರಣೆಯಾಗಿರುತ್ತದೆ. ಯಕೃತ್ತಿನಲ್ಲಿ ಇರುವ ಸಮಸ್ಯೆಗಳು ಹಾಗೂ ಅಧಿಕ ರಕ್ತದೊತ್ತಡ ಇಲ್ಲಿ ಮೊಡವೆ ಮೂಡುವಂತೆ ಮಾಡುತ್ತದೆ.

ಆಗಾಗ ಮುಖ ತೊಳೆದುಕೊಳ್ಳುವುದು, ತೈಲಮುಕ್ತ ಮಾಯಿಶ್ಚುರೈಸರ್ಗಳು ಹಾಗೂ ಸ್ಯಾಲಿಸಿಲಿಕ್ ಆಮ್ಲಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಳಕೆ ಮಾಡುವ ಮೂಲಕ ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ.

ಗಲ್ಲ: ಗಲ್ಲದ ಭಾಗದಲ್ಲಿ ಮೂಡುವ ಮೊಡವೆಗಳು ಹಾರ್ಮೋನ್ಗಳ ಅಸಮತೋಲನಕ್ಕೆ ಸಂಬಂಧಿಸಿದೆ. ಋತುಚಕ್ರದ ಸಮಯದಲ್ಲಿ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದಾಗ ಗಲ್ಲದಲ್ಲಿ ಮೊಡವೆ ಮೂಡುತ್ತದೆ.

ಹಾರ್ಮೋನ್ಗಳಿಗೆ ಸಂಬಂಧಿಸಿ ಚಿಕಿತ್ಎ ಹಾಗೂ ಸರಿಯಾಗಿ ಮುಖವನ್ನು ತೊಳೆದುಕೊಳ್ಳುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.

ಕುತ್ತಿಗೆ : ಕುತ್ತಿಗೆಯ ಭಾಗದಲ್ಲಿ ಮೂಡುವ ಮೊಡವೆಗಳಿಗೆ ಹಾರ್ಮೋನ್ಗಳಲ್ಲಿ ಆಗುವ ಏರಳಿತ ಹಾಗೂ ಒತ್ತಡ ಕಾರಣವಾಗಿರಬಹುದು. ರಕ್ತಪರಿಚಲನೆಯಲ್ಲಿ ಸಮಸ್ಯೆ ಹಾಗೂ ಹೃದಯದ ಆರೋಗ್ಯದಲ್ಲಿ ಉಂಟಾಗುವ ಏರಳಿತ ಕೂಡ ಇದಕ್ಕೆ ಕಾರಣವಾಗಿರಬಹುದು.

ಯಾವ ಕಾರಣಕ್ಕೆ ಮೊಡವೆ ಮೂಡಿದೆ ತಿಳಿದುಕೊಳ್ಳಿ

ಕೆಲವು ವ್ಯಕ್ತಿಗಳಿಗೆ ಮೊಡವೆ ಮೂಡಲು ಅತಿಯಾದ ಸಕ್ಕರೆಯುಕ್ತ ಆಹಾರ ಸೇವನೆ ಹಾಗೂ ಡೈರಿ ಉತ್ಪನ್ನಗಳನ್ನು ಸೇವಿಸುವುದು ಕಾರಣವಾಗಿರಬಹುದು. ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡುವುದರಿಂದ ಇನ್ಸುಲಿನ್ನಲ್ಲಿ ಏರಿಕೆ ಉಂಟಾಗಬಹುದು. ಇದರಿಂದ ಚರ್ಮದಲ್ಲಿ ತೈಲ ಉತ್ಪಾದನೆ ಹೆಚ್ಚುತ್ತದೆ. ಮೊಡವೆಗೆ ಇದು ಕಾರಣವಾಗುತ್ತದೆ. ಮೊಡವೆಯೊಂದಿಗೆ ಹೋರಾಡುತ್ತಿರುವವರು ತಮ್ಮ ಆಹಾರದಲ್ಲಿ ಝಿಂಕ್ ಹಾಗೂ ವಿಟಮಿನ್ ಸಿ ಅಂಶವನ್ನು ಹೆಚ್ಚೆಚ್ಚು ಸೇವಿಸಬೇಕು. ಇವುಗಳು ಚರ್ಮಕ್ಕೆ ಆಂಟಿ ಆಕ್ಸಿಡಂಟ್ ಗುಣವನ್ನು ನೀಡುತ್ತದೆ. ಹೀಗಾಗಿ ಚರ್ಮಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.

mysore-dasara_Entry_Point