ಕನ್ನಡ ಸುದ್ದಿ  /  Lifestyle  /  Beauty Tips Benefits Of Apple Cider Vinegar Womens Skin And Hair Care Vitamins Enzymes Skin Care In Kannada Rst

Beauty Tips: ಆಪಲ್‌ ಸೀಡರ್‌ ವಿನೆಗರ್‌ನಲ್ಲಿ ಅಡಗಿದೆ ಹೆಂಗಳೆಯರ ಚರ್ಮ ಕೂದಲ ಅಂದ; ಬಳಸುವ ವಿಧಾನದ ಕುರಿತು ಇಲ್ಲಿದೆ ಟಿಪ್ಸ್‌

ಸೌಂದರ್ಯದ ವಿಷಯ ಬಂದಾಗ ಹೆಣ್ಣುಮಕ್ಕಳ ಕಿವಿ ಚುರುಕಾಗುವುದು ಸಹಜ. ಹೆಂಗಳೆಯರ ಕೂದಲು ಹಾಗೂ ಚರ್ಮದ ಅಂದದಲ್ಲಿ ಆಪಲ್‌ ಸೀಡರ್‌ ವಿನೆಗರ್‌ನ ಪಾತ್ರ ಮಹತ್ವದ್ದು. ಹಾಗಾದರೆ ಅಂದ ಹೆಚ್ಚಿಸಿಕೊಳ್ಳಲು ಇದನ್ನು ಬಳಸುವುದು ಹೇಗೆ, ಇಲ್ಲಿದೆ ಸಲಹೆ.

ಆಪಲ್‌ ಸೀಡರ್‌ ವಿನೆಗರ್‌ ಸೌಂದರ್ಯ
ಆಪಲ್‌ ಸೀಡರ್‌ ವಿನೆಗರ್‌ ಸೌಂದರ್ಯ

ಆಪಲ್‌ ಸೀಡರ್‌ ವಿನೆಗರ್‌ ಅನ್ನು ಚಟ್ನಿ, ಸಲಾಡ್‌ನಂತಹ ಖಾದ್ಯಗಳ ತಯಾರಿಯಲ್ಲಿ ಹೆಚ್ಚು ಬಳಸುತ್ತಾರೆ. ಆದರೆ ಇದರಲ್ಲಿ ಚರ್ಮ ಹಾಗೂ ಕೂದಲ ಅಂದವೂ ಅಡಗಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಸೇಬು ಹಣ್ಣನ್ನು ಸ್ಮ್ಯಾಶ್‌ ಮಾಡಿ ಅದರಿಂದ ರಸ ತೆಗೆದು ಆಪಲ್‌ ಸೀಡರ್‌ ವಿನೆಗರ್‌ ತಯಾರಿಸಲಾಗುತ್ತದೆ. ಇದರ ಬಳಕೆಯಿಂದ ಕೂದಲ ಅಂದ ಹೆಚ್ಚುವುದು ಮಾತ್ರವಲ್ಲ, ಮುಖದ ಮೇಲಿನ ಮೊಡವೆ, ಕಲೆಗಳ ನಿವಾರಣೆಗೂ ಸಹಕಾರಿ. ಆದರೆ ಸೌಂದರ್ಯ ದಿನಚರಿಯಲ್ಲಿ ಇದರ ಬಳಕೆ ಹೇಗೆ, ಇಲ್ಲಿದೆ ಸಲಹೆ.

ಸೌಂದರ್ಯದಲ್ಲಿ ಆಪಲ್ ಸೀಡರ್‌ ವಿನೆಗರ್‌ನ ಪ್ರಯೋಜನಗಳೇನು? ‌

  • ಆಪಲ್‌ ಸೀಡರ್‌ ವಿನೆಗರ್ ಬಳಕೆಯಿಂದ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಚರ್ಮದ ಕಾಂತಿ ಹೆಚ್ಚುವ ಜೊತೆಗೆ ಚರ್ಮ ನಯವಾಗಿ, ಮೃದುವಾಗುತ್ತದೆ. ಇದು ನಿರ್ಜೀವ ಚರ್ಮದ ಕೋಶಗಳನ್ನು ತೊಡೆದು ಹಾಕುತ್ತದೆ. ಅದರಲ್ಲಿನ ಅಲ್ಫಾ ಹೈಡ್ರಾಕ್ಸಿಲ್‌ ಆಮ್ಲವು ತಾಜಾ, ಆರೋಗ್ಯಕರ ಚರ್ಮದ ಕೋಶಗಳನ್ನು ಪೋಷಿಸುತ್ತದೆ.
  • ಎಣ್ಣೆ ಚರ್ಮದ ಸಮಸ್ಯೆ ಇರುವವರು ಆಪಲ್‌ ಸೀಡರ್‌ ವಿನೆಗರ್‌ ಬಳಸುವುದು ಉತ್ತಮ. ಇದರ ಸಂಕೋಚಕ ಗುಣಗಳು ಚರ್ಮಕ್ಕೆ ರಕ್ತದ ಹರಿವನ್ನು ಹೆಚ್ಚಿಸಲು ಹಾಗೂ ಚರ್ಮದ ರಂಧ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಚರ್ಮದ ಪಿಎಚ್‌ ಮಟ್ಟವನ್ನು ನಿಯಂತ್ರಿಸುತ್ತದೆ.
  • ಆಪಲ್‌ ಸೀಡರ್‌ ವಿನೆಗರ್‌ ಬಳಸುವುದರಿಂದ ಸನ್‌ಬರ್ನ್‌ಗೆ ಚಿಕಿತ್ಸೆ ನೀಡಬಹುದು ಅಥವಾ ತಡೆಯಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸೂರ್ಯನ ಬಿಸಿಲಿಗೆ ಹೋಗಿ ಬಂದ ನಂತರ ನೀರಿನೊಂದಿಗೆ ಆಪಲ್‌ ಸೀಡರ್‌ ವಿನೆಗರ್‌ ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚಿ ನಂತರ ತೊಳೆಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಎನ್ನಲಾಗುತ್ತದೆ.
  • ತಲೆಹೊಟ್ಟಿನ ಸಮಸ್ಯೆ ಇರುವವರು ಆಪಲ್‌ ಸೀಡರ್‌ ವಿನೆಗರ್‌ ಬಳಸಬಹುದು. ವಾರದಲ್ಲಿ ಮೂರು ಬಾರಿ ಸೌಮ್ಯ ಅಂಶವುಳ್ಳ ಶ್ಯಾಂಪೂವಿನಂದ ತಲೆಸ್ನಾನ ಮಾಡುವುದು ಅವಶ್ಯ.
  • ಮುಖದಲ್ಲಿ ಮೊಡವೆ, ಅಲರ್ಜಿಯಂತಹ ಸಮಸ್ಯೆಗಳಿದ್ದರೆ ಆಪಲ್‌ ಸೀಡರ್‌ ವಿನೆಗರ್‌ನಿಂದ ಗುಣ ಪಡಿಸಬಹುದು. ಆಪಲ್ ಸೈಡರ್ ವಿನೆಗರ್ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ನಿಮ್ಮ ಚರ್ಮದ ರಂಧ್ರಗಳನ್ನು ಧೂಳು, ಎಣ್ಣೆ ಮತ್ತು ಸೂಕ್ಷ್ಮಜೀವಿಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ

Skincare Tips: ಪುರುಷರಲ್ಲೂ ಇರಲಿ ಸೌಂದರ್ಯ ಕಾಳಜಿ; ಬಿಸಿಲಿನಿಂದ ತ್ವಚೆಯನ್ನು ಕಾಪಾಡಿಕೊಳ್ಳಲು ಇಲ್ಲಿದೆ ಸುಲಭ ಮಾರ್ಗ

Skin Care Tips For Men: ಸೌಂದರ್ಯ ಕಾಳಜಿ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಗಂಡು ಮಕ್ಕಳು ಚರ್ಮ ಹಾಗೂ ಸೌಂದರ್ಯದ ಕಾಳಜಿ ಮಾಡಬೇಕು. ಈ ಬಿರುಬೇಸಿಗೆಯಲ್ಲಿ ಸೌಂದರ್ಯದ ಕುರಿತು ಹೆಚ್ಚು ಕಾಳಜಿ ವಹಿಸಬೇಕು. ಸೂರ್ಯನ ರಕ್ಷಣೆಯಿಂದ ತೇವಾಂಶ ಹೆಚ್ಚಿಸುವವರೆಗೆ ಈ ಸಲಹೆಗಳು ನಿಮಗೆ ಸಹಾಯ ಮಾಡಬಹುದು.

ಜೂನ್‌ ತಿಂಗಳು ಆರಂಭವಾದರೂ ಮಳೆ ಇನ್ನೂ ಆರಂಭವಾಗಿಲ್ಲ. ಬಿಸಿಲಿನ ತಾಪವೂ ಜೋರಾಗಿದ್ದು, ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಚರ್ಮದ ಕಾಳಜಿ ವಿಷಯಕ್ಕೆ ಬಂದರೆ ಹೆಣ್ಣುಮಕ್ಕಳು, ಗಂಡುಮಕ್ಕಳು ಎಂದಿಲ್ಲ ಪ್ರತಿಯೊಬ್ಬರು ಕಾಳಜಿ ವಹಿಸುವುದು ಅವಶ್ಯವಾಗಿದೆ. ಅತಿಯಾದ ಬಿಸಿಲು, ಶಾಖ ಹಾಗೂ ಆರ್ದ್ರತೆಯು ಚರ್ಮದ ಟೋನ್‌ ಕೆಡಲು ಕಾರಣವಾಗಬಹುದು. ಅಲ್ಲದೆ ಹಲವು ರೀತಿಯ ಸಮಸ್ಯೆಗಳಿಗೂ ಕಾರಣವಾಗಬಹುದು. ಆದರೆ ಕೆಲವು ಸರಳ ಹಾಗೂ ಪರಿಣಾಮಕಾರಿ ತ್ವಚೆ ಸಲಹೆಗಳನ್ನು ಅನುಸರಿಸುವುದರಿಂದ ಚರ್ಮವನ್ನು ಆರೋಗ್ಯಕರವಾಗಿ, ತಾಜಾವಾಗಿ ಕಾಣುವಂತೆ ಮಾಡಬಹುದು.

ವಿಭಾಗ