Beauty Tips: ಕತ್ತಿನ ಸುಕ್ಕುಗಳು ಮುಖದ ಅಂದವನ್ನು ಕೆಡಿಸುತ್ತಿವೆಯೇ; ಇಲ್ಲಿವೆ 6 ಸರಳ ಪರಿಹಾರಗಳು
ಕುತ್ತಿಗೆ ರೇಖೆಗಳು, ಸುಕ್ಕುಗಳು ನಿಮ್ಮ ಅಂದವನ್ನು ಕೆಡಿಸುತ್ತಿವೆಯೆಂದು ಬೇಸರವಾಗುತ್ತಿದಿಯಾ? ಚಿಂತಿಸಬೇಡಿ ಈ 6 ಸರಳ ಪರಿಹಾರಗಳು ನಿಮಗಾಗಿ.
ಬೆಂಗಳೂರು: ಸಾಮಾನ್ಯವಾಗಿ ವಯಸ್ಸಾಗುವ ಪ್ರತಿಯೊಬ್ಬರಲ್ಲೂ ಚರ್ಮದ ಸುಕ್ಕುಗಳು ಕಾಣಿಸುತ್ತವೆ. ಆದರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಈ ಸುಕ್ಕುಗಳು ಕಿರಿಕಿರಿ ಉಂಟುಮಾಡುತ್ತವೆ. ಅದರಲ್ಲೂ ಕುತ್ತಿಗೆಯಲ್ಲಿ ಕಾಣಿಸಿಕೊಳ್ಳುವ ಕಪ್ಪು ಗೆರೆಗಳು ಮುಖದ ಅಂದವನ್ನೇ ಕೆಡಿಸುತ್ತಿವೆ ಎಂದು ಬೇಸರ ಮಾಡಿಕೊಳ್ಳುವ ಅದೆಷ್ಟೋ ಜನರಿದ್ದಾರೆ. ಸಮಸ್ಯೆಗೆ ಏನು ಪರಿಹಾರ ಅನ್ನೋದು ಇಲ್ಲಿ ತಿಳಿಯೋಣ.
ಕತ್ತಿನ ಮೇಲೆ ಕೆಲವು ಸುಕ್ಕುಗಳು ನೈಸರ್ಗಿಕವಾಗಿದ್ದರೂ ಸರಳವಾದ ಆರೈಕೆ ಮತ್ತು ಕೆಲವು ಅಭ್ಯಾಸಗಳನ್ನು ಮಾಡುವುದರಿಂದ ಇವುಗಳನ್ನ ತಪ್ಪಿಸಬಹುದು. ಅಕಾಲಿಕ ಸುಕ್ಕುಗಳನ್ನು ತೊಡೆದು ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತುವವರಿಗಾಗಿ ಈ ಸರಳ ಪರಿಹಾರಗಳನ್ನು ಅನುಸರಿಸಿ.
ಕುತ್ತಿಗೆ ಮೇಲೆ ರೇಖೆಗಳು ಯಾಕೆ ಕಾಣಿಸಿಕೊಳ್ಳುತ್ತವೆ?
ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿರುವ ಕಾಲಜನ್ ಕೊರತೆಯಿಂದ ಚರ್ಮದ ಬಿಗಿತ ಹಾಗೂ ದೃಢತೆಯ ಮೇಲೆ ಪರಿಹಾರ ಬೀರುತ್ತದೆ. ಕುತ್ತಿಗೆಯ ಚರ್ಚಮದಲ್ಲಿ ಸುಕ್ಕುಗಳು, ರೇಖೆಗಳಿಗೆ ಇದು ಕಾರಣವಾಗುತ್ತದೆ. ವಯಸ್ಸಾದಾಗ, ಸೂರ್ಯನ ಕಿರಣಗಳು ಚರ್ಮದ ಮೇಲೆ ಹೆಚ್ಚು ಬಿದ್ದಾಗ, ಮಧ್ಯಪಾಲ, ಸ್ಥೂಲಕಾಯತೆ, ಧೂಮಪಾನ ಮಾಡಿದಾಗಲೂ ಚರ್ಮದಲ್ಲಿ ಸುಕ್ಕುಗಳು ಬರುತ್ತವೆ.
ಹೈಲುರಾನಿಕ್ ಆಮ್ಲವು ಚರ್ಮದ ಅಂಗಾಂಶಗಳಲ್ಲಿ ಹೆಚ್ಚಿನ ಸಾಂದ್ರತೆಗಳಲ್ಲಿ ಕಂಡುಬರುವ ಅಂತರ್ವಧಕ ಘಟಕಗಳಲ್ಲಿ ಒಂದಾಗಿದೆ. ಆದರೆ ವಯಸ್ಸಾಗುತ್ತಿದ್ದಂತೆ ಚರ್ಮದಲ್ಲಿ ಹೈಲುರಾನಿಕ್ ಆಮ್ಲ ಕಡಿಮೆಯಾಗುತ್ತದೆ. ಈ ಕಾರಣದಿಂದಲೂ ಸುಕ್ಕುಗಳು ಉಂಟಾಗುತ್ತವೆ. ಕೇವಲ ವಯಸ್ಸಾದವರಿಗೆ ಮಾತ್ರ ಅಲ್ಲ, ಫೋನ್, ಲ್ಯಾಪ್‌ಟಾಪ್ ಬಳಸುವವರಿಗೂ ಕತ್ತಿನ ಕೆಳಗೆ ಸುಕ್ಕುಗಳು ಹೆಚ್ಚಾಗಿ ಕಾಣುತ್ತವೆ. ಟೆಕ್ ನೆಕ್ ಸುಕ್ಕುಗಳು ಉದ್ಯೋಗಿಗಳ ಸೌಂದರ್ಯಕ್ಕೆ ಅಡ್ಡಿಯಾಗಿವೆ. ಹೆಡ್-ಡೌನ್ ಸ್ಟೆಪ್ಸ್ ಎಂದರೆ ತಲೆ ಬಗ್ಗಿಸಿ ಸಿಸ್ಟಮ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ಕುತ್ತಿಗೆಯ ಕೆಳಗೆ ಕಪ್ಪು ಗೆರೆಗಳಿಗೆ ಕಾರಣವಾಗುತ್ತವೆ.
1. ಕತ್ತು ಸುಕ್ಕುಗಳನ್ನು ತಡೆಯುವ ಸರಳ ವಿಧಾನ
ಸೂರ್ಯನ ರಕ್ಷಣೆಯು ಚರ್ಮ ಆರೈಕೆಯ ಮುಖ್ಯ ಭಾಗವಾಗಿದೆ. ಸ್ಪೆಷಲ್ ಪ್ರೊಟೆಕ್ಷನ್ ಪೋರ್ಸ್-ಎಸ್‌ಪಿಎಫ್ ಹಚ್ಚಲು ಸೌಂದರ್ಯ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಪ್ರತಿ 2 ರಿಂದ 3 ಗಂಟೆಗೊಮ್ಮೆ ಇದನ್ನು ಹಚ್ಚಬೇಕೆಂದು ಸಲಹೆ ನೀಡುತ್ತಾರೆ. ಲೋಷನ್, ಜೆಲ್, ಕ್ರೀಮ್ ಅಥವಾ ಸೀರಮ್ ಕೂಡ ಆಗಿರಬಹುದು. ಕತ್ತಿನ ಕೆಳಗೆ ಎಸ್‌ಪಿಎಫ್ ಹಚ್ಚಿ ಸ್ವಲ್ಪ ಮಸಾಜ್ ಮಾಡಿದರೆ ಕಪ್ಪು ಗೆರೆಗಳು ಕಡಿಮೆಯಾಗುತ್ತವೆ ಎಂದು ಹೇಳುತ್ತಾರೆ.
2. ಹೈಲುರಾನಿಕ್ ಆಮ್ಲ, ವಿಟಮಿನ್ ಸಿಗೆ ಆದ್ಯತೆ ನೀಡಿ
ಸೀಮರ್‌ಗಳು, ಟೋನರ್‌ಗಳು ಹಾಗೂ ಮಾಯಿಶ್ಚರೈಸರ್‌ನಂತಹ ಚಿಕಿತ್ಸೆಗಳು ಹೈಲುರಾನಿಕ್ ಆಮ್ಲು, ವಿಟಮಿನ್ ಸಿ ಹಾಗೂ ಕ್ಲೈಕೋಲಿಕ್ ಆಮ್ಲದೊಂದಿಗೆ ಚರ್ಮವನ್ನು ಪರಿಣಾಮಕಾರಿಯಾಗಿ ಕಾಪಾಡುತ್ತವೆ. ಚರ್ಮದ ಮೇಲೆ ಸೂರ್ಯ ಕಿರಣಗಳು ಒಡ್ಡಿಕೊಳ್ಳುವುದರಿಂದ ಉಂಟಾಗುವ ಹಾನಿಯನ್ನು ವಿಟಮಿನ್ ಸಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳೊಂದಿಗೆ ಹೋರಾಡುತ್ತದೆ.
3. ರೆಟಿನಾಲ್ ಹಚ್ಚಿ, ಕಾಲಜನ್ ಹೆಚ್ಚಿಸಿ
ರೆಟಿನಾಲ್ ಉತ್ಪನ್ನಗಳು ಚರ್ಮದ ಸಮಸ್ಯೆಯನ್ನು ತಡೆಯುತ್ತದೆ. ಜೊತೆಗೆ ಚರ್ಮದ ತ್ವಚೆಯನ್ನು ಹೆಚ್ಚಿಸುತ್ತದೆ. ಇದೊಂದು ವಿಟಮಿನ್ ಎ ಉತ್ಪನ್ನವಾಗಿದೆ. ಪ್ರಮುಖ ಪೋಷಕಾಂಶವಾಗಿರುವ ಕಾಲಜನ್ ಉತ್ಪಾದನೆಯ ಮೇಲೆ ಸಕಾರಾತ್ಮಕ ಪರಿಣಾಮವ ಬೀರಿದೆ ಎಂಬುದು ಸಂಶೋಧನೆಗಳಲ್ಲಿ ಸಾಬೀತಾಗಿದೆ ಎಂದು ತಜ್ಞರು ಹೇಳುತ್ತಾರೆ. ಚರ್ಮದಲ್ಲಿ ಕಾಲಜನ್ ಉತ್ತೇಜಿಸಲು ರೇಡಿಯೊಫ್ರಿಕ್ವೆನ್ಸಿ, ಮೈಕ್ರೊನೀಡ್ಲಿಂಗ್‌ನಂತಹ ವೃತ್ತಿಪರ ಚಿಕಿತ್ಸೆಗಳು ಸಾಕಷ್ಟು ಜನಪ್ರಿಯವಾಗಿವೆ.
4. ಧೂಮಪಾವನ್ನು ತಪ್ಪಿಸಿ
ಧೂಮಪಾನದಿಂದ ಮುಖದಲ್ಲಿ ಹಲವು ರೀತಿಯ ಬದಲಾವಣೆಗಳು ಆಗುತ್ತವೆ ಎಂಬುದನ್ನು 2013ರ ಅಧ್ಯಯನವೊಂದು ಮಾಹಿತಿಯನ್ನು ಬಹಿರಂಗಪಡಿಸಿದೆ. ತಂಬಾಕು ಕಾಲಜನ್ ಹಾನಿಗೆ ಕಾರಣವಾಗಿದೆ. ನಿಕೋಟಿನ್ ಸೇವನೆ ನೇರವಾಗಿ ಆಮ್ಲಜನಕದ ಪೂರೈಕೆ ಮೇಲೆ ಪರಿಹಾಣ ಬೀರುತ್ತದೆ. ಚರ್ಮದ ಮೇಲೆ ಸುಕ್ಕುಗಳಿಗೂ ಧೂಮಪಾನ ಕಾರಣವಾಗುತ್ತದೆ. ಹೀಗಾಗಿ ಒಂದು ವೇಳೆ ನಿಮಗೆ ಧೂಮಪಾನದ ಅಭ್ಯಾಸಗಳಿದ್ದರೆ ಇಂದೇ ತ್ಯಜಿಸಿ.
5. ಕಾಸ್ಮೆಟಿಕ್ ಚಿಕಿತ್ಸೆಗಳು
ಚರ್ಮದಲ್ಲಿನ ಕಪ್ಪುಗೆರೆಗಳು, ಸುಕ್ಕುಗಳನ್ನು ತೊಡೆದು ಹಾಕಲು ಬೊಟಿಕ್ಸ್, ಪಿಆರ್‌ಪಿ, ಮೈಕೊನೀಡ್ಲಿಂಗ್ ಹಾಗೂ ಫ್ರಾಕ್ಸೆಲ್ ಲೇಸರ್ ಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಕುತ್ತಿಗೆಯ ಸುಕ್ಕುಗಳನ್ನು ತಡೆಗಟ್ಟಲು ಚಿಕಿತ್ಸೆಗಳು ಬಂದಿವೆ. ಪ್ರತಿಯೊಂದು ಚಿಕಿತ್ಸೆಯು ವಿಭಿನ್ನ ಹಾಗೂ ಅದರ ಕಾರ್ಯ ವಿಧಾನಗಳು ಬೇರೆ ಬೇರೆಯಾಗಿಯೇ ಇವೆ.
6. ಕುತ್ತಿಗೆಯ ಭಂಗಿಯನ್ನು ನೋಡಿಕೊಳ್ಳಿ
ಚರ್ಮದ ಮೇಲೆ ಸುಕ್ಕುಗಳು, ಕಪ್ಪು ಗೆರೆಗಳು ಬರಲು ನಮ್ಮ ದೇಹದ ಭಂಗಿಯೂ ಕಾರಣವಾಗಿರುತ್ತದೆ. ಫೋನ್ ಬಳಸುವಾಗ ತಲೆ ತಗ್ಗಿಸಿಕೊಂಡೇ ಇರುತ್ತೇವೆ, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಬಳಸುವಾಗಲೂ ಇದೇ ರೀತಿ ಕತ್ತನ್ನು ಬಗ್ಗಿಸುತ್ತೇವೆ. ಈ ವೇಳೆ ಕಪ್ಪು ಗೆರೆಗಳು ಹೆಚ್ಚಾಗುತ್ತವೆ. ಇದನ್ನು ಟೆಕ್ ನೆಕ್ ಅಥವಾ ಟೆಕ್ಸ್ಟ್ ನೆಕ್ ಎಂದು ಕರೆಯಲಾಗುತ್ತಿದೆ. ಹೀಗಾಗಿ ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕುತ್ತಿಗೆಯ ಭಂಗಿಯನ್ನು ಸರಿಯಾಗಿ ಇಟ್ಟುಕೊಳ್ಳಿ.