ಕನ್ನಡ ಸುದ್ದಿ / ಜೀವನಶೈಲಿ /
Hair Care: ಕೂದಲಿಗೆ ಹಚ್ಚಿದ ಬಣ್ಣ ಬೇಗ ಮಾಸದೆ ಹೆಚ್ಚು ಕಾಲ ಇರಬೇಕೆಂದರೆ ಹೀಗೆ ಮಾಡಿ
Beauty Tips: ಕೂದಲಿಗೆ ಹಚ್ಚುವ ಬಣ್ಣ ಕೆಲವೊಮ್ಮೆ ಬೇಗ ಮಾಸುತ್ತದೆ. ಹೇರ್ ಕಲರ್ ಬಹಳ ದಿನಗಳ ಕಾಲ ನಿಮ್ಮ ಕೂದಲಿನಲ್ಲಿ ಉಳಿಯಬೇಕು ಎಂದರೆ ಈ ಟಿಪ್ಸ್ ಅನುಸರಿಸಿ.
ಕೂದಲಿಗೆ ಹಚ್ಚಿದ ಬಣ್ಣ ಹೆಚ್ಚು ಸಮಯ ಉಳಿಯಲು ಟಿಪ್ಸ್ (PC: Freepik)
Beauty Tips: ಮೊದಲೆಲ್ಲಾ ಬಿಳಿ ಕೂದಲು ಇದ್ದವರು ತಲೆಗೆ ಬಣ್ಣ ಹಚ್ಚುತ್ತಿದ್ದರು. ಆದರೆ ಈಗ ಫ್ಯಾಷನ್‌ಗಾಗಿ ಕೂಡಾ ತಲೆ ಕೂದಲಿಗೆ ವಿವಿಧ ಬಣ್ಣಗಳನ್ನು ಹಚ್ಚಲಾಗುತ್ತಿದೆ. ಆದರೆ ಹೀಗೆ ಹಚ್ಚಿದ ಬಣ್ಣ ಹೆಚ್ಚು ಕಾಲ ಉಳಿಯುವುದಿಲ್ಲ. ಕೂದಲಿಗೆ ಬಣ್ಣ ಹಚ್ಚುವುದು ಮುಖ್ಯವಲ್ಲ, ಅದನ್ನು ಕಾಪಾಡಿಕೊಳ್ಳುವುದು ಕೂಡಾ ಮುಖ್ಯ. ಬಣ್ಣ ಬೇಗನೆ ಮಸುಕಾಗದಿರಲು, ಕೂದಲಿನ ಬಣ್ಣ ದೀರ್ಘಕಾಲ ಉಳಿಯಲು, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
- ನಿಮ್ಮ ಕೂದಲಿನ ಬಣ್ಣವನ್ನು ದೀರ್ಘ ಕಾಲ ಉಳಿಸುವಂಥ ಶ್ಯಾಂಪೂ ಮತ್ತು ಕಂಡಿಷನರ್‌ಗಳನ್ನು ಬಳಸಿ. ಈ ಉತ್ಪನ್ನಗಳು ನಿಮ್ಮ ಕೂದಲಿನ ಹೊಳಪನ್ನು ರಕ್ಷಿಸುವುದದಲ್ಲದೆ ಮೃದುವಾಗಿರಿಸುತ್ತದೆ. ಬಣ್ಣ ಬೇಗ ಹೋಗದಂತೆ ಕಾಪಾಡುತ್ತದೆ.
- ಕೂದಲಿಗೆ ಬಣ್ಣ ಹಾಕಿದಾಗ ಬಿಸಿ ನೀರಿನ ಬದಲಿಗೆ ತಣ್ಣೀರಿನಿಂದ ಸ್ನಾನ ಮಾಡಿ. ಬಿಸಿ ನೀರಿನಿಂದ ಸ್ನಾನ ಮಾಡಿದರೆ, ಕೂದಲಿನಿಂದ ಬಣ್ಣ ಮತ್ತು ನೈಸರ್ಗಿಕ ತೈಲಗಳು ಬೇಗ ಮಾಸುತ್ತದೆ.
- ಬಣ್ಣ ಹಾಕಿದಾಗ ನೀವು ಹೊರಗೆ ಹೋಗಬೇಕೆಂದರೆ ತಲೆಯನ್ನು ಕ್ಯಾಪ್ ಅಥವಾ ಮಹಿಳೆಯರು ದುಪಟ್ಟಾದಿಂದ ಮರೆ ಮಾಡಿಕೊಳ್ಳಿ. ಸೂರ್ಯನ ಯುವಿ ಕಿರಣಗಳಿಗೆ ಹೆಚ್ಚು ತೆರೆದುಕೊಂಡರೆ, ಕೂದಲಿನ ಬಣ್ಣವು ಬೇಗನೆ ಮಸುಕಾಗುತ್ತದೆ.
- ನಿಮ್ಮ ಕೂದಲು ಡ್ರೈ ಆದರೆ ಬಣ್ಣ ಬೇಗ ಬಿಡುತ್ತದೆ, ಆದರೆ ಕೂದಲು ತೇವಾಂಶದಿಂದ ಕೂಡಿದ್ದರೆ ಬಣ್ಣ ಹೆಚ್ಚು ಕಾಲ ಇರುತ್ತದೆ. ಆದ್ದರಿಂದ ಕೂದಲಿಗೆ ಕಂಡಿಷನರ್ ಬಳಸಿ.
- ಬಣ್ಣ ಹಚ್ಚಿದ ನಂತರ ನಿಮ್ಮ ಕೂದಲನ್ನು ಆಗ್ಗಾಗ್ಗೆ ತೊಳೆಯಬೇಡಿ. ಪದೇ ಪದೆ ತೊಳೆಯುತ್ತಿದ್ದರೆ ಕೂದಲಿನ ಬಣ್ಣ ಬೇಗನೆ ಮಾಸುತ್ತದೆ.
- ಸಲ್ಫೇಟ್ ಮತ್ತು ಆಲ್ಕೋಹಾಲ್ ಹೊಂದಿರುವ ಪ್ರಾಡಕ್ಟ್‌ಗಳನ್ನು ಕೂದಲಿಗೆ ಹಚ್ಚುವುದನ್ನು ನಿಲ್ಲಿಸಿ. ಕೆಮಿಕಲ್ ಹೇರ್ ಡೈಗಳಿಗಿಂತ ಹರ್ಬಲ್ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
- ಹೆಚ್ಚು ಶಾಖವು ಕೂದಲಿಗೆ ಹಾನಿ ಉಂಟು ಮಾಡುವುದರ ಜೊತೆಗೆ ಬಣ್ಣ ಬೇಗ ಬಿಡುವಂತೆ ಮಾಡುತ್ತದೆ. ಆದ್ದರಿಂದ ಸ್ನಾನ ಮಾಡುವಾಗಲಾಗಲೀ, ಹೇರ್ ಸೆಟ್ ಮಾಡುವಾಗ ಆಗಲೀ ಡ್ರೈಯರ್ ಬಳಸಬೇಡಿ.
- ಈಜುಕೊಳಗಳಲ್ಲಿನ ಕ್ಲೋರಿನ್ ಕೂದಲಿನ ಬಣ್ಣವನ್ನು ಬೇಗ ಮಸುಕಾಗುವಂತೆ ಮಾಡುತ್ತದೆ. ನೀವು ಈಜಲು ಹೋಗುವ ಮೊದಲು ನಿಮ್ಮ ಕೂದಲಿಗೆ ಲೀವ್-ಇನ್ ಕಂಡಿಷನರ್ ಹಚ್ಚಿ, ಜೊತೆಗೆ ಹೆಡ್ ಕ್ಯಾಪ್ ಹಾಕಿಕೊಳ್ಳಿ.
ಇದರ ಜೊತೆಗೆ ನಿಮ್ಮ ಕೂದಲನ್ನು ಧೂಳಿಗೆ ಹೆಚ್ಚು ಒಡ್ಡಿಕೊಳ್ಳದಿರಲು ಪ್ರಯತ್ನಿಸಿ.
ವಿಭಾಗ
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.