ತೆಂಗಿನೆಣ್ಣೆ vs ತೆಂಗಿನಹಾಲು; ಕೂದಲು ಸೊಂಪಾಗಿ ಬೆಳೆಯಲು ಯಾವುದು ಉತ್ತಮ, ಬಳಕೆ ಹೇಗೆ; ಇಲ್ಲಿದೆ ಮಾಹಿತಿ-beauty tips hair care coconut oil vs coconut milk which is better for healthy hair how to use coconut oil for hair rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ತೆಂಗಿನೆಣ್ಣೆ Vs ತೆಂಗಿನಹಾಲು; ಕೂದಲು ಸೊಂಪಾಗಿ ಬೆಳೆಯಲು ಯಾವುದು ಉತ್ತಮ, ಬಳಕೆ ಹೇಗೆ; ಇಲ್ಲಿದೆ ಮಾಹಿತಿ

ತೆಂಗಿನೆಣ್ಣೆ vs ತೆಂಗಿನಹಾಲು; ಕೂದಲು ಸೊಂಪಾಗಿ ಬೆಳೆಯಲು ಯಾವುದು ಉತ್ತಮ, ಬಳಕೆ ಹೇಗೆ; ಇಲ್ಲಿದೆ ಮಾಹಿತಿ

ಕೂದಲು ಉದುರುವ ಸಮಸ್ಯೆಯಿಂದ ಬೇಸತ್ತಿರುವವರು, ಕೂದಲಿನ ಕಾಳಜಿಯ ಮಾತು ಬಂದಾಗ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಕೂದಲ ರಕ್ಷಣೆಯ ವಿಚಾರದಲ್ಲಿ ತೆಂಗಿನೆಣ್ಣೆ ಹಾಗೂ ತೆಂಗಿನಹಾಲು ಎರಡೂ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕೂದಲು ಸೊಂಪಾಗಿ ಬೆಳೆಯಲು ಇದರಲ್ಲಿ ಯಾವುದು ಉತ್ತಮ; ಇಲ್ಲಿದೆ ಉತ್ತರ.

ತೆಂಗಿನೆಣ್ಣೆ vs ತೆಂಗಿನಹಾಲು; ಕೂದಲು ಸೊಂಪಾಗಿ ಬೆಳೆಯಲು ಯಾವುದು ಉತ್ತಮ, ಬಳಕೆ ಹೇಗೆ ಇಲ್ಲಿದೆ ಮಾಹಿತಿ
ತೆಂಗಿನೆಣ್ಣೆ vs ತೆಂಗಿನಹಾಲು; ಕೂದಲು ಸೊಂಪಾಗಿ ಬೆಳೆಯಲು ಯಾವುದು ಉತ್ತಮ, ಬಳಕೆ ಹೇಗೆ ಇಲ್ಲಿದೆ ಮಾಹಿತಿ

ಸೊಂಪಾದ, ದಟ್ಟ ಕೇಶರಾಶಿ ನಮ್ಮದಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದ್ರೇನು ಮಾಡೋದು ಇತ್ತೀಚಿನ ದಿನಗಳಲ್ಲಿ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಕೂದಲು ಉದುರುವುದು, ಬಾಲನೆರೆ, ಕೂದಲು ಸೀಳುವುದು ಇಂತಹ ಸಮಸ್ಯೆಗಳು ಕೇವಲ ಹೆಣ್ಣುಮಕ್ಕಳನ್ನು ಮಾತ್ರವಲ್ಲ ಗಂಡು ಮಕ್ಕಳನ್ನೂ ಬಾಧಿಸುತ್ತಿದೆ. ಕೂದಲಿನ ಕಾಳಜಿ ವಿಚಾರಕ್ಕೆ ಬಂದಾಗ ಮೊದಲು ನೆನಪಾಗುವುದು ತೆಂಗಿನೆಣ್ಣೆ. ಇದು ಕೂದಲಿನ ಅಂದ-ಆರೋಗ್ಯಕ್ಕೆ ಹೇಳಿ ಮಾಡಿಸಿದ್ದು. ಹೆಣ್ಣುಮಕ್ಕಳು ತಮ್ಮ ನೀಳ ಕೇಶರಾಶಿಗೆ ತೆಂಗಿನೆಣ್ಣೆ ಬಳಸುತ್ತಾರೆ. ನೈಸರ್ಗಿಕ ಪದಾರ್ಥಗಳಿಂದ ತಯಾರಾಗುವ ತೆಂಗಿನೆಣ್ಣೆ ಕೂದಲನ್ನು ಮೃದುವಾಗಿಸುವುದು ಮಾತ್ರವಲ್ಲ, ಕೂದಲನ್ನು ಸದೃಢವಾಗಿಸುತ್ತದೆ.

ನಿರಂತರವಾಗಿ ಕೂದಲಿಗೆ ತೆಂಗಿನೆಣ್ಣೆ ಬಳಸುವುದರಿಂದ ಕೂದಲಿನ ಆರೋಗ್ಯದ ಮೇಲೆ ಅದ್ಭುತ ಉಂಟಾಗುವುದರಲ್ಲಿ ಎರಡು ಮಾತಿಲ್ಲ. ಬರೀ ತೆಂಗಿನೆಣ್ಣೆ ಮಾತ್ರವಲ್ಲ, ಕೆಲವರು ಕೂದಲಿನ ಆರೋಗ್ಯ-ಅಂದ ಹೆಚ್ಚಿಸಿಕೊಳ್ಳಲು ತೆಂಗಿನಕಾಯಿಯಿಂದ ತೆಗೆದ ಹಾಲನ್ನೂ ಬಳಸುತ್ತಾರೆ. ತೆಂಗಿನಹಾಲು ಪೋಷಕಾಂಶ ಸಮೃದ್ಧವಾಗಿದ್ದು, ಇದು ಕೂದಲನ್ನು ಸೊಂಪಾಗಿಸುವುದು ಮಾತ್ರವಲ್ಲ, ಕೂದಲಿನ ಬುಡಕ್ಕೆ ತೇವಾಂಶ ಒದಗಿಸುತ್ತದೆ. ತೆಂಗಿನಹಾಲು ಹಾಗೂ ತೆಂಗಿನೆಣ್ಣೆ ಎರಡಲ್ಲೂ ವಿಟಮಿನ್‌ ಇ ಅಂಶವಿದ್ದು, ಇದು ಕೂದಲಿನ ಆರೋಗ್ಯಕ್ಕೆ ಬಹಳ ಅವಶ್ಯ. ಆದರೆ ಈ ಎರಡರಲ್ಲಿ ಕೂದಲಿನ ಆರೋಗ್ಯಕ್ಕೆ ಯಾವುದು ಹೆಚ್ಚು ಉತ್ತಮ ಎಂಬ ಪ್ರಶ್ನೆ ಮೂಡುವುದು ಸಹಜ. ನಿಮ್ಮ ಮನಸ್ಸಲ್ಲೂ ಈ ರೀತಿಯ ಗೊಂದಲ ಮೂಡಿದ್ದರೆ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ತೆಂಗಿನೆಣ್ಣೆ ಎಂದರೇನು?

ತೆಂಗಿನಕಾಯಿಯ ತಿರುಳಿನಿಂದ ತಯಾರಿಸುವ ಖಾದ್ಯ ತೈಲವನ್ನು ತೆಂಗಿನೆಣ್ಣೆ ಎನ್ನುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ತೆಂಗಿನೆಣ್ಣೆಯು ಶೀತ ವಾತಾವರಣದಲ್ಲಿ ಗಟ್ಟಿಯಾಗಿ, ಘನರೂಪದಲ್ಲಿರುತ್ತದೆ. ಬೇರೆ ದಿನಗಳಲ್ಲಿ ಸಹಜವಾಗಿ ದ್ರವರೂಪದಲ್ಲಿರುತ್ತದೆ. ಇದರಲ್ಲಿ ರಿಫೈನ್ಡ್‌ ಹಾಗೂ ವರ್ಜಿನ್‌ ಎಂಬ ಎರಡು ವಿಧಗಳಿವೆ. ಒಣಗಿದ ತೆಂಗಿನಕಾಯಿ ಅಥವಾ ಕೊಬ್ಬರಿಯಿಂದ ಈ ರಿಫೈನ್ಡ್‌ ತೆಂಗಿನೆಣ್ಣೆಯನ್ನು ತಯಾರಿಸಲಾಗುತ್ತದೆ. ತೆಂಗಿನೆಣ್ಣೆಯನ್ನು ಕೂದಲ ಕಾಳಜಿಗೆ ಮಾತ್ರವಲ್ಲ ಅಡುಗೆಗೂ ಬಳಸಲಾಗುತ್ತದೆ.

ತೆಂಗಿನಹಾಲಿಗಿಂತ ತೆಂಗಿನೆಣ್ಣೆ ಹೇಗೆ ಭಿನ್ನ?

ತೆಂಗಿನಹಾಲನ್ನು ತೆಂಗಿನಕಾಯಿ ತಿರುಳನ್ನು ರುಬ್ಬಿ ತಯಾರಿಸಲಾಗುತ್ತದೆ. ಕೆಲವು ಕಡೆ ತೆಂಗಿನಕಾಯಿ ತಿರುಳನ್ನು ಬಿಸಿ ನೀರಿನಲ್ಲಿ ಕುದಿಸಿ ಫಿಲ್ಟರ್‌ ಮಾಡಿ ತೆಂಗಿನಹಾಲು ತಯಾರಿಸುತ್ತಾರೆ. ತೆಂಗಿನೆಣ್ಣೆಯನ್ನು ಗಾಣ ಅಥವಾ ಮಿಷನ್‌ಗೆ ಹಾಕಿ ತಿರುಗಿಸುವ ಮೂಲಕ ಎಣ್ಣೆಯನ್ನು ಹೊರ ತೆಗೆಯಲಾಗುತ್ತದೆ.

ಕೂದಲಿನ ಕಾಳಜಿ ತೆಂಗಿನೆಣ್ಣೆ vs ತೆಂಗಿನಹಾಲು

ತೆಂಗಿನೆಣ್ಣೆ ಹಾಗೂ ತೆಂಗಿನಹಾಲು ಎರಡೂ ಕೂದಲಿನ ಆರೋಗ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತವೆ.

ಲಾರಿಕ್‌ ಆಮ್ಲ: ಇದರಲ್ಲಿ ಲಾರಿಕ್‌ ಆಮ್ಲವಿದ್ದು, ಕೂದಲನ್ನು ಬುಡದಿಂದ ರಕ್ಷಿಸುತ್ತದೆ. ಕೂದಲಿಗೆ ತೇವಾಂಶವನ್ನು ನೀಡುವ ಜೊತೆಗೆ ಶುಷ್ಕತೆ ನಿವಾರಣೆಗೂ ಸಹಕಾರಿ.

ವಿಟಮಿನ್‌ ಇ: ತೆಂಗಿನಕಾಯಿಯಲ್ಲಿರುವ ವಿಟಮಿನ್‌ ಇ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ. ಇದು ಪ್ರಿ ರಾಡಿಕಲ್ಸ್‌ನಿಂದ ಕೂದಲನ್ನು ರಕ್ಷಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ತೆಂಗಿನಹಾಲಿನಲ್ಲಿ ಕೂದಲಿಗೆ ಅಗತ್ಯವಿರುವ ಪ್ರೊಟೀನ್‌ ಅಂಶವಿದೆ. ಕೂದಲು ಕೆರಾಟಿನ್‌ ಎಂಬ ಪ್ರೊಟೀನ್‌ನಿಂದ ಕೂಡಿದೆ. ಇದು ಕೂದಲನ್ನು ಬಲ ಪಡಿಸುತ್ತದೆ. ಇಲ್ಲದೇ ಕೂದಲು ಸೀಳು ಬಿಡುವುದನ್ನು ತಡೆಯುತ್ತದೆ. ತೆಂಗಿನೆಣ್ಣೆಯು ಕೂದಲು ಒಣಗುವುದನ್ನು ತಡೆದು ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತದೆ. ಇದು ಕೂದಲಿನ ಆರೋಗ್ಯಕ್ಕೆ ಬಹಳ ಮುಖ್ಯ.

ಕೂದಲಿನ ಕಾಳಜಿಗೆ ತೆಂಗಿನಹಾಲಿನ ಇತರ ಪ್ರಯೋಜನಗಳು: ́

* ತಲೆಹೊಟ್ಟು ನಿವಾರಿಸುತ್ತದೆ

* ಒಣ ಹಾಗೂ ಹಾನಿಗೊಳಗಾದ ಕೂದಲಿಗೆ ಮರುಜೀವ ನೀಡುತ್ತದೆ.

* ಕೂದಲಿನ ಕಾಂತಿ ಮರುಳುವಂತೆ ಮಾಡುತ್ತದೆ.

ಕೂದಲಿಗೆ ತೆಂಗಿನೆಣ್ಣೆಯನ್ನು ಹೇಗೆ ಹಚ್ಚಬೇಕು: ಕೂದಲಿಗೆ ತೆಂಗಿನೆಣ್ಣೆಯನ್ನು ಮಿತವಾಗಿ ಬಳಸುವುದು ಬಹಳ ಮುಖ್ಯವಾಗುತ್ತದೆ. ತಲೆಸ್ನಾನಕ್ಕೂ ಸ್ವಲ್ಪ ಮೊದಲು ಕೂದಲಿನ ತುದಿಗೆ ತೆಂಗಿನೆಣ್ಣೆ ಹಚ್ಚಿ. ಅತಿಯಾಗಿ ಎಣ್ಣೆ ಹಚ್ಚುವುದರಿಂದಲೂ ಸಮಸ್ಯೆಯಾಗಬಹುದು.

ಎಷ್ಟು ದಿನಗಳಿಗೊಮ್ಮೆ ಕೂದಲಿಗೆ ಎಣ್ಣೆ ಹಚ್ಚಬೇಕು: ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಕೂದಲಿಗೆ ಎಣ್ಣೆ ಹಚ್ಚುವುದು ಉತ್ತಮ. ತೆಂಗಿನೆಣ್ಣೆಯು ಎಲ್ಲಾ ವಿವಿಧ ಕೂದಲು ಹೊಂದಿರುವವರಿಗೂ ಉತ್ತಮ. ಇದು ಕೂದಲಿಗೆ ತೇವಾಂಶ ಒದಗಿಸುತ್ತದೆ, ಕೂದಲನ್ನು ಬುಡದಿಂದಲೇ ಪೋಷಿಸಿ, ಬಲಪಡಿಸುತ್ತದೆ.

* ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

* ಕೂದಲಿಗೆ ಹೊಳಪು ನೀಡುತ್ತದೆ.

* ನೆತ್ತಿಯ ಕಿರಿಕಿರಿ ಹಾಗೂ ಉರಿಯನ್ನು ನಿವಾರಿಸುತ್ತದೆ.

ತೆಂಗಿನಹಾಲನ್ನು ಹೇಗೆ ಬಳಸಬಹುದು: ಇದನ್ನು ಬಹುವಿಧವಾಗಿ ಕೂದಲಿಗೆ ಹಚ್ಚಬಹುದು. ಹೇರ್‌ಮಾಸ್ಕ್‌, ಕಂಡೀಷನರ್‌, ಲೀವ್‌ ಇನ್‌ ಮಾಸ್ಕ್‌ ರೀತಿ ಕೂದಲಿಗೆ ಬಳಸಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)