ತ್ವಚೆ ಸುಂದರವಾಗಿ ಕಾಣಬೇಕೆಂದರೆ ಅಕ್ಕಿ ತೊಳೆದ ನೀರು ಯಾವತ್ತೂ ವ್ಯರ್ಥ ಮಾಡಬೇಡಿ: ಚರ್ಮ, ಕೂದಲಿನ ಆರೈಕೆಗೆ ಇದುವೇ ಬೆಸ್ಟ್-beauty tips know the rice water benefits for glossy skin and healthier long hair arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ತ್ವಚೆ ಸುಂದರವಾಗಿ ಕಾಣಬೇಕೆಂದರೆ ಅಕ್ಕಿ ತೊಳೆದ ನೀರು ಯಾವತ್ತೂ ವ್ಯರ್ಥ ಮಾಡಬೇಡಿ: ಚರ್ಮ, ಕೂದಲಿನ ಆರೈಕೆಗೆ ಇದುವೇ ಬೆಸ್ಟ್

ತ್ವಚೆ ಸುಂದರವಾಗಿ ಕಾಣಬೇಕೆಂದರೆ ಅಕ್ಕಿ ತೊಳೆದ ನೀರು ಯಾವತ್ತೂ ವ್ಯರ್ಥ ಮಾಡಬೇಡಿ: ಚರ್ಮ, ಕೂದಲಿನ ಆರೈಕೆಗೆ ಇದುವೇ ಬೆಸ್ಟ್

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಪ್ರತಿದಿನ ಅನ್ನ ಮಾಡುತ್ತಾರೆ. ಅನ್ನ ಮಾಡುವ ಮೊದಲು ಅಕ್ಕಿಯನ್ನು ನೀರಿನಲ್ಲಿ ನೆನೆಸಲಾಗುತ್ತದೆ. ನಂತರ ಆ ನೀರು ವೇಸ್ಟ್‌ ಎಂದು ಎಸೆಯುತ್ತಾರೆ. ಆದ್ರೆ ನೀವು ಹಾಗೆ ಮಾಡಬೇಡಿ. ಅಕ್ಕಿ ತೊಳೆದ ನೀರು ಚರ್ಮ ಮತ್ತು ಕೂದಲ ಆರೈಕೆಗೆ ಬೆಸ್ಟ್‌ ಆಗಿದೆ.

ಚಂದಕಿಂತ ಚಂದ ನೀನೇ ಸುಂದರಿ ಅನ್ನಿಸಿಕೊಳ್ಳಬೇಕು ಅಂದ್ರೆ ಅಕ್ಕಿ ತೊಳೆದ ನೀರು ಯಾವತ್ತೂ ವೇಸ್ಟ್ ಮಾಡಬೇಡಿ.
ಚಂದಕಿಂತ ಚಂದ ನೀನೇ ಸುಂದರಿ ಅನ್ನಿಸಿಕೊಳ್ಳಬೇಕು ಅಂದ್ರೆ ಅಕ್ಕಿ ತೊಳೆದ ನೀರು ಯಾವತ್ತೂ ವೇಸ್ಟ್ ಮಾಡಬೇಡಿ. (HT File Photo)

ಭಾರತೀಯರು ಅನ್ನ ಪ್ರಿಯರು. ಸಾಮಾನ್ಯವಾಗಿ ಇಲ್ಲಿನ ಪ್ರತಿ ಮನೆಯಲ್ಲೂ ಪ್ರತಿದಿನ ಅನ್ನ ಮಾಡಲಾಗುತ್ತದೆ. ಅನ್ನ ಮಾಡುವುದಕ್ಕಿಂತ ಮೊದಲು ಅಕ್ಕಿಯನ್ನು ಎರಡು ಅಥವಾ ಮೂರು ಬಾರಿ ತೊಳೆಯಲಾಗುತ್ತದೆ. ನಂತರ ಅದನ್ನು ಸ್ವಲ್ಪ ಸಮಯದವರೆಗೆ ನೆನೆಸಲಾಗುತ್ತದೆ. ಹಾಗೆ ಮಾಡುವುದರಿಂದ ಅನ್ನ ಮೃದುವಾಗುತ್ತದೆ. ಆದರೆ ಅಕ್ಕಿಯನ್ನು ಬೇಯಿಸುವ ಮೊದಲು ನೆನೆಸಿದ ಆ ನೀರನ್ನು ‌ವ್ಯರ್ಥ ಎಂದು ಚೆಲ್ಲುತ್ತಾರೆ. ಆದರೆ, ಆ ನೀರು ನಿಮ್ಮ ಚರ್ಮ ಮತ್ತು ಕೂದಲು ಎರಡಕ್ಕೂ ಹೊಳಪನ್ನು ಹೆಚ್ಚಿಸುತ್ತದೆ ಎಂಬುದು ನಿಮಗೆ ಗೊತ್ತಾ? ಇತ್ತೀಚಿನ ದಿನಗಳಲ್ಲಿ ಚರ್ಮ ಹಾಲಿನಂತೆ ಹೊಳೆಯಬೇಕು ಅನ್ನುವುದು ಹಲವರ ಬಯಕೆಯಾಗಿದೆ. ಅದಕ್ಕಾಗಿ ಏನೇನೋ ಕ್ರೀಮ್‌ ಬಳಸುವ ಅಗತ್ಯವಿಲ್ಲ. ಅಕ್ಕಿ ತೊಳೆದ ನೀರು ಅಥವಾ ಅಕ್ಕಿ ಹಿಟ್ಟು ಇದ್ದರೆ ಸಾಕು. ಕೊರಿಯನ್ನರ ತ್ವಚೆಯ ಆರೈಕೆ ಗುಟ್ಟು ಕೂಡಾ ಇದೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಸೌಂದರ್ಯ ತಜ್ಞರು ಸಹ ಅಕ್ಕಿ ನೀರನ್ನು ಮುಖಕ್ಕೆ ಹಚ್ಚಿಕೊಳ್ಳಲು ಸಲಹೆ ನೀಡುತ್ತಾರೆ. ಹಾಗಾದರೆ ಅಕ್ಕಿ ತೊಳೆದ ನೀರು ಚರ್ಮ ಮತ್ತು ಕೂದಲಿನ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂದು ನೋಡೋಣ.

ಇದನ್ನೂ ಓದಿ: Pedicure: ನಿನ್ನ ಪಾದವೇ ಚಂದ ಹುಡುಗಿ; ಮನೆಯಲ್ಲೇ ಮಾಡಿಕೊಳ್ಳಿ ಪಾದಗಳ ಆರೈಕೆ

ಅಕ್ಕಿ ತೊಳೆದ ನೀರಿನ ಪ್ರಯೋಜನಗಳು

ಅಕ್ಕಿ ತೊಳೆದ ನೀರು ಮುಖಕ್ಕೆ ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ. ಇದು ತ್ವಚೆಯ ಕಿರಿಕಿರಿ, ಊತವನ್ನು ಕಡಿಮೆ ಮಾಡುತ್ತದೆ. ಇದು ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಕ್ಕಿ ತೊಳೆದ ನೀರನ್ನು ಕೂದಲಿಗೆ ಬಳಸುವುದರಿಂದ ಕೂದಲು ಬಲಗೊಳ್ಳುತ್ತದೆ. ಇದನ್ನು ನೈಸರ್ಗಿಕ ಮತ್ತು ಸುರಕ್ಷಿತ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಹಲವು ವಿಧದ ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುವುದಿರಂದ ಇದು ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಅಕ್ಕಿ ನೀರನ್ನು ಹೀಗೆ ತಯಾರಿಸಿ

ಅಕ್ಕಿ ನೀರನ್ನು ತಯಾರಿಸಲು, ಅಕ್ಕಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆಯಿರಿ. ಕನಿಷ್ಟ 2 ಬಾರಿ. ನಂತರ ಅಕ್ಕಿ, ನೀರಿನಲ್ಲಿ ಮುಳುಗುವಷ್ಟು ನೀರು ಹಾಕಿ ನೆನೆಯಲು ಬಿಡಿ. ಸ್ವಲ್ಪ ಸಮಯದ ನಂತರ ಆ ನೀರನ್ನು ಸೋಸಿಕೊಳ್ಳಿ. ನಂತರ ಆ ಅಕ್ಕಿ ನೀರನ್ನು ಸ್ವಲ್ಪ ಸಮಯದವರೆಗೆ ಫ್ರಿಡ್ಜ್‌ನಲ್ಲಿಡಿ. ಬಳಸುವ ಮೊದಲು ಅದನ್ನು ಚೆನ್ನಾಗಿ ಕಲುಕಿ ನಂತರ ಬಳಸಿ.

ಯಾರು ಎಚ್ಚರಿಕೆ ವಹಿಸಬೇಕು?

ಅಕ್ಕಿ ತೊಳೆದ ನೀರು ಎಲ್ಲರಿಗೂ ಪ್ರಯೋಜನಕಾರಿಯಾಗಿಲ್ಲ. ಕೆಲವರಿಗೆ ಕಿಣ್ವ ಮತ್ತು ಪ್ರೋಟೀನ್‌ಗಳಿಂದ ಅಲರ್ಜಿಯಿರುತ್ತದೆ. ಅಂತಹವರಿಗೆ ಅಕ್ಕಿ ತೊಳೆದ ನೀರು ಅಲರ್ಜಿಯನ್ನುಂಟು ಮಾಡಬಹುದು. ಉರಿ, ತುರಿಕೆ, ಊತ, ಕೆಂಪಾಗುವಿಕೆ ಮುಂತಾದ ಅಡ್ಡ ಪರಿಣಾಮಗಳು ಎದುರಾಗಬಹುದು. ಹಾಗಾಗಿ ನಿಮ್ಮ ತ್ವಚೆ ಹೇಗಿದೆ ಎಂದು ತಿಳಿದ ಮೇಲೆಯೇ ಮುಂದುವರಿಯಿರಿ.

ಕೂದಲ ಆರೈಕೆಗೂ ಬೆಸ್ಟ್‌

ಅಕ್ಕಿ ತೊಳೆದ ನೀರು ಕೂದಲ ಆರೈಕೆಗೂ ಬೆಸ್ಟ್‌ ಅನ್ನುವುದು ಇತ್ತೀಚಿನ ದಿನಗಳಲ್ಲಿ ಕಂಡುಕೊಂಡ ಸಂಗತಿಯಾಗಿದೆ. ಅಕ್ಕಿ ನೀರನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಮತ್ತು ನೆತ್ತಿ ಹೊಳೆಯುತ್ತದೆ. ಇದರಲ್ಲಿರುವ ವಿಟಮಿನ್‌, ಖನಿಜ, ಅಮಿನೋ ಆಸಿಡ್‌ ಮತ್ತು ಆಂಟಿಆಕ್ಸಿಡೆಂಟ್‌ಗಳು ಕೂದಲಿಗೆ ಹೆಚ್ಚಿನ ಪ್ರಯೋಜನ ನೀಡುತ್ತವೆ. ಇದು ಗಟ್ಟಿಮುಟ್ಟಾದ ಕೂದಲು ಮತ್ತು ಬೆಳವಣಿಗೆಗೆ ಸಹಕಾರಿಯಾಗಿದೆ.

mysore-dasara_Entry_Point