Korean Beauty secrets: ಎಂದಿಗೂ ಬಾಡದ ಸೌಂದರ್ಯ ನಿಮ್ಮದಾಗಬೇಕಾ, ಕೊರಿಯನ್ನರ ಈ ಬ್ಯೂಟಿ ಸೀಕ್ರೆಟ್ಸ್ ನೀವೂ ತಿಳ್ಕೊಳ್ಳಿ
ತ್ವಚೆಯ ಆರೈಕೆಯ ವಿಚಾರಕ್ಕೆ ಬಂದಾಗ ಕೊರಿಯನ್ನರನ್ನು ಮೀರಿಸುವವರಿಲ್ಲ. ಇಳಿ ವಯಸ್ಸಿನಲ್ಲೂ ಎಳೆ ಹುಡುಗಿಯಂತೆ ಅವರ ತ್ವಚೆ ಹೊಳೆಯುತ್ತಿರುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಕೊರಿಯನ್ನರ ಬ್ಯೂಟಿ ಸಿಕ್ರೇಟ್ ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ಎಂದೂ ಬಾಡದ ಸೌಂದರ್ಯ ನಿಮ್ಮದಾಗಬೇಕಾ, ಹಾಗಾದರೆ ಈ ರಹಸ್ಯ ತಿಳಿದುಕೊಳ್ಳಿ.
ಹೆಣ್ಣುಮಕ್ಕಳು ಸೌಂದರ್ಯ ಆರಾಧಕರು. ಸೌಂದರ್ಯ ಹೆಚ್ಚಿಸಿಕೊಳ್ಳುವ ಬಗ್ಗೆ ಸದಾ ಗಮನ ಹರಿಸುತ್ತಾರೆ. ಸೌಂದರ್ಯವನ್ನು ಕಾಪಾಡಿಕೊಳ್ಳುವ ವಿಚಾರದಲ್ಲಿ ಜಗತ್ತಿನಲ್ಲಿ ಕೊರಿಯನ್ನರಿಗೆ ಅಗ್ರಸ್ಥಾನ. ಇವರು ಕೇವಲ ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಮೂಲಕ ತ್ವಚೆಯ ಅಂದ– ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಆ ಕಾರಣಕ್ಕೆ ಕೊರಿಯನ್ನರು ಸೌಂದರ್ಯದ ಜಗತ್ತನ್ನು ಆಳುತ್ತಿದ್ದಾರೆ. ನೀವು ಕೊರಿಯನ್ನರಂತೆ ಸದಾ ಹೊಳೆಯುವ ಕಾಂತಿಯುತ ತ್ವಚೆ ಹೊಂದಿರಬೇಕಾ, ಹಾಗಾದ್ರೆ ಈ ರಹಸ್ಯವನ್ನು ನೀವು ತಿಳಿದುಕೊಳ್ಳಲೇಬೇಕು.
ಕೊರಿಯನ್ನರ ಸೌಂದರ್ಯದ ಗುಟ್ಟು
ಟೋನಿಂಗ್: ಚರ್ಮಕ್ಕೆ ಆಗಾಗ ಟೋನಿಂಗ್ ಮಾಡಬೇಕು. ಇದು ಚರ್ಮದಲ್ಲಿನ ತೇವಾಂಶ ಮಟ್ಟವನ್ನು ಲಾಕ್ ಮಾಡುತ್ತದೆ. ಚರ್ಮ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ. ಟೋನಿಂಗ್ ಮಾಡುವುದರಿಂದ ಚರ್ಮವು ನೈಸರ್ಗಿಕವಾಗಿ ಹೊಳೆಯುತ್ತಿರುತ್ತದೆ.
ಫೇಸ್‌ಮಾಸ್ಕ್ ಬಳಕೆ: ಚರ್ಮದ ಆರೈಕೆಗೆ ಆಗಾಗ ಫೇಸ್‌ಮಾಸ್ಕ್ ಬಳಸುವುದು ಕೂಡ ಅತಿ ಅವಶ್ಯ. ಯಾವಾಗಲೂ ನಿಮ್ಮ ತ್ವಚೆಗೆ ಅತ್ಯುತ್ತಮ ಎನ್ನಿಸುವಂತಿರುವ ಫೇಸ್‌ಮಾಸ್ಕ್ ಅನ್ನೇ ಬಳಸಿ. ವಾರಕೊಮ್ಮೆ ಫೇಸ್‌ಪ್ಯಾಕ್ ಬಳಸುವುದರಿಂದ ಚರ್ಮ ಹೈಡ್ರೀಕರಿಸಿದಂತಿರುತ್ತದೆ.
ಆಂಪೂಲ್‌ಗಳ ಬಳಕೆ: ಆಂಪೂಲ್‌ಗಳು ಚರ್ಮಕ್ಕೆ ಹಾನಿ ಮಾಡುವ ಸಕ್ರಿಯ ಕಣಗಳನ್ನು ತಡೆದು ಹಾನಿಯಾಗುವುದನ್ನು ತಪ್ಪಿಸುತ್ತವೆ. ಕಾಲಕಾಲಕ್ಕೆ ಇದನ್ನು ಬಳಸುವುದರಿಂದ ಚರ್ಮದ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ಸನ್‌ಸ್ಕ್ರೀನ್‌ಗಳ ಬಳಕೆ: ಸನ್‌ಸ್ಕ್ರೀನ್‌ಗಳ ಬಳಕೆಯನ್ನು ಎಂದಿಗೂ ತಪ್ಪಿಸಬಾರದು. ಕೊರಿಯನ್ನರು ರಾತ್ರಿ ವೇಳೆಗೂ ಸನ್‌ಸ್ಕ್ರೀನ್ ಬಳಸುತ್ತಾರೆ ಎಂದರೆ ನಂಬಲೇಬೇಕು. ಎಸ್‌ಪಿಎಫ್ ಅಂಶ ಇರುವ ಸನ್‌ಸ್ಕ್ರೀನ್‌ಗಳನ್ನು ನಿರಂತರವಾಗಿ ಬಳಸಬೇಕು. ಇದು ಟ್ಯಾನ್‌ನಿಂದ ಪರಿಹಾರ ನೀಡುವುದು ಮಾತ್ರವಲ್ಲ, ಹೊಳೆಯುವ ಮೈಬಣ್ಣಕ್ಕೂ ಸಹಕಾರಿ.
ಫೇಸ್ ಸೀರಮ್: ಸೀರಮ್‌ಗಳ ಬಳಕೆಯು ಸೌಂದರ್ಯ ಜಗತ್ತನ್ನು ಬದಲಿಸಿರುವುದು ಸುಳ್ಳಲ್ಲ. ನಿಮ್ಮ ತ್ವಚೆಗೆ ಅನುಗುಣವಾಗಿ ಸೀರಮ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಪ್ರತಿದಿನ ಹಚ್ಚಿ ಸುಕ್ಕುಗಳು ಮತ್ತು ಮೊಡವೆಗಳನ್ನು ಶಾಶ್ವತ ಪರಿಹಾರ ಪಡೆಯಬಹುದು.
ಮಾಯಿಶ್ಚರೈಸರ್ ಬಳಕೆ: ಮಾಯಿಶ್ಚರೈಸರ್ ಯಾವಾಗಲೂ ನಿಮ್ಮ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಯೌವನವನ್ನು ಒಳಗೆ ಬಂಧಿಸುತ್ತದೆ. ಆದ್ದರಿಂದ, ನಿಮ್ಮ ಮುಖವನ್ನು ತೊಳೆದ ನಂತರ, ಉತ್ತಮ ಫಲಿತಾಂಶಕ್ಕಾಗಿ ಮಾಯಿಶ್ಚರೈಸರ್ ಅನ್ನು ಬಳಸಿ.
ಕ್ಲೆನ್ಸಿಂಗ್: ಕೊರಿಯನ್ನರ್ ಮೇಕಪ್‌ನ ಇನ್ನೊಂದು ಪ್ರಮುಖ ಭಾಗ ಕ್ಲೆನ್ಸಿಂಗ್. ಮೇಕಪ್ ಅಳಿಸಲು ಲಿಕ್ವಿಡ್ ಕ್ಲೆನ್ಸರ್ ಬಳಸಿ. ಕೊಳಕು ಮತ್ತು ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಫೋಮಿಂಗ್ ಕ್ಲೆನ್ಸರ್ ಅನ್ನು ಬಳಸಿ. ಕ್ಲೆನ್ಸರ್ ಬಳಕೆ ಚರ್ಮವನ್ನು ಆಳದಿಂದ ರಕ್ಚಿಸುತ್ತದೆ.
ಎಕ್ಸ್‌ಫೋಲಿಯೇಷನ್: ಚರ್ಮಕ್ಕೆ ಎಕ್ಸ್‌ಫೋಲಿಯೇಟ್ ಮಾಡುವುದು ಬಹಳ ಮುಖ್ಯ. ಇದು ಚರ್ಮದ ನಿರ್ಜೀವ ಕೋಶಗಳನ್ನು ತೊಡೆದುಹಾಕುತ್ತದೆ. ಜೊತೆಗೆ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ನೀವು ಎಂದಿಗೂ ಬಾಡದ ಸೌಂದರ್ಯ ನಿಮ್ಮದಾಗಬೇಕು ಎಂದು ಬಯಸುತ್ತಿದ್ದರೆ ಈ ತ್ವಚೆಯ ಆರೈಕೆಗೆ ಕೊರಿಯನ್ನರ ಈ ಬ್ಯೂಟಿ ಸಿಕ್ರೇಟ್ ಅನ್ನು ಫಾಲೋ ಮಾಡಲೇಬೇಕು. ಇದರಿಂದ ನಿಮ್ಮ ಅಂದ ದುಪ್ಪಟ್ಟಾಗೋದ್ರಲ್ಲಿ ಅನುಮಾನವಿಲ್ಲ.
ವಿಭಾಗ