ಆ್ಯಂಟಿ ಏಜಿಂಗ್‌ನಿಂದ ಮೊಡವೆ ನಿಯಂತ್ರಣದವರೆಗೆ, ತ್ವಚೆಯ ಕಾಂತಿ ಅರಳಿಸುವ ಕುಂಕುಮಾದಿ ತೈಲದ ಪ್ರಯೋಜನಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಆ್ಯಂಟಿ ಏಜಿಂಗ್‌ನಿಂದ ಮೊಡವೆ ನಿಯಂತ್ರಣದವರೆಗೆ, ತ್ವಚೆಯ ಕಾಂತಿ ಅರಳಿಸುವ ಕುಂಕುಮಾದಿ ತೈಲದ ಪ್ರಯೋಜನಗಳಿವು

ಆ್ಯಂಟಿ ಏಜಿಂಗ್‌ನಿಂದ ಮೊಡವೆ ನಿಯಂತ್ರಣದವರೆಗೆ, ತ್ವಚೆಯ ಕಾಂತಿ ಅರಳಿಸುವ ಕುಂಕುಮಾದಿ ತೈಲದ ಪ್ರಯೋಜನಗಳಿವು

ಚರ್ಮದ ಕಾಳಜಿ ಮಾಡುವವರು ನೈಸರ್ಗಿಕ ಪದಾರ್ಥಗಳ ಮೇಲೆ ಹೆಚ್ಚು ಒಲವು ಹೊಂದಿರುತ್ತಾರೆ. ನೀವು ಮೊಡವೆ, ಕಪ್ಪುಕಲೆ, ಒಣಚರ್ಮ, ನೆರಿಗೆ, ಸುಕ್ಕು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಎಲ್ಲಾ ಸಮಸ್ಯೆಗೂ ಕುಂಕುಮಾದಿ ತೈಲವೇ ಮದ್ದು. ಇದನ್ನು ನಿಯಮಿತವಾಗಿ ಬಳಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಆ್ಯಂಟಿ ಏಜಿಂಗ್‌ನಿಂದ ಮೊಡವೆ ನಿಯಂತ್ರಣದವರೆಗೆ, ತ್ವಚೆಯ ಕಾಂತಿ ಅರಳಲು ಕುಂಕುಮಾದಿ ತೈಲವೇ ಮದ್ದು
ಆ್ಯಂಟಿ ಏಜಿಂಗ್‌ನಿಂದ ಮೊಡವೆ ನಿಯಂತ್ರಣದವರೆಗೆ, ತ್ವಚೆಯ ಕಾಂತಿ ಅರಳಲು ಕುಂಕುಮಾದಿ ತೈಲವೇ ಮದ್ದು

ಸದ್ಯದ ಕಲುಷಿತ ವಾತಾವರಣದಲ್ಲಿ ತ್ವಚೆಯ ಅಂದ ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲು. ಅದಕ್ಕಾಗಿ ನೈಸರ್ಗಿಕ ಮಾರ್ಗಗಳನ್ನು ಅನುಸರಿಸಬೇಕು. ರಾಸಾಯನಿಕ ಅಂಶವುಳ್ಳ ಪದಾರ್ಥಗಳು ತಾತ್ಕಾಲಿಕವಾಗಿ ಅಂದ ಹೆಚ್ಚಿಸಿದರೂ ನಂತರದ ದಿನಗಳಲ್ಲಿ ಅವು ತೊಂದರೆ ಉಂಟು ಮಾಡಬಹುದು. ಕುಂಕುಮಾದಿ ತೈಲವನ್ನು ಬಳಸುವುದರಿಂದ ತ್ವಚೆಗೆ ಹಲವು ಪ್ರಯೋಜನಗಳಿವೆ. ಇದು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಕುಂಕುಮಾದಿ ತೈಲವು ವಿವಿಧ ರೀತಿಯ ಅಮೂಲ್ಯ ಗಿಡಮೂಲಿಕೆಗಳ ಮಿಶ್ರಣವನ್ನು ಹೊಂದಿರುತ್ತದೆ. ಇದು ಚರ್ಮವನ್ನು ಹೈಡ್ರೇಟ್‌ ಮಾಡುವ ಜೊತೆಗೆ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಬಹಳ ಹಿಂದಿನಿಂದಲೂ ಇದನ್ನು ಸೌಂದರ್ಯವರ್ಧಕವಾಗಿ ಬಳಸುತ್ತಿದ್ದಾರೆ. ಇದು ಎಲ್ಲಾ ರೀತಿಯ ಚರ್ಮಕ್ಕೂ ಹೊಂದುವಂಥದ್ದು. ಆದರೆ ಎಣ್ಣೆ ಚರ್ಮದವರಿಗೆ ಈ ಕುಂಕುಮಾದಿ ತೈಲ ಒಳ್ಳೆಯದಲ್ಲ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಹಾಗಾದ್ರೆ ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಕುಂಕುಮಾದಿ ತೈಲವನ್ನು ಹೇಗೆ ಬಳಸಬಹುದು ನೋಡಿ.

ಚರ್ಮಕ್ಕೆ ಕುಂಕುಮಾದಿ ತೈಲದ ಪ್ರಯೋಜನಗಳಿವು

ಹೊಳಪು ಹೆಚ್ಚಿಸುತ್ತದೆ: ಕುಂಕುಮಾದಿ ತೈಲವು ತ್ವಚೆಯ ಹೊಳಪು ಹೆಚ್ಚಿಸುತ್ತದೆ. ಚರ್ಮದಲ್ಲಿ ಕಾಂತಿ ಮೂಡಿಸಲು ಇದು ಸಹಕಾರಿ. ಇದರಲ್ಲಿ ಕೇಸರಿ ಅಂಶವಿದ್ದು, ಇದರ ನಿರಂತರ ಬಳಕೆಯಿಂದ ಚರ್ಮವು ಪಳಪಳ ಹೊಳೆಯುವಂತೆ ಮಾಡುತ್ತದೆ.

ಹೈಪರ್‌ಪಿಂಗ್ಮಟೇಷನ್‌ ಅನ್ನು ನಿವಾರಿಸುತ್ತದೆ: ಈ ಆರ್ಯವೇದ ತೈಲವು ಹೈಪರ್‌ಪಿಗ್ಮಂಟೇಷನ್‌ ಅನ್ನು ನಿವಾರಿಸುತ್ತದೆ. ಕಪ್ಪು ಕಲೆಗಳ ನಿವಾರಣೆಗೂ ಇದು ಸಹಕಾರಿ. ಇದರಲ್ಲಿರುವ ಅರಿಶಿನ, ಲೈಕೊರೈಸ್‌ ಅಂಶವು ಚರ್ಮದ ಕಳೆ ಹೆಚ್ಚಿಸುತ್ತದೆ.

ಚರ್ಮದ ತೇವಾಂಶ ವೃದ್ಧಿಸುತ್ತದೆ: ಕುಂಕುಮಾದಿ ತೈಲದಲ್ಲಿರುವ ನೈಸರ್ಗಿಕ ಎಣ್ಣೆಯಂಶ ಹಾಗೂ ಗಿಡಮೂಲಿಕೆಗಳು ತ್ವಚೆಯನ್ನು ಮಾಯಿಶ್ಚರೈಸ್‌ ಮಾಡುತ್ತದೆ. ಇದು ತ್ವಚೆಗೆ ಪೋಷಣೆ ನೀಡಿ ತೇವಾಂಶ ಹೆಚ್ಚಲು ಸಹಕರಿಸುತ್ತದೆ. ಒಣ ಚರ್ಮ ಹೊಂದಿರುವವರಿಗೆ ಇದು ಸೂಕ್ತ.

ಆಂಟಿ ಏಜಿಂಗ್‌ ಗುಣಗಳು: ಕುಂಕುಮಾದಿ ತೈಲದಲ್ಲಿರುವ ಶ್ರೀಗಂಧ ಮತ್ತು ಅಶ್ವಗಂಧದಂತಹ ಕೆಲವು ಪದಾರ್ಥಗಳು ಆಂಟಿ ಏಜಿಂಗ್‌ ಲಕ್ಷಣಗಳನ್ನು ಹೊಂದಿರುತ್ತವೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಸುಕ್ಕು ಹಾಗೂ ನೆರಿಗೆಯಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮೊಡವೆಯನ್ನು ಕಡಿಮೆ ಮಾಡುತ್ತದೆ: ಇದರಲ್ಲಿ ಮಂಜಿಷ್ಠದಂತಹ ಅಂಶವಿದ್ದು, ಇದು ಉರಿಯೂತ ನಿವಾರಣೆಗೆ ಸಹಕಾರಿ. ಇದು ಚರ್ಮವನ್ನು ಶಾಂತಗೊಳಿಸುತ್ತದೆ. ಅಲ್ಲದೆ ಮೊಡವೆಯಂತಹ ಸಮಸ್ಯೆಗಳ ನಿವಾರಣೆಗೂ ಸಹಕಾರಿ.

ಚರ್ಮದ ಟೆಕ್ಸ್ಚರ್‌ ವರ್ಧಿಸುತ್ತದೆ: ಕುಂಕುಮಾದಿ ತೈಲದ ನಿಯಮಿತ ಬಳಕೆಯು ಒಟ್ಟಾರೆ ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ. ಇದು ಚರ್ಮವನ್ನು ನಯವಾಗಿಸುತ್ತದೆ.

ಉತ್ಕರ್ಷಣ ನಿರೋಧಕಗಳು: ಕುಂಕುಮಾದಿ ತೈಲವು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಪದಾರ್ಥಗಳನ್ನು ಹೊಂದಿದ್ದು, ಇದು ಚರ್ಮವನ್ನು ಫ್ರಿ ರಾಡಿಕಲ್‌ಗಳ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಇದು ಚರ್ಮದ ಹಾನಿಯನ್ನು ತಪ್ಪಿಸುತ್ತದೆ. ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ನಿವಾರಿಸುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner