ಕನ್ನಡ ಸುದ್ದಿ  /  ಜೀವನಶೈಲಿ  /  Beauty Tips: ರಾತ್ರಿ ಮಲಗುವಾಗ ಮುಖಕ್ಕೆ ಎರಡೇ ಎರಡು ಹನಿ ಈ ಕ್ರೀಮ್‌ ಹಚ್ಚಿ ನೋಡಿ, ಮುಂಜಾನೆ ತ್ವಚೆಯ ಕಾಂತಿ ದುಪ್ಪಟ್ಟು ಅರಳುತ್ತೆ

Beauty Tips: ರಾತ್ರಿ ಮಲಗುವಾಗ ಮುಖಕ್ಕೆ ಎರಡೇ ಎರಡು ಹನಿ ಈ ಕ್ರೀಮ್‌ ಹಚ್ಚಿ ನೋಡಿ, ಮುಂಜಾನೆ ತ್ವಚೆಯ ಕಾಂತಿ ದುಪ್ಪಟ್ಟು ಅರಳುತ್ತೆ

ಬೇಸಿಗೆಯಲ್ಲಿ ಧೂಳು, ಬೆವರಿನ ಕಾರಣದಿಂದ ಮುಖದಲ್ಲಿ ಮೊಡವೆಗಳು ಹೆಚ್ಚುವುದು ಸಹಜ. ಮೊಡವೆ ನಿವಾರಣೆಗಾಗಿ ಹಲವರು ಹಲವು ಕ್ರಮಗಳನ್ನು ಪಾಲಿಸುತ್ತಾರೆ. ಆದರೆ ನೀವು ಇದಕ್ಕಾಗಿ ರಾತ್ರಿ ವೇಳೆ ಎರಡೇ ಎರಡು ಈ ಹನಿಗಳನ್ನು ಬಳಸಿದ್ರೆ ಸಾಕು ಮೊಡವೆ ಮಾಯವಾಗಿ ತ್ವಚೆಯ ಕಾಂತಿ ಹೆಚ್ಚೋದು ಪಕ್ಕಾ.

ರಾತ್ರಿ ಮಲಗುವಾಗ ಮುಖಕ್ಕೆ ಎರಡೇ ಎರಡು ಹನಿ ಈ ಕ್ರೀಮ್‌ ಹಚ್ಚಿ ನೋಡಿ, ಮುಂಜಾನೆ ತ್ವಚೆಯ ಕಾಂತಿ ದುಪ್ಪಟ್ಟು ಅರಳುತ್ತೆ
ರಾತ್ರಿ ಮಲಗುವಾಗ ಮುಖಕ್ಕೆ ಎರಡೇ ಎರಡು ಹನಿ ಈ ಕ್ರೀಮ್‌ ಹಚ್ಚಿ ನೋಡಿ, ಮುಂಜಾನೆ ತ್ವಚೆಯ ಕಾಂತಿ ದುಪ್ಪಟ್ಟು ಅರಳುತ್ತೆ

ಇಂದು ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರಪದ್ಧತಿಗಳ ಕಾರಣದಿಂದ ಆರೋಗ್ಯ ಸಮಸ್ಯೆಗಳು ಮಾತ್ರವಲ್ಲ, ತ್ವಚೆಯ ಅಂದವೂ ಕೆಡುತ್ತಿದೆ. ಚರ್ಮದ ಕಾಂತಿ ಕುಗ್ಗುವುದು ಮಾತ್ರವಲ್ಲ, ಮೊಡವೆ, ದದ್ದು, ಅಲರ್ಜಿಯಂತಹ ಸಮಸ್ಯೆಗಳು ಕಾಡುತ್ತವೆ. ಅದರಲ್ಲೂ ಬೇಸಿಗೆಯಲ್ಲಿ ಅತಿಯಾದ ಬಿಸಿಲು, ಧೂಳಿನ ಕಾರಣದಿಂದ ತ್ವಚೆಯ ಆರೋಗ್ಯ ಕೆಡುವುದು ಸಹಜ. ಚರ್ಮದ ಆರೋಗ್ಯ ಹಾಗೂ ಆರೈಕೆಗಾಗಿ ನಾನು ವೈದ್ಯರು ಹಾಗೂ ಬ್ಯೂಟಿಷಿಯನ್‌ಗಳನ್ನು ಭೇಟಿ ಮಾಡುತ್ತೇವೆ. ಆದರೆ ಇದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು.

ಟ್ರೆಂಡಿಂಗ್​ ಸುದ್ದಿ

ಚರ್ಮದ ಸಮಸ್ಯೆಗಳಿಗೆ ಆರಂಭದಲ್ಲೇ ಸೂಕ್ತ ಚಿಕಿತ್ಸೆ ಮಾಡಿಸಿದ್ರೆ ಸಮಸ್ಯೆ ಉಲ್ಬಣವಾಗುವುದಿಲ್ಲ. ಚರ್ಮದ ಆರೈಕೆಗಾಗಿ ಕೆಲವು ಮನೆಮದ್ದುಗಳನ್ನು ಅನುಸರಿಸಬಹುದು. ಇದರೊಂದಿಗೆ ತ್ವಚೆಯ ಆರೈಕೆಗಾಗಿ ಕೆಲವು ಕ್ರಮಗಳನ್ನು ತಪ್ಪದೇ ಅನುಸರಿಸಬೇಕು. ಬೇಸಿಗೆಯಲ್ಲಿ ಮೊಡವೆ, ಅಲರ್ಜಿಯಂತಹ ಸಮಸ್ಯೆಗಳಿಂದ ತ್ವಚೆಯನ್ನು ರಕ್ಷಿಸಲು ಇದು ಖಂಡಿತ ಅವಶ್ಯ.

ನಮ್ಮ ಮುಖ ಅಂದವಾಗಿ, ಕಾಂತಿಯುತವಾಗಿ ಇರಬೇಕು ಎನ್ನುವ ಆಸೆಯಿಂದ ನಾವು ಬಗೆ ಬಗೆಯ ಕ್ರೀಮ್‌ಗಳನ್ನು ಹಚ್ಚಿಕೊಳ್ಳುತ್ತೇವೆ. ಆದರೆ ಅವು ಚರ್ಮಕ್ಕೆ ಹಾನಿ ಉಂಟುಮಾಡಬಹುದು. ಅದಕ್ಕಾಗಿ ಮನೆಯಲ್ಲೇ ಕ್ರೀಮ್‌ ತಯಾರಿಸಿ ಹಚ್ಚುವ ಮೂಲಕ ಅಂದ ಜೊತೆಗೆ ಚರ್ಮದ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು.

ಚರ್ಮದ ಕಾಂತಿ ಹೆಚ್ಚಬೇಕು ಅಂದ್ರೆ ಸಾಕಷ್ಟು ನೀರು ಕುಡಿಯಬೇಕು. ಚರ್ಮ ಹೈಡ್ರೇಟ್‌ ಆಗಿರುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ನಮ್ಮ ತೂಕಕ್ಕೆ ಅನುಗುಣವಾಗಿ ನಾವು ನೀರು ಕುಡಿಯುವುದು ಅವಶ್ಯ. ನಿಮ್ಮ ದೇಹದ ತೂಕ 50 ಕೆಜಿ ಇದ್ದರೆ, ನೀವು ಸುಮಾರು 3 ಲೀಟರ್ ನೀರನ್ನು ಕುಡಿಯಬೇಕು. ಆಗ ನಿಮ್ಮ ತ್ವಚೆಯು ಹೊಳೆಯುತ್ತದೆ. ಅದರೊಂದಿಗೆ ಮನೆಯಲ್ಲೇ ಈ ನೈಟ್‌ಕ್ರೀಮ್‌ ತಯಾರಿಸಿ ಹಚ್ಚಿಕೊಳ್ಳುವುದರಿಂದ ಮೊಡವೆ, ಕಲೆ ಎಲ್ಲಾ ನಿವಾರಣೆಯಾಗಿ ತ್ವಚೆಯ ಅಂದ ಹೆಚ್ಚುತ್ತದೆ.

ನೈಟ್‌ಕ್ರೀಮ್‌ ತಯಾರಿಸುವ ವಿಧಾನ

ಅಗತ್ಯವಿರುವ ವಸ್ತುಗಳು: ತೆಂಗಿನೆಣ್ಣೆ - 2 ಚಮಚ (ಇದರಲ್ಲಿರುವ ವಿಟಮಿನ್ ಇ ಚರ್ಮದಲ್ಲಿ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ), ಬಾದಾಮಿ ಎಣ್ಣೆ - 1 ಚಮಚ, ಎಳ್ಳೆಣ್ಣೆ - 1 ಚಮಚ, (ಚರ್ಮ, ಕೂದಲು ಮತ್ತು ದೇಹದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ, ಅಲೋವೆರಾ ಜೆಲ್ - 2 ಚಮಚ, ಗ್ಲಿಸರಿನ್ - ಒಂದು ಚಮಚ

ಕ್ರೀಮ್‌ ತಯಾರಿಸುವ ವಿಧಾನ: ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ತಿರುಗಿಸುತ್ತಾ ಹೋದಂತೆ ಅದು ದಪ್ಪವಾಗುತ್ತದೆ. ಈ ಎಲ್ಲವೂ ಚೆನ್ನಾಗಿ ಮಿಶ್ರಣವಾಗಿ ಕ್ರೀಮ್‌ ರೂಪಕ್ಕೆ ಬರುತ್ತದೆ. ಇದನ್ನು ಬಾಟಲಿಯಲ್ಲಿ ತುಂಬಿಸಿಟ್ಟುಕೊಂಡು ಬಳಸಬಹುದು. ನೀವು ತಾಜಾ ಅಲೋವೆರಾ ಜೆಲ್ ಅನ್ನು ಬಳಸಿದರೆ, ಅದನ್ನು ಫ್ರಿಜ್‌ನಲ್ಲಿಡಿ.

ನೈಟ್‌ಕ್ರೀಮ್‌ ಬಳಸುವ ವಿಧಾನ

ಈ ಕ್ರೀಮ್‌ ಅನ್ನು 10 ದಿನಗಳವರೆಗೆ ಬಳಸಬಹುದು. ರಾತ್ರಿ ಮುಖವನ್ನು ಸ್ವಚ್ಛವಾಗಿ ತೊಳೆದ ನಂತರ ಒರೆಸಿ ಎರಡು ಹನಿಗಳನ್ನು ಮಾತ್ರ ಮುಖಕ್ಕೆ ಹಚ್ಚಿ. ನೀವು ಬಯಸಿದಲ್ಲಿ ಇದನ್ನು ನಿಮ್ಮ ಕೈ ಮತ್ತು ಪಾದಗಳಿಗೆ ಅನ್ವಯಿಸಬಹುದು. ರಾತ್ರಿಯಿಡೀ ಬಿಡಿ. ಬೆಳಗ್ಗೆ ಎದ್ದಾಗ ಮುಖ ಕಾಂತಿಯುತವಾಗಿ ಕಾಣುತ್ತದೆ. ಒಳ್ಳೆಯ ಫಲಿತಾಂಶಕ್ಕಾಗಿ ಪ್ರತಿದಿನ ಇದನ್ನು ಬಳಸಿ ನೋಡಿ. ಇದನ್ನು ಬಳಸಲು ಆರಂಭಿಸಿದ ಮೇಲೆ ಮುಖದ ಮೇಲೆ ಮೊಡವೆ, ಕಲೆಗಳೆಲ್ಲಾ ನಿವಾರಣೆಯಾಗುತ್ತದೆ.

(ಗಮನಿಸಿ: ಈ ಮಾಹಿತಿಯ ಸಾಮಾನ್ಯಜ್ಞಾನವನ್ನು ಆಧರಿಸಿದೆ. ಇಲ್ಲಿರುವ ವಿಧಾನವು ಎಲ್ಲಾ ಚರ್ಮದವರಿಗೂ ಹೊಂದಬೇಕು ಎಂದೇನಿಲ್ಲ. ನೀವು ಸೂಕ್ಷ್ಮ ಚರ್ಮದವರಾಗಿದ್ದರೆ ಈ ಕ್ರೀಮ್‌ ಬಳಸುವ ಮುನ್ನ ತಜ್ಞರಿಂದ ಸೂಕ್ತ ಸಲಹೆ ಪಡೆದುಕೊಳ್ಳುವುದು ಉತ್ತಮ)